ಶಿಕ್ಷಣ ಸಂಸ್ಥೆಗಳು ಜ್ಞಾನ ಸಂಪತ್ತಿನ ಭಂಡಾರವಾಗಲಿ
ಮಂಗಳೂರು ವಿ.ವಿ. ಕಾಲೇಜಿನ 150ನೇ ವರ್ಷಾಚರಣೆ ಉದ್ಘಾಟಿಸಿ ಡಾ| ಹೆಗ್ಗಡೆ ಆಶಯ
Team Udayavani, Feb 7, 2020, 5:45 AM IST
ಮಂಗಳೂರು: ಉನ್ನತ ಶಿಕ್ಷಣಗಳಾದ ಸ್ನಾತಕೋತ್ತರ ಪದವಿ, ಪಿಎಚ್‌ಡಿ ಅಧ್ಯಯನವು ಕೇವಲ ಪದೋನ್ನತಿಗೆ ಸೀಮಿತವಾಗದೆ ವಿದ್ಯಾರ್ಥಿಯ ಭವಿಷ್ಯದ ದಿನಗಳಿಗೆ ದಾರಿದೀಪವಾಗಬೇಕು. ಈ ಹಿನ್ನೆಲೆಯಲ್ಲಿ ಶಿಕ್ಷಣ ಸಂಸ್ಥೆಗಳು ಮಾಹಿತಿ ನೀಡುವ ಜತೆಗೆ ಜ್ಞಾನ ಸಂಪತ್ತಿನ ಭಂಡಾರವಾಗಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ 150ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಗುರುವಾರ ಆಯೋಜಿಸಲಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಮೂಲ್ಯ ರತ್ನಗಳು ಉದಿಸಲಿ
ವಿದ್ಯಾರ್ಥಿಗಳಿಗೆ ಸಣ್ಣ ಸೂತ್ರ ಅಥವಾ ಉದಾಹರಣೆಗಳ ಮೂಲಕ ಶಾಲೆಯಲ್ಲಿ ಪಠ್ಯವನ್ನು ಅರ್ಥೈಸುವ ರೀತಿಯಲ್ಲಿ ಸಣ್ಣ ಅಂಶಗಳ ಮೂಲಕವೇ ಬ್ರಹ್ಮಾಂಡ ಜ್ಞಾನ ಲಭಿಸುವ ಸೂತ್ರಗಳಿಗೆ ವಿದ್ಯಾ ಕೇಂದ್ರಗಳಲ್ಲಿ ಆದ್ಯತೆ ನೀಡಬೇಕು. ಶ್ರೇಷ್ಠ ಜ್ಞಾನವನ್ನು ಸಂಗ್ರಹಿಸಿಡುವ ಕೇಂದ್ರ ವಿಶ್ವವಿದ್ಯಾನಿಲಯ. ಇಲ್ಲಿ ಮಾಹಿತಿ ಜತೆಗೆ ಜ್ಞಾನವೂ ಸಿಗುತ್ತದೆ. ವಿ.ವಿ. ಕಾಲೇಜುಗಳು ಬಾಹ್ಯ ಸೌಕರ್ಯಗಳ ಜತೆಗೆ ಜ್ಞಾನ ಭಂಡಾರವಾದಾಗ ಅಮೂಲ್ಯ ರತ್ನಗಳು ಸೃಷ್ಟಿಯಾಗುತ್ತವೆ ಎಂದವರು ಹೇಳಿದರು.
ಮಂಗಳೂರು ವಿ.ವಿ. ಕಾಲೇಜಿನಲ್ಲಿ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆದು ಇಂದು ವಿವಿಧ ಹಂತಗಳಲ್ಲಿ ಸಾಧನೆ ಮಾಡಿದ್ದಾರೆ. ಸರಕಾರಿ ಶಾಲೆ ಅಂದರೆ ಮೂಗು ಮುರಿಯುವ ಕಾಲದಲ್ಲಿ ಮಂಗಳೂರಿನ ಸರಕಾರಿ ಕಾಲೇಜು ಈಗ 150ರ ಸಂಭ್ರದಲ್ಲಿರುವುದು ನಿಜಕ್ಕೂ ಶ್ಲಾಘನೀಯ. ನಾನು ಕೂಡ ಬೆಂಗಳೂರಿನಲ್ಲಿ ಸರಕಾರಿ ಕಾಲೇಜಿನಲ್ಲಿಯೇ ಕಲಿತಿದ್ದೇನೆ ಎಂದರು.
