ಮತಯಂತ್ರದೊಂದಿಗೆ ಮತಗಟ್ಟೆಯತ್ತ ಹೆಜ್ಜೆಹಾಕಿದ ಸಿಬಂದಿ

ಲೋಕಸಭಾ ಚುನಾವಣೆ: ಉಭಯ ತಾಲೂಕುಗಳಲ್ಲಿ ಮಸ್ಟರಿಂಗ್‌ ಕಾರ್ಯ

Team Udayavani, Apr 18, 2019, 12:00 AM IST

4

ಮತಯಂತ್ರಗಳೊಂದಿಗೆ ತಮ್ಮ ತಮ್ಮ ಮತಗಟ್ಟೆಗಳತ್ತ ಹೊರಟ ಸಿಬಂದಿ.

ಬೆಳ್ತಂಗಡಿ: ಗುರುವಾರ ನಡೆಯುವ ಲೋಕಸಭಾ ಚುನಾವಣೆ ಪ್ರಯುಕ್ತ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಮಸ್ಟರಿಂಗ್‌ ಕಾರ್ಯ ನಡೆಯಿತು. ಉಜಿರೆ ಎಸ್‌ಡಿಎಂ ಪಿಯು ಕಾಲೇಜಿನಲ್ಲಿ ನಡೆದ ಮಸ್ಟರಿಂಗ್‌ ಪ್ರಕ್ರಿಯೆಯಲ್ಲಿ ತಾ|ನ 241 ಮತಗಟ್ಟೆ ಸಿಬಂದಿಗೆ ಚುನಾವಣೆ ಪರಿಕರ ವಿತರಿಸಲಾಯಿತು. ಬೆಳ‌ಗ್ಗೆ 6ರಿಂದ ಮಸ್ಟರಿಂಗ್‌ ಪ್ರಕ್ರಿಯೆ ಜರಗಿತು. 22 ಕೊಠಡಿಗಳಲ್ಲಿ ಮತಗಟ್ಟೆ ಸಿಬಂದಿಗೆ ನೀಡಿದ ಪರಿಕರವನ್ನು ಅಧಿಕಾರಿಗಳು ಪರಿಶೀಲಿಸಿ ದಾಖಲಿಸಿ ದರು. ಕಂಡುಬಂದ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸಲಾಯಿತು.

ಪರಿಕರಗಳು
ಕಂಟ್ರೋಲ್‌ ಯುನಿಟ್‌, ಬ್ಯಾಲೆಟ್‌ ಯುನಿಟ, ವಿವಿ ಪ್ಯಾಟ್‌, ಮತದಾರರ ರಿಜಿಸ್ಟರ್‌, ಮತದಾರರ ಪಟ್ಟಿ, ಶಾಯಿ, ಮತ ಪತ್ರ, ಸೀಲ್‌, ಅಣಕು ಮತದಾನದ ಸ್ಲಿಪ್‌, ಮತಯಂತ್ರವನ್ನು ಅಧಿಕಾರಿಗಳಿಗೆ ನೀಡಲಾಯಿತು.

