ನೆನೆಯುವ ಅನುದಿನ; ಕದ್ರಿ ಶ್ರೀ ಮಂಜುನಾಥ, ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ
Team Udayavani, Feb 21, 2020, 5:04 AM IST
ಶಿವ ಶಿವ ಎಂದರೆ ಭಯವಿಲ್ಲ, ಶಿವನಾಮಕೆ ಸಾಟಿ ಬೇರಿಲ್ಲ ಎನ್ನುತ್ತದೆ ಒಂದು ಹಾಡು. ಶಿವನನ್ನು ಭಜಿಸುವುದರ ಮಹತ್ವ ಇಂಥದ್ದು. ಅಂಥ ಮಹಾಶಿವನ ದಿನವಿದು, ಶಿವರಾತ್ರಿ. ಉಪವಾಸ, ಜಾಗರಣೆಗಳೊಂದಿಗೆ ಲಯಾಧಿಪತಿ ಸದಾಶಿವನ ಭಜನೆ ಈ ದಿನದ ವೈಶಿಷ್ಟé. ನಾಡಿನ ಎಲ್ಲ ಶಿವ ದೇಗುಲಗಳು ಶಿವರಾತ್ರಿ ಆಚರಣೆಗೆ ಸಿದ್ಧವಾಗಿವೆ. ಮನೆಗಳಲ್ಲೂ ಹರನಿಗೆ ವಿಶೇಷ ಅರ್ಚನೆ, ಅಭಿಷೇಕ ಇತ್ಯಾದಿ ನಡೆಯಲಿವೆ. ಈ ಹಿನ್ನೆಲೆಯಲ್ಲಿ ವಿವಿಧ ದೇವಾಲಯಗಳ ಶಿವರಾತ್ರಿ ಸಂಭ್ರಮದ ಇಣುಕುನೋಟ ಇಲ್ಲಿದೆ.
ಕದ್ರಿ ಶ್ರೀ ಮಂಜುನಾಥ ದೇವಸ್ಥಾನ
ಶ್ರೀ ಕ್ಷೇತ್ರ ಕದಳಿ ಮಂಜುನಾಥ ದೇವರ ಸನ್ನಿಧಿಯು ತುಳು ನಾಡಿನ ಪ್ರಧಾನ ದೇವ ಮಂದಿರಗಳಲ್ಲಿ ಒಂದು. ಪರಶುರಾಮನು ದುಷ್ಟ ಕ್ಷತ್ರಿಯರನ್ನೆಲ್ಲ ಸಂಹರಿಸಿ ಸಹ್ಯಾದ್ರಿಯಲ್ಲಿ ಬಂದು ನೆಲೆಸಿದ್ದಲ್ಲದೆ, ವಶಪಡಿಸಿಕೊಂಡ ರಾಜ್ಯವನ್ನೆಲ್ಲ ಗುರುದಕ್ಷಿಣೆಯ ರೂಪದಲ್ಲಿ ಕಶ್ಯಪರಿಗೆ ನೀಡಿ, ಶಿವನನ್ನು ಕುರಿತು ತಪಸ್ಸು ಮಾಡುತ್ತಾನೆ. ತಪಸ್ಸಿಗೆ ಮೆಚ್ಚಿದ ಶಿವನು ಕದಳಿ ಕ್ಷೇತ್ರದಲ್ಲಿ ಮಂಜುನಾಥನಾಗಿ ಅವತರಿಸಿದನೆಂದು ಪ್ರತೀತಿ. ಕ್ಷೇತ್ರದಲ್ಲಿ ದೇವ ಮಂದಿರವು ಕೆಳಭಾಗದಲ್ಲಿದ್ದು, ಒಂಬತ್ತು ಕೆರೆಗಳು ಮೇಲಿವೆ. ಬಳಿಯಲ್ಲಿ ಶ್ರೀ ಗೋಮುಖ ಗಣಪತಿ ದೇವಸ್ಥಾನವಿದ್ದು, ಗೋಮುಖದಿಂದ ನಿತ್ಯವೂ ಹರಿಯುವ ಕಾಶೀ ಭಾಗೀರಥಿ ತೀರ್ಥದ ಮೂಲವನ್ನು ಕಂಡು ಹುಡುಕಿದವರಿಲ್ಲ.
