ಮಡಂತ್ಯಾರು: 48 ಲ. ರೂ. ಕಾಮಗಾರಿಗೆ ಶಿಲಾನ್ಯಾಸ
Team Udayavani, Dec 22, 2017, 2:16 PM IST
ಮಡಂತ್ಯಾರು: ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ಮಂಜೂರಾದ 48 ಲ.ರೂ. ಅನುದಾನದ ವಿವಿಧ ಕಾಮಗಾರಿಗಳ ಶಿಲಾನ್ಯಾಸ ಕಾರ್ಯಕ್ರಮ ಡಿ. 21ರಂದು ಮಡಂತ್ಯಾರು ಗ್ರಾ. ಪಂ. ಆವರಣದಲ್ಲಿ ನಡೆಯಿತು. ಮಂಗಳೂರು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ರಾಜಶೇಖರ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಗ್ರಾ.ಪಂ. ಅಧ್ಯಕ್ಷ ಗೋಪಾಲಕೃಷ್ಣ. ಅಧ್ಯಕ್ಷತೆ ವಹಿಸಿದ್ದರು.
ರಾಜಶೇಖರ ಶೆಟ್ಟಿ ಮಾತನಾಡಿ, ಪೆದ್ಯಾರು ಬಾಬು ಆಚಾರ್ಯ ಮನೆ ಬಳಿಯಿಂದ ಪಾರೆಂಕಿ ದೇವಸ್ಥಾನದ ತನಕ ರಸ್ತೆ ಕಾಂಕ್ರೀಟ್ಗೆ 20 ಲ. ರೂ., ಗ್ರಾ.ಪಂ. ಕಚೇರಿ ಮೇಲ್ಭಾಗದಲ್ಲಿ ಬಾಪೂಜಿ ಸೇವಾ ಭವನ ನಿರ್ಮಾಣಕ್ಕೆ 13 ಲ.ರೂ., ಬಸವನಗುಡಿ ಕಾಲನಿಯ ರಸ್ತೆ ಕಾಂಕ್ರೀಟ್ಗೆ 5 ಲ.ರೂ., ಪುಂಜಾಲಕಟ್ಟೆ ಪ್ರಥಮದರ್ಜೆ ಕಾಲೇಜು ಮುಂಭಾಗದಲ್ಲಿ ಆವರಣ ಗೋಡೆ ನಿರ್ಮಾಣಕ್ಕೆ 10 ಲ.ರೂ. ಅನುದಾನ ಸೇರಿ ಒಟ್ಟು 48 ಲ.ರೂ. ಕಾಮಗಾರಿ ನಡೆಯಲಿದೆ ಎಂದರು.
ಜಿ.ಪಂ. ಸದಸ್ಯೆ ಮಮತಾ ಶೆಟ್ಟಿ, ತಾ.ಪಂ. ಸದಸ್ಯೆ ವಸಂತಿ ಲಕ್ಷ್ಮಣ್, ಮಡಂತ್ಯಾರು ಗ್ರಾ.ಪಂ. ಉಪಾಧ್ಯಕ್ಷೆ ಜಯಂತಿ ಪಿ., ಅಭಿವೃದ್ಧಿ ಅಧಿಕಾರಿ ನಾಗೇಶ್ ಎಂ., ಸದಸ್ಯರಾದ ಕಿಶೋರ್ ಶೆಟ್ಟಿ, ದಯಾನಂದ, ಕಾಂತಪ್ಪ ಗೌಡ, ಹೇಮಾವತಿ, ರಮೇಶ್ ಮೊದಲಾದವರು ಉಪಸ್ಥಿತರಿದ್ದರು. ಕಾಂತಪ್ಪಗೌಡ ಸ್ವಾಗತಿಸಿದರು. ರಮೇಶ್ ಮೂಲ್ಯ ವಂದಿಸಿದರು.
ಅನುದಾನಕ್ಕೆ ಪ್ರಸ್ತಾವನೆ
ಮಡಂತ್ಯಾರು- ಪಾರೆಂಕಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಈ ರಸ್ತೆಯ ಕಾಮಗಾರಿ ಬಗ್ಗೆ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದು ಬಹುತೇಕ ಮಂಜೂರುಗೊಳ್ಳುವ ಹಂತದಲ್ಲಿದ್ದು ಸುಮಾರು 4.3 ಕೋ.ರೂ. ಅನುದಾನ ಸಿಗುವ ಭರವಸೆ ಇದೆ.
– ರಾಜಶೇಖರ ಶೆಟ್ಟಿ ,
ನಿರ್ದೇಶಕರು,ಕರಾವಳಿ ಅಭಿವೃದ್ಧಿ ಪ್ರಾಧಿಕಾರ, ಮಂಗಳೂರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಸಿ.ಟಿ.ರವಿ ಬಂಧನ ಪ್ರಕರಣ ಬೆಂಗಳೂರಿಗೆ ಸ್ಥಳಾಂತರ
Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್ಗೆ ಮಿಶ್ರ ಪ್ರತಿಕ್ರಿಯೆ
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Lalbagh: ಆಸ್ತಿ ತೆರಿಗೆ ಇಳಿಕೆಗೆ ಪಾಲಿಕೆ ಅವಳಿ ಪ್ರಸ್ತಾವನೆ
Om Prakash Chautala: ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ವಿಧಿವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.