ಮತಯಂತ್ರದೊಂದಿಗೆ ಮತಗಟ್ಟೆಯತ್ತ ಹೆಜ್ಜೆಹಾಕಿದ ಸಿಬಂದಿ
ಲೋಕಸಭಾ ಚುನಾವಣೆ: ಉಭಯ ತಾಲೂಕುಗಳಲ್ಲಿ ಮಸ್ಟರಿಂಗ್ ಕಾರ್ಯ
Team Udayavani, Apr 18, 2019, 6:00 AM IST
ಸಿಬಂದಿಗೆ ಮತಯಂತ್ರಗಳೊಂದಿಗೆ ಮತಗಟ್ಟೆಗಳಿಗೆ ತೆರಳಲು ವಾಹನಗಳನ್ನು ವ್ಯವಸ್ಥೆ ಮಾಡಲಾಗಿತ್ತು.
ಬಂಟ್ವಾಳ: ದ.ಕ. ಲೋಕಸಭಾ ಚುನಾವಣೆಗೆ ಬುಧವಾರ ಮೊಡಂಕಾಪು ಮೊಡಂಕಾಪು ಇನೆ#ಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಸ್ಟರಿಂಗ್ ಕಾರ್ಯ ನಡೆಯಿತು. ಬಂಟ್ವಾಳ ಕ್ಷೇತ್ರದ 249 ಮತಗಟ್ಟೆಗಳಿಗೆ ಸಿಬಂದಿಯು ಮತದಾನ ಪ್ರಕ್ರಿಯೆಗೆ ಬೇಕಾದ ಇವಿಎಂ ಯಂತ್ರಗಳ ಸಹಿತ ವಿವಿಧ ಸಲಕರಣೆಗಳೊಂದಿಗೆ ತಮ್ಮ ಮತಗಟ್ಟೆಗಳಿಗೆ ತೆರಳಿದರು.
15 ಮತಗಟ್ಟೆಗಳಲ್ಲಿ ವೀಡಿಯೋ
ವಿಧಾನಸಭಾ ಕ್ಷೇತ್ರದಲ್ಲಿ 85 ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಮತಗಟ್ಟೆಗಳನ್ನು ವಿಂಗಡಿಸಿ ಗುರುತು ಮಾಡಿದ್ದು, 35 ಮತಗಟ್ಟೆಗಳಲ್ಲಿ ಮೈಕ್ರೋ ಅಫೀಸರ್‌ಗಳನ್ನು ನೇಮಕ ಮಾಡಲಾಗಿದೆ. 17 ಕಡೆಗಳಲ್ಲಿ ನೇರವಾಗಿ ವೆಬ್ ಕಾಸ್ಟಿಂಗ್ ಸಿಸ್ಟಮ್ ವ್ಯವಸ್ಥೆ ಮಾಡಲಾಗಿದೆ. 15 ಮತಗಟ್ಟೆಗಳಲ್ಲಿ ಪೂರ್ಣ ಪ್ರಮಾಣದ ವೀಡಿಯೋ ಗ್ರಾಫರ್‌ಗಳನ್ನು ನೇಮಿಸ ಲಾಗಿದೆ ಎಂದು ಎಆರ್‌ಒ ಮಹೇಶ್ ಮಾಹಿತಿ ನೀಡಿದರು.
ಬಂಟ್ವಾಳದ ಲೊರೆಟ್ಟೋ ಹಿ.ಪ್ರಾ.ಶಾಲೆಯನ್ನು ಸಖೀ ಮತಗಟ್ಟೆ ಎಂದು ಪರಿಗಣಿಸಿ ಪೂರ್ವ ಸಿದ್ಧತೆಗಳನ್ನು ಮಾಡಲಾಗಿದೆ. ಪ್ರತಿ ಮತಗಟ್ಟೆಗಳಲ್ಲಿ ಬಿಎಲ್‌ಒ, ಬೂತ್ ಲೆವಲ್ ಅಸಿಸ್ಟೆಂಟ್ ಸಿಬಂದಿಯನ್ನು ನೇಮಕ ಮಾಡಲಾಗಿದೆ.
