ನೆಹರೂ ಮೈದಾನದ ಧ್ವಜ ಸ್ತಂಭ ಕಟ್ಟೆಗೆ ಕಾಯಕಲ್ಪ!

Team Udayavani, Aug 3, 2017, 10:32 PM IST

India-Flag-650.jpg

ಮಹಾನಗರ: ಹಲವು ದಶಕಗಳಿಂದ ನೆಹರೂ ಮೈದಾನದಲ್ಲಿದ್ದ ಧ್ವಜ ಸ್ತಂಭ ಕಟ್ಟೆಗೆ 70ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಕಾಯಕಲ್ಪ ನೀಡಲು ಮಹಾನಗರ ಪಾಲಿಕೆ ಮುಂದಾಗಿದೆ. ಸರಕಾರದ ವತಿಯಿಂದ ಪ್ರತಿವರ್ಷ ನಡೆಯುವ ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರೋತ್ಸವದ ಧ್ವಜಾರೋಹಣ ಕಾರ್ಯಕ್ರಮ ಈ ಧ್ವಜ ಸ್ತಂಭದಲ್ಲೇ ನಡೆಯುತ್ತಿತ್ತು. ಆದರೆ ಧ್ವಜ ಸ್ತಂಭದ ಕಟ್ಟೆಗಳಲ್ಲಿ ಬಿರುಕು ಉಂಟಾಗಿತ್ತು. ಸರಿ ಸುಮಾರು 40 ವರ್ಷಗಳ ಹಳೆಯ ಶಿಥಿಲಾವಸ್ಥೆಯಲ್ಲಿದ್ದ ಕಟ್ಟೆಗೆ ಹಲವು ಬಾರಿ ಬಣ್ಣ ಬಳಿಯಲಾಗಿತ್ತು. ಜತೆಗೆ, ಒಡೆದ ಭಾಗಗಳಿಗೆ ಸಿಮೆಂಟ್‌ ಹಾಕಿ ದುರಸ್ತಿ ಮಾಡಲಾಗಿತ್ತು. ಈಗ ಮಹಾನಗರ ಪಾಲಿಕೆಯು ಧ್ವಜ ಸ್ತಂಭದ ಕಟ್ಟೆಯನ್ನು ಒಡೆದು ನೂತನ ಕಟ್ಟೆ ನಿರ್ಮಿಸುತ್ತಿದೆ. ಧ್ವಜ ಸ್ತಂಭದ ಸುತ್ತ ಲಿನ 18 ಅಡಿ ಸುತ್ತಳತೆಯಲ್ಲಿ ಕೆಂಪು ಕಲ್ಲಿನಲ್ಲಿದ್ದ ಕಟ್ಟೆಯನ್ನು ಒಡೆದು ಕಪ್ಪು ಕಲ್ಲಿನಲ್ಲಿ ಒಂದು ಅಡಿ ಹೆಚ್ಚುವರಿಯಾಗಿ ಕಟ್ಟಲಾಗುತ್ತಿದೆ. ಬುಧವಾರದಿಂದ ಕಾಮಗಾರಿ ಪ್ರಾರಂಭವಾಗಿದ್ದು, ವಾರದೊಳಗೆ ಪೂರ್ಣಗೊಳ್ಳಲಿದೆ.

