Puttur: ಸಂಪಾಜೆ ಘಾಟಿ ಪರ್ಯಾಯ ರಸ್ತೆ ಸುಧಾರಿಸಲಿ
ಸುಳ್ಯ-ಆಲೆಟ್ಟಿ-ಬಡ್ಡಡ್ಕ -ಪಾಣತ್ತೂರು-ಕರಿಕೆ ಭಾಗಮಂಡಲ ರಸ್ತೆ ಅಭಿವೃದ್ಧಿ ಅಗತ್ಯ
Team Udayavani, Aug 5, 2024, 2:41 PM IST
ಪುತ್ತೂರು: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮಡಿಕೇರಿ-ಸಂಪಾಜೆ ನಡುವಿನ ರಸ್ತೆ ಆಗಾಗ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ಸಂಚಾರ ಕಡಿತಗೊಳ್ಳುತ್ತದೆ. ಮಡಿಕೇರಿ-ಮಂಗಳೂರಿಗೆ ತಲುಪಲು ಪರ್ಯಾಯ ರಸ್ತೆಯಾಗಿಬಳಕೆಯಲ್ಲಿರುವ ಸುಳ್ಯ-ಆಲೆಟ್ಟಿ-ಬಡ್ಡಡ್ಕ -ಪಾಣತ್ತೂರು-ಕರಿಕೆ ಭಾಗಮಂಡಲ ರಸ್ತೆಯೇ ಇರುವ ಏಕೈಕ ದಾರಿ. ಆದರೆ ಈ ಮಳೆಗಾಲದಲ್ಲಂತೂ ರಸ್ತೆ ಅಪಾಯದ ಕರೆಗಂಟೆ ಬಾರಿಸುತ್ತಿದೆ.
ಕರ್ನಾಟಕ-ಕೇರಳದ ವ್ಯಾಪ್ತಿಯಲ್ಲಿಹಾದು ಹೋಗಿರುವ ರಸ್ತೆ ಇದು. ಸುಳ್ಯದ ಮುಂದಕ್ಕೆ ಆಲೆಟ್ಟಿ ,ಬಡ್ಡಡ್ಕ, ಪಾಣತ್ತೂರು, ಕರಿಕೆ ರಸ್ತೆಯ ಅಲ್ಲಲ್ಲಿ ಗುಡ್ಡ ಕುಸಿಯುವ ಸ್ಥಿತಿಯಲ್ಲಿದೆ. ಕೇರಳ ಭಾಗ ದಾಟಿ ಕೊಡಗು ಪ್ರವೇಶಿಸುವ ಹದಗೆಟ್ಟಿದ್ದು ಸಂಚಾರವೇ ಕಷ್ಟಕರ ಅನ್ನುವ ಸ್ಥಿತಿಯಲ್ಲಿದೆ. ಈ ಮಳೆಗಾಲದಲ್ಲಂತೂ ದುರ್ಗಮ ಹಾದಿಯಂತಿರುವ ಈ ರಸ್ತೆಯಲ್ಲಿ ಕೇರಳ, ಸುಳ್ಯ ಭಾಗದಿಂದ ನೂರಾರು ವಾಹನ ಸಂಚರಿಸುತ್ತಿದ್ದು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ.
ಉರುಳುತ್ತಿರುವ ಮರ
ಕಳೆದ ಕೆಲವು ದಿನಗಳಿಂದ ಕರಿಕೆ-ಭಾಗಮಂಡಲದ ನಡುವಿನ ಕಾಡು ಮಧ್ಯೆ ರಸ್ತೆಯಲ್ಲಿ ಮರಗಳು ಅಲ್ಲಲ್ಲಿ ಉರುಳಿ ಬೀಳುತ್ತಿದೆ. ಸಣ್ಣ ಸಣ್ಣ ನೀರಿನ ತೊರೆಯೂ ಉಕ್ಕಿ ಹರಿಯುತ್ತಿದ್ದು ಗುಡ್ಡ ಕುಸಿತದ ಆತಂಕವೂ ಹೆಚ್ಚಾಗಿದೆ. ಹತ್ತಾರು ಮರಗಳು ರಸ್ತೆಯ ಅಂಚಿಗೆ ಬಾಗಿ ನಿಂತಿದೆ.
