ವಾರ್ಡ್‌ನ ಅಭಿವೃದ್ಧಿಯ ವೇಗಕ್ಕೆ ಸ್ಥಳೀಯ ಸಮಸ್ಯೆಗಳ ತೊಡಕು!


Team Udayavani, Oct 15, 2019, 5:40 AM IST

l-35

ಮಹಾನಗರ: ಕದ್ರಿ ದಕ್ಷಿಣ ವಾರ್ಡ್‌ ಹಚ್ಚಹಸಿರು ಪ್ರಾಕೃತಿಕ ಸೊಬಗು, ಧಾರ್ಮಿಕ ಮತ್ತು ಐತಿಹಾಸಿಕ ಕೇಂದ್ರಗಳ ಹಿನ್ನೆಲೆಯೊಂದಿಗೆ ಮಹತ್ವವನ್ನು ಪಡೆದುಕೊಂಡಿರುವ ವಾರ್ಡ್‌. ಪುರಾಣ ಪ್ರಸಿದ್ಧ ಕದ್ರಿ ಶ್ರೀ ಮಂಜುನಾಥ ದೇವಾಲಯ, ಕದ್ರಿ ಯೋಗೇಶ್ವರ (ಜೋಗಿ) ಮಠ ಕದ್ರಿ ದಕ್ಷಿಣ ವಾರ್ಡ್‌ನಲ್ಲಿದ್ದು ವರ್ಷದ ಎಲ್ಲ ಕಾಲದಲ್ಲೂ ಯಾತ್ರಿಕರು, ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಜತೆಗೆ ಮಂಗಳೂರಿನ ಪಾಲಿಗೆ ನೀರಿನ ಕೊರತೆ ತಲೆದೋರಿದಾಗ ಅಪದಾºಂಧವನಾಗಿ ನೆರವಿಗೆ ಬರುವುದು ಈ ವಾರ್ಡ್‌. ಇಲ್ಲಿನ ಕದ್ರಿಕಂಬಳ ಪರಿಸರದಲ್ಲಿ ಯಥೇತ್ಛವಾಗಿರುವ ಜಲನಿಧಿಯಿಂದ ನಗರಕ್ಕೆ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಮೂರು ಆಕರ್ಷಕ ವೃತ್ತಗಳು, ಒಂದು ಸುಸಜಿcತ ಬಯಲು ರಂಗಮಂದಿರವನ್ನು ಹೊಂದಿರುವ ಈ ವಾರ್ಡ್‌ ನಲ್ಲಿ ಅತೀ ಹೆಚ್ಚು ವಸತಿ ಸಮುಚ್ಚ ಯಗಳಿವೆ. ಕೈಬಟ್ಟಲು ಪ್ರದೇಶ ಡಾಕ್ಟರ್ ಕಾಲನಿ ಎಂದೇ ಗುರುತಿ ಸಿಕೊಂಡಿದೆ. ಕರಂಗಲ್ಪಾಡಿ ಮಾರುಕಟ್ಟೆ ಇದರ ವ್ಯಾಪ್ತಿಗೆ ಬರುತ್ತದೆ. ಸಿಟಿ ಆಸ್ಪತ್ರೆ, ತೇಜಸ್ವಿನಿ ಆಸ್ಪತ್ರೆ, ವಿಜಯಾ ಕ್ಲಿನಿಕ್‌ ಆಸ್ಪತ್ರೆ, ಕೃಷ್ಣಾ ನರ್ಸಿಂಗ್‌ಹೋಂ ಸಹಿತ ನಾಲ್ಕು ಪ್ರಮುಖ ಆಸ್ಪತ್ರೆಗಳು ಈ ವಾರ್ಡ್‌ನಲ್ಲಿವೆ.

