ಕರಾವಳಿ ಭಾಗದ ಅಪರಾಧ ಸುದ್ದಿಗಳು


Team Udayavani, Jul 27, 2017, 8:40 AM IST

Crime-Symbolic-600.jpg

ಪವನ್‌ರಾಜ್‌ ಕೊಲೆ: ಮೂವರು ಆರೋಪಿಗಳ ವಶ, ವಿಚಾರಣೆ
ಮಂಗಳೂರು:
ವಾಮಂಜೂರು ಕುಟ್ಟಿಪಲ್ಕೆಯ ರೌಡಿಶೀಟರ್‌ ಪವನ್‌ರಾಜ್‌ ಶೆಟ್ಟಿ (21) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಗ್ರಾಮಾಂತರ ಪೊಲೀಸರು ವಾಮಂಜೂರಿನ ಬಿಪಿನ್‌, ಶರಣ್‌ ಮತ್ತು ಹರೀಶ್‌ ಅವರನ್ನು ಬುಧವಾರ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಗಾಂಜಾ ವ್ಯವಹಾರ ಮತ್ತು ಹಳೆ ವೈಷಮ್ಯ ಈ ಕೊಲೆಗೆ ಕಾರಣ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದ್ದು, ಸ್ಪಷ್ಟವಾದ ಕಾರಣವೇನೆಂದು ಪೊಲೀಸರ ಸಮಗ್ರ ತನಿಖೆಯಿಂದ ತಿಳಿದು ಬರಬೇಕಿದೆ.

ಕೊಲೆ ಕೃತ್ಯದ ಸ್ಥಳದಲ್ಲಿ ಎರಡು ಮಚ್ಚು, ಮೊಬೈಲ್‌, ಚಪ್ಪಲಿ, ಗೋಡೆಯಲ್ಲಿ ರಕ್ತದ ಕಲೆಗಳು ಕಂಡು ಬಂದಿದ್ದವು. ಪವನ್‌ರಾಜ್‌ ಶೆಟ್ಟಿ ಮೇಲೆ ವಾಮಂಜೂರು ಚೆಕ್‌ಪೋಸ್ಟ್‌ ಬಳಿ ಸಂತೋಷ್‌ ಕೊಟ್ಟಾರಿ ಕೊಲೆ ಯತ್ನ ಪ್ರಕರಣ, ರೋಹಿತ್‌ ಶೆಟ್ಟಿ ಕೊಲೆ ಪ್ರಕರಣದಲ್ಲಿ ಹಣಕಾಸಿನ ನೆರವು ನೀಡಿದ್ದರೆಂದು 2015ರಲ್ಲಿ ವಾಮಂಜೂರಿನ ಉದ್ಯಮಿ ಕೊಲೆಗೆ ಸಂಚು ರೂಪಿಸಿದ ಆರೋಪ, 2016ರಲ್ಲಿ ಮಂಗಳಾದೇವಿ ಸಮೀಪ ದರೋಡೆ ಪ್ರಕರಣ, 2017ರ ಲ್ಲಿ ಪರಾರಿಯಲ್ಲಿ ಶ್ರೀಮಂತ ವ್ಯಕ್ತಿಗಳ ದರೋಡೆಗೆ ಹೊಂಚು ಹಾಕಿದ ಪ್ರಕರಣಗಳ ಆರೋಪಗಳಿದ್ದವು. ಈ ಹಿನ್ನೆಲೆಯಲ್ಲಿ ರೌಡಿಶೀಟರ್‌ ಹಾಕಲಾಗಿತ್ತು. ದರೋಡೆ ಪ್ರಕರಣವೊಂದಕ್ಕೆ ಸಂಬಂಧಿಸಿ ನ್ಯಾಯಾಂಗ ಬಂಧನದಲ್ಲಿದ್ದ  ಪವನ್‌ರಾಜ್‌ ಕಳೆದ ಜೂ. 20ರಂದು ಬಿಡುಗಡೆಯಾಗಿ ಹೊರ ಬಂದಿದ್ದನು. ಸರಿಯಾಗಿ ಒಂದು ತಿಂಗಳು ಐದು ದಿನಗಳೊಳಗೆ ಕೊಲೆಯಾಗಿದ್ದಾನೆ.

