ಪ್ರತಿಯೊಂದು ಮಗುವು ಸಮಾಜಮುಖಿಯಾಗಲಿ: ದಿವ್ಯಜ್ಯೋತಿ
Team Udayavani, Oct 23, 2019, 5:07 AM IST
ಮಕ್ಕಳ ಹಕ್ಕುಗಳ ಸಂಸತ್ತು-2019 ಅನ್ನು ಉದ್ಘಾಟಿಸಲಾಯಿತು.
ಬೆಳ್ತಂಗಡಿ: ಶಿಕ್ಷಣ ವ್ಯವಸ್ಥೆಯಲ್ಲಿ ಪ್ರತಿಯೊಂದು ಮಗುವನ್ನು ಸಮಾಜ ಮುಖೀಯಾಗಿಸುವ ದೃಷ್ಟಿಯಿಂದ ಮಕ್ಕಳ ಹಕ್ಕುಗಳ ಸಂಸತ್ತನ್ನು ಪ್ರತಿ ಶಾಲೆಯಲ್ಲೂ ನಿರಂತರವಾಗಿ ನಡೆಸಬೇಕು ಎಂದು ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ ಹೇಳಿದರು.
ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ ದ.ಕ., ಶಿಕ್ಷಣ ಸಂಪನ್ಮೂಲ ಕೇಂದ್ರ ಬೆಳ್ತಂಗಡಿ, ಪಡಿ-ಮಂಗಳೂರು ಸಹಯೋಗದಲ್ಲಿ ಬೆಳ್ತಂಗಡಿ ಎಸ್.ಡಿ.ಸಿ.ಸಿ. ಬ್ಯಾಂಕಿನ ಉತ್ಕೃಷ್ಟ ಸಭಾಂಗಣದಲ್ಲಿ ಮಂಗಳವಾರ ಜರಗಿದ ಮಕ್ಕಳ ಹಕ್ಕುಗಳ ಸಂಸತ್ತು-2019 ಅನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಚಿಂತನ ಶಕ್ತಿ ಬೆಳೆಸುವಲ್ಲಿ ಶಿಕ್ಷಕರು ಮಹತ್ತರ ಪಾತ್ರ ವಹಿಸಬೇಕು. ಮಕ್ಕಳ ಪ್ರಶ್ನೆಗೆ ಪರಿಹಾರ ಕೊಡಿಸುವಲ್ಲಿ ಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಜಿ.ಪಂ. ಸದಸ್ಯ ಕೊರಗಪ್ಪ ನಾಯ್ಕ ಮಾತನಾಡಿ, ಆಧುನಿಕ ಶಿಕ್ಷಣದಲ್ಲಿ ಗುಡಿ ಕೈಗಾರಿಕೆ, ಹೈನುಗಾರಿಕೆ, ಕೃಷಿ ಚಟುವಟಿಕೆ ಯುಳ್ಳ ಶಿಕ್ಷಣ ನೀಡಿದಾಗ ವಿದ್ಯಾರ್ಥಿಗಳು ಸಂಸ್ಕಾರ ಭರಿತರಾಗಲು ಸಾಧ್ಯ ಎಂದರು.
ಬೆಳ್ತಂಗಡಿ ಶಿಕ್ಷಣ ಸಂಪನ್ಮೂಲ ಕೇಂದ್ರ ಅಧ್ಯಕ್ಷ ಝಕ್ರಿಯಾ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಚೈಲ್ಡ್‌ಲೈನ್‌ನ ಸಂಯೋಜಕ ದೀಕ್ಷಿತ್ ಅಚಪ್ಪಾಡಿ ಮಾಹಿತಿ ನೀಡಿದರು. ಪಡಿ-ಮಂಗಳೂರು ಇದರ ತರಬೇತಿ ಸಂಯೋಜಕಿ ಕಸ್ತೂರಿ ಬೊಳ್ವಾರ್ ಸಂಪ ನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು.
ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಝಕೀರ್ ಹುಸೇನ್ ಪ್ರಸ್ತಾವಿಸಿದರು. ಶಿಕ್ಷಣ ಸಂಪನ್ಮೂಲ ಕೇಂದ್ರದ ತಾ| ಪ್ರಧಾನ ಕಾರ್ಯದರ್ಶಿ ವಾಲ್ಟರ್ ಪಿಂಟೋ ಉಪಸ್ಥಿತರಿದ್ದರು.
