ಪ್ರೀತಿ, ವಾತ್ಸಲ್ಯಗಳೇ  ಧರ್ಮ:  ಧರ್ಮಪಾಲನಾಥ ಸ್ವಾಮೀಜಿ

Team Udayavani, Feb 24, 2017, 2:17 PM IST

2302SLE-9.jpg

ಸುಳ್ಯ : ಅಗೋಚರವಾದ ಭಗವಂತನ ಇರುವಿಕೆಯನ್ನು ಅರ್ಥ ಮಾಡಿಕೊಳ್ಳದಿದ್ದರೆ ಈ ಮಾನವ ಜನ್ಮಕ್ಕೆ ಅರ್ಥವಿಲ್ಲ . ದಯೆ, ಕರುಣೆ, ಪ್ರೀತಿ, ವಾತ್ಸಲ್ಯ, ಅನುಕಂಪ ಇತ್ಯಾದಿಗಳು ಇದ್ದರೆ ಅದೇ ಧರ್ಮ ಎಂದು ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಹೇಳಿದರು.

ಅಡಾRರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನದ ಬ್ರಹ್ಮಕಲಶದ ಅಂತಿಮ ದಿನದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡುತ್ತಿದ್ದರು. ದಯೆ, ಕರುಣೆ, ಪ್ರೀತಿ, ವಾತ್ಸಲ್ಯ, ಅನುಕಂಪ ಇತ್ಯಾದಿಗಳು ಇದ್ದರೆ ಅದೇ ಧರ್ಮ. ಧರ್ಮದಲ್ಲಿ  ಅಸ್ಪೃಶತೆ, ಜಾತಿ-ಭೇದಗಳು, ಕೀಳರಿಮೆಗಳು ಇರಬಾರದು. ಶ್ರದ್ಧೆಯಿಂದ, ನಂಬಿಕೆಯಿಂದ ನಿಷ್ಕಲ್ಮಶ ಹೃದಯದಿಂದ ದಾನ ಮಾಡಿದರೆ ಅದು ಧರ್ಮವೆನಿಸುತ್ತದೆ. ಬರೇ ಬ್ರಹ್ಮಕಲಶ ಮಾಡಿದರೆ ಸಾಲದು. ದೇವಾಲಯಗಳಿಗೆ ಆಗಾಗ ಹೋಗುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಧಾರ್ಮಿಕ ಉಪನ್ಯಾಸ ಮಾಡಿದ ವೇ| ಮೂ| ಕುಂಟಾರು ರವೀಶ ತಂತ್ರಿ, ನಮ್ಮೊಳಗಿನ ದೇವರನ್ನು ಕಂಡುಕೊಳ್ಳಬೇಕು. ಆತ್ಮಚೈತನ್ಯದ ವೃದ್ಧಿಗಾಗಿ ದೇವರ ಆರಾಧನೆಯ ಹೊರತು ನಮ್ಮ ಸಂಕಷ್ಟ ಪರಿಹಾರಕ್ಕಾಗಿ ಅಲ್ಲ. ದೇವರ ಎದುರು ಸ್ವಾರ್ಥಕ್ಕಾಗಿ ಪ್ರಾರ್ಥನೆ ಮಾಡಬಾರದು  ಎಂದರು.