ಈ ಬಾರಿಯ ವಿಶೇಷ: ಫೆ. 21ರಂದು ಬೆಳಗ್ಗೆ ರುದ್ರಾಭಿಷೇಕ, ರಂಗಪೂಜೆ, ರಥೋತ್ಸವ ನಡೆದು ರಾತ್ರಿಯಿಡೀ ಜಾಗರಣೆ ನಡೆಸಲಾಗುತ್ತದೆ.
ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ
1912ರಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳು ಸ್ಥಾಪನೆ ಮಾಡಿದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರವು ಪ್ರಸ್ತುತ ದೇಶ ವಿದೇಶಗಳಲ್ಲಿಯೂ ಪ್ರಸಿದ್ಧಿ ಯಾಗಿದೆ. ಸಾಂಪ್ರದಾಯಿಕ ಶಿಲ್ಪ ಕಲಾ ಶಾಸ್ತ್ರದೊಂದಿಗೆ ಆಧುನಿಕ ವಾಸ್ತುಶಿಲ್ಪ ವಿನ್ಯಾಸವನ್ನು ಸಮ್ಮಿಲನಗೊಳಿಸಿ ಆಕ ರ್ಷಕ ಶೈಲಿಯಲ್ಲಿ 1991ರಲ್ಲಿ ಈ ದೇವಸ್ಥಾನ ನವೀಕರಣಗೊಂಡಿದೆ. 1991ರಿಂದ ಬಿ. ಜನಾರ್ದನ ಪೂಜಾರಿ ಅವರು ಕ್ಷೇತ್ರದ ಜೀರ್ಣೋದ್ಧಾರ, ನವೀಕರಣಕ್ಕೆ ಸ್ಫೂರ್ತಿ ಯಾಗಿ, ಪ್ರಸ್ತು ತವೂ ಕ್ಷೇತ್ರದ ಉಸ್ತುವಾರಿ ಯನ್ನು ನಿರ್ವಹಿ ಸುತ್ತಿದ್ದಾರೆ. ನಗರದ ಎಲ್ಲ ದೇವಸ್ಥಾನಗಳ ಪೈಕಿ ಮೊದಲು 1991ರಿಂದಲೇ ಶ್ರೀ ಕ್ಷೇತ್ರದಲ್ಲಿ ಅನ್ನಸಂತರ್ಪಣೆ ಶುರುವಾಗಿದೆ. ಕ್ಷೇತ್ರದಲ್ಲಿ ಶಿವರಾತ್ರಿ ಸಂದರ್ಭದಲ್ಲಿಯೇ ಜಾತ್ರೆ ನಡೆಯುತ್ತದೆ.
ಈ ಬಾರಿಯ ವಿಶೇಷ: ಫೆ. 21ರಂದು ಮಹಾರು ದ್ರಾ ಭಿಷೇಕ, ಶತ ಸೀಯಾಳ ಅಭಿಷೇಕ, ರಾತ್ರಿ 1ಕ್ಕೆ ಶಿವಬಲಿ, ಜಾಗರಣೆ ಬಲಿ, ರಥೋತ್ಸವ, ಕೆರೆ ದೀಪ ಜರಗಲಿವೆ.
ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ
ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನವು ಸುಮಾರು 800 ವರ್ಷಗಳಿಗಿಂತಲೂ ಅಧಿಕ ಇತಿಹಾಸವನ್ನು ಹೊಂದಿದ್ದು, 9 ಗ್ರಾಮಗಳಿಗೆ ಸೇರಿದ ಮಾಗಣೆ ದೇವಾಲಯವಾಗಿ ಪ್ರಸಿದ್ಧಿ ಪಡೆದಿದೆ. ಕವೇರ ಎಂಬ ಮಹಾಮುನಿಯೋರ್ವ ರಿಂದ ಅರ್ಚಿತವಾದ ಶಿವ ಈ ಊರಿನಲ್ಲಿ ನೆಲೆಸಿರುವುದರಿಂದ ಕಾವೂರು ಎಂಬ ಹೆಸರು ಬಂದಿದೆ. ಕ್ಷೇತ್ರದ ಧ್ವಜಾ ರೋಹಣದಂದು ಗರುಡ ಏರಿಸುವ ಧ್ವಜ ಸ್ತಂಭವು ಸುಮಾರು 37 ಅಡಿ ಎತ್ತರದ ಏಕಶಿಲಾ ಕಂಬವಾಗಿದ್ದು, ಜಿಲ್ಲೆ ಯಲ್ಲಿ ಅಪೂರ್ವ ಏಕ ಶಿಲಾ ಧ್ವಜಸ್ತಂಭ ಇರುವ ದೇಗುಲ ಇದಾಗಿದೆ. ಶ್ರೀ ಕ್ಷೇತ್ರವು ಅಳುಪರಸ ಕುಂದವರ್ಮನ ಕಾಲದಲ್ಲಿ ವಿಶೇಷ ನಿರ್ಮಾಣವೆಂಬ ಉಲ್ಲೇಖವಿದೆ.