ಅತಿ ಸೂಕ್ಷ್ಮ ಮತಗಟ್ಟೆಗಳು
ತಾಲೂಕಿನ 241 ಬೂತ್‌ಗಳ ಪೈಕಿ 46 ನಕ್ಸಲ್‌ ಪೀಡಿತ ಮತಗಟ್ಟೆಗಳಿದ್ದು, 12 ಅತಿ ಸೂಕ್ಷ್ಮ ಮತಗಟ್ಟೆ ಎಂದು ಗುರುತಿಸಲಾಗಿದೆ. ಪ್ರತಿ ಮತಗಟ್ಟೆ ಗಳಲ್ಲಿಯೂ ವೀಡಿಯೋ ಮತ್ತು ಫೋಟೋಗ್ರಫಿ ವ್ಯವಸ್ಥೆ ಮಾಡ ಲಾಗಿದ್ದು, 14 ವೀಡಿಯೋ ಕೆಮರಾ, 31 ಮಂದಿ ಮೈಕ್ರೋ ಅಬ್ಸರ್ವರ್‌ ನಿಯೋಜಿಸಲಾಗಿದೆ.  ಗುರುವಾಯನಕೆರೆಯಲ್ಲಿ ಮತಗಟ್ಟೆ ಸಂಖ್ಯೆ 116ರಲ್ಲಿ ವೆಬ್‌ ಕೆಮರಾ ಅಳವಡಿಸಲಾಗಿದ್ದು, ಮತದಾನ ಪ್ರಕ್ರಿಯೆ ಯನ್ನು ದಿಲ್ಲಿ ಕೇಂದ್ರ ಚುನಾವಣ ಕಚೇರಿಯಲ್ಲಿ ವೀಕ್ಷಿಸಬಹುದಾಗಿದೆ.

ವಾಹನದ ವ್ಯವಸ್ಥೆ
ಮಸ್ಟರಿಂಗ್‌ ಕೇಂದ್ರದಿಂದ ಮತಗಟ್ಟೆ ಗಳಿಗೆ ತೆರಳುವ ಅಧಿಕಾರಿಗಳು ಹಾಗೂ ಸಿಬಂದಿಗೆ ಸೂಕ್ತ ವಾಹನ ಸೌಲಭ್ಯ ಒದಗಿಸಲಾಗಿತ್ತು. 33 ಬಸ್‌, 22 ಜೀಪ್‌, 15 ಕ್ಯಾಬ್‌, ಹೆಚ್ಚುವರಿಯಾಗಿ 3 ಬಸ್‌, 2 ಜೀಪ್‌, 2 ಕ್ಯಾಬ್‌ ನಿಯೋಜಿಸಲಾಗಿತ್ತು. ಈಗಾಗಲೇ ವಾಹನಗಳ ಚಾಲಕರಿಗೆ ಜಿಲ್ಲಾಧಿಕಾರಿ ಸೂಚನೆಯಂತೆ ಇಡಿಸಿ ಫಾರ್ಮ್ ಮೂಲಕ ಪೋಸ್ಟಲ್‌ ಮತದಾನಕ್ಕೆ ಅವಕಾಶ ಮಾಡಲಾಗಿತ್ತು.

ಪೊಲೀಸ್‌ ಬಂದೋಬಸ್ತ್
ತಾಲೂಕಿನಲ್ಲಿ ಶಾಂತಿಯುತ ಹಾಗೂ ನಿರ್ಭೀತ ಮತದಾನಕ್ಕಾಗಿ ಮತಗಟ್ಟೆ ಅಧಿಕಾರಿಗಳ ಸಹಿತ ಪೊಲೀಸ್‌ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಬೂತ್‌ಗಳಿಗೆ ನಿಯೋಜನೆಗೊಂಡ ಪೊಲೀಸರಿಗೆ ಸರ್ಕಲ್‌ ಇನ್‌ಸ್ಪೆಕ್ಟರ್‌ ಸಂದೇಶ್‌ ಪಿ.ಜಿ. ಸಲಹೆ- ಸೂಚನೆ ನೀಡಿದರು. ಹೆಚ್ಚುವರಿ ನಿಯೋಜಿತ ಡಿವೈಎಸ್‌ಪಿ ಲಿಂಗಪ್ಪ ಪೂಜಾರಿ, ಬೆಳ್ತಂಗಡಿ ಎಸ್‌ಐ ರವಿ ಬಿ.ಎಸ್‌., ಧರ್ಮಸ್ಥಳ ಎಸ್‌ಐ ಅವಿನಾಶ್‌, ಪೂಂಜಾಲ ಕಟ್ಟೆ ಎಸ್‌ಐ ಸುನಿತಾ, ವೇಣೂರ್‌ ಎಸ್‌ಐ ನಾಗರಾಜ್‌, ಟ್ರಾಫಿಕ್‌ ಇನ್ಸ್‌ಪೆಕ್ಟರ್‌ ನಾರಾಯಣ ಗಾಣಿಗ ಇದ್ದರು.

