ಕಾಶ್ಮೀರದ 4 ಲಕ್ಷ ನಿರಾಶ್ರಿತ ಸಾರಸ್ವತ ಹಿಂದೂಗಳ ಸಂಕಷ್ಟ ನಿವಾರಣೆಯಾಗಲಿ

Team Udayavani, Nov 29, 2021, 5:03 AM IST

ಕಾಶ್ಮೀರದ 4 ಲಕ್ಷ ನಿರಾಶ್ರಿತ ಸಾರಸ್ವತ ಹಿಂದೂಗಳ ಸಂಕಷ್ಟ ನಿವಾರಣೆಯಾಗಲಿ

ಮಂಗಳೂರು: ಕಾಶ್ಮೀರದ 4 ಲಕ್ಷ ಸಾರಸ್ವತ ಹಿಂದೂಗಳು ತಮ್ಮದೇ ದೇಶದಲ್ಲಿ ಕಳೆದ 32 ವರ್ಷಗಳಿಂದ ನಿರಾಶ್ರಿತರಾಗಿ ಬದುಕುತ್ತಿದ್ದು, ಅವರ ಸಂಕಷ್ಟಗಳ ನಿವಾರಣೆಗೆ ಸರಕಾರ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಕಾಶ್ಮೀರದ ಪದ್ಮಶ್ರೀ ಪ್ರೊ| ಕಾಶಿನಾಥ ಪಂಡಿತ್‌ ಒತ್ತಾಯಿಸಿದರು.

ಜಾಗತಿಕ ಸಾರಸ್ವತ್‌ ಸಂಗಮ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದ ಅವರು ನಾವು ಕಾಶ್ಮೀರಿ ಪಂಡಿತರು ಎಂಬ ವಿಷಯದ ಕುರಿತು ಮಾತನಾಡಿದ ಅವರು, ಸುಮಾರು 4,000 ವರ್ಷಗಳ ಇತಿಹಾಸದ ಕಾಶ್ಮೀರದ ಹಿಂದೂ ಸಾಮ್ರಾಜ್ಯವು 1339ರಲ್ಲಿ ಮುಸ್ಲಿಮರ ಆಳ್ವಿಕೆಗೆ ಒಳಪಟ್ಟಿತು. 480 ವರ್ಷಗಳ ಕಾಲ ಆಡಳಿತ ನಡೆಸಿದ ಸುಲ್ತಾನರು ಕಾಶ್ಮೀರದ ಪುರಾತನ ಹಿಂದೂ ನಾಗರಿಕತೆಯನ್ನು ಮತ್ತು ಸಾರಸ್ವತ ಹಿಂದೂ ಸಮುದಾಯವನ್ನು ನಾಶ ಮಾಡಿದರು. 1990ರ ವೇಳೆಗೆ ಜಮ್ಮು ಮತ್ತು ಕಾಶ್ಮೀರವು ಜಾತ್ಯತೀತ ಪ್ರಜಾಸತ್ತಾತ್ಮಕ ಭಾರತದ ಅವಿಭಾಜ್ಯ ಭಾಗವಾಗಿದ್ದ ಸಂದರ್ಭದಲ್ಲಿಯೇ ಕಾಶ್ಮೀರದ ಸಾರಸ್ವತರ ನರಮೇಧ ಮತ್ತು ಜನಾಂಗೀಯ ಹಿಂಸೆ ನಡೆದು ಇದೀಗ 4 ಲಕ್ಷ ಮಂದಿ ಸಾರಸ್ವತ ಹಿಂದೂಗಳು ನಿರಾಶ್ರಿತರಾಗಿದ್ದಾರೆ. ಇದುವರೆಗೆ ಯಾವುದೇ ಪ್ರಾದೇಶಿಕ ಅಥವಾ ರಾಷ್ಟ್ರೀಯ ರಾಜಕೀಯ ಪಕ್ಷಗಳು ಅವರಿಗೆ ನೆರವಾಗುವ ಯಾವುದೇ ಪ್ರಯತ್ನ ನಡೆಸಿಲ್ಲ ಎಂದು ವಿಷಾದ ವ್ಯಕ್ತ ಪಡಿಸಿದರು.

