‘ಸಾಹಿತ್ಯ ವಿಮರ್ಶೆ ವಸ್ತುನಿಷ್ಠವಾಗಿರಲಿ’
ಕೊಂಕಣಿ ಲೇಖಕರ ಸಂಘದಿಂದ ಸಾಹಿತ್ಯ, ವಿಮರ್ಶೆ ವಿಚಾರಗೋಷ್ಠಿ
Team Udayavani, Jul 4, 2019, 5:33 AM IST
ಮಹಾನಗರ: ಸಾಹಿತ್ಯ ವಿಮರ್ಶೆಯು ವಸ್ತು ನಿಷ್ಠವಾಗಿದ್ದು, ಯಾವುದೇ ಪೂರ್ವಾಗ್ರಹ ಪೀಡಿತವಾಗಿ ರಬಾರದು. ಅಂತಹ ವಿಮರ್ಶೆಯು ಸಾಹಿತ್ಯದ ಅಭಿವೃದ್ಧಿಗೆ ಪೂರಕವಾಗಿರುತ್ತದೆ ಎಂದು ಸಂತ ಅಲೋಶಿಯಸ್ ಕಾಲೇಜಿನ ಕೊಂಕಣಿ ವಿಭಾಗದ ನಿರ್ದೇಶಕ ಫಾ| ಮೆಲ್ವಿನ್ ಪಿಂಟೊ ಹೇಳಿದರು.
ಅವರು ಕೊಂಕಣಿ ಲೇಖಕರ ಸಂಘ, ಕರ್ನಾಟಕ ಇದರ ವತಿಯಿಂದ ಮಂಗ ಳೂರಿನ ಡಾನ್‌ಬೊಸ್ಕೊ ಹಾಲ್ನಲ್ಲಿ ಇತ್ತೀಚೆಗೆ ನಡೆದ ‘ಸಾಹಿತ್ಯ ಮತ್ತು ವಿಮರ್ಶೆ’ ವಿಚಾರ ಗೋಷ್ಠಿಯಲ್ಲಿ ಮುಖ್ಯ ಭಾಷಣ ಮಾಡಿದರು.
ವಿಮರ್ಶೆಯು ಸಾಹಿತ್ಯದ ಕುರಿತಾಗಿರ ಬೇಕೇ ಹೊರತು ಸಾಹಿತಿಗೆ ಸಂಬಂಧ ಪಟ್ಟದ್ದಾಗಿರಬಾರದು ಎಂದರು.
ಹಿರಿಯ ಕೊಂಕಣಿ ಸಾಹಿತಿ ವಲ್ಲಿ ವಗ್ಗ (ಮೈಸೂರು) ಅವರು ವಿಚಾರ ಗೋಷ್ಠಿಯನ್ನು ನಡೆಸಿ ಕೊಟ್ಟರು.
ಕೊಂಕಣಿ ಲೇಖಕರ ಸಂಘದ ಸಂಚಾಲಕ ರಿಚಾರ್ಡ್ ಮೋರಸ್ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಡಾ| ಎಡ್ವರ್ಡ್ ನಜ್ರೆತ್ ಪ್ರಸ್ತಾವನೆಗೈದರು. ಲವಿ ಗಂಜಿಮಠ ವಂದಿಸಿದರು.
ಸಮ್ಮಾನ
ಇದೇ ಸಂದರ್ಭದಲ್ಲಿ ಈ ವರ್ಷದ ದಾಯ್ಜಿ ದುಬಾಯ್ ಪ್ರಶಸ್ತಿ ಪಡೆದ ಸಾಹಿತಿ ವಲ್ಲಿ ವಗ್ಗ ಅವರನ್ನು ಸಮ್ಮಾ ನಿಸಲಾಯಿತು.
ಎಡ್ವಿನ್ ಜೆ.ಎಫ್. ಡಿ’ಸೋಜಾ, ಡೊಲ್ಫಿ ಕಾಸ್ಸಿಯಾ, ಸಿರಿಲ್ ಜಿ. ಸಿಕ್ವೇರಾ (ಸಿಜ್ಯೆಸ್ ತಾಕೊಡೆ), ಡಾ| ಜೆರಾಲ್ಡ್ ಪಿಂಟೊ, ಎಡಿ ನೆಟ್ಟೊ, ಜೆ.ಎಫ್. ಡಿ’ಸೋಜಾ, ನವೀನ್ ಕುಲೆÏೕಕರ್, ರೋನ್‌ರೊಚ್, ಪಾವ್ಲ್ ಮೊರಾಸ್ ಮೊದಲಾದ ಅನೇಕ ಕೊಂಕಣಿ ಸಾಹಿತಿಗಳು ವಿಚಾರಗೋಷ್ಠಿಯಲ್ಲಿ ಭಾಗವಹಿಸಿದ್ದರು. ಡೊನಾಲ್ಡ್ ಪಿರೇರಾ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.