ಲೋಕಕಲ್ಯಾಣಕ್ಕೆ ಪ್ರಾರ್ಥಿಸೋಣ: ಕೃಷ್ಣಾಪುರ ಶ್ರೀ
ಪರ್ಯಾಯ ಪೀಠಾರೋಹಣಗೈಯಲಿರುವ ಕೃಷ್ಣಾಪುರ ಮಠಾಧೀಶರಿಗೆ ಪೌರ ಸಮ್ಮಾನ
Team Udayavani, Jan 10, 2022, 5:30 AM IST
ಮಂಗಳೂರು: ಪ್ರಸ್ತುತ ಬಂದಿರುವ ಕೊರೊನಾ ಸಂಕಷ್ಟ ನಿವಾರಣೆಯಾಗಿ ಲೋಕಕ್ಕೆ ಕಲ್ಯಾಣವಾಗಲಿ ಎಂದು ನಾವೆಲ್ಲರೂ ಶುದ್ಧ ಮನಸ್ಸಿನಿಂದ ಪ್ರಾರ್ಥಿಸೋಣ ಎಂದು ಕೃಷ್ಣಾಪುರ ಮಠಾಧೀಶ ಶ್ರೀವಿದ್ಯಾಸಾಗರತೀರ್ಥ ಸ್ವಾಮೀಜಿಯವರು ಹೇಳಿದ್ದಾರೆ.
ಉಡುಪಿ ಶ್ರೀಕೃಷ್ಣಮಠದ ಪರ್ಯಾಯ ಪೀಠಾರೋಹಣಗೈಯಲಿರುವ ಶ್ರೀವಿದ್ಯಾಸಾಗರತೀರ್ಥ ಸ್ವಾಮೀಜಿ ಯವರಿಗೆ ಶರವು ಶ್ರೀ ಮಹಾ ಗಣಪತಿ ದೇವಸ್ಥಾನದ ಪ್ರಾಂಗಣದಲ್ಲಿ ರವಿವಾರ ಆಯೋಜಿ ಸಿದ್ದ ಪೌರ ಸಮ್ಮಾನ ಸ್ವೀಕರಿಸಿ ಅಶೀ ರ್ವಚನ ನೀಡಿದ ಅವರು ಪರಿ ಶುದ್ಧ ಮನಸ್ಸು ಮತ್ತು ಭಕ್ತಿಗೆ ಭಗವಂತನ ಸ್ಪಂದನೆ ಸದಾ ಇರುತ್ತದೆ. ಎಲ್ಲರೂ ಪ್ರೀತಿ ಯಿಂದ ಹಾಗೂ ಲೋಕಕಲ್ಯಾಣದ ನಿರೀಕ್ಷೆ ತುಂಬಿರುವ ಸಮ್ಮಾನ ನೀಡಿ ದ್ದೀರಿ, ಅದರಿಂದಾಗಿ ನನಗೆ ಭರವಸೆ ಮೂಡಿದೆ. ಒಬ್ಬೊಬ್ಬನಿಗೆ ವ್ಯಕ್ತಿಗತವಾಗಿ ಬರುವ ಆಪತ್ತು ತೊಲಗಿಸುವುದು ಸುಲಭ, ಆದರೆ ಇದು ಲೋಕಕ್ಕೆ ತಗಲಿರುವ ಕಂಟಕ, ಇದನ್ನು ತೊಲಗಿಸುವುದು ಸುಲಭ ವಲ್ಲ. ಆದರೆ ಪರಮಾತ್ಮನ ಏಕಾಂತ ಭಕ್ತರೆನಿಸಿ ಕೊಂಡ ಮಧ್ವರು, ವಾದಿರಾಜರಿಗೆ ಅದು ಸಾಧ್ಯ. ನಾನು ಶುದ್ಧ ಮನಸ್ಸಿನಿಂದ ಇದನ್ನು ಅವರಿಗೆ ಅರ್ಪಿಸುತ್ತೇನೆ, ಅದು ಅವರ ಚಿತ್ತಕ್ಕೆ ಬರಲಿ, ಆ ಮೂಲಕ ಎಲ್ಲರ ಇಷ್ಟಾರ್ಥ ಸಿದ್ಧಿಯಾಗಲಿ ಎಂದರು.
