‘ಕಾರ್ಮಿಕರಿಗೆ ಕನ್ನಡದಲ್ಲೇ ಪುಸ್ತಕಗಳು ಲಭ್ಯವಾಗಲಿ’
Team Udayavani, Nov 19, 2017, 10:12 AM IST
ಮಹಾನಗರ: ಕಾರ್ಮಿಕರು ತಮ್ಮ ಹಕ್ಕಿನ ಕೊರತೆಯಿಂದ ಶೋಷಣೆಗೊಳಗಾಗುತ್ತಿದ್ದು, ಅಂತಹ ಶೋಷಿತ ವರ್ಗಕ್ಕೆ ಮಾಹಿತಿ ಪುಸ್ತಕಗಳು ಕನ್ನಡದಲ್ಲಿ ಲಭ್ಯವಾದಾಗ ಕಾರ್ಮಿಕರು ಕೂಡ ಕಾನೂನು ತಿಳಿದುಕೊಳ್ಳಲು ಸಹಾಯವಾಗುತ್ತದೆ. ಈ ನಿಟ್ಟಿನಲ್ಲಿ ಕಾನೂನು ತಜ್ಞರು ಆಲೋಚಿಸಬೇಕಿದೆ ಎಂದು ಮಂಗಳೂರು ಕಾರ್ಮಿಕ ಇಲಾಖೆಯ ಸಹಾಯಕ ಕಮಿಷನರ್ ಕೆ.ಬಿ.ನಾಗರಾಜ್ ಸಲಹೆ ನೀಡಿದರು.
ಅವರು ಶನಿವಾರ ನಗರದ ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ಕರ್ನಾಟಕ ಎಲೈಟ್ ಮ್ಯಾನೇಜ್‌ಮೆಂಟ್ ಅಸೋಸಿಯೇಶನ್ ಮಂಗಳೂರು ಆಯೋಜಿಸಿದ್ದ ಕಾರ್ಮಿಕ ಕಾನೂನು ಕುರಿತ ಮೂರು ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಕಾರ್ಮಿಕರ ಜತೆಗೆ ಉದ್ಯೋಗದಾತರಿಗೂ ಕಾನೂನಿನ ಕೊರತೆ ಇದೆ. ಹೀಗಾಗಿ ತಮ್ಮ ಸಂಸ್ಥೆಯನ್ನು ಮುನ್ನಡೆಸಲು
ವಿಫಲರಾಗಿರುತ್ತಾರೆ. ಈ ನಿಟ್ಟಿನಲ್ಲಿ ಚಂದ್ರ ಶೇಖರ್ ಹೊಳ್ಳ ಹಾಗೂ ಲತಾ ಹೊಳ್ಳ ಅವರು ಕಾರ್ಮಿಕರ ಕಾನೂನಿನ ಕುರಿತು ಪುಸ್ತಕ ಹೊರತಂದಿರುವುದು ಶ್ಲಾಘನೀಯ ಎಂದರು.
ಕಾನೂನು ಪುಸ್ತಕಗಳ ಅನಾವರಣ
ಕಾನೂನು ತಜ್ಞರಾದ ಚಂದ್ರಶೇಖರ ಹೊಳ್ಳ, ಲತಾ ಸಿ. ಹೊಳ್ಳ ಹಾಗೂ ಲಕ್ಷ್ಮೀಶ್ ರೈ ಅವರು ಬರೆದಿರುವ ಇಂಡಸ್ಟ್ರಿಯಲ್ ಲೇಬರ್ ಲಾ, ಸಿಂಪಲ್ ವೇ ಆಫ್ ಡ್ರಾಫ್ಟಿಂಗ್ ಮತ್ತು ಬೇಸಿಕ್ಸ್ ಆಫ್ ಲೇಬರ್ ಲಾ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು.
ಕಾರ್ಮಿಕರಿಗೆ ಕಾನೂನು ಅಗತ್ಯ
ಎ.ಜೆ. ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ| ಪ್ರಶಾಂತ್ ಮಾರ್ಲ ಮಾತನಾಡಿ, ಯಾವುದೇ ಸಂಸ್ಥೆಯಲ್ಲಿ ನೌಕರರು ಉತ್ತಮವಾಗಿದ್ದರೆ ಮಾತ್ರ ಆ ಸಂಸ್ಥೆ ಬೆಳೆಯುತ್ತದೆ ಈ ನಿಟ್ಟಿನಲ್ಲಿ ಸಂಸ್ಥೆಯ ಮಾಲಕರು ಕಾರ್ಮಿಕರ ಕಾನೂನುಗಳನ್ನು ಅರಿತುಕೊಂಡಾಗ ನೌಕರರ ಬೇಡಿಕೆಗಳಿಗೆ ಸ್ಪಂದಿಸಿದಂತಾಗುತ್ತದೆ ಎಂದರು.
ರಾಜ್ಯ ಕಾನೂನು ವಿವಿಯ ಸಿಂಡಿಕೇಟ್ ಸದಸ್ಯೆ ರಾಜೇಶ್ವರಿ ಎ., ಎಸ್‌ಡಿಎಂ ಕಾನೂನು ಕಾಲೇಜು ಪ್ರಾಂಶುಪಾಲ ಡಾ|
ತಾರಾನಾಥ್ ಉಪಸ್ಥಿತರಿದ್ದರು. ಎಲೈಟ್‌ನ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀಶ್ ರೈ ಸ್ವಾಗತಿಸಿದರು. ನ್ಯಾಯವಾದಿ ವಿವೇಕ್ ವಲ್ಲಬ್ ಕಾರ್ಯಕ್ರಮ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ
Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್, ಟ್ರಾಫಿಕ್ ಜಾಮ್
Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು
Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು
Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.