ಈ ಬಾರಿಯ ವಿಶೇಷ: ಫೆ. 21ರಂದು ಬೆಳಗ್ಗೆ 6.30ರಿಂದ ವೇದಘೋಷ ಸೇವೆ, 7ರಿಂದ 9ರ ವರೆಗೆ ಸುಪ್ರ ಭಾತ ಸಂಗೀತ ಸೇವೆ, ಸಂಜೆ ಭಜನೆ ನಡೆಯಲಿದೆ.
ಸೂರಿಂಜೆ ಶ್ರೀ ಪೊನ್ನಗಿರಿ ಮಹಾಲಿಂಗೇಶ್ವರ
ಸುರತ್ಕಲ್: ಸೂರಿಂಜೆ ಕೋಟೆ ಶ್ರೀ ಪೊನ್ನಗಿರಿ ಮಹಾಲಿಂಗೇಶ್ವರ ದೇವಸ್ಥಾನ ಅತೀ ಪುರಾತನ ದೇವಸ್ಥಾನಗಳಲ್ಲಿ ಒಂದಾಗಿದೆ. ಶಿಬರೂರು, ಕೈಯೂರು, ಕುತ್ತೆತ್ತೂರು, ಸೂರಿಂಜೆ ಗ್ರಾಮದ ಮಾಗಣೆ, ಗ್ರಾಮ ದೇಗುಲ. ಧಾರ್ಮಿಕ ದತ್ತಿ ಇಲಾ ಖೆಯ ಅಧೀನದಲ್ಲಿದೆ. ಎತ್ತರದ ಗುಡ್ಡದಲ್ಲಿ ಪ್ರತಿಷ್ಠಾಪಿತಗಾಗಿರುವ ಈ ದೇವಸ್ಥಾನದ ಮೇಲೆ ಸೂರ್ಯನ ಹೊಂಗಿರಣಗಳು ಸ್ವರ್ಣಮಯವಾಗಿ ಕಂಗೊಳಿಸುವ ಕಾರಣಕ್ಕೆ ಪೊನ್ನಗಿರಿ ಎಂಬ ಹೆಸರು ಬಂದಿದೆ. ಸೋಮವಾರ ವಿಶೇಷ ಪೂಜೆ, ಶಿವರಾತ್ರಿ ಕಾಲದಲ್ಲಿ ಉತ್ಸವ ನೆರವೇರುತ್ತದೆ. ಇಲ್ಲಿ ಫೆ. 21ರಂದು ಶಿವರಾತ್ರಿ ವಿಶೇಷ ಪೂಜೆಯೊಂದಿಗೆ ನಡೆಯುತ್ತದೆ. ಶತರುದ್ರಾಭಿಷೇಕ, ರಂಗಪೂಜೆ, ಭಜನೆ ಸಹಿತ ವಿಶೇಷ ಪೂಜೆ, ಅನ್ನಸಂತರ್ಪಣೆ ನಡೆಯುತ್ತದೆ.
ಈ ಬಾರಿಯ ವಿಶೇಷ: ಶಿವರಾತ್ರಿಯಂದೆ ಈ ಬಾರಿ ಜಾತ್ರೆ ಅಂಗವಾಗಿ ಧ್ವಜಾರೋಹಣ ನೆರವೇರುತ್ತಿರುವುದು ವಿಶೇಷವಾಗಿದೆ.