ಶರತ್‌ ಪ್ರಕರಣ; ಶವ ಯಾತ್ರೆಗೆ ಕಲ್ಲು ತೂರಲು ಪ್ರಚೋದನೆ ಆರೋಪ : ಐವರಿಗೂ ನಿರೀಕ್ಷಣಾ ಜಾಮೀನು
ಮಂಗಳೂರು:
ಆರೆಸ್ಸೆಸ್‌ ಕಾರ್ಯಕರ್ತ ಶರತ್‌ ಅವರ ಶವ ಯಾತ್ರೆಯ ಸಂದರ್ಭದಲ್ಲಿ ಜು. 8ರಂದು ಬಿ.ಸಿ.ರೋಡ್‌ನ‌ಲ್ಲಿ ಮೆರವಣಿಗೆಗೆ ಕಲ್ಲು ತೂರಲು ಪ್ರಚೋದನೆ ನೀಡಿದ ಆರೋಪವನ್ನು ಎದುರಿಸಿ ಬಂಧನದ ಭೀತಿ ಎದುರಿಸುತ್ತಿದ್ದ ಹಿಂದೂ ಸಂಘಟನೆಗಳ ಎಲ್ಲ ಐವರು ಮುಖಂಡರಿಗೆ ಮಂಗಳೂರಿನ 4ನೇ ಜಿಲ್ಲಾ ಹೆಚ್ಚುವರಿ ಮತ್ತು ಸೆಷನ್ಸ್‌ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಬಜರಂಗ ದಳದ ಪ್ರಾಂತ ಸಂಚಾಲಕ ಶರಣ್‌ ಪಂಪ್‌ವೆಲ್‌, ರಾಜ್ಯ ಗೋರಕ್ಷಾ ಪ್ರಮುಖ್‌ ಮುರಳಿಕೃಷ್ಣ ಹಸಂತಡ್ಕ, ಜಿಲ್ಲಾ ಸಹ ಸಂಚಾಲಕ ಪ್ರದೀಪ್‌ ಪಂಪ್‌ವೆಲ್‌, ಬಿಜೆಪಿ ಹಿಂದುಳಿದ ವರ್ಗ ಮೋರ್ಚಾದ ರಾಜ್ಯ ಕಾರ್ಯದರ್ಶಿ ಸತ್ಯಜಿತ್‌ ಸುರತ್ಕಲ್‌, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್‌ ಪೂಂಜಾ ಅವರ ಮೇಲೆ ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ 308 (ಕಲ್ಲು ತೂರಾಟಕ್ಕೆ ಪ್ರಚೋದನೆ) ಅನ್ವಯ ಪ್ರಕರಣ ದಾಖಲಿಸಲಾಗಿತ್ತು.

ಬಂಧನ ಭೀತಿಯಲ್ಲಿದ್ದ ಅವರು ತಾವು ಶವಯಾತ್ರೆಯನ್ನು ಶಾಂತ ರೀತಿಯಲ್ಲಿ  ಮುನ್ನಡೆಯಲು ಸಹಕರಿಸಿದ್ದು, ಯಾವುದೇ ಹಿಂಸೆಗೆ ಪ್ರಚೋದನೆ ನೀಡಿಲ್ಲ ಎಂದು ಹೇಳಿ ಈ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಜಾಮೀನು ಅರ್ಜಿಯ ವಿಚಾರಣೆಯನ್ನು ಬುಧವಾರ ಕೈಗೆತ್ತಿಕೊಂಡ ನ್ಯಾಯಾಲಯವು ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಈ ಐವರು ನಾಯಕರ ಪರವಾಗಿ ವಕೀಲ ಕೆ. ಶಂಭು ಶರ್ಮ ಅವರು ವಾದಿಸಿದ್ದರು.

ಷರತ್ತುಗಳು: ಇಬ್ಬರು ಜಾಮೀನು ನಿಲ್ಲಬೇಕಾಗಿದ್ದು, ಅವರಲ್ಲಿ ಒಬ್ಬರು ಕುಟುಂಬದ ಸದಸ್ಯರಾಗಿರಬೇಕು; ಬಂಟ್ವಾಳ ನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ  ಓಡಾಡುವಂತಿಲ್ಲ; ವಾರದಲ್ಲಿ ಎರಡು ದಿನ ಬಂಟ್ವಾಳ ನಗರ ಪೊಲೀಸ್‌ ಠಾಣೆಗೆ ತೆರಳಿ ಸಹಿ ಹಾಕಬೇಕು ಎಂಬ ಷರತ್ತುಗಳ ವಿಧಿಸಿ ಜಾಮೀನು ಮಂಜೂರು ಮಾಡಲಾಗಿದೆ.

