ಬದುಕು ಹೊರೆಯಾಗಬಾರದು, ಪ್ರೀತಿಸುವಂತಾಗಬೇಕು: ಡಾ| ಹೆಗ್ಗಡೆ

Team Udayavani, Nov 14, 2017, 8:45 AM IST

14-3.jpg

ಬೆಳ್ತಂಗಡಿ: ನನಗೆಂದಿಗೂ ಪಟ್ಟಾಧಿಕಾರಿ ಸ್ಥಾನ ಹೊರೆಯಾಗಿಲ್ಲ. ಅಂತೆಯೇ ನಮಗೆ ಬದುಕು ಹೊರೆಯಾಗ ಬಾರದು. ಬದುಕು ಪ್ರೀತಿಸುವಂತಾಗಬೇಕು. ಅನಾವಶ್ಯಕ ಕಷ್ಟ ಪಡಬಾರದು. ಹೃದಯ ವಿಶಾಲವಾಗಲು ಮನಸ್ಸು ಮೃದುವಾಗಿರಬೇಕು, ಶ್ರದ್ಧೆ, ಭಕ್ತಿಯಿರಬೇಕು. ಸಮಾಜ ಮುಖೀಯಾಗಿರ ಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಅವರು ಸೋಮವಾರ ಸಂಜೆ ಧರ್ಮಸ್ಥಳದ ಅಮೃತ ವರ್ಷಿಣಿ ಸಭಾಭವನದಲ್ಲಿ ಉಜಿರೆಯಿಂದ ಧರ್ಮಸ್ಥಳಕ್ಕೆ ಲಕ್ಷದೀಪೋತ್ಸವ ಪ್ರಯುಕ್ತ ನಮ್ಮ ನಡೆ ಮಂಜುನಾಥನ ಕಡೆ ಎನ್ನುವ ಪಾದಯಾತ್ರಿಗಳನ್ನುದ್ದೇಶಿಸಿ ಮಾತನಾಡಿದರು. ಬದುಕಿನಲ್ಲಿ ಸಾಧಿಸುವ ಗುರಿ ಇರಬೇಕು. ಯಾರ ಬಳಿ ಹೆಚ್ಚು ಸಂಪತ್ತು ಇರುತ್ತದೆಯೋ ಅವರು ದಾನ ಮಾಡುವ ಮನಸ್ಸು ಹೊಂದಿರುವುದಿಲ್ಲ. ಇಲ್ಲದವರು ದಾನ ಮಾಡ್ತಾರೆ. ನಾವು ಬದುಕಿನಲ್ಲಿ ಅನೇಕ ಸಾಧನೆಗಳನ್ನು ಮಾಡಿ ಬೀಗುತ್ತೇವೆ. ಯಾರು ವಿನೀತರಾಗಿ ಭಕ್ತಿ ಯಿಂದ ಇರುತ್ತಾರೋ ಅವರಿಗೆ ಭಗವಂತನ ಅನುಗ್ರಹ ಇರುತ್ತದೆ. ತಗ್ಗಿದವನಿಗೆ ಭಯ ಕಡಿಮೆ ಎಂದರು.

ಉಜಿರೆ ಕರ್ಮಭೂಮಿ, ಧರ್ಮಸ್ಥಳ ಜನ್ಮಭೂಮಿ
ನೀವೆಲ್ಲ ಕ್ಷೇತ್ರದ ಮೇಲೆ, ನನ್ನ ಮೇಲೆ ಶ್ರದ್ಧೆ, ವಿಶ್ವಾಸ, ಅಪಾರ ನಿರೀಕ್ಷೆ ಇಟ್ಟು ಜಿಲ್ಲೆಯ ವಿವಿಧೆಡೆಯಿಂದ ಪಾದಯಾತ್ರೆ ಮೂಲಕ ಆಗಮಿಸಿದ್ದೀರಿ. ಧರ್ಮಸ್ಥಳ ನನ್ನ ಜನ್ಮಭೂಮಿ, ಆದರೆ ನನ್ನ ಅನೇಕ ಕಾರ್ಯಗಳಿಗೆ ಪ್ರೇರಣೆ ನೀಡಿದ ಉಜಿರೆ ನನ್ನ ಕರ್ಮಭೂಮಿ ಎಂದರು.

