Love Jihad; ಮಗಳನ್ನು ನಟೋರಿಯಸ್ ನಿಂದ ರಕ್ಷಿಸಿ: ಕಣ್ಣೀರು ಹಾಕಿದ ತಂದೆ

ಕರ್ನಾಟಕ ಸರ್ಕಾರ, ಮಂಗಳೂರು ಪೊಲೀಸರು ನನಗೆ ಸಹಾಯ ಮಾಡಬೇಕು...

Team Udayavani, Jul 11, 2024, 6:11 PM IST

1-wewq

ಮಂಗಳೂರು: ಲವ್ ಜಿಹಾದ್ ಗೆ ಬಲಿಯಾದ ಹಿಂದೂ ಹುಡುಗಿಯ ತಂದೆ ವಿನೋದ್ ತನ್ನ ಮಗಳನ್ನು ನಟೋರಿಯಸ್ ಕ್ರಿಮಿನಲ್ ಮುಹಮ್ಮದ್‌ ಅಶ್ಫಾಕ್‌ ನಿಂದ ರಕ್ಷಿಸುವಂತೆ ಮಾಧ್ಯಮ ಪ್ರತಿನಿಧಿಗಳ ಮುಂದೆ ಗುರುವಾರ ಕಣ್ಣೀರು ಹಾಕಿದ್ದಾರೆ.

ಮುಹಮ್ಮದ್‌ ಅಶ್ಫಾಕ್‌ ನಿಂದ ಯುವತಿಯ‌ ಅಪಹರಣ ಪ್ರಕರಣಕ್ಕೆ‌ ಸಂಬಂಧಿಸಿದಂತೆ ಯುವತಿಯ ತಂದೆ ವಿನೋದ್ ಕುಮಾರ್ ಅವರು ಮಾಧ್ಯಮದವರ ಜತೆ ಮಾತನಾಡಿ, ನಾನು ಅಲ್ಲಿನ ಜಮಾತ್ ಹೋಗಿ, ನನ್ನ ಮಗಳನ್ನು ಆತನಿಂದ ರಕ್ಷಿಸಿ ಕೊಡುವಂತೆ ಮನವಿ ಮಾಡುತ್ತೇನೆ ಎಂದು ಕಣ್ಣೀರು ಹಾಕಿದ್ದಾರೆ.

ಜೂ.6 ರಂದು ಅವಳು ಅಶ್ಫಾಕ್ ಜತೆ ಆಕೆಗೆ ಪ್ರೇಮ‌ ಇರುವುದು ಗೊತ್ತಾಯಿತು. ಅದಕ್ಕಾಗಿ ಬುದ್ದಿ ಹೇಳಿ ಉಳ್ಳಾಲದ‌ ಸಂಬಂಧಿಕರ ಮನೆಗೆ ಕಳುಹಿಸಿದ್ದೆವು. ಅದರೆ ಅತ ಅಲ್ಲಿಗೂ ಬಂದು ಜೂ.30 ರಂದು ಆಕೆಯನ್ನು ಅಪಹರಣ ಮಾಡಿದ್ದಾನೆ. ಮಗಳನ್ನು ಕರೆತರಲು ಸಾಕಷ್ಟು ಪ್ರಯತ್ನ ಮಾಡಿದರೂ ಸಾಧ್ಯವಾಗಿಲ್ಲ. ಕರ್ನಾಟಕ ಸರ್ಕಾರ, ಮಂಗಳೂರು ಪೊಲೀಸರು ನನಗೆ ಸಹಾಯ ಮಾಡಬೇಕು ಎಂದು ಮನವಿ ಮಾಡಿದರು.

ಪಾಂಡೇಶ್ವರದ ಶ್ರೀನಿವಾಸ ಕಾಲೇಜಿನಲ್ಲಿ ಮಗಳು ಬಿಸಿಎ ಓದುತ್ತಿದ್ದಳು. ಆದರೆ ದ್ವಿತೀಯ ವರ್ಷದ ಡಿಗ್ರಿಗೆ ಶುಲ್ಕ ಕಟ್ಟುವುದಕ್ಕೆ ಹಣ ಇರಲಿಲ್ಲ. ಹಾಗಾಗಿ ಅವಳು ಶಿಕ್ಷಣ ಮೊಟಕುಗೊಳಿಸಿದ್ದಳು. ಬಳಿಕ ಎರಡು ತಿಂಗಳು ಕಾಸರಗೋಡಿ ನಲ್ಲಿ ಕೆಲಸ ಮಾಡುತ್ತಿದ್ದಳು. ಈ ವೇಳೆ ಮಹಮ್ಮದ್ ಅಶ್ಫಾಕ್ ನ ಪರಿಚಯ ಆಗಿರಬೇಕು‌ ಎಂದು ಅವರು ತಿಳಿಸಿದರು.