ನಾಡದೋಣಿ ಮೀನುಗಾರಿಕೆ ತೆರಳಿದ ಯುವಕ ನೀರುಪಾಲು

ಮಲ್ಪೆ:
ನಾಡದೋಣಿ (ಕೈರಂಪಣಿ) ಮೀನುಗಾರಿಕೆಗೆ ತೆರಳಿದ ಯುವಕನೊರ್ವ ದೋಣಿ ಮಗುಚಿ ಬಿದ್ದ ಪರಿಣಾಮ ಸಾವನ್ನಪ್ಪಿರುವ ಘಟನೆ ಬುಧವಾರ ತೊಟ್ಟಂ ಪೊಟ್ಟಳಿವೆ ಸಮೀಪದಲ್ಲಿ ಸಂಭವಿಸಿದೆ.ತೊಟ್ಟಂ ಸಮೀಪದ ಪ್ರಕಾಶ್‌ (17) ಮೃತಪಟ್ಟವರು. ಅವರು ಬೆಳಗ್ಗೆ 6 ಗಂಟೆಗೆ ನಾಡದೋಣಿಯಲ್ಲಿ ಮೀನುಗಾರಿಕೆ ತೆರಳಿದ್ದರು. ದೋಣಿಯಲ್ಲಿ ಒಟ್ಟು 9 ಮಂದಿ ಮೀನುಗಾರರಿದ್ದರು. ಮೀನಿಗೆ ಬಲೆ ಹಾಕಿ ವಾಪಸು ಬರುವ ವೇಳೆ ಬೃಹತ್‌ ಗಾತ್ರದ ಸಮುದ್ರದಲೆಯೊಂದು ದೋಣಿಗೆ ಬಡಿದು ಪರಿಣಾಮ ದೋಣಿ ಮಗುಚಿ ಬಿದ್ದು ಎಲ್ಲರೂ ನೀರಿಗೆ ಬಿದ್ದರು. ದೋಣಿಯಲ್ಲಿದ್ದ ಇತರರು ಹೇಗೂ ಈಜಿ ದಡ ಸೇರಿದರೆ ಪ್ರಕಾಶ್‌ ನೀರಿನಲ್ಲಿ ಮುಳುಗಿ ಹೋಗಿದ್ದರು. ಅರ್ಧ ತಾಸಿನ ಬಳಿಕ ಮೃತದೇಹ ದೊರೆತಿದೆ. ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಂದಾಪುರ: ಕನ್ಯಾನದ ಬಾಲಕ ನಾಪತ್ತೆ

ಕುಂದಾಪುರ:
ಕನ್ಯಾನದ ನಮ್ಮಭೂಮಿ ಸಂಸ್ಥೆಯಲ್ಲಿದ್ದುಕೊಂಡು ಬಾಚಿನಕೊಡ್ಲು ನಳಂದಾ ವಿದ್ಯಾಪೀಠ ಶಾಲೆಗೆ ಹೋಗುತ್ತಿದ್ದ ಮೊಯೀಶ್‌ ಮಹ್ಮದ್‌ (11) ಸಂಜೆ ಶಾಲೆಯಿಂದ ಬಂದವನು ನಾಪತ್ತೆಯಾಗಿದ್ದಾನೆ ಎಂದು ಕುಂದಾಪುರ ಗ್ರಾಮಾಂತರ ಠಾಣೆಗೆ ದೂರು ನೀಡಲಾಗಿದೆ. ಉಡುಪಿಯ ನಿಟ್ಟೂರಿನ ಮಕ್ಕಳ ಕಲ್ಯಾಣ ಸಮಿತಿಯಿಂದ ಕನ್ಯಾನ ನಮ್ಮ ಭೂಮಿ ಸಂಸ್ಥೆಗೆ ದಾಖಲಾದ್ದ ಆತ ಶಾಲೆಗೆ ಹೋಗಿ ಸಂಜೆ ವಾಪಾಸ್ಸು ಬಂದವನು ಉಪಹಾರ ಸೇವಿಸಿ ಅನಂತರ ಕಾಣೆಯಾಗಿದ್ದಾನೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಕೊಂಡು ತನಿಖೆ ನಡೆಸುತ್ತಿದ್ದಾರೆ.  

ಮಂಗಳೂರಿನಿಂದ ಮುಂಬಯಿ ಪತಿ ಮನೆಗೆ ಹೊರಟ ಮಹಿಳೆ ನಾಪತ್ತೆ

ಮಂಗಳೂರು:
ಮುಂಬಯಿಯಲ್ಲಿರುವ ಗಂಡನ ಮನೆಗೆಂದು ಮಂಗಳೂರಿನ ಕಾರ್‌ಸ್ಟ್ರೀಟ್‌ನಿಂದ ಹೊರಟು ರೈಲಿನಲ್ಲಿ ಪ್ರಯಾಣಿಸಿದ ಮಹಿಳೆ ಶಾಂತೇರಿ (34) ಅವರು ಗಂಡನ ಮನೆಗೆ ತಲುಪದೆ ವಾಪಸ್‌ ಮನೆಗೂ ಬಾರದೆ ನಾಪತ್ತೆಯಾಗಿದ್ದಾರೆ. ಶಾಂತೇರಿ ಅವರ ವಿವಾಹ ಒಂದು ವರ್ಷದ ಹಿಂದೆ ಮುಂಬಯಿಯ ಮಂಗೇಶ್‌ ಆರ್‌. ಪೈ ಅವರ ಜತೆ ನೆರವೇರಿತ್ತು. ಮದುವೆಯ ಬಳಿಕ ಪತಿ – ಪತ್ನಿ ಆಗಿಂದಾಗ್ಗೆ ಮಂಗಳೂರಿಗೆ ಬಂದು ಹೋಗುತ್ತಿದ್ದರು.