ಪಣಂಬೂರು ಶ್ರೀ ನಂದನೇಶ್ವರ ದೇವಸ್ಥಾನ
ಸುರತ್ಕಲ್: ಫಲ್ಗುಣಿ ನದಿ, ಸಮುದ್ರ ತೀರದಿಂದ ಒಂದೆರಡು ಕಿ.ಮೀ. ದೂರದಲ್ಲಿ ಶ್ರೀ ಕ್ಷೇತ್ರ ಪಣಂಬೂರು ಶ್ರೀ ನಂದನೇಶ್ವರ ದೇವಸ್ಥಾನವಿದೆ. ಕಲೆಗಳ ನಾಡು, ಕಲೆ ಸಾಂಸ್ಕೃತಿಕ, ಯಕ್ಷಗಾನಕ್ಕೆ ಆಶ್ರಯತಾಣವಾಗಿ ಈ ಕ್ಷೇತ್ರ ಪ್ರಸಿದ್ಧಿ ಹೊಂದಿದೆ. ಪಣಂಬೂರಿನಲ್ಲಿ ಇತಿಹಾಸಕ್ಕೆ ಸಂಬಂಧಪಟ್ಟಂತೆ ಶಿಲಾ ಶಾಸನಗಳು ದೊರಕಿದ್ದು, ಇದರಲ್ಲಿ ಗಣಪತಿ, ನಖ ರೇಶ್ವರ ದೇಗುಲವೆಂದು ಉಲ್ಲೇಖವಿದ್ದರೆ, ಧಾರ್ಮಿಕ ದತ್ತಿ ಇಲಾಖೆಯ ಪುಸ್ತಕದಲ್ಲಿ ನಂದನೇಶ್ವರ ದೇವಸ್ಥಾನ ಎಂಬ ಉಲ್ಲೇಖ ವಿದೆ. 1305ರ ಇಸವಿಗಿಂತ ಮೊದಲೇ ಈ ಪವಿತ್ರ ಸ್ಥಳದ ಇರುವ ಬಗ್ಗೆ ದಾಖಲೆ ಗಳಿದ್ದು, ದೇವಸ್ಥಾನವನ್ನು ಅಂದಿನ ಆಳ್ವಿಕೆಯ ನಂದನ ಹೆಗ್ಗಡೆ ರಾಜನು ಪ್ರತಿಷ್ಠಾಪಿಸಿರ ಬಹುದೆಂದು ಅಂದಾಜಿಸಲಾಗಿದೆ.
ಈ ಬಾರಿಯ ವಿಶೇಷ: ಫೆ. 21ರಂದು ರಾತ್ರಿ ದೊಡ್ಡ ರಂಗ ಪೂಜೆ, ದೇವರ ಬಲಿ ಸೇವೆ, ರುದ್ರಾಭಿಷೇಕ, ಚಂಡಿಕಾ ಯಾಗ, ಯಕ್ಷಗಾನ ನಡೆಯುತ್ತದೆ.
ಸುರತ್ಕಲ್ ಶ್ರೀ ಸದಾಶಿವ ದೇವಸ್ಥಾನ
ಸುರತ್ಕಲ್: ಇಲ್ಲಿನ ಮಾಗಣೆ ದೇವಸ್ಥಾನವಾದ ಸುರತ್ಕಲ್ ಶ್ರೀ ಮಹಾಗಣಪತಿ ಸದಾಶಿವ ದೇವಸ್ಥಾನವು ಸಾಕ್ಷಾತ್ ಶಿವನ ಆತ್ಮಲಿಂಗವೆಂದು ಹೇಳಲಾಗುತ್ತಿದೆ. ಇತಿಹಾಸದಲ್ಲಿರುವಂತೆ ಶಿವನ ಪರಮ ಭಕ್ತನಾದ ರಾವ ಣನು ಶಿವನನ್ನು ತಪಸ್ಸು ಮಾಡಿ ಆತ್ಮಲಿಂಗವನ್ನು ಪಡೆದುಕೊಂಡು ಲಂಕೆಗೆ ಹೋಗುವ ಸಂದರ್ಭ ಸ್ನಾನಾದಿ, ದೇವತಾ ಕಾರ್ಯ ಮಾಡಲು ನಿಂತಾಗ ನೆಲಕ್ಕೆ ತಾಗದಂತೆ ಆತ್ಮಲಿಂಗವನ್ನು ಇಡಬೇಕಾದ ಪ್ರಮೇಯ ಬಂದಾಗ ಸಾಕ್ಷಾತ್ ಗಣಪತಿಯೇ ವಟುವಿನ ರೂಪ ದಲ್ಲಿ ಬಂದು ರಾವಣನಿಗೆ ಆತ್ಮಲಿಂಗ ದಕ್ಕದಂತೆ ಮಾಡಿ ಆತನ ಶಕ್ತಿ ಯನ್ನು ಕುಂದಿಸುವ ಉಪಾಯ ಹೂಡುತ್ತಾನೆ. ರಾವಣನು ತನ್ನ ಬಲದಿಂದ ಆತ್ಮಲಿಂಗ ತೆಗೆಯಲು ಹೋದಾಗ ಉಳಿದ ಭಾಗವೆಂದು ಇಲ್ಲಿನ ಶಕ್ತಿಯನ್ನು ನಂಬಲಾಗುತ್ತಿದೆ.
