ದಿಲ್ಲಿಯ ಪ್ರಸಿದ್ಧ ಸ್ಥಳದಲ್ಲಿ ರಾಣಿಅಬ್ಬಕ್ಕನ ಪ್ರತಿಮೆಯಸ್ಥಾಪನೆಯಾಗಲಿ
Team Udayavani, Mar 18, 2018, 10:46 AM IST
ಮಹಾನಗರ: ದಿಲ್ಲಿಯ ಪ್ರಸಿದ್ಧ ಸ್ಥಳದಲ್ಲಿ ರಾಣಿಅಬ್ಬಕ್ಕನ ಪ್ರತಿಮೆಯ ಸ್ಥಾಪನೆ ಆಗಬೇಕು. ಮಹಿಳಾ ದಿನಾಚರಣೆಯ ಸಂದರ್ಭದಲ್ಲಿಯೇ ರಾಣಿ ಅಬ್ಬಕ್ಕ ಉತ್ಸವ ನಡೆಯುತ್ತಿರುವುದು ಸಂತಸ ತಂದಿದೆ ಎಂದು ಕರ್‌ಕರ್‌ಡೂಮ್‌ಕೋಟ್, ದಿಲ್ಲಿಯ ಜಿಲ್ಲಾ ಸತ್ರ ನ್ಯಾಯಾಧೀಶ ಎ.ಎಸ್. ಜಯಚಂದ್ರ ಅವರು ಹೇಳಿದರು.
ದಿಲ್ಲಿ ಕರ್ನಾಟಕ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾಡಳಿತ ಸಂಯುಕ್ತವಾಗಿ ದಿಲ್ಲಿಯಲ್ಲಿ ಆಚರಿಸಿದ ರಾಣಿ ಅಬ್ಬಕ್ಕ ಉತ್ಸವದಲ್ಲಿ ಮಾತನಾಡಿ ಅವರು, ರಾಣಿ ಅಬ್ಬಕ್ಕನ ಇತಿಹಾಸವನ್ನು ವಿವರಿಸಿದರು. ತುಳು ಹಾಗೂ ತೆಲುಗು ಸಂಪ್ರದಾಯದ ನಂಟನ್ನು ವಿವರಿಸಿ ಇಂದಿನ ಕಾಲದಲ್ಲಿ ತೆಲುಗು ಚಿತ್ರರಂಗದಲ್ಲಿ ಖ್ಯಾತರಾದ ಅನುಷ್ಕಾ ಶೆಟ್ಟಿ, ಶಿಲ್ಪಾ ಶೆಟ್ಟಿ, ಪ್ರಕಾಶ್‌ರೈ, ಸುಮನ್ ಮೊದಲಾದ ತುಳುವರು ಎಂದು ಹೇಳಿದರು.
ಈ ಉತ್ಸವದ ಮೂಲಕ ದಿಲ್ಲಿಯಲ್ಲಿರುವ ತೆಲುಗು ಭಾಷಿಕರಿಗೆ ತುಳು ನಾಡಿನ ರಾಣಿ ಅಬ್ಬಕ್ಕ ಅವರ ಪರಿಚಯ ಮಾಡಿಸಿದ್ದು ಉತ್ತಮ ಪ್ರಯತ್ನ ಎಂದು ತಿಳಿಸಿದರು. ಸಂಘದಕಾರ್ಯಕಾರಿ ಸಮಿತಿ ಸದಸ್ಯ ಡಾ|ಎಂ. ಎಸ್. ಶಶಿಕುಮಾರ್ ನಿರೂಪಿಸಿ ದರು. ಖಜಾಂಚಿ ಕೆ.ಎಸ್.ಜಿ. ಶೆಟ್ಟಿ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಸಿ.ಎಂ. ನಾಗರಾಜ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಸಂಸ್ಥೆಯ ಸದಸ್ಯರಾದ ಡಾ| ಎಸ್. ಎಂ. ಕಂಠೀಕರ್ ಹಾಗೂ ಸ್ಥಳೀಯ ಅನೇಕ ತೆಲುಗು ಭಾಗರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.