ಕುಂದಾಪುರ ತಾಲೂಕು ಗಾವಳಿ : ಡುಬ್ಬದ ಗೂಳಿಯ (ನಂದಿ) ಚಿತ್ರ ಪತ್ತೆ
Team Udayavani, Oct 3, 2018, 1:30 AM IST
ಕಾಪು: ಕುಂದಾಪುರ ತಾಲೂಕಿನ ಹಳ್ಳಾಡಿ – ಹರ್ಕಾಡಿ ಗ್ರಾಮ ಪಂಚಾಯತ್‌ಗೆ ಒಳಪಟ್ಟ ಗಾವಳಿಯ ಅರಿಕಲ್ ನೆಲೆಯ ಬಂಡೆಗಳಲ್ಲಿ ಮರು ಅಧ್ಯಯನ ನಡೆಸಿದ ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿದ್ಯಾರ್ಥಿಗಳಾದ ಸುಭಾಸ್ ನಾಯಕ್ ಬಂಟಕಲ್ಲು ಮತ್ತು ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಬಂಡೆಯ ಪೂರ್ವ ದಿಕ್ಕಿಗೆ ಮುಖ ಮಾಡಿಕೊಂಡಿರುವ ಸಣ್ಣ ಗಾತ್ರದ ಡುಬ್ಬದ ಗೂಳಿಯ (ನಂದಿ) ಚಿತ್ರವನ್ನು ಗುರುತಿಸಿದ್ದಾರೆ.
ಪೂರ್ವಕ್ಕೆ ಮುಖಮಾಡಿ ನಿಂತಿರುವ ಈ ನಂದಿಯು 28 ಇಂಚು ಉದ್ದ ಹಾಗೂ 22 ಇಂಚು ಎತ್ತರದ ಹಾಗೂ 1 ಸೆಂ.ಮೀ. ದಪ್ಪದಲ್ಲಿ ಕೊರೆಯಲಾಗಿದೆ. ನಂದಿಯು ಎತ್ತರದ ಡುಬ್ಬ, ಉದ್ದನೆಯ ಅಂಡಾಕಾರದ ಕೊಂಬುಗಳನ್ನು ಹೊಂದಿದ್ದು ಸವೆದ ಕಾರಣ ಅಸ್ಪಷ್ಟವಾಗಿದೆ. ನಂದಿಯ ಹಿಂಬದಿಯ ಕಾಲುಗಳನ್ನು ಉದ್ದವಾಗಿ ಚಿತ್ರಿಸಲಾಗಿದೆ. ಈ ನೆಲೆಯಲ್ಲಿ ಇದುವರೆಗೆ ದೊರೆತ ಬಂಡೆ ಚಿತ್ರಗಳು 2 ಮತ್ತು 3 ಸೆಂ. ಮೀ. ದಪ್ಪವಾಗಿ ಕೊರೆಯಲ್ಪಟ್ಟಿದ್ದು, ಈ ಚಿತ್ರವು ಇತರ ಬಂಡೆ ಚಿತ್ರಗಳಿಗಿಂತ ಪ್ರಾಚೀನವಾಗಿರುವ ಸಾಧ್ಯತೆಯೇ ಹೆಚ್ಚು ಎಂದು ಹೇಳಲಾಗಿದೆ.
ಹಿಂದೆಯೂ ನಡೆದಿತ್ತು ಸಂಶೋಧನೆ
ಗಾವಳಿಯ ಅರಿಕಲ್ ನೆಲೆಯ ಬಂಡೆಗಳಲ್ಲಿ ಚಿತ್ರಗಳ ಕುರಿತಂತೆ ಮೊದಲಿಗೆ ಡಾ| ಬಿ. ವಸಂತ ಶೆಟ್ಟಿ ಹಾಗೂ ಡಾ| ಜಗದೀಶ್ ಶೆಟ್ಟಿ ಅವರು 1983ರಲ್ಲಿ ಸಂಶೋಧಿಸಿ ದಾಖಲಿಸಿದರು. ನಂತರದಲ್ಲಿ ಅ. ಸುಂದರ, ಟಿ. ಮುರುಗೇಶಿ, ಪ್ರೊ| ಎಸ್.ಎ. ಕೃಷ್ಣಯ್ಯ, ಅವರು ಅಧ್ಯಯನ ನಡೆಸಿದ್ದಾರೆ. ಇಲ್ಲಿನ ಬಂಡೆಗಳ ಮೇಲೆ ನಂದಿ, ನಂದಿ ಮಂಡಲ, ಗುಳಿಗಳು, ಚೆನ್ನಮಣೆ, ಇತರ ಜ್ಯಾಮೀತಿಯ ಬಂಡೆ ಚಿತ್ರಗಳು, ಶಿರಚ್ಛೇಧಗೊಂಡಿರುವ ಮಾನವ, ಕೂಡಿಸು ರೀತಿಯ ಚಿತ್ರ ಹಾಗೂ ಇತರ ಅಸ್ಪಷ್ಟ ಚಿತ್ರಗಳನ್ನು ಕಾಣಬಹುದಾಗಿದೆ.
