ಸಾಹಿತ್ಯ ದಾಹ ಇಂಗಿಸಿದ ಪುಸ್ತಕ ಮಳಿಗೆ
Team Udayavani, Jan 24, 2018, 10:31 AM IST
ಸುರತ್ಕಲ್ : ಪಾಠ ಪುಸ್ತಕಗಳನ್ನೇ ಓದುತ್ತಿರುವ ಕಾಲೇಜು ವಿದ್ಯಾರ್ಥಿಗಳ ಸಮುದಾಯಕ್ಕೆ ಒಂದಷ್ಟು ಸಾಹಿತ್ಯ ದಾಹ
ವಾಗಿ ಪುಸ್ತಕಗಳನ್ನು ಓದುವ, ಖರೀದಿಸುವ ಆಸಕ್ತಿ ಮೂಡಿರುವುದು ಸುರತ್ಕಲ್‌ನಲ್ಲಿ ನಡೆದ ಮಂಗಳೂರು ತಾಲೂಕು ಸಾಹಿತ್ಯ ಸಮ್ಮೇಳನದ ಪುಸ್ತಕದ ಮಳಿಗೆಯಲ್ಲಿ ಕಂಡು ಬಂತು.
ಇಲ್ಲಿಯ ಗೋವಿಂದದಾಸ ಕಾಲೇಜಿನ ವಠಾರದಲ್ಲಿ ನಡೆದ ಅಕ್ಷರ ಜಾತ್ರೆಯಲ್ಲಿ ಪುಸ್ತಕ ಮಳಿಗೆ ಜನಾಕರ್ಷಣೆ ಪಡೆದುಕೊಂಡಿತು, ವಿಶೇಷವಾಗಿ ವಿದ್ಯಾರ್ಥಿ ಸಮುದಾಯವು ನೂರಾರು ಸಾಹಿತ್ಯ ಪುಸ್ತಕಗಳನ್ನು ಕುತೂಹಲದಿಂದ ಓದುತ್ತಿದ್ದರಲ್ಲದೇ, ವಿವಿಧ ಹಿರಿಯ, ಕಿರಿಯ ಲೇಖಕರ ಕವನ, ಚುಟುಕು, ಸಂಕಲನ, ಕಥೆ, ಕಾದಂಬರಿ, ನಾಟಕ, ನವ್ಯ ಸಾಹಿತ್ಯ, ಸಾಹಿತ್ಯದ ಮೂಲಕ ನೀಡುವ ಶಿಕ್ಷಣ ಮಾರ್ಗದರ್ಶಿ, ಹಾಸ್ಯ, ವಿಡಂಬನೆಯ ಸಾಹಿತ್ಯ ಪುಸ್ತಕಗಳನ್ನು ವೀಕ್ಷಿಸಿದರಲ್ಲದೇ ಕೆಲವು ವಿದ್ಯಾರ್ಥಿಗಳು ಖರೀದಿಸಿ ಸಾಹಿತ್ಯವನ್ನು ಕೊಂಡು ಓದುವ ಮೂಲಕ ಪೋಷಿಸಿದರು.
ದ.ಕ. ಮತ್ತು ಉಡುಪಿ ಜಿಲ್ಲೆಯ ವಿವಿಧ ಪ್ರಕಾಶನ ಸಂಸ್ಥೆಗಳು, ಸಾಹಿತಿಗಳೇ ತಮ್ಮ ವಿವಿಧ ಕೃತಿಯೊಂದಿಗೆ ಮಳಿಗೆಯಲ್ಲಿ ಹಾಜರಿದ್ದು, ಮಾರಾಟ ಮಾಡುತ್ತಿದ್ದರಲ್ಲದೇ, ರಿಯಾಯಿತಿ ದರವನ್ನು ನೀಡಿ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಸಹಕರಿಸಿದ್ದರು. ಕನ್ನಡ, ತುಳು, ಕೊಂಕಣಿ, ಇಂಗ್ಲಿಷ್ ಮತ್ತಿತರ ಭಾಷೆಯ ಪುಸ್ತಕಗಳು ಮಾರಾಟದಲ್ಲಿದ್ದವು. ಕೆಲವು ವಿದ್ಯಾರ್ಥಿಗಳು ತಾವು ಸಹ ಕಥೆ-ಕವನ ಬರೆದರೆ ಪ್ರಕಟಿಸುತ್ತೀರ ಎಂಬ ಪ್ರಶ್ನೆಗಳನ್ನು ಕೇಳಿ ತಮ್ಮ ಸಾಹಿತ್ಯದ ಅಭಿರುಚಿಯನ್ನು ಪ್ರದರ್ಶಿಸಿದರು.