ಅಭಿಮಾನ ಹೆಚ್ಚಿಸಿದೆ
ಉಜಿರೆ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಯು. ವಿಜಯರಾಘವ ಪಡ್ವೆಟ್ನಾಯ ಮಾತನಾಡಿ, ಈ ವರ್ಷ ವಿಶೇಷವಾಗಿ ಮೂಡಿ ಬಂದಿದೆ. ಪಾದಯಾತ್ರೆಯ ಐದನೇ ವರ್ಷ, ಹೆಗ್ಗಡೆಯವರ ಪಟ್ಟಾಭಿಷೇಕದ 50ನೇ ವರ್ಷ, ಜನ್ಮ ದಿನದ 70ನೇ ವರ್ಷಕ್ಕೆ ಕಾಲಿಡುವ ಸಂಭ್ರಮ. ಇದು ನಮಗೆಲ್ಲ ಹೆಗ್ಗಡೆಯವರ ಮೇಲಿನ ಅಭಿಮಾನ, ಪ್ರೀತಿ ಹೆಚ್ಚಿಸಿದೆ ಎಂದರು.

ಪ್ರತಾಪಸಿಂಹ ನಾಯಕ್‌ ಪ್ರಸ್ತಾವನೆಗೈದು, ಹೆಗ್ಗಡೆ ಯವರ ಜತೆಗೆ ನಾವೆಲ್ಲ ಇದ್ದೇವೆ, ಕ್ಷೇತ್ರ ದೊಂದಿಗೆ ನಮ್ಮ ಭಕ್ತಿ ಇದೆ ಎಂದು ಪಾದಯಾತ್ರೆ ಮೂಲಕ ಪ್ರಕಟ ವಾಗುತ್ತಿದೆ. ಇನ್ನಷ್ಟು ಸಮಾಜ ಮುಖೀ ಚಟುವಟಿಕೆ ಮಾಡುವ ಶಕ್ತಿ ದೇವ ರಿಂದ ದೊರೆಯಲಿ ಎಂದರು. ಹೇಮಾವತಿ ವೀ. ಹೆಗ್ಗಡೆ ಉಪಸ್ಥಿತರಿದ್ದರು.

ಉಜಿರೆ ನಾಗರಿಕರ ಪರವಾಗಿ ಹೆಗ್ಗಡೆಯವರಿಗೆ ಸ್ವರ್ಣದುಂಗುರ ತೊಡಿಸಿ ಸಮ್ಮಾನಿಸಲಾಯಿತು. ಪಾದ ಯಾತ್ರೆ ಸಮಿತಿ ವತಿಯಿಂದ ಗೌರವಿಸಲಾಯಿತು. ಉಜಿರೆಯಿಂದ ಸುಮಾರು 10,000ಕ್ಕೂ ಅಧಿಕ ಮಂದಿ ಪಾದ ಯಾತ್ರೆ ಮೂಲಕ ಆಗಮಿಸಿದ್ದರು. 6 ಟ್ಯಾಬ್ಲೋಗಳು, ಭಜನ ತಂಡಗಳಿದ್ದವು. ಮೂರು ಕಡೆ ಪಾನೀಯದ ವ್ಯವಸ್ಥೆ, ಒಂದು ಕಡೆ ಕ್ಯಾಂಡಿ ವ್ಯವಸ್ಥೆ ಇತ್ತು. ಜಿಲ್ಲೆಯ ವಿವಿಧೆಡೆಗಳಿಂದ ನಾಗರಿಕರು ಆಗಮಿಸಿದ್ದರು. 