ಆರಂಭದಲ್ಲಿ ಈ ನಿವೇಶನವನ್ನು ಬೃಹತ್ ಶಿಲಾಯುಗದ ನೆಲೆಯೆಂದು ಗುರುತಿಸಲಾಗಿದ್ದರೂ, 2010ರಲ್ಲಿ ಪ್ರೊ| ಟಿ. ಮುರುಗೇಶಿ ಮತ್ತು ತಂಡ ಹೊಸ ಬಂಡೆ ಚಿತ್ರಗಳ ಆವಿಷ್ಕಾರದೊಂದಿಗೆ, ನೂತನ ಶಿಲಾಯುಗದ ಡಾಲರೈಟ್ ಶಿಲೆಯಿಂದ ತಯಾರಿಸಿದಂತಹ ಕಲ್ಲಿನ ಕೊಡಲಿ, ಸುತ್ತಿಗೆ, ಮಧ್ಯದಲ್ಲಿ ತೂತಿರುವ ದುಂಡನೆಯ ಕಲ್ಲಿನ ರಿಂಗುಗಳನ್ನು ಸಂಶೋಧಿಸಿದರು. ಹಾಗೆಯೇ ಇದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಳೆ ಶಿಲಾಯುಗದಿಂದ ಆರಂಭಗೊಂಡ ಸಂಸ್ಕೃತಿಯ ಅವಶೇಷಗಳಿಂದ ಹಿಡಿದು ಬೃಹತ್ ಶಿಲಾಯುಗದ ಕಂಡಿಕೋಣೆ ಗೋರಿಗಳು (ಕರ್ಕುಂಜೆ ಪ್ರದೇಶದಲ್ಲಿ ಡಾ| ಬಿ. ವಸಂತ ಶೆಟ್ಟಿ ಹಾಗೂ ಡಾ| ಜಗದೀಶ್ ಶೆಟ್ಟಿಯವರ ಶೋಧನೆ) ಹಾಗೆಯೇ ಪ್ರಾಚ್ಯಾವಶೇಷಗಳು ದೊರೆತಿವೆ. ಈ ನೆಲೆಯ ಮರು ಅಧ್ಯಯನಕ್ಕೆ ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲ ಡಾ| ಜಗದೀಶ್ ಶೆಟ್ಟಿ ಹಾಗೂ ಉಡುಪಿ ಸೈಂಟ್ ಮೇರಿಸ್ ಕನ್ನಡ ಶಾಲೆಯ ಉಡುಪಿ ಇಲ್ಲಿನ ನಿವೃತ್ತ ಶಿಕ್ಷಕ ಶ್ರೀಧರ್ ಭಟ್ ಸಹಕಾರ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fraud Case: ವೈದ್ಯಕೀಯ ಸೀಟ್ ಕೊಡಿಸುವುದಾಗಿ ನಂಬಿಸಿ ವಂಚನೆ
Manipal: ಡಂಪಿಂಗ್ ಯಾರ್ಡ್ ಆದ ಮಣ್ಣಪಳ್ಳ!
Udupi: ಒಂದೇ ವೃತ್ತ; ಪೊಲೀಸ್ ಚೌಕಿ 5!; ಕಲ್ಸಂಕ ಜಂಕ್ಷನ್‌ನಲ್ಲಿ ಮುಗಿಯದ ಸಂಚಾರ ಸಮಸ್ಯೆ
Karkala: ಶಿರ್ಲಾಲು ಪರಿಸರದಲ್ಲಿ ಒಂದೇ ಟವರ್; ಮಾತನಾಡಲು ಮುಖ್ಯ ರಸ್ತೆಗೇ ಬರಬೇಕು!
Trasi: ಸಾಂಪ್ರದಾಯಿಕ ಮೀನುಗಾರರಿಂದ ಬೃಹತ್ ಪ್ರತಿಭಟನೆ; ಗಂಟಿಹೊಳೆ, ಗೋಪಾಲ ಪೂಜಾರಿ ಭಾಗಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.