ಕಳೆದ ಮೇ ತಿಂಗಳಲ್ಲಿ ಪತಿ-ಪತ್ನಿ  ಮಂಗಳೂರಿಗೆ ಬಂದಿದ್ದು, ಪತಿ ಮಂಗೇಶ್‌ ಆರ್‌. ಪೈ ಕೆಲವು ದಿನಗಳ ರಜೆಯ ಬಳಿಕ ಮುಂಬಯಿಗೆ ವಾಪಸಾಗಿದ್ದರು. ಶಾಂತೇರಿ ಅವರು ಇದೇ ಜು. 24ರಂದು ಸಂಜೆ 4 ಗಂಟೆಗೆ ಮಂಗಳೂರು ಜಂಕ್ಷನ್‌ ರೈಲು ನಿಲ್ದಾಣದಿಂದ ಮಂಗಳೂರು – ಮುಂಬಯಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಮುಂಬಯಿಗೆ ಪ್ರಯಾಣಿಸಿದ್ದರು. ಆದರೆ ಮರುದಿನ (ಜು. 25) ಬೆಳಗ್ಗೆ ಮುಂಬಯಿಗೆ ತಲುಪಿದ ರೈಲಿನಲ್ಲಿ ಶಾಂತೇರಿ ಅವರಿರಲಿಲ್ಲ.

ಈ ಬಗ್ಗೆ ಮಂಗೇಶ್‌ ಆರ್‌. ಪೈ ಮಂಗಳೂರಿನಲ್ಲಿರುವ ಶಾಂತೇರಿ ಅವರ ತಾಯಿ ಗೀತಾ ಪೈ ಅವರಿಗೆ ವಿಷಯ ತಿಳಿಸಿದ್ದರು. ಗೀತಾ ಪೈ ಅವರು ಈ ಬಗ್ಗೆ ಬಂದರು ಪೊಲೀಸ್‌ ಠಾಣೆಗೆ ತೆರಳಿ ನಾಪತ್ತೆ ದೂರು ದಾಖಲಿಸಿದ್ದಾರೆ. ಶಾಂತೇರಿ ಅವರು ಮುಂಬಯಿಗೆ ಹೋಗುವ ಅವಸರದಲ್ಲಿ ಮೊಬೈಲ್‌ ಫೋನನ್ನು ತಾಯಿಯ ಮನೆಯಲ್ಲಿ ಬಿಟ್ಟು ಹೋಗಿದ್ದು, ಇದರಿಂದಾಗಿ ಆಕೆಯ ಸಂಪರ್ಕ ಸಾಧ್ಯವಾಗುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಶಾಂತೇರಿ ಅವರು ಬಿಳಿ ಮೈಬಣ್ಣ, ಸಾಧಾರಣ ಶರೀರ, ಹಳದಿ ಬಣ್ಣದ ಸೀರೆ ಧರಿಸಿದ್ದು, ಕೊಂಕಣಿ, ಕನ್ನಡ, ಇಂಗ್ಲಿಷ್‌ ಭಾಷೆ ಮಾತನಾಡಬಲ್ಲವರಾಗಿದ್ದಾರೆ.

ನಕಲಿ ಚಿನ್ನ ಅಡವಿಟ್ಟು ವಂಚಿಸಿದ ಪ್ರಕರಣ: ಆರೋಪಿ ದಂಪತಿಗೆ ನ್ಯಾಯಾಂಗ ಬಂಧನ
ಮಂಗಳೂರು:
ನಗರದ ಪಳ್ನೀರ್‌ ಸಮೀಪ ಇರುವ ಕೆಥೋಲಿಕ್‌ ಸಿರಿಯನ್‌ ಬ್ಯಾಂಕ್‌ನಲ್ಲಿ ನಕಲಿ ಚಿನ್ನಾಭರಣಗಳನ್ನು ಅಡವಿಟ್ಟು 4.5 ಕೋಟಿ ರೂಪಾಯಿ ವಂಚನೆ ಎಸಗಿದ ಪ್ರಕರಣದ ಆರೋಪಿ ದಂಪತಿ ವಿದ್ಯಾನಂದ ರಾವ್‌ ಮತ್ತು ಆತನ ಪತ್ನಿ ಲಲಿತಾ ರಾವ್‌ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆರೋಪಿಗಳನ್ನು ಮಂಗಳವಾರ ರಾತ್ರಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಆರೋಪಿಗಳು ಚಿನ್ನದ ಅಂಗಡಿಯನ್ನು ಹೊಂದಿದ್ದು, ಕಳೆದ 5 ವರ್ಷಗಳ ಆವಧಿಯಲ್ಲಿ ನಕಲಿ ಚಿನ್ನವನ್ನು ಅಡವಿಟ್ಟು ವಂಚನೆ ಎಸಗಿದ್ದರು. ವಿದ್ಯಾನಂದ ರಾವ್‌ 38 ಬಾರಿ ಹಾಗೂ ಲಲಿತಾ ರಾವ್‌ 9 ಬಾರಿ ಚಿನ್ನವನ್ನು ಅಡವಿಟ್ಟಿದ್ದರು. ಕಂಚಿನ ಆಭರಣ ತಯಾರಿಸಿ ಅದಕ್ಕೆ ಚಿನ್ನದ ಲೇಪನ ಕೊಟ್ಟು ಅದನ್ನು ಅಸಲಿ ಚಿನ್ನ ಎಂದು ನಂಬಿಸಿ ಬ್ಯಾಂಕಿನಲ್ಲಿ ಇಟ್ಟು ಸಾಲ ಪಡೆಯುತ್ತಿದ್ದರು ಎಂದು ಆರೋಪಿಸಲಾಗಿದೆ.

