ಜೀವನ ಸಾರ್ಥಕಗೊಳಿಸೋಣ
58ನೇ ಏಕಾಹ ಭಜನೋತ್ಸವದಲ್ಲಿ ಸುಬ್ರಹ್ಮಣ್ಯ ಶ್ರೀ
Team Udayavani, Apr 14, 2019, 6:00 AM IST
ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಗಳು ಆಶೀರ್ವಚನ ನೀಡಿದರು.
ಕಡಬ: ಮನುಷ್ಯ ಜೀವನ ಎನ್ನುವುದು ಭಗವಂತನು ನಮಗೆ ದಯಪಾಲಿಸಿದ ಅತ್ಯಮೂಲ್ಯ ಕೊಡುಗೆ. ಸನ್ಮಾರ್ಗದಿಂದ ಬದುಕುವ ಮೂಲಕ ಅದನ್ನು ಸಾರ್ಥಕಗೊಳಿಸೋಣ ಎಂದು ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾ ಪ್ರಸನ್ನತೀರ್ಥ ಸ್ವಾಮೀಜಿ ನುಡಿದರು.
ಅವರು ಕಡಬದ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದಲ್ಲಿ 58ನೇ ವರ್ಷದ ಏಕಾಹ ಭಜನೋತ್ಸವದ ಪ್ರಯುಕ್ತ ಶುಕ್ರವಾರ ರಾತ್ರಿ ಆಯೋಜಿ ಸಲಾಗಿದ್ದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ದೇವರು ನಮಗೆ ಎಲ್ಲ ಅಂಗಾಂಗಳನ್ನು ನೀಡುವು ದರೊಂದಿಗೆ ಅದನ್ನು ಯಾವ ರೀತಿ ಒಳ್ಳೆಯ ಕಾರ್ಯಗಳಿಗಾಗಿ ಬಳಸ ಬೇಕೆಂಬ ಬುದ್ಧಿಯನ್ನೂ ನೀಡಿದ್ದಾನೆ. ಆದರೆ ಅವುಗಳನ್ನು ಸದ್ಬಳಕೆ ಮಾಡಿ ಕೊಳ್ಳಬೇಕು. ನಮ್ಮ ನಡೆ ನುಡಿಗಳು ಉತ್ತಮವಾಗಿರಬೇಕು ಎಂದರು.
ಭಜನೆ ದೇವರನ್ನು ಸಂತೃಪ್ತಿಪಡಿಸಲು ಇರುವ ಅತ್ಯಂತ ಸುಲಭದ ಮಾರ್ಗ. ಅದರಲ್ಲಿಯೂ ದಾಸರ ಪದಗಳನ್ನು ಹಾಡಿ ದೇವರನ್ನು ಸ್ತುತಿಸಿದರೆ ಹೆಚ್ಚಿನ ಮಹತ್ವವಿದೆ. ಸೂರ್ಯೋದಯ ಮತ್ತು ಸೂರ್ಯಾಸ್ತದ ವೇಳೆ ದೇವರ ನಾಮ ಹಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಹಿಂದೆ ಪ್ರತಿ ಮನೆಗಳಲ್ಲಿ ಸಂಜೆ ಮನೆಯ ಎಲ್ಲರೂ ಸೇರಿ ದೇವರ ಭಜನೆ ಹಾಡುಗಳನ್ನು ಹಾಡುವ ಸಂಪ್ರದಾಯವಿತ್ತು. ಆದರೆ ಇಂದಿನ ಆಧುನಿಕತೆಯ ಭರಾಟೆಯಲ್ಲಿ ಅದು ನಶಿಸಿಹೋಗುತ್ತಿರುವುದು ವಿಷಾದನೀಯ. ಈ ರೀತಿಯ ಸತ್ಸಂಪ್ರದಾಯವನ್ನು ಮುಂದುವರಿಸುವ ನಿಟ್ಟಿನಲ್ಲಿ ಹೆತ್ತವರು ಮಕ್ಕಳಿಗೆ ಮಾರ್ಗದರ್ಶನ ನೀಡಬೇಕು ಎಂದು ಕಿವಿಮಾತು ಹೇಳಿದರು.
