ಮಾ. 23: ಬಪ್ಪನಾಡಿನಲ್ಲಿ ಬ್ರಹ್ಮಕಲಶ
Team Udayavani, Oct 30, 2017, 11:54 AM IST
ಮೂಲ್ಕಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಮುಂದಿನ ವರ್ಷ ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶದ ಪೂರ್ವಭಾವಿಯಾಗಿ ದೇಗುಲದಲ್ಲಿ ರವಿವಾರ ಮುಷ್ಟಿ ಕಾಣಿಕೆ ಜರಗಿತು.
ಬ್ರಹ್ಮಕಲಶೋತ್ಸವವನ್ನು 2018 ಮಾ. 23ರಂದು ನಡೆಸುವುದಾಗಿ ಈ ಸಂದರ್ಭದಲ್ಲಿ ದಿನ ನಿಗದಿ ಮಾಡಲಾಯಿತು. ಸುಮಾರು 10 ಸಾವಿರಕ್ಕೂ ಮಿಕ್ಕಿದ ಭಕ್ತರು ದೇವರಿಗೆ ತೆಂಗಿನ ಕಾಯಿ ಹಾಗೂ ಮುಷ್ಟಿ ಕಾಣಿಕೆಯನ್ನು ಸಮರ್ಪಿಸಿದರು. ಗೋಪಾಲಕೃಷ್ಣ ತಂತ್ರಿಗಳು ಸಾಮೂಹಿಕ ಪ್ರಾರ್ಥನೆ ನೆರವೇರಿಸಿದರು.
2006ರಲ್ಲಿ ಜರಗಿದ್ದ ಪುನರ್‌ನಿರ್ಮಾಣ ಮತ್ತು ಬ್ರಹ್ಮಕಲಶೋತ್ಸವ ಸಮಾರಂಭದ ಅಧ್ಯಕ್ಷರಾಗಿದ್ದ ಪಾದೆಮನೆ ಜಯಂತ್ ರೈ ಅವರು ಮೊದಲ ಕಾಣಿಕೆಯನ್ನು ಸಮರ್ಪಿಸಿದರು. ಈ ಸಂದರ್ಭದಲ್ಲಿ ಚಂಡಿಕಾಯಾಗ ಸಹಿತ ವಿವಿಧ ಧಾರ್ಮಿಕ ವಿಧಿವಿಧಾನಗಳು ಜರಗಿದವು.
ಶಾಸಕ ಕೆ. ಅಭಯಚಂದ್ರ ಜೈನ್, ಮಾಜಿ ಶಾಸಕ ಕೆ.ಅಮರನಾಥ ಶೆಟ್ಟಿ, ಆನುವಂಶಿಕ ಮೊಕ್ತೇಸರ ಹಾಗೂ
ಸೀಮೆಯರಸರಾದ ದುಗ್ಗಣ್ಣ ಸಾವಂತರು, ಆಡಳಿತ ಮೊಕ್ತೇಸರ ಎನ್.ಎಸ್. ಮನೋಹರ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಬಪ್ಪನಾಡು ನಾರಾಯಣ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ಜಯಮ್ಮ, ಸಮಿತಿ ಕಾರ್ಯಾಧ್ಯಕ್ಷ ಬಂಡಸಾಲೆ ಶೇಖರ ಶೆಟ್ಟಿ, ಮಾಜಿ ಆಡಳಿತ ಮೊಕ್ತೇಸರ ಹರಿಕೃಷ್ಣ ಪುನರೂರು, ರಾಜ್ಯ ಧಾರ್ಮಿಕ ಪರಿಷತ್‌ನ ಕೇಂಜ ಶ್ರೀಧರ ತಂತ್ರಿ, ಪಂಜ ಭಾಸ್ಕರ ಭಟ್, ಅರ್ಚಕರಾದ ಬಿ. ಕೃಷ್ಣದಾಸ ಭಟ್, ಶ್ರೀಪತಿ ಉಪಾಧ್ಯಾಯ, ಬಿ.ನರಸಿಂಹ ಭಟ್, ಗೋಪಾಲಕೃಷ್ಣ ಭಟ್, ಶ್ರೀವೆಂಕಟರಮಣ ದೇಗುಲದ ಮೊಕ್ತೇಸರ ಎಂ.ಅತುಲ್ ಕುಡ್ವ, ಏಳಿಂಜೆ ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಹೆಗ್ಡೆ, ಸಮಿತಿ ಪ್ರಧಾನ ಕಾರ್ಯದರ್ಶಿ ಸುನೀಲ್ ಆಳ್ವ, ಕೊಲ್ನಾಡು ಗುತ್ತು ರಾಮಚಂದ್ರ ನಾಯಕ್, ಸೂರ್ಯಕುಮಾರ್, ಕಾರ್ನಾಡು ಹರಿಹರ ಕ್ಷೇತ್ರದ ಆಡಳಿತೆ ಮೊಕ್ತೇಸರ ಎಂ.ಎಚ್. ಅರವಿಂದ ಪೂಂಜ, ಎಚ್.ವಿ.ಕೋಟ್ಯಾನ್, ಬಿ.ದೊಡ್ಡಣ್ಣ ಮೊಲಿ, ಸಂಜೀವ ದೇವಾಡಿಗ, ಉದಯ ಶೆಟ್ಟಿ, ಗುರುವಪ್ಪ ಕೋಟ್ಯಾನ್, ಹರಿಶ್ಚಂದ್ರ ಪಿ.ಸಾಲ್ಯಾನ್, ಕರುಣಾಕರ ಶೆಟ್ಟಿ, ಮುರಳೀಧರ ಭಂಡಾರಿ, ಸುರೇಶ್ ಬಂಗೇರ, ಕಿಶೋರ್ ಶೆಟ್ಟಿ, ವಿಶ್ವನಾಥ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.