ಕಟೀಲು ಕ್ಷೇತ್ರದ ಶ್ರೀ ಲಕ್ಷ್ಮೀನಾರಾಯಣ ಆಸ್ರಣ್ಣ ಅವರು ಮಾತನಾಡಿ, ಗುರುಗಳು ಪೂರ್ಣ ದೇವರ ಪೂಜೆ, ಅನುಷ್ಠಾನ ಕರ್ತವ್ಯದಲ್ಲೇ ಇರುವವರು. ತ್ಯಾಗಿಯಾಗಿ, ಸನ್ಯಾಸಿ ಯಾಗಿ ಆದರ್ಶಪ್ರಾಯರಾಗಿ, ಅಪೇಕ್ಷೆ ಯಾವುದೂ ಇಲ್ಲದೆ, ಕೃಷ್ಣನ ಕುರಿತ ಆಲೋಚನೆ ಮಾತ್ರ ಮಾಡುವ ಮೂಲಕ ಆದರ್ಶಪ್ರಾಯರು. ಅವರ ಪರ್ಯಾಯ ಕಾಲದಲ್ಲಿ ಲೋಕಕ್ಕೆ ಮಂಗಳವಾಗಲಿ ಎಂದರು.
ಇದನ್ನೂ ಓದಿ:ಹಿಮವರ್ಷ : ರಾಜ್ಯದ 400ಕ್ಕೂ ಅಧಿಕ ಪ್ರಮುಖ ರಸ್ತೆಗಳು ಬಂದ್
ಅಭಿನಂದನೆಯ ನುಡಿಗಳನ್ನಾಡಿದ ಪರ್ಯಾಯೋತ್ಸವ ಸಮಿತಿ ಅಧ್ಯಕ್ಷ ಪ್ರೊ| ಎಂ. ಬಿ. ಪುರಾಣಿಕ್ ಅವರು ನಾಲ್ಕನೇ ಬಾರಿ ಪರ್ಯಾಯ ಪೀಠಾರೋಹಣಗೈಯಲಿರುವ ಕೆಲವೇ ಮಠಾಧೀಶರರಲ್ಲಿ ಶ್ರೀವಿದ್ಯಾಸಾಗರ ತೀರ್ಥ ಸ್ವಾಮೀಜಿಯವರು ಓರ್ವ ರಾಗಿದ್ದಾರೆ. ಅವರಿಗೆ ಪೌರ ಸಮ್ಮಾನ ನಡೆಯುತ್ತಿರುವುದು ಎಲ್ಲರಿಗೂ ಅತ್ಯಂತ ಸಂತಸದ ಕ್ಷಣವಾಗಿದೆ ಎಂದರು.
ಶಾಸಕ ವೇದವ್ಯಾಸ ಕಾಮತ್ ಅವರು ಮಾತನಾಡಿ ಸ್ವಾಮೀಜಿಯವರ ಅನುಗ್ರಹ, ಅಶೀರ್ವಾದ ಸಮಾಜಕ್ಕೆ ಸದಾ ದೊರೆಯಲಿ ಎಂದರು. ಅಧ್ಯಕ್ಷತೆ ವಹಿಸಿದ್ದ ಮೇಯರ್ ಪ್ರೇಮಾನಂದ ಶೆಟ್ಟಿ ಅವರು ಪರ್ಯಾಯ ಸ್ವಾಮೀಜಿ
ಯವರಿಗೆ ಪೌರ ಸಮ್ಮಾನ ಮಾಡುತ್ತಿರುವುದು ನಮ್ಮ ಪಾಲಿಗೆ ಸೌಭಾಗ್ಯದ ಸಂದರ್ಭವಾಗಿದೆ ಎಂದರು.
ಶ್ರೀ ಕ್ಷೇತ್ರದ ಶರವು ಶಿಲೆಶಿಲೆ ಮೊಕ್ತೇಸರ ಶರವು ರಾಘವೇಂದ್ರ ಶಾಸಿŒ, ಮಾಜಿ ಮೇಯರ್ ಶಶಿಧರ ಹೆಗ್ಡೆ, ಕಸಪಾ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಶ್ರೀ ಕ್ಷೇತ್ರ ಮಂಗಳಾದೇವಿಯ ಆಡಳಿತ ಮೊಕ್ತೇಸರ ರಮಾನಾಥ ಹೆಗ್ಡೆ, ಉಪಮೇಯರ್ ಸುಮಂಗಲ ರಾವ್, ಕಾರ್ಪೊರೇಟರ್ ಪೂರ್ಣಿಮಾ, ವಿಧಾನಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಕಿನ್ನಿಗೋಳಿಯ ಭುವನಾಭಿರಾಮ ಉಡುಪ, ಸುಧಾಕರ ರಾವ್ ಪೇಜಾವರ ಮತ್ತಿತರರು ಉಪಸ್ಥಿತರಿದ್ದರು.
ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಪ್ರಸ್ತಾವನೆಗೈದು ಸ್ವಾಗತಿಸಿದರು. ದಯಾ ನಂದ ಕಟೀಲು ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.