ಬ್ಯಾಂಕಿನ ಚಿನ್ನ ಪರೀಕ್ಷಕ ಮಂಜುನಾಥ್‌ ಅವರ ಪಾತ್ರವೂ ಇದರಲ್ಲಿ ಇದೆಯೇ ಎನ್ನುವ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳಾದ ವಿದ್ಯಾನಂದ ರಾವ್‌ ಮತ್ತು ಲಲಿತಾ ರಾವ್‌ ಅವರಿಂದ ಇದುವರೆಗೆ 11 ಲಕ್ಷ ರೂ.ಗಳ ಚಿನ್ನಾಭರಣ ಮಾತ್ರ ಮರಳಿ ವಶಕ್ಕೆ ಪಡೆಯಲಾಗಿದೆ. 4.5 ಕೋಟಿ ರೂ.ಗಳಲ್ಲಿ  ಬಾಕಿ ಉಳಿದ ಮೊತ್ತವನ್ನು ಅವರು ಏನು ಮಾಡಿದರು ಎನ್ನುವುದು ಗೊತ್ತಾಗುತ್ತಿಲ್ಲ. ಸಂಬಂಧಿಕರ ಹೆಸರಲ್ಲಿ ಆಸ್ತಿ ಪಾಸ್ತಿ ಮಾಡಿ ಇರಿಸಿದ್ದಾರೆಯೇ ಎನ್ನುವ ಬಗ್ಗೆ ತಿಳಿದು ಬರಬೇಕಿದೆ ಎಂದು ಪೊಲೀಸರು ವಿವರಿಸಿದ್ದಾರೆ. ಒಬ್ಬ  ವ್ಯಕ್ತಿ ಪದೇ ಪದೇ ಬ್ಯಾಂಕಿಗೆ ಭೇಟಿ ನೀಡಿ 38 ಬಾರಿ ಚಿನ್ನವನ್ನು ಅಡವು ಇರಿಸುವಾಗ ಬ್ಯಾಂಕಿನ ಅಧಿಕಾರಿಗಳಿಗೂ ಸಂಶಯ ಬಾರದಿರುವುದೇಕೆ ಎಂಬ ಬಗೆಗೂ ತನಿಖೆ ನಡೆಯಲಿದೆ.

