ಮಡಂತ್ಯಾರು: ಕೃಷಿ ವಿಚಾರ ಸಂಕಿರಣ


Team Udayavani, Nov 6, 2017, 3:55 PM IST

6Nov–13.jpg

ಮಡಂತ್ಯಾರು: ಮಡಂತ್ಯಾರು ಸೇಕ್ರೆಡ್‌ ಹಾರ್ಟ್‌ ಚರ್ಚ್‌ನ ಶತಮಾನೋತ್ತರ ಬೆಳ್ಳಿಹಬ್ಬದ ಅಂಗವಾಗಿ ಯುವ ಜನತೆಗೆ ಕೃಷಿಯ ಬಗ್ಗೆ ಕಾಳಜಿ ಮೂಡಿಸುವ ಸಲುವಾಗಿ ರವಿವಾರ ಕೃಷಿ ವಿಚಾರ ಸಂಕಿರಣ ಕಾರ್ಯಕ್ರಮ ಹಮ್ಮಿಕೊಂಡಿತ್ತು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸೇಕ್ರೆಡ್‌ ಹಾರ್ಟ್‌ ಚರ್ಚ್‌ ಮಡಂತ್ಯಾರು, ಸೇಕ್ರೆಡ್‌ ಹಾರ್ಟ್‌ ಕೃಷಿ ಅಭಿವೃದ್ಧಿ ಸಮಿತಿ, ಕೆಥೋಲಿಕ್‌ ಸಭಾ ಮಡಂತ್ಯಾರು, ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಮಡಂತ್ಯಾರು ಇದಕ್ಕೆ ಸಹಕಾರ ನೀಡಿದ್ದು ಧರ್ಮಸ್ಥಳ ಡಾ| ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ನಡೆಯಿತು.

ಚರ್ಚ್‌ನ ಪ್ರಧಾನ ಧರ್ಮಗುರು ಫಾ| ಬೇಸಿಲ್‌ ವಾಸ್‌ ಅಧ್ಯಕ್ಷತೆ ವಹಿಸಿ, ಇಂದು ನಮ್ಮಲ್ಲಿ ಕೃಷಿಗೆ ಬೆಂಬಲ ಸಿಗುತ್ತಿಲ್ಲ ರೈತರು ದೇಶದ ಬೆನ್ನೆಲುಬು ಎನ್ನುವುದನ್ನು ಜನ ಮರೆತಿದ್ದಾರೆ. ಸರಕಾರ ಕೃಷಿಗೆ ಹೆಚ್ಚಿನ ಆದ್ಯತೆ ನೀಡುತ್ತಿಲ್ಲ, ರೈತರಿರುವಾಗ ಪ್ರೋತ್ಸಾಹ ಇಲ್ಲ, ಪ್ರೋತ್ಸಾಹ ಸಿಗುವಾಗ ರೈತರೇ ಇಲ್ಲ ಎನ್ನುವ ಹಂತ ತಲುಪಿದೆ. ಕೃಷಿಯಲ್ಲಿ ಭತ್ತದ ಬೆಳೆಗೆ ಹೆಚ್ಚು ಆದ್ಯತೆ ನೀಡಿ, ಇವರಲ್ಲಿ ಭರವಸೆ ಮೂಡುವಂತೆ ಮಾಡಬೇಕು. ಆಗ ಕೃಷಿಯಲ್ಲಿ ಲಾಭ ಗಳಿಸಬಹುದು ಎಂದವರು ತಿಳಿಸಿದರು.

ಕೃಷಿ ಉತ್ಸವದ ನೆನಪು ಮರುಕಳಿಗೆ
ಇಲ್ಲಿ ನಡೆದ ವಿಚಾರ ಸಂಕಿರಣವು ಕೃಷಿ ಉತ್ಸವದಂತೆ ಭಾಸವಾಯಿತು. ಹಲವು ಮಂದಿ ಕೃಷಿಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ವಿವಿಧ ರೀತಿಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮೆರವಣಿಗೆ, ನೃತ್ಯ, ಶ್ವಾನ ಶೋ, ವಿವಿಧ ಕೃಷಿ ಸಂಬಂಧಿ ಸಲಕರಣೆಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ಎಲ್ಲ ಧರ್ಮೀಯರೂ ಇದರಲ್ಲಿ ಪಾಲ್ಗೊಂಡಿದ್ದರು. ಪುರಾತನ ಕಾಲದ ಕೃಷಿ ಸಲಕರಣೆ, ಮನೆಯಲ್ಲಿ ಉಪಯೋಗಿಸುತ್ತಿದ್ದ ವಸ್ತುಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು.