ಆಕರ್ಷಕ ಧ್ವಜ ಸ್ತಂಭದ ಕಟ್ಟೆ
ಪ್ರಸ್ತುತ ಧ್ವಜ ಸ್ತಂಭದ ಸುತ್ತಲಿದ್ದ ಕೆಂಪು ಕಲ್ಲಿನ ಕಟ್ಟೆ ಮತ್ತಷ್ಟು ಆಕರ್ಷಕವಾಗಿ ಕಾಣಿಸಿಕೊಳ್ಳಲಿದೆ. ಕಟ್ಟೆಯ ನಾಲ್ಕು ಬದಿಯಲ್ಲೂ ಸುಂದರ ವಿನ್ಯಾಸವಿರಲಿದೆ. ಕಟ್ಟೆಯ ನಾಲ್ಕು ಬದಿಗೂ ಸಣ್ಣದಾಗಿ ರೇಲಿಂಗ್‌ ಅಳವಡಿಸುತ್ತಿದ್ದು, ಇದು ಕಟ್ಟೆಯ ಅಂದವನ್ನು ಇನ್ನೂ ಹೆಚ್ಚಿಸಲಿದೆ. ಸುಂದರ ಶಿಲ್ಪಗಳಿಗೆ ಹೆಸರುವಾಸಿಯಾದ ಕಾರ್ಕಳದಿಂದ ಧ್ವಜಸ್ತಂಭದ ಸುತ್ತಲಿನ ಕಟ್ಟೆಗಾಗಿ ಕಲ್ಲುಗಳು ಬಂದಿವೆ.

ಆರು ತಿಂಗಳೊಳಗೆ ಧ್ವಜ ಸ್ತಂಭ ಬದಲಾವಣೆ
ಸ್ವಾತಂತ್ರೋತ್ಸವದ ಬಳಿಕ ಸ್ತಂಭದ ಲಾಂಛನವನ್ನು ಕಲ್ಲುಗಳಿಂದ ರೂಪಿಸಲಾಗುತ್ತದೆ. ಈ ಕಾಮಗಾರಿಗೆ ಮೂರು ತಿಂಗಳು ತಗಲುವುದರಿಂದ ಸ್ವಾತಂತ್ರ್ಯೋತ್ಸವಕ್ಕೆ ಧಕ್ಕೆಯಾಗದಂತೆ ಕೇವಲ ಧ್ವಜ ಸ್ತಂಭದ ಕಟ್ಟೆಯನ್ನು ಬದಲಾಯಿಸಲಾಗುತ್ತಿದೆ.

ಬದಲಾಗಲಿದೆ ಪ್ರವೇಶ ದ್ವಾರ
ಈ ಎರಡೂ ಕಾಮಗಾರಿಗಳ ಬಳಿಕ ನೆಹರೂ ಮೈದಾನದ ಪ್ರವೇಶದ್ವಾರದ ಕಾಮಗಾರಿ ಆರಂಭವಾಗಲಿದೆ. ಈ ಹಿಂದೆ ಇದ್ದ ಎಲ್ಲಾ ಪ್ರವೇಶ ದ್ವಾರಗಳಿಂಗಿಂತಲೂ ಇದು ಸುಂದರವಾಗಿರಲಿದೆ. ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತುಕತೆ, ಟೆಂಡರ್‌ ಪ್ರಕ್ರಿಯೆ ನಡೆಯಲಿದ್ದು, ಹೆಚ್ಚಿನ ಕಾಲಾವಕಾಶಬೇಕು ಎಂದು ಮೇಯರ್‌ ಉದಯವಾಣಿಗೆ ತಿಳಿಸಿದ್ದಾರೆ. ಬುಧವಾರ ಸಂಜೆ ಆರಂಭವಾದ ಕಾಮಗಾರಿಯನ್ನು ಮೇಯರ್‌ ಕವಿತಾ ಸನಿಲ್‌, ಮಹಾನಗರ ಪಾಲಿಕೆ ಮುಖ್ಯ ಸಚೇತಕ ಶಶಿಧರ್‌ ಹೆಗ್ಡೆ,ಕಾರ್ಪೋರೇಟರ್‌ ರವೂಫ್‌ ಭೇಟಿ ನೀಡಿ ಪರೀಶೀಲಿಸಿದರು.