ಕೊಲ್ಲೂರಿನಲ್ಲಿ ವಾಮಾಚಾರಕ್ಕೆ ಪ್ರಯತ್ನ
ಕೊಲ್ಲೂರು:
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಕ್ಷೇತ್ರ ಪುರೋಹಿತ ಲಕ್ಷ್ಮೀನಾರಾಯಣ ಜೋಯಿಸ ಅವರ ಮನೆಯ ಆವರಣದ ವಠಾರದಲ್ಲಿ ಬುಧವಾರ ಬೆಳಗ್ಗೆ ಪ್ರಾಣಿಯೊಂದರ ತಲೆ ಹಾಗೂ ಕಡಿದ ಕುಂಬಳಕಾಯಿ, ಕುಂಕುಮ, ನಿಂಬೆಹಣ್ಣು ಇತ್ಯಾದಿಗಳನ್ನಿಟ್ಟು ವಾಮಾಚಾರಕ್ಕೆ ಪ್ರಯತ್ನಿಸಲಾಗಿದೆ. ಈ ಬಗ್ಗೆ ಮಾಹಿತಿ ಸಂಗ್ರಹಿಸಿದ ಕೊಲ್ಲೂರು ಪೊಲೀಸ್‌ ಠಾಣಾಧಿಕಾರಿ ಶೇಖರ್‌ ಅವರು ಸ್ಥಳ ಪರಿಶೀಲನೆ ನಡೆಸಿದರು. ಸಮೀಪ‌ದಲ್ಲಿ ಅಳವಡಿಸಲಾದ ಸಿಸಿ ಕೆಮರಾದಲ್ಲಿ ದಾಖಲಾಗಿರುವ ದೃಶ್ಯವನ್ನು ವೀಕ್ಷಿಸಿದಾಗ ವ್ಯಕ್ತಿಯೋರ್ವ ಈ ಕೃತ್ಯ ಎಸಗಿರುವುದು ಕಂಡುಬಂದಿದೆ. ಕೃತ್ಯ ಎಸಗಿದ ವ್ಯಕ್ತಿಯ ಸಂಪೂರ್ಣ ಚಹರೆಯನ್ನು ಕಲೆ ಹಾಕುತ್ತಿರುವ ಪೊಲೀಸರು ಆತನ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಮುಳ್ಳಿಕಟ್ಟೆ: ಅಕ್ರಮ ಸಾಗಾಟದ 18 ಕೋಣಗಳ ವಶ
ಕುಂದಾಪುರ:
ಮುಳ್ಳಿಕಟ್ಟೆ ಜಂಕ್ಷನ್‌ ಬಳಿ ಟೆಂಪೂ ಒಂದರಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ 18 ಕೋಣಗಳನ್ನು ಗಂಗೊಳ್ಳಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ನಾವುಂದದಿಂದ ಮಂಗಳೂರು ಕಡೆಗೆ ಈ ಜಾನುವಾರುಗಳನ್ನು ಸಾಗಾಟ ಮಾಡಲಾಗುತ್ತಿತ್ತು  ಎಂದು ತಿಳಿದು ಬಂದಿದೆ. ಮೂವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಗಂಗೊಳ್ಳಿ ಪೊಲೀಸ್‌ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಜೂಜು: ಐವರ ಬಂಧನ
ಮಂಗಳೂರು:
ಬಲ್ಮಠ ರಸ್ತೆಯ ಕ್ಲಬ್‌ ಒಂದಕ್ಕೆ ದಾಳಿ ನಡೆಸಿದ ಬಂದರು ಪೊಲೀಸರು ಐವರನ್ನು ಬಂಧಿಸಿದ್ದಾರೆ. ನಿತೇಶ್‌ (23) ಐ. ಮಹಮ್ಮದ್‌ (49), ಚಂದ್ರ ಶೆಟ್ಟಿ (43) ದಿವಾಕರ (53), ರಾಮ ಪೂಜಾರಿ (38) ಬಂಧಿತರು. ಆರೋಪಿಗಳಿಂದ 11,800 ರೂ. ಹಾಗೂ ಇಸ್ಪೀಟ್‌ ಎಲೆ ವಶಪಡಿಸಿಕೊಳ್ಳಲಾಗಿದೆ.

ವಿದ್ಯಾರ್ಥಿಗಳ ಅಪಹರಣ: ವದಂತಿ  ಆತಂಕ
ಬ್ರಹ್ಮಾವರ:
ಸ್ಥಳೀಯ ಖಾಸಗಿ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳಿಬ್ಬರನ್ನು ಅಪಹರಿಸಲಾಗಿದೆ ಎಂಬ ವದಂತಿ ಬುಧವಾರ ಪರಿಸರದಲ್ಲಿ ಆತಂಕ ಸೃಷ್ಟಿಸಿತು. ಹುಡುಕಾಡಿದಾಗ ಬಾಲಕರು ಬಾರ್ಕೂರು ರೈಲು ನಿಲ್ದಾಣದಲ್ಲಿ ಪತ್ತೆಯಾಗುವ ಮೂಲಕ ಅಪಹರಣ ವದಂತಿಗೆ ತೆರೆಬಿತ್ತು. ಕಲಿಯಲು ಆಸಕ್ತಿಯಿಲ್ಲದ ಅವರು ಶಾಲೆಯಿಂದ ತಿರುಗಾಟಕ್ಕೆ ತೆರಳಿದ್ದರು ಎನ್ನಲಾಗಿದೆ.