ಅತ್ಯುತ್ತಮ ಗ್ರಂಥಾಲಯ
ಕೇಂದ್ರದ ಮಾಜಿ ಸಚಿವ ಹಾಗೂ ವಿ.ವಿ. ಕಾಲೇಜು ಹಳೆ ವಿದ್ಯಾರ್ಥಿ ಡಾ| ಎಂ. ವೀರಪ್ಪ ಮೊಲಿ ಮಾತನಾಡಿ, ಶ್ರೇಷ್ಠ ಶಿಕ್ಷಣದ ತಳಹದಿಯ ಮೇಲೆ ಮಂಗಳೂರು ವಿ.ವಿ. ಕಾಲೇಜು ನಿಂತಿದೆ. ಇಲ್ಲಿರುವ ಅತ್ಯುತ್ತಮ ಗ್ರಂಥಾಲಯ ದೇಶದ ಬೇರೆ ಯಾವ ಕಾಲೇಜಿನಲ್ಲಿಯೂ ಇಲ್ಲ. ಅದು ಡಿಜಿಟಲೀಕರಣವಾಗಬೇಕು ಎಂದರು.
ಮಂಗಳೂರು ವಿ.ವಿ. ಉಪ ಕುಲಪತಿ ಪ್ರೊ| ಪಿ.ಎಸ್. ಎಡಪಡಿತ್ತಾಯ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಯು.ಟಿ. ಖಾದರ್, ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ, ಮುಖ್ಯ ಪೋಸ್ಟ್ ಮಾಸ್ಟರ್ ಜನರಲ… ಡಾ| ಚಾರ್ಲ್ಸ್ ಲೋಬೊ, ಭಾರತೀಯ ಪುರಾತತ್ವ ಇಲಾಖೆ ಅಧೀಕ್ಷಕ ಡಾ| ಶಿವಕಾಂತ್ ಬಾಜಪೇಯಿ, ಮನಪಾ ಸದಸ್ಯ ಎ.ಸಿ. ವಿನಯರಾಜ್, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಕರ್ನಲ್ ಶರತ್ ಭಂಡಾರಿ, ಸಂಧ್ಯಾ ಕಾಲೇಜು ಪ್ರಾಂಶುಪಾಲ ಡಾ| ರಾಮಕೃಷ್ಣ ಉಪಸ್ಥಿತರಿದ್ದರು.
ಪ್ರಾಂಶುಪಾಲ ಡಾ| ಉದಯ… ಕುಮಾರ್ ಎಂ.ಎ. ಸ್ವಾಗತಿಸಿದರು. ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗದ ಸಂಯೋಜಕ ಡಾ| ಜಯವಂತ ನಾಯಕ್ ವಂದಿಸಿದರು. ರಾಜ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ| ಲತಾ ಎ. ಪಂಡಿತ್, ಸಂಸ್ಕೃತ ವಿಭಾಗದ ಸಹ ಪ್ರಾಧ್ಯಾಪಕ ಡಾ| ಕುಮಾರ ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮ ನಿರೂಪಿಸಿದರು.
ವಸ್ತು ಪ್ರದರ್ಶನದ ಸೊಬಗು
ಕಾಲೇಜಿನ 150ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ರವೀಂದ್ರ ಕಲಾ ಭವನದಲ್ಲಿ ತುಳುನಾಡಿನ ಗತಕಾಲದ ವೈಭವವನ್ನು ಪ್ರಸ್ತುತಪಡಿಸುವ ಪುರಾತನ ವಸ್ತು ಸಂಗ್ರಹದ ಪ್ರದರ್ಶನ, ವಿದ್ಯಾರ್ಥಿಗಳ ಕೈಚಳಕದ ವಿಜ್ಞಾನ ಮಾದರಿಗಳು, ಚಿತ್ರಕಲೆ, ಹಳೆ ನಾಣ್ಯ-ನೋಟುಗಳು, ಅಂಚೆ ಚೀಟಿ ಪ್ರದರ್ಶನ ಗಮನಸೆಳೆಯುತ್ತಿದೆ. ಗುರುವಾರ ಆರಂಭವಾದ ವಸ್ತು ಪ್ರದರ್ಶನ ಮೂರು ದಿನ ನಡೆಯಲಿದೆ.
ಸ್ಮರಣ ಸಂಚಿಕೆ “ವಿಶ್ವ ಪಥ’ ಹಾಗೂ ಅಂಚೆ ಇಲಾಖೆ ವತಿಯಿಂದ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆಗೊಳಿಸಲಾಯಿತು. ವಿ.ವಿ. ಕಾಲೇಜನ್ನು ಅದ್ದೂರಿಯಾಗಿ ಸಿಂಗರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.