ಜೀವ ಉಳಿಸುವ “ಸೇವಿಯರ್’ ಆ್ಯಪ್
Team Udayavani, Sep 17, 2018, 11:05 AM IST
ಮಂಗಳೂರು: ನಗರದ ಕೆಎಂಸಿ ಆಸ್ಪತ್ರೆ ವೈದ್ಯ ಡಾ| ಮನೀಶ್ ರೈ ನೇತೃತ್ವದ ತಂಡ, ಕೋಡ್ ಕ್ರಾಫ್ಟ್ ಟೆಕ್ನಾಲಜೀಸ್ ಸ್ಥಾಪಕ ದೀಕ್ಷಿತ್ ರೈ ಸಹಕಾರದೊಂದಿಗೆ ಸಿದ್ಧಪಡಿಸಿರುವ “ಸೇವಿಯರ್’ ಆ್ಯಪ್ ಕುರಿತು ಸಾರ್ವಜನಿಕರಿಗೆ ಮಾಹಿತಿ ಕಾರ್ಯಾಗಾರ ರವಿವಾರ ಪುರಭವನದಲ್ಲಿ ನಡೆಯಿತು.
ಮಂಗಳೂರಿನ ಕೆಎಂಸಿ, ಎ.ಜೆ. ಆಸ್ಪತ್ರೆ, ಇಂಡಿಯಾನಾ, ಫಾದರ್ ಮುಲ್ಲರ್, ಕೆ.ಎಸ್. ಹೆಗ್ಡೆ, ಆಳ್ವಾಸ್, ವೆನಾÉಕ್ ಸೇರಿದಂತೆ ಸದ್ಯ 12 ಆಸ್ಪತ್ರೆ ಯವರು ಈ ವ್ಯವಸ್ಥೆಗೆ ಸಹಭಾಗಿತ್ವ ನೀಡಿದ್ದಾರೆ. ಸಾರ್ವಜನಿಕರು “ಸೇವಿಯರ್’ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ತುರ್ತು ಸಂದರ್ಭದಲ್ಲಿ ಆ ಆ್ಯಪ್ ಮೂಲಕ “ಮನವಿ’ ಬಟನ್ ಒತ್ತಿದರೆ ತಾವಿರುವ ಸ್ಥಳಕ್ಕೆ ಕೆಲವೇ ನಿಮಿಷಗಳಲ್ಲಿ ಆ್ಯಂಬುಲೆನ್ಸ್ ಧಾವಿಸಿ ಬರಲಿದೆ. ಪ್ರಾಥಮಿಕ ಚಿಕಿತ್ಸೆ ನೀಡುವ ಸ್ವಯಂ ಸೇವಕರ ತಂಡವನ್ನೂ ರಚಿಸಲಾಗಿದ್ದು ಅವರ ಸೇವೆಯೂ ಲಭಿಸಲಿದೆ. ಇದಕ್ಕೆ ಪೂರಕವಾಗಿ ಪೊಲೀಸರು, ಗೃಹರಕ್ಷಕ ದಳದ ಸದಸ್ಯರಿಗೂ ತರಬೇತಿ ನೀಡಲಾಗಿದೆ.
ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಮಕೃಷ್ಣ ರಾವ್ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿ, ರೋಗಿಗಳಿಗೆ ಸೂಕ್ತ ಸಮಯಕ್ಕೆ ಸೌಲಭ್ಯಗಳು ಸಿಗದೆ ಸಾವನ್ನಪುವ ಪ್ರಕರಣಗಳು ಹೆಚ್ಚುತ್ತಿವೆ. ತುರ್ತು ಸಂದರ್ಭಗಳಲ್ಲಿ ಯಾರನ್ನು ಸಂಪರ್ಕಿಸುವುದು, ಯಾವ ಆಸ್ಪತ್ರೆಗೆ ಹೋಗಬೇಕೆನ್ನುವ ಗೊಂದಲ ಏರ್ಪಡು ತ್ತದೆ. “ಸೇವಿಯರ್’ ಆ್ಯಪ್‌ನಲ್ಲಿ ಒಂದು ಬಟನ್ ಒತ್ತುವ ಮೂಲಕ ತತ್‌ಕ್ಷಣ ಆ್ಯಂಬುಲೆನ್ಸ್ ಪಡೆದು ಆಸ್ಪತ್ರೆಗಳಿಗೆ ತೆರಳಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಇಸಿಜಿ ಸೇವೆಗೆ ಕೊಂಡಿ
ಕೆಎಂಸಿಯ ಹೃದ್ರೋಗ ತಜ್ಞ ಡಾ| ಪದ್ಮನಾಭ ಕಾಮತ್ ಮಾತನಾಡಿ, ಹಳ್ಳಿಗಳ ಆಸ್ಪತ್ರೆಗಳಲ್ಲಿ ಇಸಿಜಿ ಯಂತ್ರ ಲಭ್ಯವಿಲ್ಲದೆ ಲಕ್ಷಾಂತರ ಮಂದಿ ಹೃದ್ರೋಗಿಗಳ ಸಾವು ಸಂಭವಿಸುತ್ತಿದೆ. ಈ ನಿಟ್ಟಿನಲ್ಲಿ ಹೃದ್ರೋಗ ವೈದ್ಯರು ಮತ್ತು ದಾನಿಗಳ ಸಹಕಾರದೊಂದಿಗೆ ದ.ಕ. ಮತ್ತು ಉಡುಪಿ ಜಿಲ್ಲೆಯ ಹಳ್ಳಿಗಳ ಪ್ರಾಥಮಿಕ ಆಸ್ಪತ್ರೆಗಳಲ್ಲಿ ಇಸಿಜಿ ಯಂತ್ರವನ್ನು ನೀಡಲು ವಿಶೇಷ ಆದ್ಯತೆ ನೀಡಲಾಗುತ್ತಿದೆ. ಸೇವಿಯರ್ ಆ್ಯಪ್ ವ್ಯವಸ್ಥೆಯೂ ಇಸಿಜಿ ಸೇವೆಗೆ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಡಾ| ಮನೀಶ್ ರೈ ಹಾಗೂ ದೀಕ್ಷಿತ್ ರೈ ಆ್ಯಪ್ ಬಗ್ಗೆ ಮಾಹಿತಿ ನೀಡಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಮಲ್ಲಣ ಗೌಡ, ಕೆಎಂಸಿ ಆಸ್ಪತ್ರೆ ವೈದ್ಯರಾದ ಡಾ| ಜೀದು ರಾಧಾಕೃಷ್ಣನ್, ಡಾ| ಮೇಘನಾ ಮುಕುಂದ್ ಉಪಸ್ಥಿತರಿದ್ದರು.