ಮೋದಿ ಸಂಕಲ್ಪ
ಪ್ರಧಾನಿ ಮೋದಿ ಭೇಟಿ ಸಂದರ್ಭ ದೇವಸ್ಥಾನದಲ್ಲಿ  ವಿಶೇಷ ಸಂಕಲ್ಪ ಮಾಡಲಾಗಿತ್ತು. ಸಾಮಾನ್ಯವಾಗಿ ಸೇವೆ ಮಾಡಿದವರಿಗೆ, ಅವರ ಮನೆಯವರಿಗೆ ಒಳಿತಾಗಲಿ ಎಂದು ಸಂಕಲ್ಪ ಮಾಡಿದರೆ ಪ್ರಧಾನಿ ಮೂಲಕ ದೇಶಕ್ಕೆ ಒಳಿ  ತಾಗಲಿ, ದೇಶದ ಶತ್ರುಭಯ ನಿವಾರಣೆಯಾಗಲಿ ಎಂಬಿತ್ಯಾದಿ ಸಂಕಲ್ಪ ಮಾಡಲಾಗಿತ್ತು,. ಇದು ಉದಯವಾಣಿಯಲ್ಲಿ ಮುಖಪುಟದಲ್ಲಿ  ವರದಿಯಾಗಿದೆ. 
– ಡಾ| ಹೆಗ್ಗಡೆ

– Photo Credits: Jagadeesh Jain, Janani Studio, Dharmasthala

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವುSiddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

Malpe: ಕಣ್ಮರೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆMalpe: ಕಣ್ಮರೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ

Malpe: ಕಣ್ಮರೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ

ಮೂರು ದಿನವಾದರೂ ದಾಖಲಾಗದ ಎಫ್‌ಐಆರ್‌ ಮುಡಾ ದೂರಿನಲ್ಲಿ “ಕಡತ ತಿದ್ದುಪಡಿ’ ಅಂಶವೇ ಇಲ್ಲ!

ಮೂರು ದಿನವಾದರೂ ದಾಖಲಾಗದ ಎಫ್‌ಐಆರ್‌ ಮುಡಾ ದೂರಿನಲ್ಲಿ “ಕಡತ ತಿದ್ದುಪಡಿ’ ಅಂಶವೇ ಇಲ್ಲ!

sringeri-new

Sringeri: ಇಂದು ಸುವರ್ಣ ಭಾರತೀ ಮಹೋತ್ಸವ “ಸ್ತೋತ್ರ ತ್ರಿವೇಣಿ ಮಹಾಸಮರ್ಪಣೆ’

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Alankaru ಅಸೌಖ್ಯದಿಂದ ಎರಡು ತಿಂಗಳ ಬಾಣಂತಿ ಸಾವು

Alankaru ಅಸೌಖ್ಯದಿಂದ ಎರಡು ತಿಂಗಳ ಬಾಣಂತಿ ಸಾವು

Bantwal: ಬೋಳಂತೂರಿನ ದರೋಡೆ ಪ್ರಕರಣ: ವಾರ ಕಳೆದರೂ ಸಿಗದ ಮಹತ್ವದ ಸುಳಿವು

Bantwal: ಬೋಳಂತೂರಿನ ದರೋಡೆ ಪ್ರಕರಣ: ವಾರ ಕಳೆದರೂ ಸಿಗದ ಮಹತ್ವದ ಸುಳಿವು

DK-DC-Mullai-mugilan

National Highway ಕಾಮಗಾರಿ ಪರಿಶೀಲನೆ: ಮಾರ್ಚ್‌ ಅಂತ್ಯಕ್ಕೆ ಶೇ. 95 ಕಾಮಗಾರಿ ಪೂರ್ಣ: ಡಿಸಿ

Theft Case ಜುವೆಲರಿಯಿಂದ ಕಳವು: ಆರೋಪಿಗಳಿಗೆ ಜೈಲು

Theft Case ಜುವೆಲರಿಯಿಂದ ಕಳವು: ಆರೋಪಿಗಳಿಗೆ ಜೈಲು

10-mambadi

Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

BCCI

Vijay Hazare Trophy ಕ್ವಾರ್ಟರ್‌ ಫೈನಲ್‌ : ಕರ್ನಾಟಕಕ್ಕೆ ಬರೋಡ ಸವಾಲು

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

1-saaai

Malaysia Open Badminton: ಸಾತ್ವಿಕ್‌-ಚಿರಾಗ್‌ ಜೋಡಿ ಸೆಮಿಗೆ

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವುSiddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.