ಮಾಡಾವು 110 ಕೆ.ವಿ. ವಿದ್ಯುತ್‌ ಸಬ್‌ಸ್ಟೇಷನ್‌: ಶಾಸಕರ ವೀಕ್ಷಣೆ

ಕಾಮಗಾರಿ ಆಗಸ್ಟ್‌ನಲ್ಲಿ ಪೂರ್ಣ

Team Udayavani, May 18, 2019, 5:50 AM IST

32

ಸವಣೂರು: ಮಾಡಾವು 110 ಕೆ.ವಿ. ವಿದ್ಯುತ್‌ ಸಬ್‌ಸ್ಟೇಷನ್‌ ಕಾಮಗಾರಿ ಪ್ರಗತಿಯಲ್ಲಿದ್ದು, ಸುಳ್ಯ ಶಾಸಕ ಎಸ್‌. ಅಂಗಾರ ಅವರು ಶುಕ್ರವಾರ ಭೇಟಿ ನೀಡಿ ಕೆಪಿಟಿಸಿಎಲ್ ಅಧಿಕಾರಿಗಳಿಂದ ಕಾಮಗಾರಿ ಪ್ರಗತಿಯ ಕುರಿತು ಮಾಹಿತಿ ಪಡೆದುಕೊಂಡರು.

ಕೆಪಿಟಿಸಿಎಲ್ ಸುಪರಿಟೆಂಡೆಂಟ್ ಎಂಜಿನಿ ಯರ್‌ ರವಿಕಾಂತ್‌ ಕಾಮತ್‌ ಕಾಮಗಾರಿ ಕುರಿತಂತೆ ಮಾಹಿತಿ ನೀಡಿ ಆಗಸ್ಟ್‌ನಲ್ಲಿ ಸಬ್‌ಸ್ಟೇಶನ್‌ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು. ನೆಟ್ಲಮುಟ್ನೂರಿನಿಂದ ಕಬಕ ಮೂಲಕ ಮಾಡಾವಿಗೆ 110 ಕೆ.ವಿ. ವಿದ್ಯುತ್‌ ಸರಬರಾಜು ಮಾಡುವ ಯೋಜನೆ ಇದಾಗಿದೆ. ಬೊಳಿಕಲದಲ್ಲಿ ಸುಮಾರು 4 ಎಕ್ರೆ ಪ್ರದೇಶದಲ್ಲಿ ಸಬ್‌ಸ್ಟೇಷನ್‌ ನಿರ್ಮಾಣದ ಕಾಮಗಾರಿ ಪ್ರಗತಿಯಲ್ಲಿದೆ.

ಹೀಗಿದೆ ಯೋಜನೆ
ನೆಟ್ಲಮುಟ್ನೂರಿನಿಂದ ಮಾಡಾವಿಗೆ 110 ಕೆ.ವಿ. ವಿದ್ಯುತ್‌ ಲೈನ್‌ ಎಳೆಯುವ ಮೂಲಕ ಮಾಡಾವಿನಲ್ಲಿ ಸಬ್‌ ಸ್ಟೇಷನ್‌ ಆರಂಭವಾಗುತ್ತದೆ. ಮಾಡಾವಿ ನಿಂದ ಸುಳ್ಯಕ್ಕೆ- ಕಡಬ, ಆಲಂಕಾ ರಿಗೆ ವಿದ್ಯುತ್‌ ಸರಬರಾಜು ಮಾಡುವ ಬೃಹತ್‌ ಯೋಜನೆ ಇದಾಗಿದೆ. ಕಬಕದಿಂದ ಮಾಡಾವು ತನಕ ಒಟ್ಟು 27 ಕಿ.ಮೀ. ದೂರದಲ್ಲಿ ಲೈನ್‌ ಎಳೆಯುವ ಕಾಮಗಾರಿ ನಡೆಯುತ್ತಿದೆ. ಒಟ್ಟು 107 ವಿದ್ಯುತ್‌ ಲೈನ್‌ ಟವರ್‌ಗಳ ನಿರ್ಮಾಣ ಪ್ರಗತಿಯಲ್ಲಿದೆ.

