‘ಕಷ್ಟದ ಪರಿಕಲ್ಪನೆಯೇ ಬದಲಾವಣೆ’
Team Udayavani, Jul 28, 2017, 7:35 AM IST
ಬೆಳ್ತಂಗಡಿ: ಬೇಗೆ ಎಂಬುದು ಹಿಂದಿನ ಕಾಲದಲ್ಲಿ ಕಷ್ಟ ಎನ್ನುವ ಹೆಸರಿಗೆ ಅನ್ವರ್ಥವಾಗಿ ಬಳಕೆಯಲ್ಲಿತ್ತು. ಆದರೆ ಈ ಪದವನ್ನು ಆಷಾಢ ತಿಂಗಳಲ್ಲಿ ವಿಶೇಷವಾಗಿ ನಮ್ಮ ತುಳುನಾಡಿನಲ್ಲಿ ಬಳಸುತ್ತಿದ್ದಾರೆ. ಆದರೆ ಇಂದು ಆ ಕಷ್ಟದ ಪರಿಕಲ್ಪನೆಯೇ ಬದಲಾವಣೆಯಾಗಿದೆ. ಆಟಿಡೊಂಜಿ ಕೂಟ, ಆಟಿದ ಗಮ್ಮತ್ತ್, ಆಟಿದ ಲೇಸ್, ಆಟಿದ ಆಯನ ಮುಂತಾದ ಹೆಸರಿನಲ್ಲಿ ವಿಜೃಂಭಣೆಯ ಆಚರಣೆಗಳನ್ನು ನಾವಿಂದು ಆಟಿ ತಿಂಗಳಲ್ಲಿ ಕಾಣುತ್ತೇವೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಪೂರ್ವ ಸದಸ್ಯ, ಬೆಳ್ತಂಗಡಿ ವಾಣಿ ಕಾಲೇಜಿನ ಪ್ರಾಚಾರ್ಯ ಡಿ. ಯದುಪತಿ ಗೌಡ ಹೇಳಿದರು. ಅವರು ಬೆಳ್ತಂಗಡಿ ಲಯನ್ಸ್ ಕ್ಲಬ್‌ನಲ್ಲಿ ನಡೆದ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಹಿಂದಿನ ಕಾಲದಲ್ಲಿ ಇದೇ ತಿಂಗಳಲ್ಲಿ ಆಟಿ ಕಳೆಂಜನ ವೇಷಧಾರಿಗಳು ಊರಿಗೆ ಬಂದು ಇದರ ಮಹತ್ವವನ್ನು ಹೇಳುವ ಪದ್ಧತಿ ಇತ್ತು. ಇದೀಗ ಈ ಆಚರಣೆಗಳನ್ನು ಸೀಮಿತ ಕ್ಷೇತ್ರಗಳಲ್ಲಿ ಮಾತ್ರ ಕಾಣುತ್ತೇವೆ. ಈ ತಿಂಗಳಿನಲ್ಲಿ ಶುಭ ಸಮಾರಂಭಗಳು ನಡೆಯುವುದು ಬಹಳ ಕಡಿಮೆ. ಇಲ್ಲಿ ಪರಂಪರೆ ಬಹಳ ಮುಖ್ಯ. ಪರಂಪರೆಯು ವ್ಯಕ್ತಿಗಳ ಪ್ರತಿಭೆಯಿಂದ ಹೊರ ಹೊಮ್ಮುತ್ತದೆ ಎಂಬ ಅಂಶವನ್ನು ನಾವು ತಿಳಿಯಬೇಕಾಗಿದೆ ಎಂದರು.
ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಧರಣೇಂದ್ರ ಕೆ. ಜೈನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಅತಿಥಿಗಳಾಗಿ ಪ್ರಾಂತ್ಯ 10ರ ಪ್ರಾಂತ್ಯಾಧ್ಯಕ್ಷ ನಿತ್ಯಾನಂದ ನಾವರ, ಬೆಳ್ತಂಗಡಿ ಲಯನ್ಸ್ ಕ್ಲಬ್‌ನ ನಿಕಟ ಪೂರ್ವಾಧ್ಯಕ್ಷ ಸುಶೀಲಾ ಎಸ್. ಹೆಗ್ಡೆ, ಲಯನ್ಸ್ ಕ್ಲಬ್‌ನ ಪ್ರಥಮ ಉಪಾಧ್ಯಕ್ಷೆ ಮೇದಿನಿ ಡಿ. ಗೌಡ, ಕಾರ್ಯದರ್ಶಿ ಸುರೇಶ್ ಶೆಟ್ಟಿ ಲಾೖಲ, ಕೋಶಾಧಿಕಾರಿ ವಿನ್ಸೆಂಟ್ ಟಿ. ಡಿ ‘ಸೋಜಾ ಮತ್ತಿತರರು ಉಪಸ್ಥಿತರಿದ್ದರು. ಬಿ. ರಘುರಾಮ ಗಾಂಭೀರ ಧ್ವಜವಂದನೆ ವಾಚಿಸಿ, ನೀತಿ ಸಂಹಿತೆ ಮತ್ತು ತತ್ವಾದರ್ಶವನ್ನು ಸೆರಾಫಿನಾ ಎ. ಡಿ’ಸೋಜಾ ಪಠಿಸಿ, ಘಟಕಾಧ್ಯಕ್ಷ ಧರಣೇಂದ್ರ ಕೆ. ಜೈನ್ ಸ್ವಾಗತಿಸಿ, ವಸಂತ ಶೆಟ್ಟಿ ಶ್ರದ್ಧಾ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. ಲಾಂಗೂಲ ಚಾಲಕ ದೇವಿಪ್ರಸಾದ್ ಸಲಹೆ ಮಂಡಿಸಿದರು. ದಿನದ ಅದೃಷ್ಟ ವ್ಯಕ್ತಿಯಾಗಿ ರಾಜು ಶೆಟ್ಟಿ ಆಯ್ಕೆಯಾದರು. ಕೋಶಾಧಿಕಾರಿ ವಿನ್ಸೆಂಟ್ ಟಿ. ಡಿ’ಸೋಜಾ ವಂದಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.