ಈ ಬಾರಿಯ ವಿಶೇಷ: ಫೆ. 21ರಂದು ರುದ್ರ ಪಠಣ, ರುದ್ರಾಭಿಷೇಕ, ಬಿಲ್ವಾರ್ಚನೆ, ಭಜನೆ, ಶಿವಪೂಜೆ, ದೊಡ್ಡ ರಂಗಪೂಜೆ, ಉತ್ಸವ ನಡೆಯಲಿದೆ.
ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ
ಸುರತ್ಕಲ್: ಇಡ್ಯಾ ಶ್ರೀ ಮಹಾಗಣಪತಿ ಮಹಾಲಿಂಗೇಶ್ವರ ದೇವ ಸ್ಥಾನವು ವಿದ್ಯಾಧರ ಮುನಿಗಳಿಂದ ಪ್ರತಿಷ್ಠಾಪಿತವಾದ ಸ್ವಯಂಭೂ ಲಿಂಗಸ್ವರೂ ಪವಾಗಿದೆ. ಅಳುಪರ ಕಾಲದಲ್ಲಿನ ಶಿಲಾ ಶಾಸನ ದಲ್ಲೂ ಇಲ್ಲಿನ ದೇವ ಸ್ಥಾನದ ಉಲ್ಲೇಖವಿದೆ. ಶಿವಲಿಂಗ ದೊಂದಿಗೆ ಗಣಪತಿ, ಪಿಲಿ ಚಂಡಿ ದೈವ, ನಿತ್ಯವೂ ಸುರಂಗದ ಮೂಲಕ ಎಲ್ಲಿಂದ ಲೋ ನಿಗೂಢವಾಗಿ ನೀರು ಹರಿದು ಬರುತ್ತಿರುವ ಕಲ್ಯಾಣಿಯೊಂದು ಇಲ್ಲಿದೆ. ಮನಸ್ಸಿನ ಇಷ್ಟಾರ್ಥ ಕೋರಿಕೆಯೊಂದಿಗೆ ಬರುವ ಭಕ್ತ ರಿಗೆ ಕ್ಷೇತ್ರದಲ್ಲಿನ ಮಹಾಲಿಂಗೇಶ್ವರನು ಅಭಯ ನೀಡುತ್ತಾ ನೆಲೆಯಾಗಿದ್ದಾನೆ. ಇತ್ತೀಚೆಗೆ ಈ ದೇವಾಲಯದಲ್ಲಿ ಬ್ರಹ್ಮಕಲಶ, ನಾಗಮಂಡಲೋತ್ಸವ, ಧರ್ಮನೇಮ ಸಂಪನ್ನಗೊಂಡಿದೆ. ಧಾರ್ಮಿಕ ಕಾರ್ಯಕ್ರಮ ಸಂಭ್ರಮದಿಂದ ನಡೆಯಲಿದೆ.
ಈ ಬಾರಿಯ ವಿಶೇಷ: ಫೆ. 21ರಂದು ರುದ್ರ ಪಠಣ, ರುದ್ರಾಭಿಷೇಕ, ಬಿಲ್ವಾರ್ಚನೆ, ಭಜನೆ, ಶಿವಪೂಜೆ, ದೊಡ್ಡ ರಂಗಪೂಜೆ, ಉತ್ಸವ ನಡೆಯಲಿದೆ.