ಮಾರಾಟ ಮಳಿಗೆ
ಪುಸ್ತಕದ ಮಳಿಗೆಯೊಂದಿಗೆ, ವಿವಿಧ ವಸ್ತುಗಳ ಮಾರಾಟ ಮಳಿಗೆಯು ಗಮನ ಸೆಳೆಯಿತು. ಹಪ್ಪಳ, ಅಪ್ಪಟ ತುಳುನಾಡಿನ ದೇಶೀಯ ತಿಂಡಿ ತಿನಸು, ಮನೆ ಮದ್ದು, ಆಯುರ್ವೇದ ಔಷಧ, ತರಕಾರಿ, ಹಣ್ಣುಗಳ ಬೀಜ, ಸಿದ್ಧ ಉಡುಪುಗಳು, ಶೃಂಗಾರ ಸಾಧನಗಳು ಹಾಗೂ ವಿವಿಧ ಗೃಹೋಪಯೋಗಿ ವಸ್ತುಗಳು ಮಾರಾಟದ ಮಳಿಗೆಯನ್ನು ಅಲಂಕರಿಸಿತು.
ಸಾಹಿತ್ಯದ ಅಭಿರುಚಿಗೆ ನೆರವು
ಕಾಲೇಜಿನಲ್ಲಿ ನಮ್ಮ ಓದು ಅದು ಕಡ್ಡಾಯ ಆದರೆ ಇಂತಹ ಸಾಹಿತ್ಯ ಚಟುವಟಿಕೆ ನಿರಂತರವಾಗಿ ಕ್ಯಾಂಪಸ್‌ನಲ್ಲಿ ನಡೆದರೆ, ಸಾಹಿತಿಗಳನ್ನು, ಸಾಹಿತ್ಯದ ಪುಸ್ತಕಗಳನ್ನು ನೋಡಿ ಖುಷಿ ಪಡುತ್ತೇವೆ. ಯುವ ಸಮುದಾಯವು ಸಾಹಿತ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದಿಲ್ಲ ಎಂಬ ಅಪವಾದ ಮಾಡುವ ಬದಲು ಸಾಹಿತ್ಯದ ಕಮ್ಮಟಗಳು
ಶಿಕ್ಷಣ ಸಂಸ್ಥೆಗಳಲ್ಲಿ ನಡೆದಲ್ಲಿ ಅಭಿರುಚಿಗೆ ನೆರವು ನೀಡಿದಂತಾಗುತ್ತದೆ.
– ಭವ್ಯಾ, ಕಾಲೇಜು ವಿದ್ಯಾರ್ಥಿನಿ
ಬರವಣಿಗೆ ಮಾತ್ರ ಸಾಹಿತ್ಯವಲ್ಲ
ಕೇವಲ ಪುಸ್ತಕ ಮತ್ತು ಓದು ಮಾತ್ರ ಸಾಹಿತ್ಯವಲ್ಲ, ಕೃಷಿ ಬದುಕು, ಪರಂಪರೆ, ಪ್ರಕೃತಿಯು ಸಾಹಿತ್ಯವಾಗಿದೆ. ಪುತ್ತೂರಿನಿಂದ ಇಲ್ಲಿಗೆ ಬಂದಿದ್ದೇನೆ, ಎಲ್ಲಾ ಬಗೆಯ ಕೃಷಿ ಚಟುವಟಿಕೆಯೊಂದಿಗೆ ಸಮ್ಮೇಳನದಲ್ಲಿ ಪೂರಕ ವಾತಾವರಣದಲ್ಲಿ ತರಕಾರಿ, ಬೀಜಗಳನ್ನು ಮಾರಾಟಕ್ಕಿಡುತ್ತೇನೆ, ಆಸಕ್ತರಿಗೆ ಜೇನು ಕೃಷಿ ಸಹಿತ ತೋಟಗಾರಿಕೆಯ
ಪಾಠವನ್ನು ಸಹ ಹೇಳಿಕೊಡುತ್ತೇನೆ.