ತಾಲೂಕಿನ 241 ಬೂತ್‌ಗಳಿಗೆ ಸೂಕ್ತ ಬಂದೋಬಸ್ತ್ ಒದಗಿಸ ಲಾಗಿದೆ. ಈಗಾಗಲೇ ಒಂದು ಡಿವೈಎಸ್‌ಪಿ, 3 ಸಿಪಿಐ, 7 ಪಿಎಸ್‌ಐ, 14 ಮಂದಿ ಎಎಸ್‌ಐ, 54 ಮಂದಿ ಎಚ್‌ಸಿ, 145 ಪಿಸಿ, 176 ಹೋಮ್‌ಗಾರ್ಡ್‌ಗಳನ್ನು ಆಯಾಯ ಬೂತ್‌ಗಳಿಗೆ ಅನುಕ್ರಮದಂತೆ ನಿಯೋ ಜಿಸಲಾಗಿದೆ. ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಇಂಡೋ ಟಿಬೇಟಿಯನ್‌ ಬಾರ್ಡರ್‌ ಒಂದು ತುಕಡಿ (100 ಮಂದಿ) ನಿಯೋಜಿಸಲಾಗಿದೆ.

ಪುಂಜಾಲಕಟ್ಟೆ, ಗುರುವಾಯನ ಕೆರೆ, ಚಾರ್ಮಾಡಿ, ಕೊಕ್ಕಡ ಪ್ರದೇಶಗಳನ್ನು ಕೇಂದ್ರವಾಗಿಸಿ 4 ಕಡೆಗಳಲ್ಲಿ ಡಿಎಆರ್‌ ತುಕಡಿಗಳನ್ನು ನಿಯೋಜಿಸಲಾಗಿದ್ದು. ಉಜಿರೆಯಲ್ಲಿ ಒಂದು ತುಕಡಿ ನಿಯೋಜಿಸಲಾಗಿದೆ. ಅವಶ್ಯವಿದ್ದಲ್ಲಿ ಜಾಗೃತವಾಗಲಿದೆ. ಅತಿ ಸೂಕ್ಷ್ಮ ಮತಗಟ್ಟೆಯಲ್ಲಿ 4 ಬೂತ್‌ಗಳಿದ್ದರೆ ಎರಡು ಪೊಲೀಸ್‌ ಸಿಬಂದಿ, 9 ಹೋಮ್‌ಗಾರ್ಡ್‌, 4 ಮಂದಿ ಐ.ಟಿ.ಬಿ.ಪಿ. ಸಿಬಂದಿ ನಿಯೋಜಿಸಲಾಗಿದೆ.

ತಹಶೀಲ್ದಾರ್‌ ಮುತುವರ್ಜಿ
ಮಸ್ಟರಿಂಗ್‌ ಕೊಠಡಿಯಲ್ಲಿ ಬೂತ್‌ ಮಟ್ಟದ ಅಧಿಕಾರಿಗಳಿಗೆ ನೀಡಿದ ಮತದಾನ ಪರಿಕರಗಳ ಬಗ್ಗೆ ತಹಶೀಲ್ದಾರ್‌ ಗಣಪತಿ ಶಾಸ್ತ್ರಿ ಮಾರ್ಗದರ್ಶನ ನೀಡಿದರು. ಪ್ರತಿ ಕೊಠಡಿಗೆ ತೆರಳಿ ಮಾಹಿತಿ ನೀಡಿದರು. ಸ. ಚುನಾವಣಾಧಿಕಾರಿ ಎಚ್‌.ಆರ್‌. ನಾಯಕ್‌, ಎಆರ್‌ಒ ಸಹಾಯಕ ಸುಭಾಷ್‌ ಜಾಧವ್‌, ನೋಡಲ್‌ ಅಧಿಕಾರಿ ಶಿವಪ್ರಸಾದ್‌ ಅಜಿಲ, ಸ್ವೀಪ್‌ ಅಧಿಕಾರಿ ಕುಸುಮಾಧರ, ಸಂಪನ್ಮೂಲ ವ್ಯಕ್ತಿ ಧರಣೇಂದ್ರ ಕೆ., 6 ಮಾಸ್ಟ ರಿಂಗ್‌ ಅಧಿಕಾರಿಗಳು, 20 ಸೆಕ್ಟರ್‌ ಅಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳು ಸಹಕರಿಸಿದರು.