ಲಂಚ ಬೇಡಿಕೆ : ಆರೋಪಿಗಳಿಗೆ ಜಾಮೀನು ನಿರಾಕರಣೆ
ಮಂಗಳೂರು:
ಎಸಿಬಿ ಬಲೆಗೆ ಬಿದ್ದಿದ್ದ ಪುತ್ತೂರು ಕೋ ಅಪರೇಟಿವ್‌ ಸೊಸೈಟಿಯ ಸಹಾಯಕ ರಿಜಿಸ್ಟ್ರಾರ್‌ ಕೆ. ಮಂಜುನಾಥ್‌ ಮತ್ತು ಚಾಲಕ ರಾಧಾಕೃಷ್ಣ  ಅವರ ಜಾಮೀನು ಅರ್ಜಿಯನ್ನು ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌  ನ್ಯಾಯಾಲಯ ತಿರಸ್ಕರಿಸಿದೆ. ನೂತನ ಸಹಕಾರ ಸಂಘ ತೆರೆಯುವ ಬಗ್ಗೆ ಅನುಮತಿಗಾಗಿ ಲಂಚಕ್ಕೆ ಬೇಡಿಕೆಯೊಡ್ಡಿದ್ದ ಆರೋಪದ ಹಿನ್ನೆಲೆಯಲ್ಲಿ ಎಸಿಬಿ ಎಸ್‌ಪಿ ಶ್ರುತಿ ನೇತೃತ್ವದ ತಂಡ ದಾಳಿ ನಡೆಸಿ ಪ್ರಕರಣವನ್ನು ಪತ್ತೆ ಮಾಡಿ ಇಬ್ಬರನ್ನು ಬಂಧಿಸಿತ್ತು. ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ಮುರಳೀಧರ ಪೈ ಅವರು ಜಾಮೀನು ಅರ್ಜಿಯನ್ನು ತಿರಸ್ಕರಿಸಿದರು. ಎಸಿಬಿ ಪರವಾಗಿ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಮತ್ತು ವಕೀಲ ಕೆ.ಎಸ್‌.ಎನ್‌. ರಾಜೇಶ್‌ ವಾದಿಸಿದ್ದರು. ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.

ಗಾಯಾಳು ಸಾವು
ಕುಂದಾಪುರ:
ಅಂಪಾರು ಮೂಡುಬಗೆ ಶಾಲೆಯ ಬಳಿ ಜು.7ರಂದು ಸಂಭವಿಸಿದ್ದ ಟಿಪ್ಪರ್‌ ಹಾಗೂ ಬೈಕ್‌ ನಡುವೆ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಹ ಸವಾರ ರವಿ (35) ಅವರು ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಮೃತಪಟ್ಟಿದ್ದಾರೆ.
ಅಂದು ಸಂಭವಿಸಿದ ಅಪಘಾತದಲ್ಲಿ ಬೈಕ್‌ ಸವಾರ ಹಳ್ಳಿಹೊಳೆ ಶಾಡಬೇರು ಸಾರದ ಪಾಲು ನಿವಾಸಿ ಶಿವಕುಮಾರ್‌ ರಾವ್‌ (28) ಮೃತಪಟ್ಟಿದ್ದರು. ಅಂದು ಶಿವಕುಮಾರ್‌ ಹಾಗೂ ರವಿ ಬೈಕ್‌ನಲ್ಲಿ ಕುಂದಾಪುರದಿಂದ ಹಳ್ಳಿಹೊಳೆಯತ್ತ ಹೋಗುತಿದ್ದಾಗ ಬೈಲೂರು ಕಡೆಯಿಂದ ಬಂದ ಟಿಪ್ಪರ್‌ ಢಿಕ್ಕಿ ಹೊಡೆದಿತ್ತು. ತೀರ್ಥಹಳ್ಳಿ ತಾಲೂಕಿನ ಹಲ್‌ಕೂಡಿಗೆ ಕೊಕ್ಕಡದ ರವಿ ಅವರು  ಪತ್ನಿ, ಪುತ್ರ ಹಾಗೂ ಪುತ್ರಿಯನ್ನು  ಅಗಲಿದ್ದಾರೆ.

ಮನೆಗೆ ನುಗ್ಗಿ ತಂಡದಿಂದ ಹಲ್ಲೆ: ಮಹಿಳೆ ದೂರು
ಕುಂದಾಪುರ:
ಮೂಡುಗೋಪಾಡಿ ಬಳಿಯ ಮನೆಗೆ ಅಭಿಷೇಕ್‌, ಸಂಪತ್‌ ಹಾಗೂ ಇತರರು ಮಂಗಳವಾರ ರಾತ್ರಿ ಅಕ್ರಮವಾಗಿ ಪ್ರವೇಶ ಮಾಡಿ ರೇವತಿ ಹಾಗೂ ಪುತ್ರ ಸಚಿನ್‌ ಅವರಿಗೆ ರಾಡ್‌ನಿಂದ ಹಲ್ಲೆ ನಡೆಸಿದ್ದಲ್ಲದೇ ತಪ್ಪಿಸಲು ಬಂದ ಕುಂಭಾಶಿಯ ಪ್ರಸನ್ನ ದೇವಾಡಿಗ ಅವರಿಗೂ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ. ಕಿಟಕಿ ಗಾಜು ಹಾಗೂ ಮನೆಯ ಅಂಗಳದಲ್ಲಿದ್ದ ಆಮ್ನಿ ಕಾರನ್ನು ಜಖಂಗೊಳಿಸಿದ್ದಾರೆ ಎಂದು ರೇವತಿ ಕುಂದಾಪುರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ನೇಣು ಬಿಗಿದು ಯುವಕ ಆತ್ಮಹತ್ಯೆ
ಉಪ್ಪಿನಂಗಡಿ:
ನೇಣು ಬಿಗಿದು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಣಾಲು ಗ್ರಾಮದ ಅಂಬರ್ಜೆಯಲ್ಲಿ ಬುಧವಾರ ಸಂಭವಿಸಿದೆ. ಅಂಬರ್ಜೆ ನಿವಾಸಿ ಕೃಷ್ಣಪ್ಪ ಪೂಜಾರಿ ಪುತ್ರ ರಘುನಾಥ (36) ಆತ್ಮಹತ್ಯೆ ಮಾಡಿಕೊಂಡವರು. ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟಾಪ್ ನ್ಯೂಸ್