ಶಿಕ್ಷಣ ಸಂಪನ್ಮೂಲ ಕೇಂದ್ರದ ಜತೆ ಕಾರ್ಯದರ್ಶಿ ಸಿ.ಕೆ. ಚಂದ್ರಕಲಾ ಸ್ವಾಗತಿಸಿ, ಕೇಂದ್ರದ ಸದಸ್ಯೆಯರಾದ ಸುಧಾಮಣಿ ಆರ್. ನಿರೂಪಿಸಿ, ಮಲ್ಲಿಕಾ ವಂದಿಸಿದರು. ತಾ|ನ ವಿವಿಧ ಶಾಲೆ ಗಳಿಂದ ವಿದ್ಯಾರ್ಥಿಗಳು, ಶಿಕ್ಷಕರು ಭಾಗವಹಿಸಿದ್ದರು.
ಮುಖಾಮುಖಿ ಸಂವಾದ
ಶಾಲೆಗಳಿಗೆ ಕಟ್ಟಡಗಳ ಬೇಡಿಕೆ ಶೌಚಾಲಯ, ಕಂಪೌಂಡ್, ಶಿಕ್ಷಕರ ಬೇಡಿಕೆ, ಸರಕಾರಿ ಬಸ್‌ಗಳ ವ್ಯವಸ್ಥೆ, ಕಂಪ್ಯೂಟರ್, ಪಠ್ಯಪುಸ್ತಕ, ಸಮವಸ್ತ್ರ ಸಹಿತ ಸಮಸ್ಯೆಗಳ ಪಟ್ಟಿಯನ್ನು ಸಂವಾದದಲ್ಲಿ ಅಧಿಕಾರಿಗಳ ಮುಂದೆ ಮಕ್ಕಳು ತೆರೆದಿಟ್ಟರು.
ಉಜಿರೆ ಎಸ್‌ಡಿಎಂ ಅನುದಾನಿತ ಶಾಲಾ ಬಳಿ ತೆರೆದ ಚರಂಡಿ ಇದ್ದು, ಅದನ್ನು ಮುಚ್ಚಬೇಕು ಎಂದು ಅವನೀಶ್ ಮನವಿ ಮಾಡಿದರು. ಶಾಲಾ ಬಳಿ ರಸ್ತೆಗೆ ಬ್ಯಾರಿಕೇಡ್ ವ್ಯವಸ್ಥೆ ಮಾಡಿ ಎಂದು ಮಾದರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾರಾವಿಯ ನವನೀತ್ ಆಗ್ರಹಿಸಿದರು.
ತೋಟತ್ತಾಡಿ, ಪಡ್ಲಾಡಿ ಲಾೖಲ ಶಾಲೆ ಗಳಲ್ಲಿ ನೀರಿನ ಸಮಸ್ಯೆ, ಕೊರಂಜ, ನಡ, ಕರಾಯ, ಪೆರ್ಲಬೈಪಾಡಿ, ಮಾದರಿ ಶಾಲೆ ಬೆಳ್ತಂಗಡಿ ಸ.ಹಿ.ಪ್ರಾ. ಶಾಲೆ ಮುಗುಳಿ ಶಾಲೆಗಳಲ್ಲಿ ಕಟ್ಟಡದ ಸಮಸ್ಯೆ ಇರುವ ಬಗ್ಗೆ ವಿದ್ಯಾರ್ಥಿಗಳು ಗಮನಕ್ಕೆ ತಂದರು.
ನಡ ಶಾಲೆಯಲ್ಲಿ ಬೆಂಚು-ಡೆಸ್ಕ್ ಕೊರತೆ ಬಗ್ಗೆ ರಕ್ಷಿತ್ ಗಮನಕ್ಕೆ ತಂದರು. ಶಾಲಾ ಹತ್ತಿರದ ಹುಲ್ಲು ತೆರವಿಗೆ ಕೊಯ್ಯೂರು ದೇವಸ್ಥಾನ ಶಾಲಾ ವಿದ್ಯಾರ್ಥಿನಿ ನಿಶ್ಮಿತಾ ಗಮನಕ್ಕೆ ತಂದರು. ಸರಕಾರಿ ಹಿ.ಪ್ರಾ. ಶಾಲೆ ಮುಗುಳಿಯಲ್ಲಿ ಶೌಚಾಲಯ ಬಳಕೆಗೆ ಅಯೋಗ್ಯವಾಗಿದೆ. ಕೂಡಲೇ ಬದಲಿ ವ್ಯವಸ್ಥೆ ಮಾಡಬೇಕು ಎಂದು ಸುದೇಶ್ ಆಗ್ರಹಿಸಿದರು. ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ ಅವರು ಪ್ರತಿಕ್ರಿಯಿಸಿ, ಸ್ಥಳೀಯ ಗ್ರಾ.ಪಂ.ಗಳ ಮೂಲಕ ನೀರಿನ ಬೇಡಿಕೆ ಈಡೇರಿಸಲು ಪ್ರಯತ್ನಿಸಲಾಗುವುದು ಎಂದರು.