ಧ್ವಜ ಸ್ತಂಭ ನವೀಕರಣ
‘ಪ್ರಸ್ತುತ ಇರುವ ಧ್ವಜಸ್ತಂಭ ಹಲವು ದಶಕಗಳ ಹಿಂದಿನದು. ಇದನ್ನು ಸುಂದರವಾಗಿ ನಿರ್ಮಿಸಬೇಕು ಎಂಬುದು ನನ್ನ ಬಹಳ ಸಮಯದ ಕನಸಾಗಿತ್ತು. ಆದರೆ ಅದಕ್ಕೆ ಕಾಲಾವಕಾಶ ದೊರೆತಿರಲಿಲ್ಲ. ಈ ಬಾರಿಯ ಸ್ವಾತಂತ್ರ್ಯೋತ್ಸವಕ್ಕೆ ಧ್ವಜಸ್ತಂಭದ ಕಟ್ಟೆಯನ್ನು ಮಾತ್ರ ಬದಲಾಯಿಸಲಾಗುತ್ತದೆ. ಬಳಿಕ ಧ್ವಜ ಸ್ತಂಭವನ್ನು ಸುಂದರೀಕರಿಸಲಾಗುತ್ತದೆ.
– ಕವಿತಾ ಸನಿಲ್‌, ಮೇಯರ್‌

ಹಲವು ಯೋಜನೆಗಳು
‘ಸ್ಮಾರ್ಟ್‌ ಸಿಟಿಯಾಗಲಿರುವ ಮಂಗಳೂರು ನಗರ‌ವನ್ನು ಸುಂದರವಾಗಿಸುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಮಾಡಲು ಪಾಲಿಕೆ ಮುಂದಾಗಿದೆ. ನಗರದ  ಕೆಲವು ಸರ್ಕಲ್‌, ಪಾರ್ಕ್‌ಗಳ ಕಾಮಗಾರಿ ಈಗಾಗಲೇ ಆಗಿದೆ. ನೆಹರೂ ಮೈದಾನದ ಪ್ರವೇಶ ದ್ವಾರದ ಕಾಮಗಾರಿಯೂ ಶೀಘ್ರವೇ ಆರಂಭವಾಗಲಿದೆ.
– ಶಶಿಧರ್‌ ಹೆಗ್ಡೆ, ಮುಖ್ಯ ಸಚೇತಕರು, ಮಹಾನಗರ ಪಾಲಿಕೆ

– ಪ್ರಜ್ಞಾ ಶೆಟ್ಟಿ

ಟಾಪ್ ನ್ಯೂಸ್

1-horoscope

Daily Horoscope: ವಧೂವರಾನ್ವೇಷಿಗಳಿಗೆ ಯಶಸ್ಸಿನ ಭರವಸೆ, ಸ್ವರ್ಣೋದ್ಯಮಿಗಳಿಗೆ ಹೇರಳ ಲಾಭ

Child-care

Child Care: ಶಿಶು ಮರಣ ತಗ್ಗಿಸಲು ಮನೆಮಟ್ಟದ ಎಳೆ ಮಕ್ಕಳ ಆರೈಕೆ!

ರಾಜ್ಯದಲ್ಲಿ ಕೇರಳದ ಅಸುರಕ್ಷಿತ ಕುರುಕಲು ತಿಂಡಿ ಮಾರಾಟ

ರಾಜ್ಯದಲ್ಲಿ ಕೇರಳದ ಅಸುರಕ್ಷಿತ ಕುರುಕಲು ತಿಂಡಿ ಮಾರಾಟ

NIA: ರಾಮೇಶ್ವರಂ ಕೆಫೆ ಸ್ಫೋಟ ಉಗ್ರ ಪಾಕ್‌ನಲ್ಲಿ: ಎನ್‌ಐಎಗೆ ಸುಳಿವು

NIA: ರಾಮೇಶ್ವರಂ ಕೆಫೆ ಸ್ಫೋಟ ಉಗ್ರ ಪಾಕ್‌ನಲ್ಲಿ: ಎನ್‌ಐಎಗೆ ಸುಳಿವು

Sukhu

Himachal Pradesh; ಸಿಎಂಗೆ ತಂದಿದ್ದ ಸಮೋಸಾ ಮಾಯ: ಸಿಐಡಿ ತನಿಖೆ?