ಏಕಾಹ ಭಜನ ಸಮಿತಿಯ ಅಧ್ಯಕ್ಷ ಪೆಲತ್ತೋಡಿ ಚಂದ್ರಶೇಖರ ಕರ್ಕೇರ, ಕಾರ್ಯದರ್ಶಿ ಧರಣೇಂದ್ರ ಜೈನ್ ಬೆದ್ರಾಜೆ, ಭಜನ ಮಂಡಳಿಯ ಅಧ್ಯಕ್ಷ ಸೋಮಪ್ಪ ನಾೖಕ್ ಕಡಬ ಹಾಗೂ ಆರಕ್ಷಕ ಠಾಣಾ ಸಿಬಂದಿ ಸತೀಶ್ ಶ್ರೀಗಳನ್ನು ಗೌರವಿಸಿದರು. ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಜನಾರ್ದನ ಗೌಡ ಪಣೆಮಜಲು, ಶ್ರೀಕಂಠಸ್ವಾಮಿ ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಅಲುಂಗೂರು ನಾರಾಯಣ ಗೌಡ, ಭಜನ ಮಂಡಳಿಯ ಕಾರ್ಯದರ್ಶಿ ಮನೋಹರ ರೈ ಬೆದ್ರಾಜೆ, ಏಕಾಹ ಭಜನ ಸಮಿತಿಯ ಕೋಶಾಧಿಕಾರಿ ನೀಲಾವತಿ ಶಿವರಾಮ್, ಉಪಾಧ್ಯಕ್ಷ ಯಶೋಧರ ಪೂವಳ, ಜತೆ ಕಾರ್ಯದರ್ಶಿ ದಿನೇಶ್ ಶೆಟ್ಟಿ ಕಳಾರ, ಎಪಿಎಂಸಿ ಮಾಜಿ ಅಧ್ಯಕ್ಷ ಕೃಷ್ಣ ಶೆಟ್ಟಿ, ಸದಸ್ಯೆ ಪುಲಸ್ತಾ ರೈ, ಸರಸ್ವತೀ ವಿದ್ಯಾಲಯದ ಅಧ್ಯಕ್ಷ ರವಿರಾಜ ಶೆಟ್ಟಿ ಕಡಬ, ವರ್ತಕ ಸಂಘದ ಅಧ್ಯಕ್ಷ ಶಿವರಾಮ ಎಂ.ಎಸ್., ಅಶೋಕ್ ಆಳ್ವ ಬೆದ್ರಾಜೆ, ಉಪನ್ಯಾಸಕ ವಿಶ್ವನಾಥ ರೈ ಪೆರ್ಲ, ದೇವಸ್ಥಾನದ ಪ್ರಧಾನ ಅರ್ಚಕ ಗೋಪಾಲಕೃಷ್ಣ ಕೆದಿಲಾಯ ಉಪಸ್ಥಿತರಿದ್ದರು. ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ ಸೀತಾರಾಮ ಗೌಡ ಪೊಸವಳಿಕೆ ಸ್ವಾಗತಿಸಿ, ವಂದಿಸಿದರು. ಮಹಾಗಣಪತಿ ದೇವಸ್ಥಾನದಿಂದ ಶ್ರೀಗಳನ್ನು ಭಜನ ಮೆರವಣಿಗೆ ಮೂಲಕ ಕರೆತರಲಾಯಿತು. ದೀಪಾರಾಧನೆಯ ಮೂಲಕ ದೇವಸ್ಥಾನದ ಪ್ರಧಾನ ಅರ್ಚಕ ಗೋಪಾಲಕೃಷ್ಣ ಕೆದಿಲಾಯ ಭಜನೆಗೆ ಚಾಲನೆ ನೀಡಿದರು. ಭಜನ ಮಂಡಳಿಗಳ ಸದಸ್ಯರು ಭಜನೆಯಲ್ಲಿ ಭಾಗವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.