2 ದಿನಗಳ “ಮಂಗಳೂರು ಲಿಟ್ ಫೆಸ್ಟ್’ಗೆ ತೆರೆ
Team Udayavani, Nov 5, 2018, 10:16 AM IST
ಮಂಗಳೂರು: “ದಿ ಐಡಿಯಾ ಆಫ್ ಭಾರತ್’ ಶೀರ್ಷಿಕೆಯಡಿ ಮಂಗಳೂರು ಲಿಟರರಿ ಫೌಂಡೇಶನ್ ಆಶ್ರಯದಲ್ಲಿ ನಗರದ ಡಾ| ಟಿ.ಎಂ.ಎ. ಪೈ ಇಂಟರ್‌ನ್ಯಾಶನಲ್ ಕನ್ವೆನ್ಶನ್ ಸೆಂಟರ್‌ನಲ್ಲಿ ನಡೆದ ಎರಡು ದಿನಗಳ “ಮಂಗಳೂರು ಲಿಟ್ ಫೆಸ್ಟ್’ ರವಿವಾರ ಸಮಾರೋಪಗೊಂಡಿತು.
ದೇಶ ವಿದೇಶಗಳ ಪ್ರಖ್ಯಾತ ಚಿಂತಕರು, ಸಾಹಿತಿಗಳು, ಚಿತ್ರರಂಗದ ಸಾಧಕರು, ಕವಿಗಳು, ವಿದ್ವಾಂಸರು, ಶಿಕ್ಷಣ ತಜ್ಞರು ಸೇರಿದಂತೆ 55ಕ್ಕೂ ಅಧಿಕ ಮಂದಿ ಈ ಸಾಹಿತ್ಯ ಜಾತ್ರೆಯಲ್ಲಿ ಭಾಗವಹಿಸಿ ವಿಚಾರ ಮಂಡಿಸಿದರು. ಕವಿ ಗೋಷ್ಠಿಯೂ ನಡೆಯಿತು. ಸಾಹಿತ್ಯ, ಸಾಂಸ್ಕೃತಿಕ ಮತ್ತು ವೈಚಾರಿಕ ಆಸಕ್ತರು ಮತ್ತು ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿವಿಧ ಪ್ರಕಾಶಕರು ಭಾಗವಹಿಸಿ ಪುಸ್ತಕ ಪ್ರದರ್ಶನ ಏರ್ಪಡಿಸಿದ್ದು, ಪುಸ್ತಕ ಪ್ರಿಯರು ಲಾಭ ಪಡೆದರು. ಕ್ಲೇ ಮಾಡೆಲಿಂಗ್ ಮಾಹಿತಿ, ಪ್ರದರ್ಶನ ಬಹಳಷ್ಟು ಮಂದಿಯನ್ನು ಆಕರ್ಷಿಸಿತು.
ಧನಾತ್ಮಕ ಚಿಂತನೆ
ರವಿವಾರ ಸಂಜೆ ನಡೆದ ಸಮಾರೋಪ ಸಭೆಯಲ್ಲಿ ಮಾತನಾಡಿದ ಪ್ರಜ್ಞಾ ಪ್ರವಾಹ ರಾಷ್ಟ್ರೀಯ ಸಂಯೋಜಕ ಜೆ. ನಂದಕುಮಾರ್ ಅವರು, ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಧನಾತ್ಮಕ ಚಿಂತನೆಗಳನ್ನು ಕಲಿಸಬೇಕು. ನಮ್ಮ ದೇಶ ವಿದ್ಯಾರ್ಥಿಗಳಿಗೆ ಸ್ಫೂರ್ತಿಯ ಭಾರತವಾಗಬೇಕು. ಭಾರತದ ಬಗೆಗಿನ ಪಾಶ್ಚಾತ್ಯ ಆಲೋಚನೆಗಳು ಬದಲಾಗಬೇಕಿವೆ ಎಂದು ಹೇಳಿದರು.
ಬ್ರಿಟಿಷರು ಬಂದ ಬಳಿಕ ಇಂಡಿಯಾವನ್ನು ಕಟ್ಟಲಾಯಿತು ಎಂದು ಹೇಳಲಾಗುತ್ತಿದ್ದು, ಇದಕ್ಕೆ ಅರ್ಥವಿಲ್ಲ. ಭಾರತೀಯ ಪರಿಕಲ್ಪನೆಯು ಕೇವಲ ಒಂದು ಪ್ರದೇಶಕ್ಕೆ ಸೀಮಿತವಾಗಿಲ್ಲ ಎಂದರು. ಇಡೀ ಜಗತ್ತಿಗೆ ಆಧ್ಯಾತ್ಮಿಕ ಸ್ವಾತಂತ್ರ್ಯವನ್ನು ಭಾರತ ನೀಡಿದೆ. ಶೈಕ್ಷಣಿಕ, ಆರ್ಥಿಕ ಕ್ಷೇತ್ರದ ಮೇಲೆ ಪಾಶ್ಚಾತ್ಯ ಚಿಂತನೆಗಳು ಸವಾರಿ ಮಾಡುತ್ತಿದ್ದು, ಇದನ್ನು ಸಮರ್ಥವಾಗಿ ಎದುರಿಸಬೇಕಾಗಿದೆ ಎಂದು ವಿವರಿಸಿದರು.
ಭಾರತ ಇಂದು ವೇದ, ಉಪನಿಷತ್ತು, ಧಾರ್ಮಿಕ ತಳಹದಿಯಲ್ಲಿ ಎತ್ತರಕ್ಕೆ ಬೆಳೆದಿದೆ ಎಂದರು. ಪದ್ಮಭೂಷಣ ಡಾ| ಬಿ.ಎಂ. ಹೆಗ್ಡೆ ಅವರು ಆಯುರ್ವೇದ ವಿಜ್ಞಾನದ ಮಹತ್ವ ವಿವರಿಸಿದರು. ಗೋವಾ ಎನ್‌ಐಟಿ ನಿರ್ದೇಶಕ ಗೋಪಾಲ ಮೊಗೆರಾಯ ಮಾತನಾಡಿ, ಹಿಂದುತ್ವ ಎನ್ನುವುದನ್ನು ಕೇವಲ ಧರ್ಮವಾಗಿ ಪರಿಗಣಿಸಬಾರದು, ಅದೊಂದು ಜೀವನ ಕ್ರಮವಾಗಿದೆ. ಭಾರತೀಯ ಸಂಸ್ಕೃತಿ ಶ್ರೇಷ್ಠವಾದುದು. ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ.
ಭಾರತದಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನವಿದೆ. ಪೂಜನೀಯ ಭಾವನೆಯಿಂದ ನೋಡುತ್ತೇವೆ ಎಂದರು.
ಉಪನ್ಯಾಸಕಿ ಸ್ಮಿತಾ ಶೆಣೈ ಕಾರ್ಯಕ್ರಮ ನಿರೂಪಿಸಿದರು. ಲಿಟ್ ಫೆಸ್ಟ್-2018ನ ಎರಡನೇ ದಿನವಾದ ರವಿವಾರ ಡೇವಿಡ್ ಫ್ರಾಲಿ ಅವರ “ವಾಟ್ ಈಸ್ ಹಿಂದೂಯಿಸಂ’ ಪುಸ್ತಕ ಬಿಡುಗಡೆಗೊಂಡಿತು. ಬಳಿಕ ಅವರ ಜತೆಗೆ ಸಂವಾದ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.