ವಿಶೇಷ ಮತಗಟ್ಟೆಗಳು
ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಅನುದಾನಿತ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 163 ಈ ಬಾರಿ ಎಥಿ°ಕ್‌ (ಸಾಂಪ್ರದಾಯಿಕ ಮತಗಟ್ಟೆ), ಬೆಳ್ತಂಗಡಿ ಮಾದರಿ ಸರಕಾರಿ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 109 ಸಖೀ (ಮಹಿಳಾ ಮತದಾರರು ಹೆಚ್ಚಿರುವ ಪ್ರದೇಶ), ಉಪ್ಪರ ಪಳಿಕೆಯ ಮತಗಟ್ಟೆ ಸಂಖ್ಯೆ 236 ಅಂಗವಿಕಲರಿಗಾಗಿ ಗುರುತಿಸಲಾಗಿದೆ.

ಟಾಪ್ ನ್ಯೂಸ್

Sheikh ಹಸೀನಾರನ್ನು‌ ಬಾಂಗ್ಲಾದೇಶಕ್ಕೆ ವಾಪಸ್‌ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ

Sheikh ಹಸೀನಾರನ್ನು‌ ಬಾಂಗ್ಲಾದೇಶಕ್ಕೆ ವಾಪಸ್‌ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ

1-qwqwewq

Seema Haider; 4 ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಸೀಮಾ ಈಗ ಗರ್ಭಿಣಿ!!

ಆಯನೂರು ಮಂಜುನಾಥ್

Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು

Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

Ravishankar

Drama ಬಿಟ್ಟು ಅಂಬೇಡ್ಕರ್ ಅವರಿಗೆ ನಿರಂತರ ಅವಮಾನ ಮಾಡಿದ್ದಕ್ಕೆ ಕಾಂಗ್ರೆಸ್ ಕ್ಷಮೆ ಕೇಳಲಿ

YouTuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್

You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್

UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ

UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

death

Puttur: ಎಲೆಕ್ಟ್ರಿಕ್‌ ಆಟೋ ರಿಕ್ಷಾ ಪಲ್ಟಿ; ಚಾಲಕ ಮೃತ್ಯು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Sheikh ಹಸೀನಾರನ್ನು‌ ಬಾಂಗ್ಲಾದೇಶಕ್ಕೆ ವಾಪಸ್‌ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ

Sheikh ಹಸೀನಾರನ್ನು‌ ಬಾಂಗ್ಲಾದೇಶಕ್ಕೆ ವಾಪಸ್‌ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ

1-qwqwewq

Seema Haider; 4 ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಸೀಮಾ ಈಗ ಗರ್ಭಿಣಿ!!

ಆಯನೂರು ಮಂಜುನಾಥ್

Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು

Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

Ravishankar

Drama ಬಿಟ್ಟು ಅಂಬೇಡ್ಕರ್ ಅವರಿಗೆ ನಿರಂತರ ಅವಮಾನ ಮಾಡಿದ್ದಕ್ಕೆ ಕಾಂಗ್ರೆಸ್ ಕ್ಷಮೆ ಕೇಳಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.