ಸ್ವಾಮೀಜಿಗೆ ಮನವಿ
ನಿರಾಶ್ರಿತರಾಗಿ ವಿವಿಧೆಡೆ ಚದುರಿ ಹೋಗಿರುವ ಈ ಕಾಶ್ಮೀರಿ ಸಾರಸ್ವತ ಹಿಂದೂಗಳ ಸಂಕಷ್ಟಗಳಿಗೆ ದೇಶದ ಸಮಗ್ರ ಸಾರಸ್ವತ ಸಮುದಾಯ ಸ್ಪಂದಿಸ ಬೇಕು. ಹಾಗೆಯೇ ಕಾಶೀ ಮಠಾಧಿಪತಿ ಶ್ರೀಮತ್‌ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರು ಕೂಡ 1990ರ ನರಮೇಧ ಮತ್ತು ಜನಾಂಗೀಯ ಹಿಂಸೆಯಿಂದ ಸಂಕಷ್ಟಕೊಳ್ಳಗಾಗಿ ನಿರಾಶ್ರಿತರಾಗಿರುವ ಸಾರಸ್ವತ ಹಿಂದೂಗಳ ಸಂಕಷ್ಟಗಳನ್ನು ಅರಿತು, ವಿಶ್ಲೇಷಣೆ ನಡೆಸಿ ಪರಿಹಾರ ಕ್ರಮಗಳನ್ನು ಸೂಚಿಸಲು 5 ಮಂದಿ ಸದಸ್ಯರ ಸಮಿತಿಯನ್ನು ರಚಿಸ ಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ:ಒಂದೇ ದಿನದಲ್ಲಿ ಕೇಸ್​​ ವಿಚಾರಣೆ, ಆದೇಶ: ನ್ಯಾಯಾಂಗ ಇತಿಹಾಸದಲ್ಲೇ ತ್ವರಿತ ತೀರ್ಪು

ಕಾಶೀ ಮಠಾಧೀಶರಿಂದ ಚಾಲನೆ
ಜಾಗತಿಕ ಸಾರಸ್ವತ್‌ ಸಂಗಮವನ್ನು ವಾರಣಾಸಿಯ ಶ್ರೀ ಕಾಶೀಮಠ ಸಂಸ್ಥಾನದ ಶ್ರೀಮತ್‌ ಸಂಯಂಮೀಂದ್ರ ತೀರ್ಥ ಸ್ವಾಮೀಜಿ ಅವರು ಉದ್ಘಾಟಿಸಿದರು. ಆಬಳಿಕ ನಡೆದ ವಿಚಾರ ಗೋಷ್ಠಿಯಲ್ಲಿ ಡಾ| ಅಜಯ್‌ ಚುರುಂಗ್‌ ಅವರು ಕಾಶ್ಮೀರದಿಂದ ಸಾರಸ್ವತರ ನಿರ್ಗಮನ – ಕಲಿಯಬೇಕಾದ ಪಾಠ, ಆರತಿ ಟಿಕ್ಕೂ ಅವರು ಸ್ಥಳಾಂತರಿಸಲಾದ ಕಾಶ್ಮೀರಿ ಹಿಂದೂಗಳ ಅನನ್ಯತೆ ಮತ್ತ ಸ್ವ ಜಾಗೃತಿ, ಶೆಫಾಲಿ ವೈದ್ಯ ಅವರು ರಾಷ್ಟ್ರ ನಿರ್ಮಾಣದಲ್ಲಿ ಸಾರಸ್ವತರ ಪಾತ್ರ, ದಿನೇಶ್‌ ಕಾಮತ್‌ ಅವರು ಸಂಸ್ಕೃತ – ಮಾತೃ ಭಾಷೆ , ರಾಕೇಶ್‌ ಕೌಲ್‌ ಅವರು ಶಾರದಾ ಲಿಪಿ – ಸಾರಸ್ವತರ ಬದುಕಿನಲ್ಲಿ ಮಹತ್ವ, ಲೆಫ್ಟಿನೆಂಟ್‌ ಪ್ರೀತಿ ಮೋಹನ್‌ ಅವರು ಉತ್ತರ ಭಾರತದ ಮೊಹ್ಯಾಲ್‌ ಸಾರಸ್ವತ್‌, ವೇದಮೂರ್ತಿ ಸುಧಾಕರ್‌ ಭಟ್‌ ಅವರು ಸಾರಸ್ವತರ ಏಕತೆಯಲ್ಲಿ ಸಾರಸ್ವತ ಮಠಗಳ ಪಾತ್ರ ಎಂಬ ವಿಷಯದ ಕುರಿತು ವಿಚಾರ ಮಂಡಿಸಿದರು.