ಸೋಮೇಶ್ವರ ಶ್ರೀಸೋಮನಾಥ ದೇವಸ್ಥಾನ
ಸೋಮೇಶ್ವರ: ಇಲ್ಲಿನ ಸೋಮನಾಥ ದೇವಸ್ಥಾನ ಒಂಬತ್ತು ಮಾಗಣೆಗಳ ಪ್ರಧಾನ ಆರಾಧ್ಯ ದೇವರಾಗಿದ್ದು, ಶ್ರೀ ಕ್ಷೇತ್ರದಲ್ಲಿ ಫೆ. 21ರಂದು ಶಿವರಾತ್ರಿ ಉತ್ಸವ ವಿಜೃಂಭಣೆಯಿಂದ ನಡೆ
ಯಲಿದೆ. ಸೋಮೇಶ್ವರ ಸೋಮನಾಥ ದೇವಸ್ಥಾನವು ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿದೆ. ಪ್ರಸ್ತುತ ಸೋಮೇಶ್ವರ ಗ್ರಾಮದಲ್ಲಿರುವ ಈ ದೇವಸ್ಥಾನ ಹಿಂದೆ ಉಳ್ಳಾಲ ಮಾಗಣೆಗೆ ಸೇರಿದ್ದು, ಸೋಮನಾಥ ದೇವಸ್ಥಾನವು ಸೀಮೆಯ ಪ್ರಧಾನ ದೇವಸ್ಥಾನವಾಗಿತ್ತು. ಶ್ರೀಕ್ಷೇತ್ರದಲ್ಲಿ ಬೆಳಗ್ಗಿನಿಂದಲೇ ವಿಶೇಷ ಪೂಜೆ ನಡೆಯಲಿದ್ದು, ದೇವರ ಬಲಿ ಕಲ್ಲು ಬಳಿ ಇರುವ ಮುಖ್ಯದ್ವಾರ (ಕೈಲಾಸ ದ್ವಾರ)ದಲ್ಲಿ ಪೂಜೆಯ ಬಳಿಕ, ರುದ್ರಾಭಿಷೇಕ, ಶಿವಪೂಜೆ, ಬೆಳಗ್ಗೆ 7 ಗಂಟೆಯಿಂದ ಶಿವಭಕ್ತ ವೃಂದದ ನೇತೃತ್ವದಲ್ಲಿ ವಿವಿಧ ಭಜನ ಮಂದಿರಗಳ ಸಹಯೋಗಗಳೊಂದಿಗೆ ಏಕಾಹ ಭಜನ ನಡಯಲಿದೆ.
ಈ ಬಾರಿಯ ವಿಶೇಷ: ಫೆ. 21ರಂದು ಶಿವರಾತ್ರಿಯ ಪ್ರಯುಕ್ತವಾಗಿ ದೇಗುಲದಲ್ಲಿ ರುದ್ರಾಭಿಷೇಕ, ಶಿವಪೂಜೆ ಮತ್ತು ಏಕಾಹ ಭಜನಾ ಜರಗಲಿದೆ.
ಪೊರ್ಕೋಡಿ ಶ್ರೀ ಸೋಮನಾಥೇಶ್ವರ ದೇಗುಲ
ಬಜಪೆ: ಇಲ್ಲಿನ ಪೇಜಾವರ ಮಾಗಣೆಯ ಪೊರ್ಕೋಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಉತ್ಸವ ಫೆ. 21ರಂದು ನಡೆಯಲಿದೆ. ಈ ಪರಿಸರದಲ್ಲಿ ಎಂಎಸ್‌ಈಝಡ್,ಎ ಂಆರ್‌ಪಿಎಲ್ ಕಂಪೆನಿಗಳ ಸ್ಥಾಪನೆ ಹಾಗೂ ಮಂಗಳೂರು ವಿಮಾನ ನಿಲ್ದಾಣ ಸಮೀ ಪದಲ್ಲಿರುವ ಕಾರಣ ಗ್ರಾಮಸ್ಥರ ಭಕ್ತರೊಂದಿಗೆ ಅಲ್ಲಿನ ಉದ್ಯೋಗಿಗಳು ಹೆಚ್ಚು ಈ ದೇವಸ್ಥಾನಕ್ಕೆ ಆಗಮಿಸುತ್ತಿದ್ದಾರೆ. ಇದ ರಿಂದ ಇಲ್ಲಿ ಶಿವರಾತ್ರಿ ಪೂಜೆ ಹೆಚ್ಚು ವೈಭವದಿಂದ ಆಚರಿಸಲಾಗುತ್ತದೆ. ಅಂದು ಬೆಳಗ್ಗೆಯಿಂದಲೇ ಶಿವ ಪೂಜೆ, ರುದ್ರಾಭಿಷೇಕ ನಡೆಯುತ್ತದೆ. ಬೆಳಗ್ಗೆ 5.30ರಿಂದ ಮಧ್ಯಾಹ್ನ 1.30ರ ವರೆಗೆ ಈ ಪೂಜೆ ನಡೆಯುತ್ತವೆ. ಸಂಜೆ 4.30ರಿಂದ ಶಿವಪೂಜೆ ರಾತ್ರಿ ತನಕ ನಡೆಯುತ್ತದೆ.