ಸುವ್ಯವಸ್ಥಿತವಾಗಿ ಅಭಿವೃದ್ಧಿಗತಿಯಲ್ಲಿ ಸಾಗಿರುವ ಈ ವಾರ್ಡ್‌ನ ಬಹುತೇಕ ರಸ್ತೆಗಳು ಕಾಂಕ್ರೀಟಿಕರಣಗೊಂಡಿವೆೆ. ಆದರೆ ಅಭಿವೃದ್ಧಿಯ ವೇಗಕ್ಕೆ ಸ್ಥಳೀಯವಾಗಿ ಇರುವ ಕೆಲವು ತಾಂತ್ರಿಕ ಹಾಗೂ ಕಾನೂನು ತೊಡಕುಗಳು ಅಡ್ಡಿಯಾಗಿವೆ. ಮಂಗಳೂರು ಮಹಾನಗರ ಪಾಲಿಕೆಯ ಇತರ ವಾರ್ಡ್‌ ಗಳಂತೆ ಇಲ್ಲೂ ಒಳಚರಂಡಿ ಸಮಸ್ಯೆ ಕಾಡುತ್ತಿದೆ. ಕೆಲವು ಪ್ರದೇಶಗಳಲ್ಲಿ ಒಳಚರಂಡಿ ಪುನರ್‌ ನಿರ್ಮಾಣ ಕಾಮಗಾರಿ ಮಾಡಲಾಗಿದೆ. ಕೆಲವು ಕಾಮಗಾರಿಗಳನ್ನು ಎಡಿಬಿ ಎರಡನೇ ಹಂತದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ.

ಪ್ರಮುಖ ಸಮಸ್ಯೆ
ಒಳಚರಂಡಿ ವ್ಯವಸ್ಥೆಯು ಇಲ್ಲಿನ ಪ್ರಮುಖ ಸಮಸ್ಯೆ. ಒಳಚರಂಡಿ ವ್ಯವಸ್ಥೆಯನ್ನು ಪುನರ್‌ನಿರ್ಮಾಣಗೊಳಿಸುವ ಕಾರ್ಯ ನಡೆಯುತ್ತಿದೆಯಾದರೂ ಸಮಸ್ಯೆಗೆ ಪೂರ್ಣ ಪರಿಹಾರ ಸಿಕ್ಕಿಲ್ಲ. ಇನ್ನು ಕೆಲವು ಕಡೆಗಳಲ್ಲಿ ಒಳಚರಂಡಿಗೆ ಮಳೆನೀರು ಬಿಡುವುದರಿಂದ ಮಳೆಗಾಲದಲ್ಲಿ ಮ್ಯಾನ್‌ಹೋಲ್‌ಗ‌ಳು ಉಕ್ಕಿ ರಸ್ತೆಗಳಲ್ಲೆ ಹರಿಯುವುದರಿಂದ ಸಮಸ್ಯೆಗಳು ಸೃಷ್ಟಿಯಾಗಿ ಕೆಲವು ಪ್ರದೇಶಗಳಲ್ಲಿ ಈ ಹಿಂದೆ ಒಳಚರಂಡಿ ಪೈಪ್‌ಗ್ಳು ಖಾಸಗಿ ಜಾಗದಲ್ಲಿ ಹಾದುಹೋಗಿದ್ದು ಇದು ಇದೀಗ ಸಮಸ್ಯೆ ಸೃಷ್ಟಿಸಿದೆ ಹಿಂದೂರುದ್ರಭೂಮಿ ಸಮೀಪ ಮಳೆಗೆ ಗುಡ್ಡ ಕುಸಿತವಾಗಿದ್ದು ತಡೆಗೋಡೆ ನಿರ್ಮಾಣಕ್ಕೆ 15 ಲಕ್ಷ ರೂ. ಅನುದಾನ ಮಂಜೂರು ಆಗಿದ್ದರೂ ಕೆಆರ್‌ಡಿಸಿಎಲ್‌ನಿಂದ ಕಾಮಗಾರಿ ಆರಂಭಗೊಂಡಿಲ್ಲ. ವಾರ್ಡ್‌ನ ಹೆಚ್ಚಿನ ರಸ್ತೆಗಳು ಕಾಂಕ್ರೀಟೀ ಕರಣಗೊಂಡು ಅಭಿವೃದ್ಧಿ ಯಾಗಿದೆ.