ಕೃಷಿಕರಿಗೆ ಸಮ್ಮಾನ
ಕೃಷಿಯಲ್ಲಿ ಲಾಭ ಗಳಿಸಿ ಇದರಲ್ಲಿ ನಂಬಿಕೆ ಮೂಡಬೇಕು. ಕೃಷಿಯಲ್ಲಿ ದೇಶದಲ್ಲಿಯೇ ಉತ್ತಮ ಸಾಧನೆಗೈದ ಕೆಲವರನ್ನು ಇಲ್ಲಿ ಸಮ್ಮಾನಿಸಲಾಯಿತು. ಲಿಂಗಪ್ಪ ಗೌಡ, ರೊನಾಲ್ಡ್‌ ಸಿಕ್ವೇರ, ಲಿಗೋರಿ ಲೋಬೊ, ಥೋಮಸ್‌ ಮೋರಸ್‌ ಅವರನ್ನು ಸಮ್ಮಾನಿಸಲಾಯಿತು.

ಫಾ| ಜೆರೋಮ್‌ ಡಿ’ಸೋಜಾ, ಆಲ್ವಿನ್‌ ಡಿ’ಸೋಜಾ, ವಿಲಿಯಂ ಕೊಡ್ದೆರೊ, ಮಡಂತ್ಯಾರು ಗ್ರಾಮ ಪಂಚಾಯತ್‌ ಅಧ್ಯಕ್ಷ ಗೋಪಾಲಕೃಷ್ಣ, ಜಿಲ್ಲಾ ಪಂಚಾಯತ್‌ ಸದಸ್ಯೆ ಮಮತಾ ಶೆಟ್ಟಿ, ಚಂದ್ರಶೇಖರ್‌, ಐವನ್‌ ಸಿಕ್ವೇರಾ, ಉಮೇಶ್‌, ಬಾಲಚಂದ್ರ ಹೆಗ್ಡೆ, ರೊನಾಲ್ಡ್  ಸಿಕ್ವೇರಾ, ತಾ.ಪಂ. ಸದಸ್ಯೆ ವಸಂತಿ ಎಲ್‌., ಲಿಯೋ ರೋಡ್ರಿಗಸ್‌ ಅವರನ್ನು ಸಮ್ಮಾನಿಸಲಾಯಿತು.

ವಿಚಾರ ಗೋಷ್ಠಿಯಲ್ಲಿ ಮನೋಜ್‌ ಮಿನೇಜಸ್‌, ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ| ಹರೀಶ್‌ ಶೆಣೈ,
ಮಾಲಾಡಿ ಪಂಚಾಯತ್‌ ಅಧ್ಯಕ್ಷ ಬೇಬಿ ಸುವರ್ಣ, ತಾ.ಪಂ. ಸದಸ್ಯ ಜೋಯೆಲ್‌ ಮೆಂಡೋನ್ಸಾ, ಪುಷ್ಪರಾಜ್‌ ಹೆಗ್ಡೆ
ಮತ್ತಿತರರು ಉಪಸ್ಥಿತರಿದ್ದರು.

