ಔಷಧೀಯ ಕ್ಷೇತ್ರದಲ್ಲಿ ಉದ್ಯೋಗಾವಕಾಶ ವಿಪುಲ: ಡಾ| ಮುಹಮ್ಮದ್ ಸಲಾಹುದ್ದೀನ್
Team Udayavani, Apr 21, 2019, 6:00 AM IST
ಕೊಣಾಜೆ: ಆರೋಗ್ಯ ರಂಗದಲ್ಲಿ ಔಷಧ ತಜ್ಞ ಪಾತ್ರ ಪ್ರಮುಖವಾಗಿದ್ದು,ವಿಶ್ವದಲ್ಲಿ ಭಾರತವು ಔಷಧೀಯ ಕ್ಷೇತ್ರಕ್ಕೆ ಮಹತ್ತರವಾದ ಕೊಡುಗೆಯನ್ನು ನೀಡು ತ್ತಿದೆ ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಬೋರ್ಡ್ ಆಫ್ ಸ್ಟಡೀಸ್ ಚೇರ್ ಮ್ಯಾನ್ ಡಾ.ಮುಹಮ್ಮದ್ ಸಲಾಹುದ್ದೀನ್ ಅಭಿಪ್ರಾಯಪಟ್ಟರು.
ಕೊಣಾಜೆ ನಡುಪದವಿನಲ್ಲಿರುವ ಪಿ.ಎ. ಕಾಲೇಜ್ ಆಫ್ ಫಾರ್ಮಸಿಯು ಮಲ್ಟಿ ಪರ್ಪಸ್ ಹಾಲ್‌ನಲ್ಲಿ ನಡೆದ “ಎಪಿಸ್ಟಿಮ್ 2ಏ19′ ಪ್ರಥಮ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಔಷಧೀಯ ವಿದ್ಯಾರ್ಥಿಗಳಿಗೆ ತನ್ನ ರಂಗದಲ್ಲಿ ವಿಪುಲವಾದ ಉದ್ಯೋಗದ ಅವಕಾಶಗಳಿದ್ದು ಬದ್ಧತೆ ಹಾಗೂ ಜವಾ ಬ್ದಾರಿಯೊಂದಿಗೆ ಕರ್ತವ್ಯ ನಿರ್ವಹಿಸಬೇಕು ಎಂದರು.
ಪಿ.ಎ. ಎಜುಕೇಶನ್‌ನ ಶೈಕ್ಷಣಿಕ ನಿರ್ದೇ ಶಕ ಡಾ| ಸಫ್ರಾìಜ್ ಜೆ. ಹಾಶಿಮ್ ಮಾತ ನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಆತ್ಮವಿಶ್ವಾಸ, ದೃಢಚಿತ್ತತೆ ಮತ್ತು ಸಂಘಟನ ಕೌಶಲವನ್ನು ಹೆಚ್ಚಿಸುವುದಾದರೆ ತಮ್ಮ ವೃತ್ತಿ ಜೀವನದಲ್ಲಿ ಯಶಸ್ಸು ಹೊಂದಲು ಸಾಧ್ಯ ಎಂದರು.
ಪಿ.ಎ. ಎಂಜಿನಿಯರಿಂಗ್ ಉಪ ಪ್ರಾಂಶುಪಾಲ ಡಾ| ರಮೀಜ್, ಹೆತ್ತವರ ಮತ್ತು ಮಕ್ಕಳ ಕರ್ತವ್ಯಗಳ ಬಗ್ಗೆ ಮಾತನಾಡಿದರು.
ಎಂ.ಬಿ.ಎ. ವಿಭಾಗದ ನಿರ್ದೇಶಕಿ ಡಾ| ಲತಾ ಕೃಷ್ಣನ್, ಪಿ.ಎ. ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ| ಝೋಹರ ಅಬ್ಟಾಸ್ ಶುಭ ಹಾರೈಸಿದರು.
ಪ್ರಥಮ ಸೆಮಿಸ್ಟರ್‌ನಲ್ಲಿ ಗರಿಷ್ಠ ಅಂಕಗಳೊಂದಿಗೆ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳನ್ನು ಸಮ್ಮಾನಿಸಲಾಯಿತು. “ಫಾರ್ಮ ಏಸ್’ ಮ್ಯಾಗಜಿನ್ ಅನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಗೊಳಿಸಲಾಯಿತು.
ಪಿ.ಎ. ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ| ಸಲೀಮುಲ್ಲಾ ಖಾನ್ ವಾರ್ಷಿಕ ವರದಿಯನ್ನು ವಾಚಿಸಿದರು. ಪ್ರೊ| ವಿಜೇತ ಸ್ವಾಗತಿಸಿದರು. ಪ್ರೊ| ನಿಶ್ಮಿತಾ ಅತಿಥಿಗಳನ್ನು ಪರಿಚಯಿಸಿದರು. ಜಾಫರ್ ಕಿರಾತ್ ಪಠಿಸಿದರು. ಶಹನಾಜ್ ಮತ್ತು ಶಝನ ಮೆಹ್ರಾ ಕಾರ್ಯ ಕ್ರಮ ನಿರೂಪಿಸಿದರು. ಡಾ| ಮುಹಮ್ಮದ್ ಮುಬೀನ್ ವಂದಿಸಿದರು.
ಹೊಣೆಗಾರಿಕೆಯಿಂದ ಕೂಡಿದೆ
ಮುಖ್ಯ ಅತಿಥಿಗಳಾಗಿ ಪಿ.ಎ. ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ| ಅಬ್ದುಲ್ ಶರೀಫ್ ಮಾತನಾಡಿ, ತಾಂತ್ರಿಕ ತಜ್ಞರು ನಿರ್ಜೀವ ವಸ್ತುಗಳೊಂದಿಗೆ ಕೆಲಸ ಮಾಡುವುದಾದರೆ ಔಷಧೀಯ ತಜ್ಞರು ಜೀವವಿರುವ ವಸ್ತುಗಳೊಂದಿಗೆ ಪ್ರಯೋಗಗಳನ್ನು ನಡೆಸುವವರಾಗಿದ್ದಾರೆ. ಆದ್ದ ರಿಂದ ಔಷಧ ತಜ್ಞರ ಪಾತ್ರವು ಬಹಳ ಸೂಕ್ಷ್ಮವಾಗಿದ್ದು, ಹೊಣೆಗಾರಿಕೆಯಿಂದ ಕೂಡಿದೆ ಎಂದರು.