ದಿಲ್ಲಿಯಲ್ಲಿ ಕೇಂದ್ರ ಯಕ್ಷಗಾನ ಅಕಾಡೆಮಿ ಸ್ಥಾಪನೆಯಾಗಲಿ: ವಸಂತ
Team Udayavani, Jan 29, 2018, 11:55 AM IST
ಮಹಾನಗರ: ಶ್ರೀಮಂತ ಕಲೆಯಾದಯಕ್ಷಗಾನವು ಉತ್ತರ ಭಾರತೀಯರಿಗೆ, ವಿದೇಶಿಯರಿಗೆ ಪರಿಚಯಿಸುವ ನಿಟ್ಟಿನಲ್ಲಿ ದಿಲ್ಲಿಯಲ್ಲಿ ಕೇಂದ್ರ ಯಕ್ಷಗಾನ ಅಕಾಡೆಮಿ ಸ್ಥಾಪನೆಯಾಗಲಿ. ಈ ಕಾರ್ಯಕ್ಕಾಗಿ ಸರಕಾರವು ಪ್ರಯತ್ನಿಸಬೇಕುಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್‌ಟ್ರಸ್ಟ್ ದಿಲ್ಲಿ ಘಟಕದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಹೇಳಿದರು.
ದಿಲ್ಲಿ ಕರ್ನಾಟಕದ ಸಂಘದ ವಿಚಾರ ಸಂಕಿರಣ ಸಭಾ ಭವನದಲ್ಲಿ ಇತ್ತೀಚೆಗೆ ಯಕ್ಷಧ್ರುವ ಪಟ್ಲ ಫೌಂಡೇಶನ್‌ಟ್ರಸ್ಟ್ ದಿಲ್ಲಿ ಘಟಕ ಹಾಗೂ ಬಂಟ್ಸ್ ಕಲ್ಚರಲ್ ಅಸೋಸಿಯೇಶನ್, ದಿಲ್ಲಿ ತುಳುಸಿರಿ, ಗೋಕರ್ಣ ಮಂಡಳ, ದಿಲ್ಲಿ ಬಿಲ್ಲವ ಅಸೋಸಿಯೇಶನ್ ಇವುಗಳ ಸಹಯೋಗದೊಂದಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸೂರಿಕುಮೇರಿ ಕೆ. ಗೋವಿಂದ ಭಟ್ ಅವರಿಗೆ ನಡೆದ ಅಭಿನಂದನಾ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಯಕ್ಷಗಾನ ರಂಗಭೂಮಿಯಲ್ಲಿ 67 ವರ್ಷಗಳ ಕಾಲ ಸಕ್ರಿಯರಾಗಿದ್ದು, ಎಲ್ಲ ಪಾತ್ರಗಳಲ್ಲಿ ಸೈ ಎನಿಸಿಕೊಂಡು ಪರಿಪೂರ್ಣ ಹಾಗೂ ಶ್ರೇಷ್ಠ ಕಲಾವಿದರಾಗಿ ಮೆರೆದವರು ಹಿರಿಯರು ಸಾಧಕ ಕೆ. ಗೋವಿಂದ ಭಟ್ಟರಿಗೆ ದೊರೆತ ಗೌರವ ಯಕ್ಷಗಾನದ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ತಿಳಿಸಿದರು.
ಗೋವಿಂದ ಭಟ್‌ರ ಸಾಧನೆ
ಯಕ್ಷಧ್ರುವ ಪಟ್ಲ ಫೌಂಡೇಶನ್ ದಿಲ್ಲಿ ಘಟಕದ ಟ್ರಸ್ಟಿ ಕೆ.ಎನ್. ಭಟ್ ಮಾತನಾಡಿ, ಯಕ್ಷಗಾನರಂಗದಲ್ಲಿ ಸೂರಿಕುಮೇರಿ ಕೆ. ಗೋವಿಂದ ಭಟ್ ಅವರ ಸಾಧನೆ ಮಹತ್ತರವಾದುದು. ಈ ಸಾಧನೆಯನ್ನು ಸಂಘ -ಸಂಸ್ಥೆಗಳು ಮಾತ್ರವಲ್ಲದೆ ಸರಕಾರವು ಗುರುತಿಸಿ ಗೌರವಿಸಿರುವುದು ನಮ್ಮೆಲ್ಲರಿಗೂ ಅಭಿಮಾನದ ಸಂಗತಿ ಎಂದು ಹೇಳಿದರು.
ಸೂರಿಕುಮೇರಿ ಕೆ. ಗೋವಿಂದ ಭಟ್ ಮಾತನಾಡಿ, ಓರ್ವ ಕಲಾವಿದನು ಜನಮಾನಸದಲ್ಲಿ ನೆಲೆಸುವುದೇ ಅವನಿಗೆ ಸಲ್ಲುವ ನಿಜವಾದ ಗೌರವ ಎಂದು ಹೇಳಿದರು.
ದಿಲ್ಲಿ ಕನ್ನಡ ಶಿಕ್ಷಣ ಸಂಸ್ಥೆಯಅಧ್ಯಕ್ಷ ಸರವು ಕೃಷ್ಣ ಭಟ್, ಬಂಟ್ಸ್ ಕಲ್ಚರಲ್ ಅಸೋಸಿಯೇಶನ್ ಖಜಾಂಚಿ ಕೆ.ಎಸ್.ಜಿ. ಶೆಟ್ಟಿ, ದಿಲ್ಲಿ ತುಳುಸಿರಿಯ ಅಧ್ಯಕ್ಷ ಕೆ.ಆರ್. ರಾಮಮೂರ್ತಿ, ಗೋಕರ್ಣ ಮಂಡಳದ ಮಾಜಿ ಅಧ್ಯಕ್ಷ ನಾರಾಯಣ ಭಟ್ ಉಪಸ್ಥಿತರಿದ್ದರು. ದಿಲ್ಲಿ ತುಳುಸಿರಿಯ ಕಾರ್ಯದರ್ಶಿ ಪ್ರದೀಪ್ ಕೆ. ಅವರು ಸ್ವಾಗತಿಸಿ, ನಿರೂಪಿಸಿದರು. ಯಕ್ಷಧ್ರುವ ಪಟ್ಲ ಫೌಂಡೇಶನ್ ದಿಲ್ಲಿ ಘಟಕದ ಪ್ರಧಾನ ಕಾರ್ಯದರ್ಶಿ ಪೃಥ್ವಿ ಕಾರಿಂಜೆ ವಂದಿಸಿದರು.
ತಾಳಮದ್ದಳೆ
ಸಮಾರಂಭದ ಬಳಿಕ ನಡೆದ ರಣವೀಳ್ಯ ಯಕ್ಷಗಾನ ತಾಳಮದ್ದಳೆಯಲ್ಲಿ ಕೌರವನಾಗಿ ಕೆ. ಗೋವಿಂದ ಭಟ್, ಕೃಷ್ಣನಾಗಿ ಉಜಿರೆ ಅಶೋಕ್ ಭಟ್, ವಿಧುರನಾಗಿ ಮುಮ್ಮೇಳದಲ್ಲಿ ರಂಜಿತಾ ಎಲ್ಲೂರು, ಹಿಮ್ಮೇಳದಲ್ಲಿ ಪುತ್ತಿಗೆ ರಘುರಾಮ ಹೊಳ್ಳ, ಪಿ.ಜಿ. ಜಗನ್ನಿವಾಸ, ಯೋಗಿಶ್ ಆಚಾರ್ಯ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ
Mollywood: ಸೂಪರ್ ಸ್ಟಾರ್ ಮೋಹನ್ ಲಾಲ್‌ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.