ಅಂಗವಿಕಲರಿಗೆ ವೀಲ್‌ಚೇರ್
ಮತ ಚಲಾವಣೆಗೆ ಬರುವ ಅಂಗ ವಿಕಲರಿಗೆ ಮತಗಟ್ಟೆಗೆ ಬರಲು ವೀಲ್‌ಚೇರ್ ವ್ಯವಸ್ಥೆ ಮಾಡಲಾಗಿದೆ. ಮತಗಟ್ಟೆಗಳಲ್ಲಿರುವ ಸಿಬಂದಿಗೆ ನೀರಿನ ವ್ಯವಸ್ಥೆ, ಊಟದ ವ್ಯವಸ್ಥೆ ಜತೆ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ.
ಅಧಿಕಾರಿಗಳಿಂದ ಮಾರ್ಗದರ್ಶನ
ರಾಜ್ಯ ಚುನಾವಣ ಪರಿವೀಕ್ಷಕ, ಜಿ.ಪಂ. ಸಿಇಒ ಡಾ| ಸೆಲ್ವಮಣಿ, ಚುನಾವಣಾಧಿಕಾರಿ ಎಸ್.ಸಿ. ಮಹೇಶ್, ತಹಶೀಲ್ದಾರ್ ಸಣ್ಣ ರಂಗಯ್ಯ ಮತ್ತು ತಾ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಜಣ್ಣ ಅವರು ಮಸ್ಟರಿಂಗ್ ಕಾರ್ಯ ನಡೆಯುತ್ತಿದ್ದ ಸಂದರ್ಭ ಉಪಸ್ಥಿತರಿದ್ದು ಮಾರ್ಗದರ್ಶನ ಮಾಡಿದರು.
“ಸಖಿ’ ಜನಸ್ನೇಹಿ ಮತದಾನ ಕೇಂದ್ರ
ಅಮಾrಡಿ ಗ್ರಾಮದ ಲೊರೆಟ್ಟೋ ಖಾಸಗಿ ಹಿ. ಪ್ರಾ. ಶಾಲೆಯನ್ನು ಜನಸ್ನೇಹಿ ಮತದಾನ ಕೇಂದ್ರ ಸಖಿ ಎಂದು ಹೆಸರಿಸಿ ವಿಶೇಷವಾಗಿ ಶೃಂಗರಿಸಲಾಗಿದೆ. ಅಮಾrಡಿ ಗ್ರಾಮ ಮತ್ತು ಕೇಪು ಗ್ರಾಮದ ಸ.ಹಿ.ಪ್ರಾ. ಶಾಲೆಗಳನ್ನು ಜನಸ್ನೇಹಿ ಮತಗಟ್ಟೆಗಳಾಗಿ ಪರಿವರ್ತಿಸಲಾಗಿದೆ. ಕೇಪು ಗ್ರಾಮ ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿದ್ದರೂ ಪುತ್ತೂರು ವಿಧಾನಸಭಾ ಕ್ಷೇತ್ರವಾಪ್ತಿಗೆ ಬರುವುದಾಗಿ ಸಹಾಯಕ ಚುನಾವಣಾಧಿಕಾರಿ
ಇ.ಒ. ರಾಜಣ್ಣ ತಿಳಿಸಿದ್ದಾರೆ. ಸಖಿ ಮತದಾನ ಕೇಂದ್ರದಲ್ಲಿ ಚುನಾವಣಾಧಿಕಾರಿ ಸಹಿತ ಎಲ್ಲರೂ ಮಹಿಳಾ ಸಿಬಂದಿ ಇರುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Golden Jubliee: ಪತ್ರಿಕೆಯ ಓದು ಪ್ರತಿಯೊಬ್ಬರಿಗೂ ಆಹಾ! ಎನಿಸುವಂತಿರಲಿ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
High Court: ʼಅಪರಾಧಿ ಪತಿಯೊಂದಿಗೆ ನೆಲೆಸಿದ ಮಾತ್ರಕ್ಕೆ ಪತ್ನಿಯನ್ನೂ ಅಪರಾಧಿ ಮಾಡಲಾಗದುʼ
Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.