“ಸೇವಿಯರ್’ ಬಳಕೆ ಹೇಗೆ?
ಡಾ| ಮನೀಶ್ ರೈ ಮಾತನಾಡಿ, ಆ್ಯಂಬುಲೆನ್ಸ್ ಹಾಗೂ ಆಸ್ಪತ್ರೆಗಳ ಜತೆಗೆ ಲಿಂಕ್ ಆಗಿರುವ ವ್ಯವಸ್ಥೆಯ ಆ್ಯಪ್ ಇದು. ಮೊಬೈಲ್‌ನಲ್ಲಿ ಈ ಆ್ಯಪ್ ಡೌನ್‌ಲೋಡ್ ಮಾಡಿದ್ದರೆ, ತುರ್ತು ಸಂದರ್ಭ ದಲ್ಲಿ ಇದರಲ್ಲಿರುವ “ಆ್ಯಂಬುಲೆನ್ಸ್ ರಿಕ್ವೆಸ್ಟ್’ ಬಟನ್ ಒತ್ತಿದರಾಯಿತು. ತತ್‌ಕ್ಷಣ ಹತ್ತಿರ ದಲ್ಲಿರುವ ಎಲ್ಲ ಆ್ಯಂಬುಲೆನ್ಸ್‌ಗಳ ಮೊಬೈಲ್ ಗಳು ಬೀಪ್ ಆಗುತ್ತವೆ. ಮನವಿ ಬಂದ ಸ್ಥಳದ ಜಿಪಿಎಸ್ ವಿವರವೂ ಸಿಗುತ್ತದೆ. ಅವರು ರಿಕ್ವೆಸ್ಟನ್ನು ಓಕೆ ಮಾಡಿದ ಕೂಡಲೇ ಆ್ಯಂಬುಲೆನ್ಸ್ ಚಾಲಕರ ಮೊಬೈಲ್ ಸಂಖ್ಯೆ ರಿಕ್ವೆಸ್ಟ್ ಕಳು ಹಿಸಿ ದವರಿಗೆ ಸಿಗುತ್ತದೆ. ಎಷ್ಟು ಹೊತ್ತಿನಲ್ಲಿ ಆ್ಯಂಬು ಲೆನ್ಸ್ ಸ್ಥಳಕ್ಕೆ ತಲುಪುತ್ತದೆ ಎಂಬುದು ರಿಯಲ್ ಟೈಮ್‌ನಲ್ಲಿ ಗೊತ್ತಾಗಲಿದೆ. ಪ್ರಸ್ತುತ ಖಾಸಗಿ, ಸರಕಾರಿ ಸೇರಿ 12 ಆಸ್ಪತ್ರೆಗಳು ಮಾತ್ರ ಈ ವ್ಯವಸ್ಥೆ ಯಲ್ಲಿ ಕೈಜೋಡಿಸಿದ್ದು, ಆ ಆಸ್ಪತ್ರೆಗಳ ವ್ಯಾಪ್ತಿ ಯಲ್ಲಿ ಮಾತ್ರ ಆ್ಯಂಬುಲೆನ್ಸ್ ಸೇವೆ ದೊರೆಯ ಲಿದೆ. ಮುಂದೆ ಇನ್ನಷ್ಟು ಆಸ್ಪತ್ರೆಗಳನ್ನು ಇದರಲ್ಲಿ ಜೋಡಿಸಲಾಗುತ್ತದೆ. ರೋಗಿಗೆ ಆ್ಯಂಬು ಲೆನ್ಸ್ ಸೇವೆ ಉಚಿತವಾಗಿರುತ್ತದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸುಮ್ನೆ ಬ್ಯಾಂಡೇಜ್ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.