ದಿನಪೂರ್ತಿ ವಿದ್ಯುತ್‌
ಮಾಡಾವಿನಲ್ಲಿ ಸಬ್‌ ಸ್ಟೇಷನ್‌ ಆರಂಭ ವಾದಲ್ಲಿ ಸುಳ್ಯ, ಆಲಂಕಾರು, ಕುಂಬ್ರ ಮತ್ತು ಕಡಬ ಭಾಗದಲ್ಲಿ ವಿದ್ಯುತ್‌ ವಿತರಣೆಗೆ ಮುಕ್ತ ಅವಕಾಶ ದೊರೆಯುತ್ತದೆ. ಬಳಿಕ ದಿನದ 24 ಗಂಟೆಯೂ ವಿದ್ಯುತ್‌ ಪೂರೈಸಲು ಇದು ಸಹಕಾರಿಯಾಗಲಿದೆ. 110 ಕೆ.ವಿ. ಲೈನ್‌ ಆಗಿರುವ ಕಾರಣ ಬೃಹತ್‌ ಆಕಾರದ ಟವರ್‌ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಒಂದೊಂದು ಟವರ್‌ಗೆ 7ರಿಂದ 10 ಸೆಂಟ್ಸ್‌ ಭೂಮಿ ಬಳಕೆಯಾಗುತ್ತದೆ. 27 ಕಿ.ಮೀ.ನಲ್ಲಿ ಒಟ್ಟು 107 ಟವರ್‌ಗಳ ನಿರ್ಮಾಣ ಕಾಮಗಾರಿ ಬಹುತೇಕ ಮಗಿದಿದೆ ಎಂದು ಕೆಪಿಟಿಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದರು.

ಈ ಯೋಜನೆ ಯಶಸ್ವಿಯಾದಲ್ಲಿ ಮಾಡಾವು, ಸುಳ್ಯ, ಆಲಂಕಾರು, ಕಡಬ ಮತ್ತು ಕುಂಬ್ರ ವ್ಯಾಪ್ತಿಯಲ್ಲಿ ಹೆಚ್ಚುವರಿ ವಿದ್ಯುತ್‌ ವಿತರಣೆಯಾಗುತ್ತದೆ. ಈಗಾಗಲೇ ಈ ಭಾಗದಲ್ಲಿ ಲೋ ವೋಲೆrೕಜ್‌ ಸಮಸ್ಯೆ ಇದ್ದು, ಅದಕ್ಕೆ ಪರಿಹಾರ ಕಾಣಲಿದೆ. ದಿನದ 24 ಗಂಟೆಯೂ ವಿದ್ಯುತ್‌ ನೀಡುವಲ್ಲಿ ಸಹಕಾರಿಯಾಗಲಿದೆ. ಈಗ ಸವಣೂರು ಉಪ ವಿದ್ಯುತ್‌ ಕೇಂದ್ರದ ಮೂಲಕ ಆಲಂಕಾರು, ಕಡಬ ಮೊದಲಾದೆಡೆ ಸರಬರಜಾಗುತ್ತಿದ್ದು, ಮಾಡಾವು ಸಬ್‌ಸ್ಟೇಶನ್‌ ಪೂರ್ಣವಾಗಿ ಕಾರ್ಯಾರಂಭ ಮಾಡಿದರೆ ಸವಣೂರು ಉಪಕೇಂದ್ರ ವ್ಯಾಪ್ತಿಯ ವಿದ್ಯುತ್‌ ಸಮಸ್ಯೆಯೂ ನಿವಾರಣೆಯಾಗಲಿದೆ.

ಕಾಮಗಾರಿ ಕುರಿತಂತೆ ಕೆಪಿಟಿಸಿಎಲ್ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ಗಂಗಾಧರ, ಅಸಿಸ್ಟೆಂಟ್ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ಸತೀಶ್‌, ಅಸಿಸ್ಟೆಂಟ್ ಎಂಜಿನಿಯರ್‌ ಬಸವರಾಜು, ಪ್ರಾಜೆಕ್ಟ್ ಎಂಜಿನಿಯರ್‌ ವಿಜೇಂದ್ರ ಅವರು ಶಾಸಕರಿಗೆ ಮಾಹಿತಿ ನೀಡಿದರು.

ಜಿಲ್ಲಾ ಬಿಜೆಪಿ ಸದಸ್ಯ ರಾಕೇಶ್‌ ರೈ ಕೆಡೆಂಜಿ, ಸುಳ್ಯ ಕಿಸಾನ್‌ ಸಂಘದ ಪ್ರಮುಖರಾದ ಪಿಜಿಎಸ್‌ಎನ್‌ ಪ್ರಸಾದ್‌, ಸವಣೂರು ಗ್ರಾಮ ಪಂಚಾಯತ್‌ ಅಧ್ಯಕ್ಷೆ ಇಂದಿರಾ ಬಿ.ಕೆ., ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಅಧ್ಯಕ್ಷ ಗಣೇಶ್‌ ನಿಡ್ವಣ್ಣಾಯ, ಉಪಾಧ್ಯಕ್ಷ ತಾರಾನಾಥ ಕಾಯರ್ಗ, ಬಾಳಿಲ ಗ್ರಾ.ಪಂ. ಸದಸ್ಯ ರಾಧಾಕೃಷ್ಣ ರಾವ್‌ ಮತ್ತಿತರರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