– ರಾಮಣ್ಣ, ಕೃಷಿಮಿತ್ರ
ನರ್ಸರಿ, ಮುಂಡೂರು
ಲಾಭವು ಇಲ್ಲ ನಷ್ಟವೂ ಇಲ್ಲ
ಸಾಹಿತ್ಯ ಸಮ್ಮೇಳನಗಳು ಜನ ಜಾತ್ರೆಯಂತೆ ನಡೆಯುತ್ತದೆ ಆದರೆ ಶಿಕ್ಷಣ ಸಂಸ್ಥೆಗಳಲ್ಲಿ ಅವಕಾಶ ಮಾಡಿಕೊಟ್ಟಿದ್ದರಿಂದ ಯುವ ಸಾಹಿತಿಗಳಿಗೆ, ಸಾಹಿತ್ಯ ಆಸಕ್ತರಿಗೆ ಪುಸ್ತಕಗಳನ್ನು ವೀಕ್ಷಿಸಲು ಅವಕಾಶ ಸಿಕ್ಕಂತಾಗುತ್ತದೆ. ಸಾಹಿತ್ಯ ಚಟುವಟಿಕೆಯಲ್ಲಿ ಲಾಭವು ಇಲ್ಲ, ನಷ್ಟವು ಇಲ್ಲ ಬದಲಾಗಿ ನಮ್ಮ ಆಸಕ್ತಿಗೊಂದು ವೇದಿಕೆಯಷ್ಟೇ.
– ಉಗ್ಗಪ್ಪ ಪೂಜಾರಿ,
ಸಾಹಿತಿ, ಪ್ರಕಾಶಕ, ಕೃಷಿಕ
ನರೇಂದ್ರ ಕೆರೆಕಾಡು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bajpe: ಕೆಂಜಾರು ಹಾಸ್ಟೆಲ್ ಕೊಳಚೆ ನೀರು ಖಾಸಗಿ ಜಾಗಕ್ಕೆ; ಸುತ್ತಮುತ್ತ ದುರ್ವಾಸನೆ
Kaikamba: ದೊಡ್ಡಳಿಕೆ ಅಣೆಕಟ್ಟಿನಿಂದ ಎಡನಾಲೆಗೆ ನೀರು
Kinnigoli: ಈಗಲೇ ಕುಡಿಯುವ ನೀರಿನ ಸಮಸ್ಯೆ; ಒಂದೇ ವಾರದಲ್ಲಿ ನಾಲ್ಕು ಬೋರ್‌ವೆಲ್
Flight; ಮಂಗಳೂರು – ಸಿಂಗಾಪುರ ನೇರ ವಿಮಾನ ಕೆಲ ಕಾಲ ಮುಂದಕ್ಕೆ?
Hassan-Mangaluru ಹಳಿ ದ್ವಿಗುಣ: ಅಂತಿಮ ಸ್ಥಳ ಸರ್ವೇಗೆ ಟೆಂಡರ್
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Gangolli: ಮರದ ದಿಮ್ಮಿಗೆ ಡಿಕ್ಕಿ ಹೊಡೆದ ಮೀನುಗಾರಿಕಾ ದೋಣಿ
BBK11: ಫಿನಾಲೆ ಓಟದಿಂದ ಚೈತ್ರಾಳನ್ನು ಹೊರಗಿಟ್ಟ ಮನೆಮಂದಿ..ಕಣ್ಣೀರಿಟ್ಟ ಫೈಯರ್ ಬ್ರ್ಯಾಂಡ್
Mudigere; ಕಾಫಿ ಎಸ್ಟೇಟ್ ನಲ್ಲಿ ಕಾಡುಕೋಣ ದಾಳಿ: ಅಸ್ಸಾಂ ಮೂಲದ ಕಾರ್ಮಿಕ ಮಹಿಳೆ ಮೃ*ತ್ಯು
Bajpe: ಕೆಂಜಾರು ಹಾಸ್ಟೆಲ್ ಕೊಳಚೆ ನೀರು ಖಾಸಗಿ ಜಾಗಕ್ಕೆ; ಸುತ್ತಮುತ್ತ ದುರ್ವಾಸನೆ
Kaikamba: ದೊಡ್ಡಳಿಕೆ ಅಣೆಕಟ್ಟಿನಿಂದ ಎಡನಾಲೆಗೆ ನೀರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.