ಸ್ವಚ್ಛತೆ ಮನಸ್ಸಿನಲ್ಲಿ ಅಂತರ್ಗತವಾಗಲಿ: ಡಾ| ರವಿ
Team Udayavani, Jun 15, 2018, 10:57 AM IST
ಕೊಡಿಯಾಲಬೈಲ್ : ಸ್ವಚ್ಛತೆ ಎಂಬುದು ಆಲೋಚನ ಕ್ರಮವಾಗಬೇಕು. ಆ ಮೂಲಕ ಪ್ರತಿಯೊಬ್ಬರ ಮನಸ್ಸಿನಲ್ಲಿ ಅಂತರ್ಗತವಾಗಬೇಕು ಎಂದು ಜಿ.ಪಂ. ಸಿಇಒ ಡಾ| ಎಂ. ಆರ್. ರವಿ ಹೇಳಿದರು. ರಾಮಕೃಷ್ಣ ಮಿಶನ್ ಸ್ವಚ್ಛ ಮಂಗಳೂರು ಆಶ್ರಯದಲ್ಲಿ ‘ಸ್ವಚ್ಛತೆಗಾಗಿ ಜಾದೂ’ ದ.ಕ. ಜಿಲ್ಲೆಯಾದ್ಯಂತ 100 ಶಾಲೆಗಳಲ್ಲಿ ಮೆಗಾ ಮ್ಯಾಜಿಕ್ ಸ್ಟಾರ್ ಕುದ್ರೋಳಿ ಗಣೇಶ್ ಅವರಿಂದ ನಡೆಯುವ ಜಾದೂ ಪ್ರದರ್ಶನವನ್ನು ಅವರು ಕೊಡಿಯಾಲಬೈಲ್ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ಗುರುವಾರ ಉದ್ಘಾಟಿಸಿದರು.
ಭಾರತದ ಭವಿಷ್ಯ ವಿದ್ಯಾರ್ಥಿಗಳ ಕೈಯಲ್ಲಿದೆ. ಸ್ವಚ್ಛ ಮತ್ತು ಸುಂದರ ಭಾರತ ನಿರ್ಮಾಣದ ಕನಸನ್ನು ಎಳವೆಯಿಂದಲೇ ಮಕ್ಕಳಲ್ಲಿ ಬಿತ್ತಬೇಕು. ಆ ಮೂಲಕ ಸ್ವಚ್ಛ ಭಾರತ ಕನಸನ್ನು ಸಾಕಾರಗೊಳಿಸಬೇಕು ಎಂದು ಅವರು ಆಶಿಸಿದರು.
ದೇಶ ಸ್ವಚ್ಛವಾಗಿಟ್ಟುಕೊಳ್ಳಿ
ಅಧ್ಯಕ್ಷತೆ ವಹಿಸಿದ್ದ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮೀ ಜಿತಕಾಮಾನಂದಜೀ ಮಹಾರಾಜ್ ಮಾತನಾಡಿ, ಭಾರತದ ಮುಂದಿನ ಪ್ರಜೆಗಳಾದ ವಿದ್ಯಾರ್ಥಿಗಳು ಮನೆ, ಮನಗಳನ್ನು ಶುಚಿಯಾಗಿ ಡುವುದರೊಂದಿಗೆ ಸಮಾಜ, ಆ ಮೂಲಕ ದೇಶವನ್ನು ಸ್ವತ್ಛವಾಗಿಟ್ಟುಕೊಳ್ಳಬೇಕು ಎಂದು ನುಡಿದರು.
ಎಂಆರ್‌ಪಿಎಲ್ ಜನರಲ್ ಮ್ಯಾನೇಜರ್ ಹರೀಶ್ ಬಾಳಿಗಾ, ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಕಾರ್ಯದರ್ಶಿ ರಂಗನಾಥ್ ಭಟ್, ಜಾದೂ ಕಲಾವಿದ ಕುದ್ರೋಳಿ ಗಣೇಶ್, ಸ್ವತ್ಛ ಮಂಗಳೂರು ಮುಖ್ಯ ಸಂಯೋಜಕ ಉಮಾನಾಥ್ ಕೋಟೆಕಾರ್ ಉಪಸ್ಥಿತರಿದ್ದರು.
ಪರಿಸರ ಉಳಿಸಲು ಜಾದೂ ತಂತ್ರ
ಜಾದೂ ಮೂಲಕ ಸ್ವಾಮಿ ವಿವೇಕಾನಂದರ ಭಾವಚಿತ್ರವನ್ನು ಸೃಷ್ಟಿಸಿದ ಜಾದೂಗಾರ ಕುದ್ರೋಳಿ ಗಣೇಶ್ ಬಳಿಕ ಜಾದೂವಿನಿಂದಲೇ ಹೂಹಾರ ಸೃಷ್ಟಿಸಿ ಸ್ವಾಮೀಜಿಯವರ ಭಾವಚಿತ್ರಕ್ಕೆ ಹಾಕಿದರು. ಸ್ವಚ್ಛ ಭಾರತ ಪರಿಕಲ್ಪನೆ ಸಾರುವ ವಿವಿಧ ಜಾದೂಗಳನ್ನು ಪ್ರದರ್ಶಿಸಿದರು. ಭೂಮಿಯ ಒಡಲಿಗೆ ಕಸ, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ನಿರಂತರ ಸುರಿಯುತ್ತಿದ್ದರೆ, ಒಣ ಭೂಮಿ, ನೀರಿನ ಅಲಭ್ಯತೆ, ವಿಷಾನಿಲ ಉತ್ಪತ್ತಿಯನ್ನು ಜಾದೂ ಮೂಲಕ ಸೃಷ್ಟಿಸಿ ಪ್ರದರ್ಶಿಸಿದರು. ಅಲ್ಲದೆ ಗಿಡಕ್ಕೆ ನೀರೆರೆದು ಪೋಷಿಸುತ್ತಿದ್ದರೆ ಹೆಮ್ಮರವಾಗಿ ಬೆಳೆಯುವ ಬಗೆಯನ್ನೂ ತಮ್ಮ ಮಾಯಾ ಕೈಚಳಕದಿಂದ ಪ್ರದರ್ಶಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.