ಪ್ರಜಾಪ್ರಭುತ್ವದ ಪಾಠ ಮನೆಯಿಂದಲೇ ಆರಂಭವಾಗಲಿ: ಡಾ| ಕನ್ನಯ್ಯ ಕುಮಾರ್
Team Udayavani, Aug 11, 2019, 5:11 AM IST
ಮಂಗಳೂರು: ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಸರ್ವಾಧಿಕಾರಕ್ಕೆ ಅವಕಾಶವಿಲ್ಲ. ದೇಶದ ಜನಸಂಖ್ಯೆಯ ಶೇ. 74ರಷ್ಟು ಮಂದಿ 40 ವರ್ಷ ಕೆಳಗಿನವರಾಗಿದ್ದು, ಯುವ ಮತದಾರರೇ ಅಧಿಕ.
ಯುವಜನರು ಮತ ಚಲಾಯಿಸಿದ ಬಳಿಕ ವ್ಯಕ್ತಿಯನ್ನು ವೈಭವೀಕರಿಸುವ ಬದಲು ಪ್ರಶ್ನಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು; ಆಗ ಮಾತ್ರ ಪ್ರಜಾಪ್ರಭು
ತ್ವದ ಮೌಲ್ಯಗಳನ್ನು ಅರಿಯಲು ಸಾಧ್ಯ ಎಂದು ಯುವ ನಾಯಕ ಡಾ| ಕನ್ನಯ್ಯ ಕುಮಾರ್ ಹೇಳಿದರು.
ಅವರು ಶನಿವಾರ ನಗರದಲ್ಲಿ ಸ್ವಾತಂತ್ರ್ಯ ಹೋರಾಟಗಾರ, ಕರ್ನಾಟಕ ಏಕೀಕರಣ ಚಳವಳಿಯ ನಾಯಕ, ರಾಜ್ಯಸಭಾ ಸದಸ್ಯರಾಗಿದ್ದ ದಿ| ಬಿ.ವಿ. ಕಕ್ಕಿಲ್ಲಾಯ (1919- 2012) ಅವರ ಜನ್ಮಶತಾಬ್ದ ಪ್ರಯುಕ್ತ ನಡೆದ ವಿಚಾರ ಸಂಕಿರಣದಲ್ಲಿ “ಕವಲು ದಾರಿಯಲ್ಲಿ ಭಾರತದ ಯುವಕರು’ ಎಂಬ ವಿಷಯದ ಕುರಿತು ಮಾತನಾಡಿದರು.
ಮಂಗಳೂರಿನ ಸಮದರ್ಶಿ ವೇದಿಕೆ, ಬೆಂಗಳೂರಿನ ಹೊಸತು ಮಾಸಪತ್ರಿಕೆ, ಎಂ.ಎಸ್. ಕೃಷ್ಣನ್ ಸ್ಮರಣ ಸಂಸ್ಥೆ ಮತ್ತು ನವಕರ್ನಾಟಕ ಪಬ್ಲಿಕೇಶನ್ಸ್ ಸಂಸ್ಥೆಗಳು ಜಂಟಿಯಾಗಿ ಈ ಕಾರ್ಯಕ್ರಮ ಏರ್ಪಡಿಸಿದ್ದವು.
ಯುವ ಸಮುದಾಯ ಯಾವ ಮಟ್ಟವನ್ನು ಏರಬೇಕಾಗಿತ್ತೋ ಆ ಮಟ್ಟಕ್ಕೆ ತಲುಪಿಲ್ಲ ಎನ್ನುವುದು ವಾಸ್ತವ. ಹೆತ್ತವರು ಮಕ್ಕಳಿಗೆ ಬಾಲ್ಯದಲ್ಲಿಯೇ ರಾಜಕೀಯ ಮತ್ತು ರಾಜಕಾರಣಿಗಳ ಬಗ್ಗೆ ಕೆಟ್ಟದಾಗಿ ಬಿಂಬಿಸಿರುವುದು ಹಾಗೂ ಪ್ರಶ್ನಿಸುವ ಮನೋಭಾವದಿಂದ ದೂರ ಸರಿಸಿರುವುದು ಇದಕ್ಕೆ ಕಾರಣ. ಆದ್ದರಿಂದ ಪ್ರಜಾಪ್ರಭುತ್ವದ ಪಾಠ ಮನೆಯಿಂದಲೇ ಆರಂಭ ಆಗಬೇಕು ಎಂದವರು ಅಭಿಪ್ರಾಯಪಟ್ಟರು.
ಬಿಜೆಪಿ ಇರದಿದ್ದರೆ…
ಬಿಜೆಪಿ ಇರುವುದರಿಂದಲೇ ಜಾತ್ಯ ತೀತೆಯ ಅರ್ಥ ತಿಳಿಯುವಂತಾಗಿದೆ. ಇಲ್ಲವಾಗಿದ್ದರೆ ಇಂದು ಕೂಡ ದೇಶದಲ್ಲಿ ಹಲವಾರು ಸಮಸ್ಯೆಗಳು ರಾಜಕೀಯ ಪ್ರಶ್ನೆಗಳಾಗುತ್ತಿರಲಿಲ್ಲ. ಈ ಪ್ರಶ್ನೆಗಳಿಂದಾಗಿಯೇ ಜನರು ರಾಜಕೀಯ ವ್ಯಕ್ತಿಗಳ ನೈಜತೆಯನ್ನು ಅರಿಯಲು ಸಾಧ್ಯವಾಗಿದೆ ಎಂದರು.
ಡಾ| ಶ್ರೀನಿವಾಸ ಕಕ್ಕಿಲ್ಲಾಯ ಕಾರ್ಯಕ್ರಮ ನಿರ್ವಹಿಸಿದರು. ಡಾ| ವೆಂಕಟಕೃಷ್ಣ ಕಕ್ಕಿಲ್ಲಾಯ ಉಪಸ್ಥಿತರಿದ್ದರು.
ಕನ್ನಯ್ಯ ವಿರುದ್ಧ ಘೋಷಣೆ
32 ಮಂದಿ ವಶಕ್ಕೆ
ಮಂಗಳೂರು: ದಿ| ಬಿ.ವಿ. ಕಕ್ಕಿಲ್ಲಾಯ ಅವರ ಜನ್ಮಶತಾಬ್ದ ಸಮಾರಂಭದಲ್ಲಿ ಕನ್ನಯ್ಯ ಕುಮಾರ್ ಭಾಗವಹಿಸುವುದನ್ನು ವಿರೋಧಿಸಿ ಘೋಷಣೆ ಕೂಗಿದ ಹಿಂದೂ ಸಂಘಟನೆಗಳ 32 ಕಾರ್ಯ ಕರ್ತರನ್ನು ಮಂಗಳೂರು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದರು.
ಕನ್ನಯ್ಯ ವೇದಿಕೆಗೆ ಆಗಮಿಸು ತ್ತಿದ್ದಂತೆ 2- 3 ಜನ ಕಾರ್ಯಕರ್ತರು ಸಭಾಂಗಣದ ಒಳಗೆ ಪ್ರವೇಶಿಸಿದ್ದರು. ಪೊಲೀಸರು ಅವರನ್ನು ವಶಕ್ಕೆ ಪಡೆದರು. ಇದೇ ವೇಳೆ ಸಭಾಂಗಣದ ಹೊರಗೆ ಜಮಾಯಿಸಿದ್ದ ಕಾರ್ಯಕರ್ತರು ಘೋಷಣೆ ಕೂಗಿದರು. ಪೊಲೀಸರು ಅವರನ್ನೂ ವಶಕ್ಕೆ ಪಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.