ಸುಳ್ಯದಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಲು ಸಿದ್ಧತೆ
Team Udayavani, Jan 19, 2018, 2:22 PM IST
ಸುಳ್ಯ : ರಾಜ್ಯದ ನಾನಾ ಕಡೆಗಳಲ್ಲಿ ಕಡಿಮೆ ದರದಲ್ಲಿ ಊಟ-ಉಪಾಹಾರ ಒದಗಿಸುವ ರಾಜ್ಯ ಸರಕಾರದ ಮಹತ್ತ್ವಕಾಂಕ್ಷಿ ಯೋಜನೆಯಾದ ಇಂದಿರಾ ಕ್ಯಾಂಟೀನ್ನ್ನು ಸುಳ್ಯದಲ್ಲಿಯೂ ನಿರ್ಮಿಸುವುದಕ್ಕೆ ಸಂಬಂಧಿಸಿ ಪ್ರಕ್ರಿಯೆ ಆರಂಭಗೊಂಡಿದೆ. ಕಂದಾಯ ಇಲಾಖೆ ಜಾಗ ಗುರುತಿಸಿದೆ. ನಗರ ಪಂಚಾಯತ್ ಕೆಲಸ ಆರಂಭಿಸಿದ್ದು, ಜಾಗದ ಸುತ್ತ ಬೇಲಿ ಅಳವಡಿಕೆ, ಸಮತಟ್ಟು ಮಾಡುವ ಕೆಲಸ ಪೂರ್ಣಗೊಳಿಸಲಿದೆ.
ಮಿನಿ ವಿಧಾನಸೌಧದ ಹಿಂಬದಿಯಲ್ಲಿ, ನ್ಯಾಯಾಲಯ ಮತ್ತು ಕೆಎಫ್ಡಿಸಿ ಕಚೇರಿ ಎದುರುಗಡೆ ಖಾಲಿ ಇರುವ 5 ಸೆಂಟ್ಸ್ ಜಾಗವನ್ನು ಕ್ಯಾಂಟೀನ್ಗೆ ಬಳಸಲು ನಿರ್ಧರಿಸಲಾಗಿದೆ. ಸ್ಥಳ ಸಮತಟ್ಟುಗೊಳಿಸುವಿಕೆ, ಸಿಸಿ ಕೆಮರಾ ಅಳವಡಿಕೆ, ನೀರಿನ ಸಂಪರ್ಕ, ತ್ಯಾಜ್ಯ ಹರಿಯಲು ವ್ಯವಸ್ಥೆ ನ.ಪಂ. ಜವಾಬ್ದಾರಿ.
ಟೆಂಡರ್ ಕಾರ್ಯ
ಸರಕಾರವೇ ಇಂದಿರಾ ಕ್ಯಾಂಟೀನ್ ನಡೆಸಲು ಗುತ್ತಿಗೆ ನೀಡಲಿದೆ. ಟೆಂಡರ್ ಪ್ರಕ್ರಿಯೆ ನಡೆದು, ಗುತ್ತಿಗೆ ಪಡೆದುಕೊಂಡವರು ಕ್ಯಾಂಟೀನ್ ಆರಂಭಿಸಲಿದ್ದಾರೆ. ಲಭ್ಯ ಮಾಹಿತಿ ಪ್ರಕಾರ ಫೆಬ್ರವರಿ ಅಥವಾ ಮಾರ್ಚ್ ಮೊದಲ
ವಾರದಲ್ಲಿ ಕ್ಯಾಂಟೀನ್ ಕಾರ್ಯಾರಂಭ ಮಾಡಲಿದೆ.
ಜಾಗ ಸಮತಟ್ಟು
ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಕಂದಾಯ ಇಲಾಖೆ ಜಾಗ ಗುರುತಿಸಿ ಎನ್ಒಸಿ ನೀಡಿದೆ. ಸ್ಥಳ ಸಮತಟ್ಟು ಮಾಡುವುದು, ಬೇಲಿ ಹಾಕುವ ಇತ್ಯಾದಿ ಕೆಲಸಗಳು ಆರಂಭಗೊಂಡಿವೆ.
– ಗೋಪಾಲ್ ನಾೖಕ್
ಸುಳ್ಯ ನ.ಪಂ. ಮುಖ್ಯಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.