ಜೀವ ರಕ್ಷಣೆ ಜೀವನ ಪೂರ್ತಿ ನಡೆಯಲಿ: ಬಿಷಪ್
Team Udayavani, Mar 2, 2020, 7:10 AM IST
ಮಂಗಳೂರು: ಮಾನವ ಜೀವ ಅಮೂಲ್ಯ. ಅದಕ್ಕೆ ಗೌರವದ ಸ್ಥಾನಮಾನ ನೀಡಬೇಕು; ತನ್ನ ಜೀವಕ್ಕೆ ಅಥವಾ ಇತರರ ಜೀವಕ್ಕೆ ಎರವಾಗುವ ಕೆಲಸವನ್ನು ಯಾರೂ ಮಾಡಬಾರದು, ಯಾವುದೇ ಕಾರಣಕ್ಕೂ ಆತ್ಮಹತ್ಯೆಯಂತಹ ಕೃತ್ಯಕ್ಕೆ ಮುಂದಾಗಬಾರದು ಎಂದು ಮಂಗಳೂರಿನ ಬಿಷಪ್ ರೈ| ರೆ| ಡಾ| ಪೀಟರ್ ಪಾವ್É ಸಲ್ಡಾನ್ಹಾ ಹೇಳಿದರು.
ಮಂಗಳೂರು ಧರ್ಮಪ್ರಾಂತ ಹಮ್ಮಿಕೊಂಡಿರುವ ಆತ್ಮಹತ್ಯೆ ತಡೆ ಅಭಿಯಾನವನ್ನು ಅವರು ರವಿವಾರ ನಗರದ ರೊಜಾರಿಯೊ ಕೆಥೆಡ್ರಲ್‌ನಲ್ಲಿ ಉದ್ಘಾಟಿಸಿ ಮಾತನಾಡಿದರು.
ನಾನು ಮನುಷ್ಯ ಜೀವದ ರಕ್ಷಕ; ಪ್ರತಿಯೊಬ್ಬ ಮನುಷ್ಯ ಜೀವದ ರಕ್ಷಣೆ, ಪೋಷಣೆ ಮತ್ತು ಅದರ ಅಭಿವೃದ್ಧಿ ನನ್ನ ಜವಾಬ್ದಾರಿ ಎಂಬುದಾಗಿ ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು ಎಂದರು.
ಇಂದಿನ ದಿನಗಳಲ್ಲಿ ವಿಶೇಷವಾಗಿ ಭಾರತದಲ್ಲಿ ಯುವಜನತೆ ಮತ್ತು ಮಕ್ಕಳ ಆತ್ಮಹತ್ಯೆ ಪ್ರಕರಣಗಳು ಏರುಗತಿಯಲ್ಲಿವೆ. ಆತ್ಮಹತ್ಯೆಯನ್ನು ತಡೆಯುವ ಕೆಲಸ ಮತ್ತು ಜೀವವನ್ನು ಉಳಿಸುವ ಕಾರ್ಯವು ಜೀವನಪೂರ್ತಿ ನಡೆಯಬೇಕು ಎಂದರು.
ರೊಜಾರಿಯೊ ಕೆಥೆಡ್ರಲ್‌ನ ರೆಕ್ಟರ್ ಫಾ| ಜೆ.ಬಿ ಕ್ರಾಸ್ತಾ, ಸಹಾಯಕ ಗುರುಗಳು, ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷ ಎಲಿಜಬೆತ್ ರೋಚ್, ಕಾರ್ಯದರ್ಶಿ ಆಲ್ವಿನ್ ತಾವ್ರೊ ಉಪಸ್ಥಿತರಿದ್ದರು.
ಮುಖ್ಯ ಅತಿಥಿ ರೋಶಿನಿ ನಿಲಯದ ಪ್ರಾಧ್ಯಾಪಕಿ ಸಿ| ಎವಿÉನ್ ಬೆನ್ನಿಸ್ ಅವರು ಆತ್ಮಹತ್ಯೆಯ ಕಾರಣಗಳು ಮತ್ತು ದುಷ್ಪರಿಣಾಮಗಳು ಹಾಗೂ ಆತ್ಮಹತ್ಯೆಯ ದುರಾಲೋಚನೆಯಿಂದ ಹೇಗೆ ಪಾರಾಗಬಹುದೆಂದು ವಿವರಿಸಿದರು.
ಲಿಲ್ಲಿ ಕುಟಿನ್ಹೊ ಕಾರ್ಯಕ್ರಮ ನಿರ್ವಹಿಸಿದರು. ಕುಟುಂಬ ಹಿತ ಸಮಿತಿಯ ಕಾರ್ಯದರ್ಶಿ ಗಿಲ್ಬರ್ಟ್ ಡಿ’ಸಿಲ್ವಾ ವಂದಿಸಿದರು.
ಎಲ್ಲ ಚರ್ಚ್‌ಗಳಲ್ಲಿ ಆಚರಣೆ
ಆತ್ಮಹತ್ಯೆ ತಡೆ ದಿನವನ್ನು ರವಿವಾರ ಮಂಗಳೂರು ಧರ್ಮಪ್ರಾಂತದ ಎಲ್ಲ ಚರ್ಚ್‌ಗಳಲ್ಲಿ ಆಚರಿಸಲಾಯಿತು.
ಕರಪತ್ರ, ಜಾಗೃತಿ ರಿಬ್ಬನ್ ಬಿಡುಗಡೆ
ಆ ಬಳಿಕ ಮಿಲಾಗ್ರಿಸ್ ಹಾಲ್‌ನಲ್ಲಿ ಜರಗಿದ ಸಮಾರಂಭದಲ್ಲಿ ಬಿಷಪ್ ಅವರು ಆತ್ಮಹತ್ಯೆ ತಡೆ ಅಭಿಯಾನದ ಕರಪತ್ರ ಮತ್ತು ಜಾಗೃತಿ ರಿಬ್ಬನ್ ಬಿಡುಗಡೆ ಮಾಡಿದರು. ಕೆನರಾ ಕಮ್ಯೂನಿಕೇಶನ್ ಸೆಂಟರ್‌ನ ನಿರ್ದೇಶಕ ಫಾ| ರಿಚಾರ್ಡ್ ಡಿ’ಸೋಜಾ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Katapady: ಭೀಕರ ಅಪಘಾತ… ಹೊತ್ತಿ ಉರಿದ ಲಾರಿ, ದ್ವಿಚಕ್ರ ವಾಹನ; ಓರ್ವ ಗಂಭೀರ
BJP Politics: ಬಿ.ಎಸ್.ಯಡಿಯೂರಪ್ಪ ಅಖಾಡಕ್ಕೆ!; ಒಳಜಗಳ ಬಿಟ್ಟು ಒಗ್ಗಟ್ಟಿನ ಹೆಜ್ಜೆ ಹಾಕೋಣ
Dinner Politics: ಸಿದ್ದರಾಮಯ್ಯ ಬಣದಿಂದ ಡಿ.ಕೆ.ಶಿವಕುಮಾರ್‌ರತ್ತ “ಗುರಿ’!
Protest Happy Ending: “ಆಶಾ’ ಕಾರ್ಯಕರ್ತೆಯರ ಗೌರವಧನ 2 ಸಾವಿರ ರೂ. ಏರಿಕೆ
Daily Horoscope: ಬಹುದಿನದ ಅಪೇಕ್ಷೆಯೊಂದು ಕೈಗೂಡಿದ ಆನಂದ, ಶುಭ ಸಮಾಚಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.