ಈ ವಾರ್ಡ್‌ ಹೆಚ್ಚು ವಸತಿ ಸಮುಚ್ಚಯಗಳನ್ನು ಹೊಂದಿದೆ. ಅದಕ್ಕನು ಗುಣವಾಗಿ ಒಳಚರಂಡಿ ವ್ಯವಸ್ಥೆ ಪೂರ್ಣ ಪ್ರಮಾಣದಲ್ಲಿ ಉನ್ನತೀಕರಣ ಆಗಿಲ್ಲ. ಮಳೆಯ ನೀರು ಒಳಚರಂಡಿಗೆ ಬಿಡುವುದರಿಂದ ಮಳೆಗಾಲದಲ್ಲಿ ಒಳಚರಂಡಿ ನೀರು ಉಕ್ಕೇರಿ ರಸ್ತೆಯಲ್ಲಿ ಹರಿದು ಸಾರ್ವಜನಿಕರಿಗೆ ಸಮಸ್ಯೆ ಸೃಷ್ಠಿಸುತ್ತಿದೆ. ಎಂದು ಸ್ಥಳೀಯರೋರ್ವರು ಹೇಳುತ್ತಾರೆ.

ಪ್ರಮುಖ ಕಾಮಗಾರಿ
-ಕದ್ರಿ ಮೈದಾನಿನಲ್ಲಿ ಸುಸಜ್ಜಿತ ಬಯಲು ರಂಗಮಂದಿರ ಹಾಗೂ ಸುಸಜ್ಜಿತ ಶೌಚಾಲಯ
– ಕದ್ರಿ ದೇವಸ್ಥಾನ ರಸ್ತೆ ಕಾಂಕ್ರಿಟೀಕರಣ, ಭೂಗತ ಕೇಬಲ್‌ ಹಾಗೂ ಪಾರಂಪರಿಕ ವಿನ್ಯಾಸಗಳ ಬೀದಿದೀಪ ಅಳವಡಿಕೆ
– ಕದ್ರಿ ಕೈಬಟ್ಟಲು ಒಳಚರಂಡಿ ಪುನರ್‌ನಿರ್ಮಾಣ, ರಸ್ತೆಗಳ ಕಾಂಕ್ರಿಟೀಕರಣ
– ಹಿಂದೂ ರುದ್ರಭೂಮಿ ಪುನರ್‌ನಿರ್ಮಾಣ
-ಸಾರ್ವಜನಿಕ ಸಹಭಾಗಿತ್ವದೊಂದಿಗೆ ಸಿಟಿಆಸ್ಪತ್ರೆ ವೃತ್ತ, ಮಲ್ಲಿಕಟ್ಟೆ ವೃತ್ತ ಹಾಗೂ ಕದ್ರಿ ದೇವಸ್ಥಾನ ರಸ್ತೆಯಲ್ಲಿ ಆಕರ್ಷಕ ವಿನ್ಯಾಸಗಳ ಸರ್ಕಲ್‌ಗ‌ಳ ನಿರ್ಮಾಣ
-ಒಳರಸ್ತೆಗಳ ವ್ಯವಸ್ಥಿತ ಕಾಂಕ್ರಿಟೀಕರಣ

ಕದ್ರಿ ದಕ್ಷಿಣ ವಾರ್ಡ್‌
ಭೌಗೋಳಿಕ ವ್ಯಾಪ್ತಿ: ಕೃಷ್ಣ ನರ್ಸಿಂಗ್‌ಹೋಂ ಪ್ರದೇಶ, ಕರಂಗಲ್ಪಾಡಿ ಮಾರುಕಟ್ಟೆ ಎಡಭಾಗ, ಬಂಟ್‌ಹಾಸ್ಟೆಲ್‌, ಸಿ.ವಿ.ನಾಯಕ್‌ ಹಾಲ್‌, ಮಲ್ಲಿಕಟ್ಟೆ, ಕದ್ರಿ ದೇವಸ್ಥಾನ, ಯೋಗೇಶ್ವರ ಮಠ (ಜೋಗಿ), ನಂತೂರು, ಜಂಕ್ಷನ್‌, ಕದ್ರಿ ಕೈಬಟ್ಟಲು. ಕರಾವಳಿ ಲೇನ್‌, ಪಿಂಟೋಸ್‌ ಲೇನ್‌, ಕದ್ರಿಕಂಬ ಮುಂತಾದ ಪ್ರದೇಶಗಳನ್ನು ಒಳಗೊಂಡಿದೆ.
ಪಾಲಿಕೆ ಅನುದಾನ: 7 ಕೋಟಿ ರೂ.

