ಗಿಜಿಗುಡಬೇಕಿದ್ದ ಮಲೆಯಲ್ಲಿ ಭಕ್ತರೇ ಇಲ್ಲ
Team Udayavani, Jan 11, 2019, 3:59 AM IST
ಶಬರಿಮಲೆ: ಮಕರ ಸಂಕ್ರಮಣ ಹತ್ತಿರ ಬರುತ್ತಿದ್ದಂತೆ ಕೋಟಿಗಟ್ಟಲೆ ಸಂಖ್ಯೆಯಲ್ಲಿ ಭಕ್ತರ ಜಮಾವಣೆ ಆಗುತ್ತಿದ್ದ ಶಬರಿ ಮಲೆಯಲ್ಲಿ ಈ ವರ್ಷ ಭಕ್ತರ ಸಂಖ್ಯೆ ವಿಪರೀತ ಕುಸಿತ ಕಂಡಿದೆ. ವಾವರ ಮಸೀದಿ ಸುತ್ತಮುತ್ತ ನಡೆಯುತ್ತಿದ್ದ ಬೇಟೆ ತುಲ್ಲಾವನ್ನೇ ಗಮನಿಸುವುದಾದರೆ, ಈ ಹಿಂದಿನ ವರ್ಷಗಳಲ್ಲಿ ವಿಪರೀತ ದಟ್ಟಣೆ ಕಂಡುಬರುತ್ತಿತ್ತು. ಆದರೆ ಈ ಬಾರಿ ಬೆರಳೆಣಿಕೆಯ ಭಕ್ತರಿದ್ದಾರೆ.
“ಈ ಬಾರಿ ತುಂಬಾ ಆರಾಮವಾಗಿ ಬೇಟೆ ತುಲ್ಲಾ ನಡೆಸಿದ್ದೇವೆ’ ಎಂದು ಹಲವು ಭಕ್ತರು ತಿಳಿಸಿದ್ದಾರೆ. ಮುಂದೆ “ಮಲೆ ಚೌಟು’ವ (ಅಯ್ಯಪ್ಪ ಸ್ವಾಮಿ ನಡೆದುಕೊಂಡು ಹೋದ ದಾರಿ) ಕಾಡು ಹಾದಿಯ ಇಕ್ಕೆಲಗಳಲ್ಲಿ ನೂರಾರು ತಾತ್ಕಾಲಿಕ ಬೀರಿಗಳು ಎದುರಾಗುತ್ತವೆ. ಇಲ್ಲಿ ಆಹಾರ ಸೇವನೆ ಜತೆಗೆ ವಿಶ್ರಾಂತಿಗೂ ಅವಕಾಶವಿದೆ. ಕೇವಲ 14 ದಿನಗಳಲ್ಲಿ ಬೀರಿ (ಅಂಗಡಿ) ನಡೆಸುವ ವ್ಯಾಪಾರಿಗಳಿಗೆ ಬಿಡುವಿಲ್ಲದ ವ್ಯಾಪಾರ. ಆದರೆ ಈ ವರ್ಷ ಬೀರಿಗಳೆಲ್ಲ ಬಿಕೋ ಎನ್ನುತ್ತಿವೆ. ವ್ಯಾಪಾರದ ಕೊರತೆ ಎದುರಿಸುತ್ತಿರುವ ವ್ಯಾಪಾರಿಗಳು, ಇರುವ ಭಕ್ತರನ್ನು ಸೆಳೆಯುವ ಪ್ರಯತ್ನ ನಡೆಸುತ್ತಿದ್ದಾರೆ. “ಮಲೆ ಚೌಟು’ವನ್ನುತುಂಬಾ ಆರಾಮವಾಗಿ ನಡೆಸಲು ಸಾಧ್ಯವಾಗುತ್ತಿದೆ. ಒಂದಷ್ಟು ಭಕ್ತರು “ಮಲೆ ಚೌಟ’ದೆ ನೇರವಾಗಿ ಪಂಬಾಗೆ ಆಗಮಿಸಿ, ಇಲ್ಲಿಂದ ಮುಂದಿನ 8 ಕಿಲೋ ಮೀಟರ್ ಹಾದಿಯನ್ನು ಕ್ರಮಿಸುತ್ತಾರೆ. ಇಲ್ಲಿನ ನೀಲಿಮಲೆ, ಗಣೇಶ ಬೆಟ್ಟಗಳಲ್ಲೂ ಈಗ ಆರಾಮವಾಗಿ ನಡೆದುಕೊಂಡು ಹೋಗಬಹುದು. ಪ್ರತಿದಿನ ಶಬರಿಮಲೆಯಲ್ಲಿ ಅನ್ನದಾನ ನಡೆಯುತ್ತದೆ. ಅನ್ನ ಪ್ರಸಾದ ಸೇವಿಸಿದವರ ಸಂಖ್ಯೆಯನ್ನೇ ಗಮನಿಸುವುದಾದರೆ, ಇದರ ಸಂಖ್ಯೆ 1.5 ಲಕ್ಷ ಮೀರುವುದಿಲ್ಲ.
ಸರತಿ ಸಾಲಿಲ್ಲ
ಮಕರ ಸಂಕ್ರಮಣದ ಸಂದರ್ಭ ಭಾರೀ ಸರತಿ ಸಾಲು ಸಾಮಾನ್ಯ. ಕೆಲವು ವರ್ಷಗಳಲ್ಲಿ ನೀಲಿಮಲೆ ಬೆಟ್ಟದಿಂದಲೇ ಕ್ಯೂ ಇದ್ದ ಉದಾಹರಣೆಗಳೂ ಇವೆ. ಭಾರೀ ಸಂಖ್ಯೆಯ ಜನರನ್ನು ನಿಯಂತ್ರಿಸಲು ಒಂದೊಂದು ಕೊಠಡಿಗಳಾಗಿ ಮಾಡಿ, ಭಕ್ತರನ್ನು ಮುಂದೆ ಬಿಡಲಾಗುತ್ತದೆ. ಆದರೆ ಈ ವರ್ಷ ಕೊಠಡಿ ವಿಷಯ ಬಿಡಿ, 18 ಪಡಿ (ಮೆಟ್ಟಿಲು) ಗಳನ್ನು ಕೂಡ ಸುಲಲಿತ ವಾಗಿ ಏರಬಹುದು. ಒತ್ತಡಕ್ಕೆ ಒಳಗಾಗದ ಪೊಲೀಸರು ಮುಂದೆ ತಳ್ಳುವ ಕಾಯಕ ಮಾಡುವುದೇ ಇಲ್ಲ, ವಿನಯದಿಂದ ಪಡಿ ಹತ್ತಲು ಸಹಕರಿಸುತ್ತಾರೆ.
ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 60ರಷ್ಟು ಭಕ್ತರ ಸಂಖ್ಯೆ ಕಡಿಮೆ ಆಗಿದೆ. ಮೊದಲೆಲ್ಲ ರಾತ್ರಿ ಪೂರ್ತಿ ಬೀರಿಗಳು ತೆರೆದಿರುತ್ತಿದ್ದವು. ಅಂದರೆ ರಾತ್ರಿಯಿಡೀ ದೊಡ್ಡ ಸಂಖ್ಯೆಯ ಭಕ್ತರು ನಡೆದು ಹೋಗುತ್ತಿದ್ದರು. ಆದರೆ ಈ ವರ್ಷ ಸರಿರಾತ್ರಿಯಲ್ಲಿ ಹಲವು ಅಂಗಡಿಗಳವರು ಬಾಗಿಲು ಮುಚ್ಚುವ ಪ್ರಸಂಗ ಎದುರಾಗಿದೆ.
ಧರ್ಮೇಶ್ ಅಲುದಾ, ವ್ಯಾಪಾರಿ
ಗಣೇಶ್ ಎನ್. ಕಲ್ಲರ್ಪೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
BJP Internal Dispute: ಶಾಸಕ ಬಸನಗೌಡ ಯತ್ನಾಳ್ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು
Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ
Train: ಗೋಮಟೇಶ್ವರ ಎಕ್ಸ್‌ಪ್ರೆಸ್ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು
Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ
Congress: ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಸ್ವರ ಎತ್ತಿದರೆ ಶಿಸ್ತುಕ್ರಮ: ಡಿ.ಕೆ.ಶಿವಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.