ಮೂಡಬಿದಿರೆಯಲ್ಲಿ ಚಿಟ್ಟಾಣಿಗೆ ನುಡಿ ನಮನ
Team Udayavani, Nov 4, 2017, 3:06 PM IST
ಮೂಡಬಿದಿರೆ: ಕಲಾವಿದ ಕಣ್ಮರೆಯಾದ ಬಳಿಕ ಅಭಿಮಾನಿಗಳು, ಒಡನಾಡಿಗಳು, ವಿಮರ್ಶಕರು ತಾವು ಕಂಡಂತೆ ಚಿತ್ರಣ ಮಾಡುವುದು ಸಹಜ. ಆದರೆ, ಕಲಾವಿದರ ಜೀವಿತ ಕಾಲದಲ್ಲೇ ಅವರು ರಂಗಭೂಮಿಗೆ ಕೊಟ್ಟ ತಿರುವುಗಳೇನು ಎಂಬುದನ್ನು ಚರ್ಚಿಸುವ, ದಾಖಲಿಸುವ ಕೆಲಸವನ್ನು ಪ್ರಾಜ್ಞರಾದವರು ಮಾಡಬೇಕು ಎಂದು ಬಡಗುತಿಟ್ಟಿನ ಸುಪ್ರಸಿದ್ದ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಅಭಿಪ್ರಾಯಪಟ್ಟರು.
ಮೂಡಬಿದಿರೆ ಸಮಾಜ ಮಂದಿರದಲ್ಲಿ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ಅಭಿಮಾನಿ ಬಳಗದವರು ಗುರುವಾರ ಏರ್ಪಡಿಸಿದ್ದ ‘ಚಿಟ್ಟಾಣಿಗೆ ನುಡಿನಮನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಲವು ಪದ್ಯಗಳನ್ನು ಸಾಂದರ್ಭಿಕವಾಗಿ ಹಾಡಿ, ಚಿಟ್ಟಾಣಿಯವರು ಅನಕ್ಷರಸ್ಥರಾಗಿದ್ದರೂ ಹೇಗೆ ರಂಗ ನಿರ್ವಹಣೆ ಮಾಡುತ್ತಿದ್ದರು?, ವಹಿಸಿದ ಪಾತ್ರವನ್ನು ರಂಗದಲ್ಲಿ ಸ್ಥಾಪಿಸುವಲ್ಲಿ ಯಶಸ್ವಿಯಾಗುತ್ತಿದ್ದರು ಎಂಬುದನ್ನು ಬಣ್ಣಿಸಿದರು.
ಚಿಟ್ಟಾಣಿ ಒಡನಾಟ ಸ್ಮರಿಸಿಕೊಂಡ ಹಿರಿಯ ಕಲಾವಿದ ಕೆ. ಗೋವಿಂದ ಭಟ್ಟರು, ಮೂಲ ತತ್ತ್ವ ತಿಳಿದು ರಂಗದಲ್ಲಿ ವಿಹರಿಸಿದಾಗ ಕಲೆಗೆ ನ್ಯಾಯ ಒದಗುವುದು ಎಂಬುದಕ್ಕೆ ಚಿಟ್ಟಾಣಿ ಸಾಕ್ಷಿ ಎಂದರು. ತಮ್ಮ ಕೌರವ ಪಾತ್ರ ಚಿಟ್ಟಾಣಿ ಪ್ರಚೋದಿತ. ಭೀಷ್ಮ, ಕೌರವ, ಸಾಲ್ವ, ಪರಶುರಾಮ, ಭದ್ರಸೇನ ಹೀಗೆ ಬೇರೆ ಬೇರೆ ಪಾತ್ರಗಳನ್ನು ಯಾವ ರೀತಿ ಅಭಿನಯಿಸಿ ತೋರಲು ಸಾಧ್ಯವಿದೆ ಎಂದು ತೋರಿಸಿಕೊಟ್ಟವರು ಚಿಟ್ಟಾಣಿ ಎಂದರು.
ಹಿರಿಯ ಕಲಾವಿದ ಗೋಡೆ ನಾರಾಯಣ ಹೆಗಡೆ ಮಾತನಾಡಿ, ಆಕರ್ಷಣೆ, ಅರ್ಹತೆ, ಅದೃಷ್ಟ ಮೇಳೈಸಿದ, ಅದ್ಭುತ ಲಯ ಸಿದ್ಧಿಯ ಕಲಾವಿದ ಚಿಟ್ಟಾಣಿ ಯಕ್ಷರಂಗದ ಅನರ್ಘ್ಯ ರತ್ನ ಎಂದು ಕೊಂಡಾಡಿದರು.ಹಾಸ್ಯಗಾರ ಮುಖ್ಯಪ್ರಾಣ ಕಿನ್ನಿಗೋಳಿ ಮಾತನಾಡಿ, ಚಿಟ್ಟಾಣಿ ಒಡನಾಟದ ಕ್ಷಣಗಳನ್ನು ಸ್ಮರಿಸಿಕೊಂಡರು.