ಒಟ್ಟು ಮತದಾರರು 4950
ನಿಕಟಪೂರ್ವ ಕಾರ್ಪೊರೇಟರ್‌-ಅಶೋಕ್‌ ಡಿ.ಕೆ. (ಕಾಂಗ್ರೆಸ್‌)

5 ವರ್ಷಗಳ‌ಲ್ಲಿ ಬಂದ ಅನುದಾನ
2014  15 : 1.74 ಕೋಟಿರೂ.
2015  16 : 57.89 ಲಕ್ಷ ರೂ.
2016 17 : 2.03 ಕೋಟಿ ರೂ.
2017 18 : 1.31 ಕೋಟಿ ರೂ.
2018 19 : 1.76 ಕೋಟಿ ರೂ.

ಮೂಲ ಸೌಕರ್ಯ ಅಭಿವೃದ್ಧಿಗೆ ಒತ್ತು
ಕದ್ರಿ ದಕ್ಷಿಣ ವಾರ್ಡ್‌ನಲ್ಲಿ ಅತೀ ಹೆಚ್ಚು ವಸತಿ ಸಮುಚ್ಚಯಗಳಿವೆ. ಧಾರ್ಮಿಕವಾಗಿಯೂ ಪ್ರಾಮುಖ್ಯತೆ ಇದೆ. ಕ್ಷೇತ್ರದಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿ ಅನುಷ್ಠಾನಗೊಳಿಸುವ ಕಾರ್ಯ ಮಾಡಿದ್ದೇನೆ.ಇಲ್ಲಿನ ಬಹುತೇಕ ರಸ್ತೆಗಳನ್ನು ಕಾಂಕ್ರೀಟೀಕರಣ ಮಾಡಲಾಗಿದೆ. ಕೆಲವು ಕಡೆ ತಾಂತ್ರಿಕ ಹಾಗೂ ಕಾನೂನು ತೊಡಕುಗಳಿಂದ ಬಾಕಿ ಉಳಿದಿದೆ. ಕ್ಷೇತ್ರದಲ್ಲಿನ ಹಳೆಯ ಒಳಚರಂಡಿ ವ್ಯವಸ್ಥೆ ಯನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಈಗಾಗಲೇ ಶೇ.80 ರಷ್ಟು ಕಾರ್ಯಆಗಿದೆ.
-ಅಶೋಕ್‌ ಡಿ.ಕೆ.ನಿಕಟಪೂರ್ವ ಕಾರ್ಪೊರೇಟರ್‌

- ಕೇಶವ ಕುಂದರ್‌

ಟಾಪ್ ನ್ಯೂಸ್

Honey Trap; ಗುತ್ತಿಗೆದಾರನನ್ನು ಟೀಗೆ ಕರೆದು ಖೆಡ್ಡಾಕ್ಕೆ ಕೆಡವಿದಳು!

Honey Trap; ಗುತ್ತಿಗೆದಾರನನ್ನು ಟೀಗೆ ಕರೆದು ಖೆಡ್ಡಾಕ್ಕೆ ಕೆಡವಿದಳು!