mamata

West Bengal bypolls; ಟಿಎಂಸಿ ಕ್ಲೀನ್ ಸ್ವೀಪ್: ಪ್ರತಿಭಟನೆಗಳು ಬಿಜೆಪಿಗೆ ಸಹಕಾರಿಯಾಗಲಿಲ್ಲ

satish

ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್‌ ಜಾರಕಿಹೊಳಿ

55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್‌ – ಮನರಂಜನೆಗೆ ಹೊಸ ಆಯಾಮ

55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್‌ – ಮನರಂಜನೆಗೆ ಹೊಸ ಆಯಾಮ

Maharashtra Polls: Who will be the next Chief Minister? Fadnavis gives a hint

Maharashtra Polls: ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ? ಸುಳಿವು ನೀಡಿದ ಫಡ್ನವೀಸ್‌

ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!

ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!

Dhanashree Verma: ಯಶ್‌ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್

Dhanashree Verma: ಯಶ್‌ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್

Re-Release: ಈ ವರ್ಷ ರೀ ರಿಲೀಸ್‌ ಆದ ಬಾಲಿವುಡ್‌ ಸಿನಿಮಾಗಳ ಬಾಕ್ಸ್‌ ಆಫೀಸ್‌ ಗಳಿಕೆ ಎಷ್ಟು?

Re-Release: ಈ ವರ್ಷ ರೀ ರಿಲೀಸ್‌ ಆದ ಬಾಲಿವುಡ್‌ ಸಿನಿಮಾಗಳ ಬಾಕ್ಸ್‌ ಆಫೀಸ್‌ ಗಳಿಕೆ ಎಷ್ಟು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrest

Ullala: ತ್ರಿವಳಿ ತಲಾಖ್‌ ಪ್ರಕರಣ: ಆರೋಪಿಯ ಸೆರೆ

Ullala-Balepuni

Ullala: 3ರ ಬಾಲಕಿಗೆ 70ರ ವೃದ್ಧನಿಂದ ಲೈಂಗಿಕ ಕಿರುಕುಳ

Kishor-Kodgi-Campco

Mangaluru: ಅಡಿಕೆ ಕ್ಯಾನ್ಸರ್‌ ಕಾರಕ ಎಂಬ ಡಬ್ಲ್ಯುಎಚ್‌ಒ ವಾದಕ್ಕೆ ಕ್ಯಾಂಪ್ಕೊ ಆಕ್ಷೇಪ

Suside-Boy

Mudubidre: ಅಂತಿಮ ಬಿಬಿಎಂ ವಿದ್ಯಾರ್ಥಿ ಆತ್ಮಹತ್ಯೆ

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

mamata

West Bengal bypolls; ಟಿಎಂಸಿ ಕ್ಲೀನ್ ಸ್ವೀಪ್: ಪ್ರತಿಭಟನೆಗಳು ಬಿಜೆಪಿಗೆ ಸಹಕಾರಿಯಾಗಲಿಲ್ಲ

satish

ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್‌ ಜಾರಕಿಹೊಳಿ

55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್‌ – ಮನರಂಜನೆಗೆ ಹೊಸ ಆಯಾಮ

55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್‌ – ಮನರಂಜನೆಗೆ ಹೊಸ ಆಯಾಮ

ಮುಂಡಗೋಡ: ಮಂಗನಬಾವು ಉಲ್ಬ‌ಣ-ಮೂರು ದಿನ ಶಾಲೆಗೆ ರಜೆ

ಮುಂಡಗೋಡ: ಮಂಗನಬಾವು ಉಲ್ಬ‌ಣ-ಮೂರು ದಿನ ಶಾಲೆಗೆ ರಜೆ

Maharashtra Polls: Who will be the next Chief Minister? Fadnavis gives a hint

Maharashtra Polls: ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ? ಸುಳಿವು ನೀಡಿದ ಫಡ್ನವೀಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.