ಏಕೈಕ ದಾರಿ
ಸುಳ್ಯ-ಮಡಿಕೇರಿ ರಾ.ಹೆ.ಯ ಪರ್ಯಾಯ ರಸ್ತೆ ಇದು. ಸಂಪಾಜೆ -ಮಡಿಕೇರಿ ಮಧ್ಯೆ ರಸ್ತೆ ಮುಚ್ಚಿದಾಗ ಪರ್ಯಾಯ ರಸ್ತೆಯಾಗಿ ಸುಳ್ಯ-ಪಾಣತ್ತೂರು-ಕರಿಕೆ ರಸ್ತೆಯನ್ನು ಬಳಸಿಕೊಳ್ಳಲಾಗಿತ್ತು. ಆರು ವರ್ಷದ ಹಿಂದೆ ನಡೆದ ಜೋಡುಪಾಲ ದುರಂತದ ಸಂದರ್ಭದಲ್ಲಿ ಸುಳ್ಯದಿಂದ ಮಡಿಕೇರಿಗೆ ನಿತ್ಯ ಸಾವಿರಾರು ವಾಹನಗಳು ಓಡಾಟ ನಡೆಸಿದವು. ಮಡಿಕೇರಿಯಿಂದ ಸುಳ್ಯಕ್ಕೆ ಕೆಎಸ್‌ಆರ್‌ಟಿಸಿ ಬಸ್ ಸರ್ವಿಸ್ ಕೂಡ ನಡೆಸಿತ್ತು. ಮಂಗಳೂರು -ಮಡಿಕೇರಿಯನ್ನು ಬೆಸೆದದ್ದು ಇದೇ ರಸ್ತೆ. ಆಗ ರಸ್ತೆ ವಿಸ್ತರಣೆ, ಅಭಿವೃದ್ಧಿಯ ಕೂಗು ಕೇಳಿ ಬಂತಾದರೂ ಅದಿನ್ನೂ ಕೈಗೂಡಿಲ್ಲ. ಸುಳ್ಯದಿಂದ ಕರಿಕೆ ಮೂಲಕ ಮಡಿಕೇರಿಗೆ 90 ಕಿ.ಮೀ. ದೂರವಿದ್ದು ಪರ್ಯಾಯ ರಸ್ತೆಯಾಗಿ ಮಾತ್ರವಲ್ಲದೆ ಭಾಗಮಂಡಲ, ತಲಕಾವೇರಿಗೆ ಈ ರಸ್ತೆಯ ಮೂಲಕ ಜನರು ಸಂಚರಿಸುತ್ತಾರೆ.
ಕನಿಷ್ಠ ಸುರಕ್ಷೆಯೂ ಇಲ್ಲ
ಸುಳ್ಯ-ಆಲೆಟ್ಟಿ-ಪಾಣತ್ತೂರು-ಕರಿಕೆ ಮಾರ್ಗದ ಕಾಡಿನ ರಸ್ತೆಯಂತೂ ಸಂಪೂರ್ಣ ಹಾಳಾಗಿದೆ. ಅಲ್ಲಿ ಕನಿಷ್ಠ ಸುರಕ್ಷೆಯೂ ಇಲ್ಲ. ಮಳೆಗಾಲದಲ್ಲಿ ಸಂಚರಿಸುವುದು ತುಂಬಾ ಅಪಾಯಕಾರಿಯಾಗಿದೆ.
-ಮನೀಷಾ ರೈ , ಕೆಳಗಿನಪೇರಾಲು
ಸಂಪೂರ್ಣ ಹಾಳಾಗಿದೆ
ಕರಿಕೆ-ಭಾಗಮಂಡಲ ನಡುವಿನ ರಸ್ತೆ ದುರಸ್ತಿ ಆಗಿಲ್ಲ. ತೀರಾ ಕಿರಿದಾದ ರಸ್ತೆ ಇದು. ಜತೆಗೆ ಸಂಪೂರ್ಣ ಹಾಳಾಗಿದೆ. ನಮಗೆ ಬೇರೆ ರಸ್ತೆ ಇಲ್ಲ. ದುರಸ್ತಿ ಆಗಬೇಕು ಅನ್ನುವ ಬೇಡಿಕೆಗೆ ಸ್ಪಂದನೆ ಸಿಕ್ಕಿಲ್ಲ.
-ಮೇಘ ಶ್ಯಾಮ , ಕರಿಕೆ
– ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ
Internal Dissent: ಪ್ರಧಾನಿ ಮೋದಿ ಭೇಟಿಯಾದ ವಿಜಯೇಂದ್ರ ದೂರದಿದ್ದರೂ ‘ಸಂದೇಶ’ ರವಾನೆ
Narendra Modi: 43 ವರ್ಷದ ಬಳಿಕ ಭಾರತ ಪ್ರಧಾನಿ ಕುವೈಟ್ ಭೇಟಿ: 21ರಿಂದ ಮೋದಿ ಪ್ರವಾಸ
Whale: ಅಂಬರ್ ಗ್ರೀಸ್ ಮಾರಾಟ ಜಾಲ ಶಂಕೆ: ಕಾರ್ಯಾಚರಣೆಗೆ ಬಂದಿದ್ದ ಅಧಿಕಾರಿಗಳಿಗೆ ಹಲ್ಲೆ!
Bill Amendment: ರಾಜ್ಯಪಾಲರ ಕುಲಾಧಿಪತಿ ಅಧಿಕಾರಕ್ಕೆ ಕತ್ತರಿ: ಮೇಲ್ಮನೆಯಲ್ಲೂ ಅಂಗೀಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.