ಆಶ್ಪಾಕ್ ನನ್ನ ಮಗನಿಗೆ‌ ‌ಕರೆ ಮಾಡಿ ಮಗಳನ್ನು ಕರೆದು ಕೊಂಡು ಓಡಿ ಹೋಗಿರುವುದಾಗಿ ಹೇಳಿದ್ದಾನೆ.‌ ಊರವರು ಹೇಳುವ ಪ್ರಕಾರ ಆತನಿಗೆ ಈಗಾಗಲೇ ಎರಡು ಮದುವೆಯಾಗಿದೆ. ಆತನ‌ ಮೇಲೆ ಹದಿನಾರಕ್ಕೂ ಹೆಚ್ಚು‌ ಕೇಸ್ ಗಳಿವೆ. ಪೊಲೀಸರು ಆತನನ್ನು ಬಂಧಿಸಿ, ಕಠಿನ ಕ್ರಮ‌ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಟಾಪ್ ನ್ಯೂಸ್

GST

Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ

fadnavis

Maharashtra; ಫ‌ಡ್ನವೀಸ್‌ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!

BJP 2

BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?

1-srrrr

English ತರಬೇತಿ ಮಾಧ್ಯಮವಷ್ಟೇ ಆಗಲಿ: ಗೊ.ರು.ಚನ್ನಬಸಪ್ಪ

Sheik Hasina

Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ

Uddav-2

Mumbai; ಚುನಾವಣೆಗೆ ಏಕಾಂಗಿ ಸ್ಪರ್ಧೆ: ಉದ್ಧವ್‌ ಶಿವಸೇನೆ ಇಂಗಿತ!

1-kann

Kannada; ಬಳ್ಳಾರಿಯಲ್ಲಿ 88ನೇ ಕನ್ನಡ ಸಾಹಿತ್ಯ ಸಮ್ಮೇಳನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10

Sullia: ಬಸ್‌ ನಿಲ್ದಾಣದಲ್ಲಿ ಮಲಗಿದ್ದ ಪ್ರಯಾಣಿಕನ ಬ್ಯಾಗ್‌, ಶೂ ಕಳವು

6

ಮಮ್ತಾಜ್‌ ಅಲಿ ಆತ್ಮಹತ್ಯೆಗೆ ಪ್ರಚೋದನೆ ಆರೋಪ: ಜಾಮೀನು ವಿಚಾರಣೆ ಅರ್ಜಿ ಮುಂದೂಡಿಕೆ

Traine-Spl

Special Trains: ಬೆಂಗಳೂರು -ಮಂಗಳೂರು ವಿಶೇಷ ಎಕ್ಸ್‌ಪ್ರೆಸ್‌ ರೈಲು

Cap-Brijesh-Chowta

Praveen Nettaru Case: ಮಂಗಳೂರಿನಲ್ಲಿ ಎನ್‌ಐಎ ಘಟಕಕ್ಕೆ ಶಕ್ತಿಮೀರಿ ಪ್ರಯತ್ನ: ಸಂಸದ ಚೌಟ

Karavali-utsava

Karavali Utsava: ವೈವಿಧ್ಯಮಯ ಸಂಸ್ಕೃತಿಯೇ ದ. ಕನ್ನಡ ಜಿಲ್ಲೆಯ ವಿಶೇಷತೆ: ಸಚಿವ ದಿನೇಶ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

10

Sullia: ಬಸ್‌ ನಿಲ್ದಾಣದಲ್ಲಿ ಮಲಗಿದ್ದ ಪ್ರಯಾಣಿಕನ ಬ್ಯಾಗ್‌, ಶೂ ಕಳವು

GST

Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ

fadnavis

Maharashtra; ಫ‌ಡ್ನವೀಸ್‌ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!

BJP 2

BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?

liqer-wine

Udupi: ಮೆಹಂದಿ ಪಾರ್ಟಿ ಮದ್ಯ ವಿತರಣೆಗೂ ಅನುಮತಿ ಕಡ್ಡಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.