ಈ ಬಾರಿಯ ವಿಶೇಷ: ಸಂಕಲ್ಪ, ರಂಗಪೂಜೆ ನಡೆಯುತ್ತದೆ. ಭಜನ ಸಂಕೀìತನೆಯನ್ನು ಮಾಡುವ ಮೂಲಕ ಶಿವರಾತ್ರಿ ಉತ್ಸವ ಆಚರಣೆ ಮಾಡಲಾಗುತ್ತದೆ.
ಅದ್ಯಪಾಡಿ ಶ್ರೀ ಆದಿನಾಥೇಶ್ವರ ದೇವಸ್ಥಾನ
ಬಜಪೆ: ದ.ಕ. ಜಿಲ್ಲೆಯ ಐತಿಹಾಸಿಕ ದೇವಾಲಯಗಳಲ್ಲಿ ಅದ್ಯಪಾಡಿ ಶ್ರೀ ಆದಿನಾಥೇಶ್ವರ ದೇವಸ್ಥಾನವೂ ಒಂದು. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪವೇ ಈ ದೇವಸ್ಥಾನವಿದೆ. ವೈದ್ಯನಾಥನಾದಂತಹ ಪರಮೇಶ್ವರನೇ ಆದಿನಾಥನಾಗಿ ಇಲ್ಲಿ ನೆಲೆಸಿದ್ದಾನೆ. ಉದ್ಭವ ಸ್ವರೂಪ ಇರುವಂತಹ ಈ ದೇವಸ್ಥಾನಕ್ಕೆ 700 ವರ್ಷಕ್ಕೂ ಅಧಿಕ ಹಿಂದಿನ ಇತಿಹಾಸವಿದೆ. ಉತ್ತರದಲ್ಲಿ ಬೆಟ್ಟ, ದಕ್ಷಿಣದಲ್ಲಿ ಫಲ್ಗುಣಿ ನದಿ ಗಿರಿವನನದಿಗಳ ನಡುವೆ ಈ ಕ್ಷೇತ್ರವಿದೆ. ರೋಗ ನಿವಾರಕ, ಆರೋಗ್ಯ, ಜ್ಞಾನಪ್ರದಾಯಕ ಸನ್ನಿಧಾನವನ್ನು ಹೊಂದಿದೆ. ಇಲ್ಲಿನ ದೇವರ ಗಂಧ ಪ್ರಸಾದ ಉಬ್ಬಸ ರೋಗಕ್ಕೆ ದಿವ್ಯಾ ಔಷಧ. ಇಲ್ಲಿನ ಜಾತ್ರೆ ಶಿವರಾತ್ರಿಯಿಂದ ಆರಂಭವಾಗುತ್ತದೆ.
ಈ ಬಾರಿಯ ವಿಶೇಷ: ಪಂಚಾಮೃತ, ರುದ್ರಾ ಭಿಷೇಕ, ಕಾರ್ತಿಕ ಪೂಜೆ, ಅಯಾಮ ಪೂಜೆ, ದೊಡ್ಡ ರಂಗ ಪೂಜೆಗಳಿಂದ ಶಿವನನ್ನು ಆರಾಧಿಸಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬಾಂಗ್ಲಾದೇಶದಿಂದ ಭಾರತ ವಿರುದ್ಧ ಮತ್ತೊಂದು ಕ್ಯಾತೆ
Council: ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಅಪಮಾನ: ಛಲವಾದಿ ನಾರಾಯಣಸ್ವಾಮಿ
Chandigarh: ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಅಕ್ರಿ ಗ್ರಾ.ಪಂನಿಂದ ಹಣ ಸಹಾಯ
ಧಾರ್ಮಿಕ ವಿಚಾರ ನಮಗೆ ಬಿಟ್ಟುಬಿಡಿ: ಭಾಗವತ್ ವಿರುದ್ಧ ತಿರುಗಿ ಬಿದ್ದ ಸಂತರು
Ambedkar Row: ಕಾಂಗ್ರೆಸ್ ತಿಪ್ಪೆ ಇದ್ದಂತೆ, ಕೆದಕಿದಷ್ಟೂ ದುರ್ವಾಸನೆ ಬರುತ್ತೆ: ಛಲವಾದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.