Mangaluru ಎಂ.ಟಿ.ಪಿ.ಕಿಟ್ ಅಕ್ರಮ ಮಾರಾಟ ವಿರುದ್ಧ ಆರೋಗ್ಯ ಇಲಾಖೆ ಎಚ್ಚರಿಕೆ
Team Udayavani, Jul 5, 2024, 11:59 PM IST
ಮಂಗಳೂರು: ಗರ್ಭಧಾರಣೆಯನ್ನು ತಡೆಯುವ ಎಂ.ಟಿ.ಪಿ. ಕಿಟ್‌ಗಳ ಅಕ್ರಮ ಮಾರಾಟ ಮತ್ತು ಬಳಕೆಯನ್ನು ಜಿಲ್ಲೆಯಲ್ಲಿ ನಿಯಂತ್ರಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು.
ಎಂ.ಟಿ.ಪಿ. ಕಿಟ್ ಶೆಡ್ಯೂಲ್ ಎಚ್ ಗುಂಪಿನಲ್ಲಿದೆ. ಶೆಡ್ಯೂಲ್ ಎಚ್ ಔಷಧಗಳ ಬಳಕೆಯನ್ನು ವೈದ್ಯರ ಸಲಹೆಯಿಲ್ಲದೆ ಮಾರಾಟ ಮಾಡುವುದು ಅಪರಾಧವಾಗಿದೆ. ಎಂ.ಟಿ.ಪಿ. ಕಾಯಿದೆ 1971ರಂತೆ ಎಂಎಂಎ (ಮೆಡಿಕಲ್ ಮ್ಯಾನೇಜ್‌ಮೆಂಟ್ ಆಫ್ ಅಬಾರ್ಶನ್) ಮೂಲಕ ಮಾಡುವ ಸುರಕ್ಷಿತ ಗರ್ಭಪಾತ ಸೇವೆಗಳನ್ನು ನೋಂದಾಯಿತವಲ್ಲದ ಸ್ಥಳದಲ್ಲಿ ಮಾಡುವುದು/9 ವಾರಗಳ ಗರ್ಭಾವಸ್ಥೆಯಲ್ಲಿ ನೋಂದಾಯಿತರಲ್ಲದ ವೈದ್ಯರ ಚಿಕಿತ್ಸಾ ಸಲಹೆ/ಚೀಟಿಯೊಂದಿಗೆ ಮಾತ್ರೆಗಳನ್ನು ವಿತರಿಸಿ ಗರ್ಭಪಾತ ನಡೆಸುವುದು ಅಪರಾಧವಾಗಿರುತ್ತದೆ.
ಪ್ರತಿ ತಾಲೂಕು ಮಟ್ಟದಲ್ಲಿ ಎಂ.ಟಿ.ಪಿ. ಕಿಟ್ ಮಾರಾಟ, ದುರುಪಯೋಗ ತಡೆಗಟ್ಟಲು ಹಾಗೂ ಎಂ.ಟಿ.ಪಿ. ಕಾಯ್ದೆ ಉಲ್ಲಂಘನೆ ಕುರಿತು ಗಂಭೀರವಾಗಿ ಚರ್ಚಿಸಿ ಸಂಬಂಧಪಟ್ಟ ಜಿಲ್ಲಾ ಸಹಾಯಕ ಔಷಧ ನಿಯಂತ್ರಕರು ತಾಲೂಕು ಆರೋಗ್ಯಾಧಿಕಾರಿಗಳು ಹಾಗೂ ಸಂಬಂಧಪಟ್ಟ ವ್ಯಾಪ್ತಿಯ ಸರಕಾರಿ ವೈದ್ಯಾಧಿಕಾರಿಗಳನ್ನು ಒಳಗೊಂಡ ತಂಡಗಳನ್ನು ರಚಿಸಲಾಯಿತು.
ಮುಂದಿನ ದಿನಗಳಲ್ಲಿ ಎಂ.ಟಿ.ಪಿ. ಕಿಟ್ ಮಾರಾಟ ಮಾಡುವ ಎಲ್ಲ ಔಷಧ , ಮಾರಾಟ ಅಂಗಡಿಗಳು, ಎಂ.ಟಿ.ಪಿ. ಕಾಯ್ದೆಯಡಿಯಲ್ಲಿ ನೋಂದಾಯಿತವಲ್ಲದ ಆಸ್ಪತ್ರೆಗಳು, ಕ್ಲಿನಿಕ್‌ಗಳ ಕಾರ್ಯಾಚರಣೆ ನಡೆಸಿ ಪರಿಶೀಲಿಸಲಾಗುವುದು. ಎಂ.ಟಿ.ಪಿ. ಕಿಟ್ ಅನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡುವ ಔಷಧ ಅಂಗಡಿಗಳ ಮೇಲೆ ಕಠಿನ ಕ್ರಮ ಜರಗಿಸುವ ಬಗ್ಗೆ ಚರ್ಚಿಸಲಾಯಿತು.
ಕೆ.ಪಿ.ಎಂ.ಇ. ಕಾಯ್ದೆ ಅಡಿಯಲ್ಲಿ ಎಲ್ಲ ಖಾಸಗಿ ಆರೋಗ್ಯ ಸಂಸ್ಥೆಗಳು ಕಡ್ಡಾಯವಾಗಿ ನೋಂದಣಿ ಮಾಡಿಸಿ ಸರಕಾರದ ಮಾರ್ಗಸೂಚಿಯಂತೆ. ನಿರ್ದಿಷ್ಟ ಬಣ್ಣ ಹಾಗೂ ಅಳತೆಯ ಬೋರ್ಡ್‌ಗಳನ್ನು ಜು.31ರೊಳಗೆ ಅಳವಡಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.