3-kunigal

Kunigal: ಮರಕ್ಕೆ ಕಾರು ಡಿಕ್ಕಿಯಾಗಿ ಪಲ್ಟಿ: ಬೆಸ್ಕಾಂ ನೌಕರರ ಸ್ಥಳದಲ್ಲೇ‌ ಸಾವು

Central government approves land for Manmohan Singh memorial

Memorial: ಮನಮೋಹನ್‌ ಸಿಂಗ್‌ ಸ್ಮಾರಕಕ್ಕೆ ಜಾಗ ನೀಡಲು ಕೇಂದ್ರ ಸರ್ಕಾರದ ಒಪ್ಪಿಗೆ

2-kunigal

Kunigal: ನಾಮಫಲಕಕ್ಕೆ ಬಸ್ ಡಿಕ್ಕಿ, ಪಲ್ಟಿ; ಮಂಗಳೂರು ಮೂಲದ ಚಾಲಕ ಸಾವು; 8 ಮಂದಿಗೆ ಗಾಯ

1-horoscope

Daily Horoscope: ದೀರ್ಘ‌ಕಾಲದ ಸಮಸ್ಯೆಗಳಿಂದ ಬಿಡುಗಡೆ, ಅಪರಿಚಿತರೊಡನೆ ವಾದ ಬೇಡ

Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!

Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!

1-NASA

NASA ಹನುಮ ಸಾಹಸ: ಸೂರ್ಯನ ಬಳಿ ಸುಳಿದು ಸುಡದೆ ಪಾರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11

Surathkal: ಸಿಲಿಂಡರ್‌ ಸ್ಫೋ*ಟ ಪ್ರಕರಣ; ಮತ್ತೋರ್ವ ಮಹಿಳೆಯ ಸಾವು

Mangaluru: ವಿರೋಧ ಹಿನ್ನೆಲೆ: ಸಜಂಕಾ ಡಿಜೆ ಪಾರ್ಟಿ ರದ್ದು

Mangaluru: ವಿರೋಧ ಹಿನ್ನೆಲೆ: ಸಜಂಕಾ ಡಿಜೆ ಪಾರ್ಟಿ ರದ್ದು

6

Gurupura: 300 ಕೆ.ಜಿ. ಗೋಮಾಂಸ ಸಾಗಾಟ; ಇಬ್ಬರ ಸೆರೆ

1-kkk

ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಇನ್ನು ಕರಾವಳಿ ಪ್ರದೇಶಾಭಿವೃದ್ಧಿ ಮಂಡಳಿಯಾಗಿ ಕಾರ್ಯನಿರ್ವಹಣೆ

1-spo

Mangaluru; ಶೀಘ್ರವೇ ರಾತ್ರಿಯೂ ಪ್ರವಾಸಿಗರಿಗೆ ಬೀಚ್‌ಗೆ ಪ್ರವೇಶ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Honey Trap; ಗುತ್ತಿಗೆದಾರನನ್ನು ಟೀಗೆ ಕರೆದು ಖೆಡ್ಡಾಕ್ಕೆ ಕೆಡವಿದಳು!

Honey Trap; ಗುತ್ತಿಗೆದಾರನನ್ನು ಟೀಗೆ ಕರೆದು ಖೆಡ್ಡಾಕ್ಕೆ ಕೆಡವಿದಳು!

3-kunigal

Kunigal: ಮರಕ್ಕೆ ಕಾರು ಡಿಕ್ಕಿಯಾಗಿ ಪಲ್ಟಿ: ಬೆಸ್ಕಾಂ ನೌಕರರ ಸ್ಥಳದಲ್ಲೇ‌ ಸಾವು

Central government approves land for Manmohan Singh memorial

Memorial: ಮನಮೋಹನ್‌ ಸಿಂಗ್‌ ಸ್ಮಾರಕಕ್ಕೆ ಜಾಗ ನೀಡಲು ಕೇಂದ್ರ ಸರ್ಕಾರದ ಒಪ್ಪಿಗೆ

2-kunigal

Kunigal: ನಾಮಫಲಕಕ್ಕೆ ಬಸ್ ಡಿಕ್ಕಿ, ಪಲ್ಟಿ; ಮಂಗಳೂರು ಮೂಲದ ಚಾಲಕ ಸಾವು; 8 ಮಂದಿಗೆ ಗಾಯ

courts

Kasaragod: ಯೂತ್‌ ಕಾಂಗ್ರೆಸ್‌ ಕಾರ್ಯಕರ್ತರಿಬ್ಬರ ಕೊ*ಲೆ; ಇಂದು ತೀರ್ಪು; ಭಾರೀ ಬಂದೋಬಸ್ತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.