ಪ್ರದರ್ಶನದಲ್ಲಿ ಏನೇನಿತ್ತು?
ಇಲ್ಲಿ ತುಳುನಾಡಿನ ಹಳೇ ಕಾಲದ ಮನೆ, ಕೃಷಿ ಸಲಕರಣೆಗಳು, ಪ್ರತೀ ವಸ್ತುವಿನ ಮೇಲೆ ಚೀಟಿ ಬರೆದು ಅಂಟಿಸಲಾಗಿತ್ತು. ಗದ್ದೆ ಉಳುಮೆ ಮಾಡುವ ನೊಗ, ನೆತ್ತಿಬಲ್ಲು, ಕೊಂಚಬಲ್ಲು, ಸೇಮಿಗೆ ಮಣೆ, ಕಳಸೆ, ಕುರುವೆ, ಚಕ್ಕುಲಿ ಮಣೆ, ಕೈ ಸಟ್ಟಿ, ಮೊಟಕತ್ತಿ, ಸೇರು, ಸಟ್ಟುಗ, ತಡುಪೆ, ಕೈ ಕತ್ತಿ, ಇಸ್ತ್ರಿಪೆಟ್ಟಿಗೆ ಇತ್ಯಾದಿ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.

ಕೃಷಿ ಯಂತ್ರಗಳು, ಮಾರಾಟ ಮಳಿಗೆ
ಭತ್ತ ನಾಟಿ ಮಾಡುವ ಯಂತ್ರ, ಕಾಳುಮೆಣಸು ಬೇರ್ಪಡಿಸುವ ಯಂತ್ರ, ಯಂತ್ರ ಚಾಲಿತ ಎಚ್‌ಟಿಪಿ ಸ್ಪ್ರೇಯರ್‌, ಹಾರ್ವೆಸ್ಟರ್‌ ರೀಪರ್‌ ಭತ್ತ ಕಟಾವು ಯಂತ್ರ, ಗ್ರೀನ್‌ ವೇ ಕುಕ್‌ ಸ್ಟೌವ್‌, ಸೆಲ್ಕೋ ಸೌರ ವಿದ್ಯುತ್‌, ಗೋಬರ್‌ ಗ್ಯಾಸ್‌, ಸಿರಿ ಗ್ರಾಮೀಣ ವಸ್ತುಗಳ ಮತ್ತು ಸಿರಿ ಆಹಾರ ಧಾನ್ಯಗಳ ಪ್ರದರ್ಶನ ಮಳಿಗೆಗಳು ಪ್ರಮುಖ ಆಕರ್ಷಣೀಯವಾಗಿತ್ತು .

2,700 ಕೋ.ರೂ. ಪ್ರಗತಿ ನಿಧಿ ಸಾಲ
ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗಡೆ ಪ್ರಪಂಚದಲ್ಲಿ ಅತಿ ಹೆಚ್ಚು ಕೃಷಿಕರಿಗೆ ಸಹಕರಿಸುತ್ತಿದ್ದು 35 ವರ್ಷಗಳಲ್ಲಿ 30 ಜಿಲ್ಲೆಗಳಲ್ಲಿ 35 ಲಕ್ಷ ರೈತರೊಂದಿಗೆ 2,700 ಕೋ.ರೂ. ಪ್ರಗತಿ ನಿಧಿ ಸಾಲ ನೀಡುವ ಕೆಲಸ ಮಾಡಿದ್ದಾರೆ. ಕೃಷಿಯ ಅಭಿವೃದ್ಧಿ, ರೈತರ ಕಾಳಜಿಗಾಗಿ ಕೃಷಿಗೆ ಸಂಬಂಧಪಟ್ಟ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುತ್ತ ಬಂದಿದ್ದು ಭೂಮಿಯನ್ನು ಹಸಿರಾಗಿಸುವ ಪ್ರಯತ್ನದಲ್ಲಿದ್ದಾರೆ. 
ವಿವೇಕ್‌ ವಿನ್ಸೆಂಟ್‌ ಪಾಯ್ಸ,
  ನಿರ್ದೇಶಕರು, ಅಖಿಲ ಕರ್ನಾಟಕ
  ಜನಜಾಗೃತಿ ವೇದಿಕೆ

ಟಾಪ್ ನ್ಯೂಸ್

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

8-belthangady

Belthangady: ಕ್ರಿಸ್ಮಸ್‌ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು

6-ptr

Puttur: ಬಸ್ – ಬೈಕ್‌ ಅಪಘಾತ; ಸವಾರ ಸಾವು

1

Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!

2-bntwl

Bantwala: ಚಾಲಕನ‌ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.