CT Ravi case:ಬೆಳಗಾವಿ ಕೋರ್ಟ್‌ ನಲ್ಲಿ Bailಗಾಗಿ ವಾದ ಮಂಡನೆ-ವಿಚಾರಣೆ 3ಗಂಟೆಗೆ ಮುಂದೂಡಿಕೆ

CT Ravi case:ಬೆಳಗಾವಿ ಕೋರ್ಟ್‌ ನಲ್ಲಿ Bailಗಾಗಿ ವಾದ ಮಂಡನೆ-ವಿಚಾರಣೆ 3ಗಂಟೆಗೆ ಮುಂದೂಡಿಕೆ

Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್‌ ಅನಿಸಿತು…

Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್‌ ಅನಿಸಿತು…

22-hunsur

Hunsur: ಒಂದೆಡೆ ಚಿರತೆ ಸೆರೆ, ಮತ್ತೊಂದೆಡೆ ಅಪಘಾತ

CDS ಬಿಪಿನ್‌ ರಾವತ್‌ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಪತನಕ್ಕೆ ಮಾನವ ಲೋಪವೇ ಕಾರಣ: ವರದಿ

Human Error: ಮಾನವ ಲೋಪದಿಂದಲೇ CDS ರಾವತ್‌ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಪತನ: ವರದಿ

21-sabarimala

Sabarimala: ಭಕ್ತರ ಸುರಕ್ಷೆಗಾಗಿ ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ ರವಿ ಹೇಳಿಕೆ ಪ್ರಕರಣ; ಕಣ್ಣೀರು ಹಾಕಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

Belagavi: ಸಿ.ಟಿ ರವಿ ಹೇಳಿಕೆ ಪ್ರಕರಣ; ಕಣ್ಣೀರು ಹಾಕಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್‌ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್‌ ಏನು?

UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್‌ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್‌ ಏನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1(1

Sullia: ವಿಎಒ ಹೊಸ ಕಟ್ಟಡಕ್ಕೆ ಅನುದಾನವಿಲ್ಲ !

8-belthangady

Belthangady: ಬೈಕಿಗೆ ಕಾರು ಢಿಕ್ಕಿ, ಓಡಿಲ್ನಾಳದ ಯುವಕ ಸಾವು

4-train

Train; ಮಂಗಳೂರು-ಪುತ್ತೂರು ಪ್ಯಾಸೆಂಜರ್‌ ರೈಲು ಸುಬ್ರಹ್ಮಣ್ಯಕ್ಕೆ?

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

8-belthangady

Belthangady: ಕ್ರಿಸ್ಮಸ್‌ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1(1

Sullia: ವಿಎಒ ಹೊಸ ಕಟ್ಟಡಕ್ಕೆ ಅನುದಾನವಿಲ್ಲ !

CT Ravi case:ಬೆಳಗಾವಿ ಕೋರ್ಟ್‌ ನಲ್ಲಿ Bailಗಾಗಿ ವಾದ ಮಂಡನೆ-ವಿಚಾರಣೆ 3ಗಂಟೆಗೆ ಮುಂದೂಡಿಕೆ

CT Ravi case:ಬೆಳಗಾವಿ ಕೋರ್ಟ್‌ ನಲ್ಲಿ Bailಗಾಗಿ ವಾದ ಮಂಡನೆ-ವಿಚಾರಣೆ 3ಗಂಟೆಗೆ ಮುಂದೂಡಿಕೆ

Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್‌ ಅನಿಸಿತು…

Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್‌ ಅನಿಸಿತು…

22-hunsur

Hunsur: ಒಂದೆಡೆ ಚಿರತೆ ಸೆರೆ, ಮತ್ತೊಂದೆಡೆ ಅಪಘಾತ

Sakrebailu: ತಾಂತ್ರಿಕ ದೋಷದಿಂದ ಸುಟ್ಟು ಕರುಕಲಾದ ಬಸ್

Sakrebailu: ತಾಂತ್ರಿಕ ದೋಷದಿಂದ ಸುಟ್ಟು ಕರಕಲಾದ ಬಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.