ಸಂವಾದದಲ್ಲಿ ತಾ| ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷ ಝಕ್ರಿಯ, ಮಂಗಳೂರು ಚೈಲ್ಡ್‌ಲೈನ್‌ನ ಸಂಯೋಜಕ ದೀಕ್ಷಿತ್ ಅಚಪ್ಪಾಡಿ, ಮಂಗಳೂರು – ಪಡಿ ಸಂಸ್ಥೆಯ ತರಬೇತಿ ಸಂಯೋಜಕಿ ಕಸ್ತೂರಿ ಬೊಳ್ವಾರ್, ತಾ| ಸಮಾಜ ಕಲ್ಯಾಣ ಇಲಾಖೆಯ ಧೀರಜ್, ಅಬಕಾರಿ ನಿರೀಕ್ಷಕಿ ಸೌಮ್ಯಲತಾ, ಪಂಚಾಯತ್‌ರಾಜ್ ಎಂಜಿ ನಿಯರಿಂಗ್ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತ ಚೆನ್ನಪ್ಪ ಮೊಲಿ, ನೀರಾವರಿ ಇಲಾಖೆಯ ಎಂಜಿನಿಯರ್ ಮಹಮ್ಮದ್ ಹನೀಫ್, ಶಿಕ್ಷಣ ಸಂಪನ್ಮೂಲ ಕೇಂದ್ರದ ಸುಧಾ ರಮಾನಂದ್, ರಘು ಉಪಸ್ಥಿತರಿದ್ದರು. ಝಾಕಿರ್ ಹುಸೀಬ್ ಕಾರ್ಯಕ್ರಮ ನಿರೂಪಿಸಿದರು.
ಸಂವಾದದಲ್ಲಿ ಸಮಸ್ಯೆಗಳ ಪಟ್ಟಿ ತೆರೆದಿಟ್ಟ ಮಕ್ಕಳು
ಸರಕಾರಿ ಬಸ್ ಸರಕಾರಿ ಬಸ್‌ಗಳ ಕೊರತೆಯಿದ್ದು, ತತ್‌ಕ್ಷಣ ಹೆಚ್ಚುವರಿ ಸರಕಾರಿ ಬಸ್ ನೀಡಿ ಎಂದು ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯ ಅವನಿ ಹೆಬ್ಟಾರ್ ಆಗ್ರಹಿಸಿದರು. ಈ ಬಗ್ಗೆ ತಾ.ಪಂ. ಸಾಮಾನ್ಯ ಸಭೆಯಲ್ಲಿ ಪ್ರಸ್ತಾವಿಸಿ ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಾ.ಪಂ ಅಧ್ಯಕ್ಷೆ ದಿವ್ಯಜ್ಯೋತಿ ಹೇಳಿದರು.