ನಮ್ಮ ದೇಶದಲ್ಲಿ ಇರುವ ಯಾವುದೇ ಆಚರಣೆಗಳಿಗೆ ಆಧಾರಗಳಿವೆ. ನಮ್ಮ ಧರ್ಮ, ಆಚರಣೆಗಳು ಇಂದು ಇಡೀ ಪ್ರಪಂಚದಲ್ಲಿ ಸರ್ವಮಾನ್ಯವಾಗಿವೆ. ದೇವಾಲಯಗಳು ಮನಸ್ಸಿಗೆ ಶಾಂತಿ, ಬುದ್ಧಿ, ಸಂಸ್ಕಾರ ನೀಡುತ್ತದೆ ಎಂದರು.ಬ್ರಹ್ಮಕಲಶ ಸಮಿತಿ ಗೌರವಾಧ್ಯಕ್ಷ , ಶಾಸಕ ಎಸ್‌. ಅಂಗಾರ ಸಭಾಧ್ಯಕ್ಷತೆ ವಹಿಸಿ, ಅಡಾRರು ಆಸುಪಾಸಿನ ಜನರ ಶ್ರಮ, ದುಡಿಮೆ, ಶಿಸ್ತನ್ನು ಶ್ಲಾಘಿಸಿದರು. ಸಮಿತಿ ಸಂಚಾಲಕ ನ. ಸೀತಾರಾಮ ಪ್ರಾಸ್ತಾವಿಕ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿಯ ಧಾರ್ಮಿಕ ಮುಂದಾಳು ಹರೀಶ್‌ ಪೂಂಜಾ ಭಾಗವಹಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ವ್ಯ.ಸ. ಅಧ್ಯಕ್ಷ ಗುರುರಾಜ್‌ ಭಟ್‌, ಬ್ರಹ್ಮಶ್ರೀ ವಾಸುದೇವ ತಂತ್ರಿ, ಹಿರಿಯರಾದ ಉಪೇಂದ್ರ ಕಾಮತ್‌, ವಿವಿಧ ಸಮಿತಿ ಪದಾಧಿಧಿಕಾರಿಗಳಾದ ಅಡ್ಡಂತಡ್ಕ ದೇರಣ್ಣ ಗೌಡ, ಎ.ಕೆ. ಭಾಸ್ಕರ ಪಟೇಲ್‌, ಜಯಂತ ಕಾಳಮನೆ, ಕುಕ್ಕೇಟಿ ಕುಶಾಲಪ್ಪ ಗೌಡ, ಜಯರಾಜ್‌ ಕುಕ್ಕೇಟಿ, ಹರಿಪ್ರಸಾದ್‌ ಅಡಾRರು, ಮುರಳೀಧರ ಅಡಾRರು, ಲಿಂಗಪ್ಪ ನಾೖಕ್‌, ಮಮತಾ, ಸುಲೋಚನಾ ನಾಯಕ್‌, ಶ್ರೀಕುಮಾರ್‌ ಭಟ್‌, ಶರತ್‌ ಅಡಾRರು, ದಿನೇಶ್‌ ಅಡಾRರು, ಡಾ| ಗೋಪಾಲಕೃಷ್ಣ ಭಟ್‌, ನಿವೇದಿತಾ ವಸಂತ, ಜಯರಾಮ ರೈ ಉಪಸ್ಥಿತರಿದ್ದರು.

ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಸುಧಾಕರ ಕಾಮತ್‌ ಸ್ವಾಗತಿಸಿ, ಜಯಪ್ರಸಾದ್‌ ಕಾರಿಂಜ ಹಾಗೂ ಶಶಿಧರ ಕಾರ್ಯಕ್ರಮ ನಿರೂಪಿಸಿದರು.

ಬ್ರಹ್ಮಕಲಶೋತ್ಸವ
ಗಣಪತಿ ಹೋಮ, ಕವಾಟೋದ್ಘಾಟನೆ, ಪ್ರಾಯಶ್ಚಿತ ಮತ್ತು ಶಾಂತಿ ಹೋಮ, ಕಲಶಾಭಿಷೇಕ, 1008 ಬ್ರಹ್ಮಕಲಶಾಭಿಷೇಕ, ಅವಭೃಥ ಪ್ರೋಕ್ಷಣೆ, ಮಹಾಪೂಜೆ, ಮಂತ್ರಾಕ್ಷತೆ ನಡೆಯಿತು. ಸಂಜೆ ಶ್ರೀದೇವರ ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ , ರಾಜಾಂಗಣ ಪ್ರಸಾದ ವಿತರಣೆಯಾಯಿತು.

ಟಾಪ್ ನ್ಯೂಸ್

Jagdeep Singh: ಈ ಸಿಇಒ ಪ್ರತಿದಿನ ಪಡೆಯುವ ಸಂಬಳ 48 ಕೋಟಿ ರೂ!…ಯಾರೀತ ಜಗದೀಪ್‌ ಸಿಂಗ್?

Jagdeep Singh: ಈ ಸಿಇಒ ಪ್ರತಿದಿನ ಪಡೆಯುವ ಸಂಬಳ 48 ಕೋಟಿ ರೂ!…ಯಾರೀತ ಜಗದೀಪ್‌ ಸಿಂಗ್?

