ಗುತ್ತಿಗೆದಾರರು ಸಿಗದೆ ಸಾರ್ವಜನಿಕ ಶೌಚಾಲಯಗಳಿಗೆ ಬೀಗ
Team Udayavani, Feb 1, 2018, 9:20 AM IST
ಸುರತ್ಕಲ್ : ಇಲ್ಲಿಯ ಬಸ್ ನಿಲ್ದಾಣದ ಸಮೀಪ ಇಟ್ಟ ಇ-ಟಾಯ್ಲೆಟ್ ಗೆ ಹೋಗಲು ಮಹಿಳೆಯರು, ವಿದ್ಯಾರ್ಥಿಗಳು ಮುಜುಗರ ಪಡುತ್ತಾರೆ. ಕಾರಣ ಎಲ್ಲರಿಗೂ ಕಾಣುವಂತೆ ಒಳಹೋಗಲು ಸಾರ್ವಜನಿಕರು ಅದರಲ್ಲಿಯೂ ಮಹಿಳೆಯರು ಹಿಂದೇಟು ಹಾಕುತ್ತಿದ್ದಾರೆ.
ಸುರತ್ಕಲ್ ಬಸ್ ನಿಲ್ದಾಣದ ಬಳಿ ಇಡಲಾದ ಇ-ಟಾಯ್ಲೆಟ್ ಎತ್ತರದಲ್ಲಿದ್ದು, ವಯೋವೃದ್ಧರು ಹತ್ತಲಾರದ ಸ್ಥಿತಿಯಲ್ಲಿದೆ. ಇನ್ನು ಇದಕ್ಕೆ ಎದುರು ಬದಿ ತಡೆಯಿಲ್ಲದ ಕಾರಣ ಎಲ್ಲರ ಮುಂಭಾಗದಲ್ಲಿ ಶೌಚಕ್ಕೆ ಒಳ ಹೋಗಲು ಸಾರ್ವಜನಿಕರು ಮುಜುಗರವಾಗುತ್ತದೆ.
ಸಾರ್ವಜನಿಕ ಶೌಚಾಲಯಗಳಿಗೆ ಬೀಗ!
ಸುರತ್ಕಲ್, ಬೈಕಂಪಾಡಿ ಮತ್ತಿತರೆಡೆ ಲಕ್ಷ ಲಕ್ಷ ಖರ್ಚು ಮಾಡಿ ಸಾರ್ವಜನಿಕ ಶೌಚಾಲಯ ಕಟ್ಟಿದರೂ ಬೀಗ ಜಡಿಯಲಾಗಿದೆ. ಹೀಗಾಗಿ ಬಳಕೆಗೆ ಸಿಗದೆ ಸ್ಥಳೀಯರು ಬಯಲು ಶೌಚಾಲಯಕ್ಕೆ ಹೋಗುವುದು ಅನಿವಾರ್ಯವೆನಿಸಿದೆ.
ಬಹು ವೆಚ್ಚದ ಶೌಚಾಲಯ
ಸಾರ್ವಜನಿಕ ಶೌಚಾಲಯ ನಿರ್ವಹಣೆಗೆ ಮಂಗಳೂರು ಮಹಾನಗರ ಪಾಲಿಕೆಯ ಕಂದಾಯ ವಿಭಾಗ ಟೆಂಡರಿಗೆ
ಆಹ್ವಾನ ನೀಡಿದ್ದರೂ ಗುತ್ತಿಗೆದಾರರು ಬಾರದೆ ಇರುವುದು ಶೌಚಾಲಯಗಳು ಬಳಕೆಗೆ ಸಿಗದೆ ಇರಲು ಕಾರಣ.
ಸುಮಾರು 5ರಿಂದ 6 ಲಕ್ಷ ರೂ. ವೆಚ್ಚ ಮಾಡಿ ಶೌಚಾಲಯ ನಿರ್ಮಿಸಲಾಗಿದೆ. ನಿರ್ವಹಣೆಗೆ ನೀಡಿದಲ್ಲಿ ಶುಚಿತ್ವದ
ಸಮಸ್ಯೆ ಎದುರಾಗುತ್ತದೆ. ಹೀಗಾಗಿ ಅನಿವಾರ್ಯವಾಗಿ ಪಾಲಿಕೆ ಬೀಗ ಜಡಿದಿದೆ.
ಇದ್ದೂ ಇಲ್ಲದಂತಾಗಿದೆ
ಬೀಚ್ ಬಳಿ ಇರುವ ಶೌಚಾಲಯ ಸಮುದ್ರ ತೀರದಲ್ಲಿ ಆಟವಾಡಿ ಬಂದು ಸ್ನಾನ ಮಾಡಲು, ಬಟ್ಟೆ ಬದಲಾಯಿಸಲು
ಬಳಕೆಯಾಗುತ್ತಿತ್ತು. ಇದೀಗ ಬಾಗಿಲು ಮುರಿದಿದ್ದು, ಬಳಕೆ ಸಿಗದ ಸ್ಥಿತಿಯಲ್ಲಿದೆ. ಒಟ್ಟಿನಲ್ಲಿ ಲಕ್ಷ ಲಕ್ಷ ಖರ್ಚು ಮಾಡಿ
ನಿರ್ಮಿಸಿದ ಶೌಚಾಲಯಗಳು ಸಾರ್ವಜನಿಕರ ಬಳಕೆಗೆ ಸಿಗದೆ ಊಟಕ್ಕಿಲ್ಲದ ಉಪ್ಪಿನಕಾಯಿಯಂತೆ ಆಗಿದೆ.
ಪರಿಶೀಲನೆ ನಡೆಸಲಾಗುವುದು
ಸುರತ್ಕಲ್, ಬೈಕಂಪಾಡಿ ಸಹಿತ ವಿವಿಧೆಡೆ ಶೌಚಾಲಯ ಸಿದ್ಧಗೊಂಡಿದ್ದು, ಸಾರ್ವಜನಿಕರಿಗೆ ಲಭ್ಯವಿಲ್ಲ ಎಂಬುದು ತಿಳಿದಿಲ್ಲ. ಪಾಲಿಕೆಯ ಕಂದಾಯ ಇಲಾಖೆಗೆ ಒಳಪಟ್ಟಿದ್ದರೆ ಅದನ್ನು ಸ್ಥಳೀಯರಿಗೆ ನಿರ್ವಹಣೆ ಮಾಡಲು ನೀಡುವ ಬಗ್ಗೆ ಯೋಚಿಸಲಾಗುವುದು. ಶೌಚಾಲಯ ನಿರ್ವಹಣೆಯಿಂದ ಪಾಲಿಕೆ ಆದಾಯ ನಿರೀಕ್ಷಿಸುತ್ತಿಲ್ಲ. ಇನ್ನು ಇ-ಟಾಯ್ಲೆಟ್ ಎಲ್ಲೆಡೆ ಬಳಕೆಯಾಗುತ್ತಿದೆ. ಅನನುಕೂಲವಿದ್ದಲ್ಲಿ ಪರಿಶೀಲನೆ ನಡೆಸಲಾಗುವುದು.
– ಮೊಹಮ್ಮದ್ ನಝೀರ್, ಆಯುಕ್ತರು,
ಮನಪಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Ullala: ತ್ರಿವಳಿ ತಲಾಖ್ ಪ್ರಕರಣ: ಆರೋಪಿಯ ಸೆರೆ
Ullala: 3ರ ಬಾಲಕಿಗೆ 70ರ ವೃದ್ಧನಿಂದ ಲೈಂಗಿಕ ಕಿರುಕುಳ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.