ಸೀಟ್‌ ಬ್ಲಾಕಿಂಗ್‌ ದಂಧೆ ವಿರುದ್ಧ ಕ್ರಿಮಿನಲ್‌ ಕೇಸ್‌ ಅಸ್ತ್ರ : ಸಚಿವ

Minister Sudhakar: ಸೀಟ್‌ ಬ್ಲಾಕಿಂಗ್‌ ದಂಧೆ ವಿರುದ್ಧ ಕ್ರಿಮಿನಲ್‌ ಕೇಸ್‌ ಅಸ್ತ್ರ

Donald-Trumph

Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಪದ್ಮಶ್ರೀ ಬೇಳೇರಿ ಸಂರಕ್ಷಿತ ಭತ್ತದ 10 ತಳಿ ಸಂವರ್ಧನೆ

Mangaluru: ಪದ್ಮಶ್ರೀ ಬೇಳೇರಿ ಸಂರಕ್ಷಿತ ಭತ್ತದ 10 ತಳಿ ಸಂವರ್ಧನೆ

KVK: ಸಾಂಪ್ರದಾಯಿಕ ಭತ್ತ ತಳಿಗಳ ಕ್ಷೇತ್ರೋತ್ಸವ

KVK: ಸಾಂಪ್ರದಾಯಿಕ ಭತ್ತ ತಳಿಗಳ ಕ್ಷೇತ್ರೋತ್ಸವ

ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ ಪ್ರಕರಣ: ಪೊಲೀಸ್‌ ಕ್ರಮಕ್ಕೆ ಕೇರಳ ಸಿಎಂ ಸೂಚನೆ

ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ ಪ್ರಕರಣ: ಪೊಲೀಸ್‌ ಕ್ರಮಕ್ಕೆ ಕೇರಳ ಸಿಎಂ ಸೂಚನೆ

Mangaluru: ಡಿ.14ರಂದು ರಾಷ್ಟ್ರೀಯ ಲೋಕ ಅದಾಲತ್‌

Mangaluru: ಡಿ.14ರಂದು ರಾಷ್ಟ್ರೀಯ ಲೋಕ ಅದಾಲತ್‌

Mulki: ಚಿನ್ನಾಭರಣ ಕಳವು: ಆರೋಪಿ ಬಂಧನ

Mulki: ಚಿನ್ನಾಭರಣ ಕಳವು: ಆರೋಪಿ ಬಂಧನ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-horoscope

Daily Horoscope: ವಧೂವರಾನ್ವೇಷಿಗಳಿಗೆ ಯಶಸ್ಸಿನ ಭರವಸೆ, ಸ್ವರ್ಣೋದ್ಯಮಿಗಳಿಗೆ ಹೇರಳ ಲಾಭ

Child-care

Child Care: ಶಿಶು ಮರಣ ತಗ್ಗಿಸಲು ಮನೆಮಟ್ಟದ ಎಳೆ ಮಕ್ಕಳ ಆರೈಕೆ!

ರಾಜ್ಯದಲ್ಲಿ ಕೇರಳದ ಅಸುರಕ್ಷಿತ ಕುರುಕಲು ತಿಂಡಿ ಮಾರಾಟ

ರಾಜ್ಯದಲ್ಲಿ ಕೇರಳದ ಅಸುರಕ್ಷಿತ ಕುರುಕಲು ತಿಂಡಿ ಮಾರಾಟ

NIA: ರಾಮೇಶ್ವರಂ ಕೆಫೆ ಸ್ಫೋಟ ಉಗ್ರ ಪಾಕ್‌ನಲ್ಲಿ: ಎನ್‌ಐಎಗೆ ಸುಳಿವು

NIA: ರಾಮೇಶ್ವರಂ ಕೆಫೆ ಸ್ಫೋಟ ಉಗ್ರ ಪಾಕ್‌ನಲ್ಲಿ: ಎನ್‌ಐಎಗೆ ಸುಳಿವು

Sukhu

Himachal Pradesh; ಸಿಎಂಗೆ ತಂದಿದ್ದ ಸಮೋಸಾ ಮಾಯ: ಸಿಐಡಿ ತನಿಖೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.