6-kambala

Punjalakatte: ಹೊಕ್ಕಾಡಿಗೋಳಿ ವೀರ ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ

5-spcl

India- China border: ಭಾರತದ ಗಡಿಯಲ್ಲಿ ಚೀನ ದುಸ್ಸಾಹಸ !

Chhattisgarh: ಗುತ್ತಿಗೆದಾರನ ಭ್ರಷ್ಟಾಚಾರ ಬಯಲಿಗೆಳೆದ ಯೂಟ್ಯೂಬರ್‌ ಶವವಾಗಿ ಪತ್ತೆ!

Chhattisgarh: ಗುತ್ತಿಗೆದಾರನ ಭ್ರಷ್ಟಾಚಾರ ಬಯಲಿಗೆಳೆದ ಯೂಟ್ಯೂಬರ್‌ ಶವವಾಗಿ ಪತ್ತೆ!

Sydney: ಮೈದಾನ ತೊರೆದು ಆಸ್ಪತ್ರೆಗೆ ಹೊರಟ ಬುಮ್ರಾ; ಟೀಂ ಇಂಡಿಯಾ ಪಾಳಯದಲ್ಲಿ ಆತಂಕ| Video

Sydney: ಮೈದಾನ ತೊರೆದು ಆಸ್ಪತ್ರೆಗೆ ಹೊರಟ ಬುಮ್ರಾ; ಟೀಂ ಇಂಡಿಯಾ ಪಾಳಯದಲ್ಲಿ ಆತಂಕ| Video

Guns and Roses Review

Guns and Roses Review: ನೆತ್ತರ ಹಾದಿ ಪ್ರೇಮ್‌ ಕಹಾನಿ

2-vitla

Vitla: ಇಡಿ ಅಧಿಕಾರಿಗಳಂತೆ ನಟಿಸಿ ದರೋಡೆ: ದೋಚಿದ್ದು ಸುಮಾರು 30 ಲಕ್ಷ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-kambala

Punjalakatte: ಹೊಕ್ಕಾಡಿಗೋಳಿ ವೀರ ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ

2-vitla

Vitla: ಇಡಿ ಅಧಿಕಾರಿಗಳಂತೆ ನಟಿಸಿ ದರೋಡೆ: ದೋಚಿದ್ದು ಸುಮಾರು 30 ಲಕ್ಷ

Kambala

Kambala; ದೇವರ ಕಂಬಳ ಖ್ಯಾತಿಯ ಹೊಕ್ಕಾಡಿಗೋಳಿ ಕಂಬಳ 

POlice

Kokkada: ಕಳ್ಳತನ; ಇಬ್ಬರು ಆರೋಪಿಗಳು ವಶಕ್ಕೆ

4

Uppinangady: ತೆಂಗಿನಮರದಿಂದ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಮೃತ್ಯು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Jagdeep Singh: ಈ ಸಿಇಒ ಪ್ರತಿದಿನ ಪಡೆಯುವ ಸಂಬಳ 48 ಕೋಟಿ ರೂ!…ಯಾರೀತ ಜಗದೀಪ್‌ ಸಿಂಗ್?

Jagdeep Singh: ಈ ಸಿಇಒ ಪ್ರತಿದಿನ ಪಡೆಯುವ ಸಂಬಳ 48 ಕೋಟಿ ರೂ!…ಯಾರೀತ ಜಗದೀಪ್‌ ಸಿಂಗ್?

6-kambala

Punjalakatte: ಹೊಕ್ಕಾಡಿಗೋಳಿ ವೀರ ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ

6=anadpura

Anandapura: ಅಪರಿಚಿತ ವ್ಯಕ್ತಿಯ ಶವ ಪತ್ತೆ

5-spcl

India- China border: ಭಾರತದ ಗಡಿಯಲ್ಲಿ ಚೀನ ದುಸ್ಸಾಹಸ !

Chhattisgarh: ಗುತ್ತಿಗೆದಾರನ ಭ್ರಷ್ಟಾಚಾರ ಬಯಲಿಗೆಳೆದ ಯೂಟ್ಯೂಬರ್‌ ಶವವಾಗಿ ಪತ್ತೆ!

Chhattisgarh: ಗುತ್ತಿಗೆದಾರನ ಭ್ರಷ್ಟಾಚಾರ ಬಯಲಿಗೆಳೆದ ಯೂಟ್ಯೂಬರ್‌ ಶವವಾಗಿ ಪತ್ತೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.