ಉದ್ಭವ ಕಲಾವಿದ, ಒಂಟಿ ಸಲಗ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯಕ್ಷಗಾನ ವಿದ್ವಾಂಸ ಡಾ| ಎಂ. ಪ್ರಭಾಕರ ಜೋಶಿ ಮಾತನಾಡಿ, 66 ವರ್ಷಗಳ ಕಾಲ ನಿರಂತರ ರಂಗದಲ್ಲಿ ದಣಿವರಿಯದೆ ಕೆಲಸ ಮಾಡಿದ ಚಿಟ್ಟಾಣಿ ಉದ್ಭವ ಕಲಾವಿದ. ಈ ಯಕ್ಷರಂಗದ ಸಮಗ್ರ ದಶಾವತಾರಿ,ಒಂಟಿ ಸಲಗದ ಹಾಗೆ ಬೆಳೆದವರು ಎಂದು ಉದ್ಗರಿಸಿ, ಅವರಿಗೆ ಲಭಿಸಿದ ಪದ್ಮಶ್ರೀ ಅನಕ್ಷರಸ್ಥರಾಗಿದ್ದೂ ಯಕ್ಷರಂಗಕ್ಕೆ ಎಂಥ ಮನ್ನಣೆ ತಂದುಕೊಡಬಹುದೆಂಬುದಕ್ಕೆ ಸಾಕ್ಷಿ’ ಎಂದು ಹೇಳಿದರು. ಸಂಘಟಕ ಪ್ರವೀಣ್‌ಚಂದ್ರ ಜೈನ್ ಸ್ವಾಗತಿಸಿ, ಚಿಟ್ಟಾಣಿ ಪ್ರತಿಷ್ಠಾನಕ್ಕೆ ರೂ. 10,000 ಕೊಡುಗೆ ನೀಡಿದರು.ಪ್ರಭಾತ್ ಕುಮಾರ್ ಬಿ. ನಿರೂಪಿಸಿ, ನೆಲ್ಲಿಮಾರು ಸದಾಶಿವ ರಾವ್ ವಂದಿಸಿದರು. ‘ಗದಾಯುದ್ಧ’ ತಾಳಮದ್ದಲೆ ಸಂಯೋಜಿಸಲಾಗಿತ್ತು.
ಕಲಾಕೇಂದ್ರ ನಿರ್ಮಾಣಕ್ಕೆ ಕೈಜೋಡಿಸಿ
ಅಪ್ಪಯ್ಯನನ್ನು ಅನುಕರಣೆ ಮಾಡಿಲ್ಲ. ಆದರೆ ಅವರು ರಂಗದಲ್ಲಿ ಕ್ರಿಯೆ ಪ್ರತಿಕ್ರಿಯೆ ಕಲಿಸಿದ್ರು. ಯಾವ ಕಾರಣಕ್ಕೂ ಇನ್ನೊಬ್ಬ ಚಿಟ್ಟಾಣಿ ಮೂಡಿಬರಲು ಸಾಧ್ಯವಿಲ್ಲ. ಕೆರೆಮನೆ ಶಿವರಾಮ ಹೆಗಡೆ ಅವರ ಈಶ್ವರ ಕೊಟ್ಟ ವರ ಫಲಿಸಿ ಭಸ್ಮಾಸುರ ಅಲ್ಲಲ್ಲ ಚಿಟ್ಟಾಣಿ ಮೆರೆದರು. ಒಂದು ದಿನವೂ ಕೈಕಾಲು ನೋವು ಎಂದು ಹೇಳಲಿಲ್ಲ. ಯಕ್ಷದೇವತೆ ಅವರೊಟ್ಟಿಗಿತ್ತು. ಚಿಟ್ಟಾಣಿ ಪ್ರತಿಷ್ಠಾನದ ಮೂಲಕ ಮೂಡಿಬರಲಿರುವ ಕಲಾಕೇಂದ್ರ ನಿರ್ಮಾಣ, ನಿರ್ವಹಣೆಯಲ್ಲಿ ಕಲಾಭಿಮಾನಿಗಳು ಕೈ ಜೋಡಿಸಬೇಕಾಗಿದೆ.
– ಸುಬ್ರಹ್ಮಣ್ಯ ಚಿಟ್ಟಾಣಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.