ಭ| ಶ್ರೀ ಮಹಾವೀರ ಸ್ವಾಮಿಯ 2,617ನೇ ಜಯಂತ್ಯುತ್ಸವ 


Team Udayavani, Mar 30, 2018, 9:56 AM IST

30-March-1.jpg

ಮೂಡಬಿದಿರೆ : ಜೈನ ದರ್ಶನದಲ್ಲಿ ನೌಕರನು ಪ್ರಭುವೇ ಆಗುವನು. ