Siddaramaiah ವಾಲ್ಮೀಕಿ ಆದರ್ಶ ಪಾಲಿಸಿ ರಾಜೀನಾಮೆ ನೀಡಲಿ: ಕ್ಯಾ| ಚೌಟ

Team Udayavani, Oct 18, 2024, 1:35 AM IST

1-bbbbb

ಮಂಗಳೂರು: ವಾಲ್ಮೀಕಿ ನಿಗಮ ಹಗರಣದ ಆರೋಪಿ ಮಾಜಿ ಸಚಿವ ನಾಗೇಂದ್ರ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಿ ವಿಜಯೋತ್ಸವದ ರೀತಿಯಲ್ಲಿ ಅವರಿಗೆ ಶಾಲು ಹಾಕಿರುವುದನ್ನು ನೋಡಿದಾಗ ಹಗರಣದಲ್ಲಿ ಸಿಎಂ ಪ್ರೇರಣೆ ಇರುವಂತೆ ಭಾಸವಾಗುತ್ತಿದೆ. ಹೀಗಾಗಿ ವಾಲ್ಮೀಕಿ ದಿನಾಚರಣೆ ಪ್ರಯುಕ್ತ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ತಮ್ಮ ಮೇಲಿನ ಆರೋಪಗಳ ಪಾರದರ್ಶಕ ತನಿಖೆಗೆ ಪೂರಕವಾಗಿ ಮುಖ್ಯಮಂತ್ರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಸಂಸದ ಕ್ಯಾ| ಬ್ರಿಜೇಶ್‌ ಚೌಟ ಆಗ್ರಹಿಸಿದ್ದಾರೆ.

ದ.ಕ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ನಿಗಮದ ಹಣವನ್ನು ತೆಲಂಗಾಣ ಸಹಿತ ವಿವಿಧ ಕ್ಷೇತ್ರದ ಚುನಾವಣೆಗೆ ಬಳಸಿದ ಬಗ್ಗೆ ಗೊತ್ತಾಗಿದೆ. ಸದ್ಯ ಕಾಂಗ್ರೆಸ್‌ ಪಕ್ಷಕ್ಕೆ ಕರ್ನಾಟಕವೇ ಎಟಿಎಂ ಆಗಿದ್ದು, ಈಗ ಮಹಾರಾಷ್ಟ್ರ ಚುನಾವಣೆ ನಡೆಯುವ ಕಾರಣದಿಂದ ಯಾವ ನಿಗಮದ ಕಡೆಗೆ ಸಿಎಂ ದೃಷ್ಟಿ ಇದೆಯೋ ಗೊತ್ತಿಲ್ಲ. ಮುಖ್ಯಮಂತ್ರಿಗಳು ವಾಲ್ಮೀಕಿ ಹಗರಣದ ಎ1 ಆರೋಪಿ ನಾಗೇಂದ್ರ ಅವರಿಂದ ಸಲಹೆ ಸೂಚನೆ ಪಡೆದಿರುವ ಸಾಧ್ಯತೆಗಳೂ ಇವೆ ಎಂದು ಆರೋಪಿಸಿದರು.

ವಾಲ್ಮೀಕಿ ಅವರ ಆದರ್ಶಗಳು, ತಮ್ಮ ಬದುಕಿನಲ್ಲಿ ಮಾಡಿದ ಸಾಧನೆಗಳು ಆದರ್ಶ ಆಗಬೇಕಾಗಿತ್ತು. ಆದರೆ ಕಾಂಗ್ರೆಸ್‌ ಪಕ್ಷ ಪರಿಶಿಷ್ಟ ಪಂಗಡದ ಅಭ್ಯುದಯಕ್ಕಾಗಿ ಮೀಸಲಿಟ್ಟ ಹಣವನ್ನು ಚುನಾವಣೆಗೆ ಬಳಸಿಕೊಂಡಿರುವುದು ರಾಷ್ಟ್ರದಲ್ಲೇ ಮೊದಲ ಬಾರಿಗೆ ನಡೆದಿರುವಾಗ ವಾಲ್ಮೀಕಿ ದಿನಾಚರಣೆಯನ್ನು ಬೇಸರದಿಂದ ಆಚರಿಸಬೇಕಾಗಿ ಬಂದಿದೆ ಎಂದರು.

ಮೇಯರ್‌ ಮನೋಜ್‌ ಕುಮಾರ್‌, ಪ್ರಮುಖರಾದ ಕ್ಯಾ|ಗಣೇಶ್‌ ಕಾರ್ಣಿಕ್‌, ಪ್ರೇಮಾನಂದ ಶೆಟ್ಟಿ, ಕದ್ರಿ ಮನೋಹರ್‌ ಶೆಟ್ಟಿ, ಯತೀಶ್‌ ಆರ್ವರ್‌, ಸಂಜಯ್‌ ಪ್ರಭು ಮುಂತಾದವರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

BY Election: ನಾಳೆ ವಿಜಯೇಂದ್ರ ದಿಲ್ಲಿಗೆ: ಟಿಕೆಟ್‌ ಚರ್ಚೆ

BY Election: ನಾಳೆ ವಿಜಯೇಂದ್ರ ದಿಲ್ಲಿಗೆ: ಟಿಕೆಟ್‌ ಚರ್ಚೆ

1-bekku-a

Udayavani Special: ಇದು ಬೆಕ್ಕಿನ ಬಿಡಾರವಲ್ಲ; ಮಹಲು!

Bangla-Yunus

National Day Celebration: ಬಾಂಗ್ಲಾದೇಶ ಸ್ಥಾಪಕ ಮುಜಿಬುರ್‌ ಸ್ಮರಣೆಗೆ ಸರಕಾರ ಕೊಕ್‌

ವಿಐಪಿ ಭದ್ರತೆಯಿಂದ ಎನ್‌ಎಸ್‌ಜಿಗೆ ಮುಕ್ತಿ: ಸಮುಚಿತ ನಿರ್ಧಾರ

National Security Guard: ವಿಐಪಿ ಭದ್ರತೆಯಿಂದ ಎನ್‌ಎಸ್‌ಜಿಗೆ ಮುಕ್ತಿ: ಸಮುಚಿತ ನಿರ್ಧಾರ

bk-Hari

Jharkhand Election; ಹರಿಪ್ರಸಾದ್‌ ಎಐಸಿಸಿ ಸಮನ್ವಯಕಾರ

sensex-down

Share Market: ಸೆನ್ಸೆಕ್ಸ್‌ ಸತತ ಪತನ: 2 ತಿಂಗಳ ಕನಿಷ್ಠ ಕುಸಿತ ದಾಖಲಿಸಿದ ಷೇರುಪೇಟೆ

rathan-tata

Mumbai: ಅರಬಿ ಸಮುದ್ರದಲ್ಲಿ ರತನ್‌ ಟಾಟಾ ಚಿತಾ ಭಸ್ಮ ವಿಸರ್ಜನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-bekku-a

Udayavani Special: ಇದು ಬೆಕ್ಕಿನ ಬಿಡಾರವಲ್ಲ; ಮಹಲು!

bk-Hari

Jharkhand Election; ಹರಿಪ್ರಸಾದ್‌ ಎಐಸಿಸಿ ಸಮನ್ವಯಕಾರ

police crime

Sullia; ಸ್ತ್ರೀಯರ ಬಗ್ಗೆ ತುತ್ಛ ಹೇಳಿಕೆ ಆರೋಪ: ಅರಣ್ಯಾಧಿಕಾರಿ ವಿರುದ್ಧ ದೂರು

3

Puttur: ಅಪರಿಚಿತರಿಂದ ಬಾಲಕನಿಗೆ ಹಲ್ಲೆ

16

Belthangady: ಸಾರಿಗೆ ಬಸ್‌ ಢಿಕ್ಕಿ: ಪಾದಚಾರಿ ಗಂಭೀರ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

BY Election: ನಾಳೆ ವಿಜಯೇಂದ್ರ ದಿಲ್ಲಿಗೆ: ಟಿಕೆಟ್‌ ಚರ್ಚೆ

BY Election: ನಾಳೆ ವಿಜಯೇಂದ್ರ ದಿಲ್ಲಿಗೆ: ಟಿಕೆಟ್‌ ಚರ್ಚೆ

1-bekku-a

Udayavani Special: ಇದು ಬೆಕ್ಕಿನ ಬಿಡಾರವಲ್ಲ; ಮಹಲು!

Bangla-Yunus

National Day Celebration: ಬಾಂಗ್ಲಾದೇಶ ಸ್ಥಾಪಕ ಮುಜಿಬುರ್‌ ಸ್ಮರಣೆಗೆ ಸರಕಾರ ಕೊಕ್‌

ವಿಐಪಿ ಭದ್ರತೆಯಿಂದ ಎನ್‌ಎಸ್‌ಜಿಗೆ ಮುಕ್ತಿ: ಸಮುಚಿತ ನಿರ್ಧಾರ

National Security Guard: ವಿಐಪಿ ಭದ್ರತೆಯಿಂದ ಎನ್‌ಎಸ್‌ಜಿಗೆ ಮುಕ್ತಿ: ಸಮುಚಿತ ನಿರ್ಧಾರ

bk-Hari

Jharkhand Election; ಹರಿಪ್ರಸಾದ್‌ ಎಐಸಿಸಿ ಸಮನ್ವಯಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.