ಮುಖ್ಯ ಶಿಕ್ಷಕರ ನೇಮಕ
ನಮ್ಮ ಶಾಲೆಯಲ್ಲಿ ಮುಖ್ಯ ಶಿಕ್ಷಕರಿಲ್ಲದೆ ಸಮಸ್ಯೆಯಾಗಿದೆ. ಕೂಡಲೇ ನೇಮಿಸುವಂತೆ ತೋಟತ್ತಾಡಿ ಸ.ಹಿ.ಪ್ರಾ. ಶಾಲೆಯ ವಿದ್ಯಾರ್ಥಿ ನಿತಿನ್ ಮನವಿ ಮಾಡಿದರು. ಶಿಕ್ಷಣ ಸಂಪನ್ಮೂಲ ಕೇಂದ್ರದ ಸಂಯೋಜಕ ಸುಭಾಷ್ ಜಾದವ್ ಉತ್ತರಿಸಿ, ತಾ|ಗೆ 882 ಮುಖ್ಯ ಶಿಕ್ಷಕರ ಹುದ್ದೆ ಮಂಜೂರಾಗಿದ್ದು, ಇದರಲ್ಲಿ 791 ಹುದ್ದೆ ಭರ್ತಿ ಇದೆ. ಉಳಿದ ಹುದ್ದೆ ಖಾಲಿ ಇದ್ದು, ಕೌನ್ಸೆಲಿಂಗ್ ನಡೆಯುತ್ತಿದೆ. ಶೀಘ್ರ ಭರ್ತಿ ಮಾಡುವುದಾಗಿ ತಿಳಿಸಿದರು.
ಸವಿಗನ್ನಡ ಪಠ್ಯಪುಸ್ತಕ
ನಮ್ಮ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭವಾಗಿದೆ ಇದುವರೆಗೆ ಸವಿಗನ್ನಡ ಪಠ್ಯಪುಸ್ತಕ ಸಿಗಲಿಲ್ಲ, ತತ್‌ಕ್ಷಣ ವಿತರಿಸುವಂತೆ ನಾವೂರಿನ ಸ.ಹಿ.ಪ್ರಾ ಶಾಲೆಯ ವಿದ್ಯಾರ್ಥಿ ಸಿಂಚನ್ ಮನವಿ ಮಾಡಿದರು. ಬಂದ ತತ್‌ಕ್ಷಣ ನೀಡಲಾಗುವುದು ಎಂದು ಶಿಕ್ಷಣ ಸಂಯೋಜಕರು ತಿಳಿಸಿದರು.
ಕಂಪ್ಯೂಟರ್ ವ್ಯವಸ್ಥೆ ಬದನಾಜೆ, ಮೆಲಂತಬೆಟ್ಟು, ನಡ, ಗೋವಿಂದೂರು ಶಾಲೆ ಗಳಲ್ಲಿ ಕಂಪ್ಯೂಟರ್ ವ್ಯವಸ್ಥೆಗೆ ವಿದ್ಯಾರ್ಥಿಗಳು ಆಗ್ರಹಿಸಿದರು. ಶಿಕ್ಷಣ ಸಂಯೋಜಕ ಸುಭಾಷ್ ಜಾದವ್ ಉತ್ತರಿಸಿ, ವಿದ್ಯಾರ್ಥಿಗಳ ಅನುಪಾತ ನೋಡಿ ಸರಕಾರದಿಂದ ಕಂಪ್ಯೂಟರ್ ನೀಡಲಾಗುತ್ತಿದೆ. ಕಡಿಮೆ ಮಕ್ಕಳಿದ್ದರೆ ಸ್ಥಳೀಯ ದಾನಿಗಳ ನೆರವಿನಿಂದ
ಕಂಪ್ಯೂಟರ್ ವ್ಯವಸ್ಥೆ ಮಾಡಿ ಕೊಂಡರೆ ಉತ್ತಮ ಎಂದರು.
ಕಳಪೆ ಸೈಕಲ್ ವಿತರಣೆ ಕರ್ನೋಡಿ ಸ.ಹಿ.ಪ್ರಾ. ಶಾಲೆಗೆ ಬಂದ ಸೈಕಲ್ ಕಳಪೆ ಗುಣಮಟ್ಟದ್ದಾಗಿದೆ ಎಂದು ವಿದ್ಯಾರ್ಥಿನಿ ನಂದಿನಿ ತಿಳಿಸಿದರು. ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ ಉತ್ತರಿಸಿ, ಕಳಪೆ ಸೈಕಲ್ ಬಂದರೆ ಹಿಂದಿರು ಗಿಸಿ, ಅಧಿಕಾರಿಗಳಿಗೆ ದೂರು ನೀಡಿ ಎಂದು ಸೂಚಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ
Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ
Kundapura: “ಅವರು ಪ್ರತೀ ದಿನ ಫೋನ್ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’
Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ
Uttar Pradesh: ಸಂಭಲ್‌ನ ಪ್ರಾಚೀನ ಬಾವಿಯ ಉತ್ಖನನ, ನವೀಕರಣಕ್ಕೆ ಚಾಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.