ಇದೇ ವೇಳೆ ಶ್ರೀಮತ್‌ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರ ಕಾಶ್ಮೀರ ಯಾತ್ರೆ ಕುರಿತ ಪುಸ್ತಕ ಸಾರಸ್ವತ್‌ ಅವೇಕನಿಂಗ್‌ ಬಿಡುಗಡೆ ಮಾಡಲಾಯಿತು.

ಟಾಪ್ ನ್ಯೂಸ್

Daily Horoscope

Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ

Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ

Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ

AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ

Belthangady: ಅಪಘಾತದಲ್ಲಿ ಗಾಯಗೊಂಡು 14 ವರ್ಷ ಜೀವನ್ಮರಣ ಹೋರಾಟ ಮಾಡಿದ್ದ ಶಿಕ್ಷಕಿ ಸಾವು

Belthangady: 14 ವರ್ಷ ಜೀವನ್ಮರಣ ಸ್ಥಿತಿಯಲ್ಲಿದ್ದ ಶಿಕ್ಷಕಿ ಸಾವು

1-dhyan

Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?

CT Ravi ಜಾಮೀನು ಅರ್ಜಿ ವಿಚಾರಣೆ ಇಂದು ಬೆಳಗಾವಿ ಕೋರ್ಟ್‌ನಿಂದ ಬೆಂಗಳೂರಿಗೆ ವರ್ಗ

CT Ravi ಜಾಮೀನು ಅರ್ಜಿ ವಿಚಾರಣೆ ಇಂದು ಬೆಳಗಾವಿ ಕೋರ್ಟ್‌ನಿಂದ ಬೆಂಗಳೂರಿಗೆ ವರ್ಗ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ

Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ

Tulu Cinema: ತುಳುನಾಡಿನ ಗ್ರಾಮೀಣ ಕಥಾನಕ ತೆರೆದಿಟ್ಟ “ದಸ್ಕತ್‌’

Tulu Cinema: ತುಳುನಾಡಿನ ಗ್ರಾಮೀಣ ಕಥಾನಕ ತೆರೆದಿಟ್ಟ “ದಸ್ಕತ್‌’

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Mangaluru: ಮಾದಕ ವಸ್ತು ಸೇವನೆ ಆರೋಪ; 5 ಮಂದಿ ಸೆರೆ

Mangaluru: ಮಾದಕ ವಸ್ತು ಸೇವನೆ ಆರೋಪ; 5 ಮಂದಿ ಸೆರೆ

Surathkal: ನೇಣು ಬಿಗಿದು ಯುವಕ ಆತ್ಮಹ*ತ್ಯೆ

Surathkal: ನೇಣು ಬಿಗಿದು ಯುವಕ ಆತ್ಮಹ*ತ್ಯೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Daily Horoscope

Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ

Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ

Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ

AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ

Belthangady: ಅಪಘಾತದಲ್ಲಿ ಗಾಯಗೊಂಡು 14 ವರ್ಷ ಜೀವನ್ಮರಣ ಹೋರಾಟ ಮಾಡಿದ್ದ ಶಿಕ್ಷಕಿ ಸಾವು

Belthangady: 14 ವರ್ಷ ಜೀವನ್ಮರಣ ಸ್ಥಿತಿಯಲ್ಲಿದ್ದ ಶಿಕ್ಷಕಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.