ಆದಾಯಕ್ಕಿಂತ ಅಧಿಕ ಆಸ್ತಿ: ಲೋಕೋಪಯೋಗಿ ಎಂಜಿನಿಯರ್ ಖುಲಾಸೆ
Team Udayavani, Feb 11, 2023, 10:42 PM IST
ಮಂಗಳೂರು: ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಪ್ರಕರಣದಲ್ಲಿ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಅರುಣ್ ಪ್ರಕಾಶ್ ಡಿ’ಸೋಜಾ ಅವರನ್ನು ನ್ಯಾಯಾಲಯ ದೋಷಮುಕ್ತಗೊಳಿಸಿದೆ.
ಬಂಟ್ವಾಳದಲ್ಲಿ ಸಹಾಯಕ ಜೂನಿಯರ್ ಆಗಿದ್ದ ಅವರ ಬಂಟ್ವಾಳದಲ್ಲಿದ್ದ ಮನೆಗೆ 2014ರ ಡಿ.19ರಂದು ಮಂಗಳೂರು ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ವಿವಿಧ ದಾಖಲೆಗಳು, ಚಿನ್ನಾಭರಣಗಳು, ನಗದು, ಠೇವಣಿಪತ್ರ ಇತ್ಯಾದಿಗಳನ್ನು ವಶಪಡಿಸಿಕೊಂಡಿದ್ದರು. ಲಂಚ ವಿರೋಧಿ ಕಾಯ್ದೆ 1988ರ ಕಲಂ 13(1)(ಇ )ಮತ್ತು 13(2)ರಂತೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಆರೋಪಿ ಪರ ನ್ಯಾಯವಾದಿ ದಿನೇಶ್ ಹೆಗ್ಡೆ ಉಳೆಪಾಡಿ ವಾದಿಸಿದ್ದರು. ಲೋಕಾಯುಕ್ತ ಪೊಲೀಸರು ಯಾವುದೇ ವೈಜ್ಞಾನಿಕ ವಿಧಾನ ಅನುಸರಿಸದೆ ಸುಳ್ಳು ಆರೋಪ ಪಟ್ಟಿಯನ್ನು ದಾಖಲಿಸಿದ್ದಾರೆ. ಆಭರಣಗಳಿಗೆ ಸಂಬಂಧಿಸಿ ಆಯಾ ಕಾಲ ಘಟ್ಟದಲ್ಲಿ ಚಾಲ್ತಿಯಲ್ಲಿದ್ದ ಮೌಲ್ಯದ ಬದಲು ದಾಳಿ ಮಾಡಿದ ದಿನಾಂಕದ ಮೌಲ್ಯ ಪರಿಗಣಿಸಿದ್ದಾರೆ. ಆರೋಪಿಯ ಪತ್ನಿ ಶ್ರೀಮಂತ ಕುಟುಂಬದಿಂದ ಬಂದವರಾಗಿದ್ದು, ಅವರಿಗೆ ಹಿರಿಯರಿಂದ ಆಸ್ತಿ, ಬಂಗಾರದ ಒಡವೆಗಳು ಬಳುವಳಿಯಾಗಿ ಬಂದಿತ್ತು. ಅವುಗಳಲ್ಲಿ ಕೆಲವು ಆಸ್ತಿಗಳನ್ನು ಮಾರಾಟ ಮಾಡಿದ ಹಣವೂ ಇತ್ತು. ಇವೆಲ್ಲವನ್ನೂ ಆರೋಪಿಯ ಖಾತೆಗೆ ಪರಿಗಣಿಸಿ ಸುಳ್ಳು ಆರೋಪ ಮಾಡಲಾಗಿದೆ. ಆರೋಪಿ ಯಾವುದೇ ಆಸ್ತಿ ಸಂಪಾದನೆ ಮಾಡಿದ್ದ ಬಗ್ಗೆ ದಾಖಲೆಗಳು ಇಲ್ಲ. ತನ್ನ ಸೇವಾ ಅವಧಿಯಲ್ಲಿ ಯಾವುದೇ ಬಂಗಾರದ ಒಡವೆಗಳನ್ನು ಖರೀದಿಸಿಲ್ಲ. ವಶಪಡಿಸಿಕೊಂಡಿರುವ ಬಂಗಾರ ಗಳಲ್ಲಿ ಸ್ವಲ್ಪ ಅಂಶ ಅವರ ತಾಯಿಗೆ ಸಂಬಂಧಿಸಿದ್ದು, ಅವರು 2008ರಲ್ಲಿ ಮೃತಪಟ್ಟಿದ್ದಾರೆ. ಬಳಿಕ ಇಬ್ಬರು ಸಹೋದರ ಮತ್ತು ಒಬ್ಬ ಸಹೋದರಿಯೊಂದಿಗೆ ಜಂಟಿ ಹಕ್ಕನ್ನು ಹೊಂದಿದ್ದಾರೆ. ಉಳಿದ ಚಿನ್ನ ಮತ್ತು ಠೇವಣಿ ಪತ್ನಿಗೆ ಸಂಬಂಧಿಸಿದ್ದಾಗಿದೆ.
ಲೋಕಾಯುಕ್ತ ಪೊಲೀಸರು ಆರೋಪಿ ಮತ್ತು ಆತನ ಪತ್ನಿಯ ಆದಾಯಗಳನ್ನು ಬೇರೆ ಬೇರೆಯಾಗಿ ಪರಿಗಣಿಸದೆ ಆರೋಪಿಯ ಖಾತೆಗೆ ಸೇರಿಸಿದ್ದಾರೆ. ಇದು ಅವೈಜ್ಞಾನಿಕ ಮತ್ತು ಕಾನೂನು ಬಾಹಿರ ತನಿಖೆ ಎಂದು ವಾದಿಸಿದ್ದರು.
ವಾದವನ್ನು ಪುರಸ್ಕರಿಸಿದ ಮಂಗಳೂರಿನ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಿ.ಬಿ.ಜಕಾತಿ ಅವರು ಫೆ.10ರಂದು ಅಂತಿಮ ತೀರ್ಮಾನ ಪ್ರಕಟಿಸಿ ಆರೋಪಿಯನ್ನು ದೋಷಮುಕ್ತಗೊಳಿಸಿದೆ. ವಶಪಡಿಸಿಕೊಂಡಿರುವ ಎಲ್ಲ ಸೊತ್ತು, ದಾಖಲೆಗಳನ್ನು ಹಿಂದಿರುಗಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಸುಳ್ಯ: ಪಯಸ್ವಿನಿ ನದಿಯಲ್ಲಿ ಮುಳುಗಿ ಪುತ್ತೂರಿನ ಇಬ್ಬರು ಯುವಕರು ಸಾವು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.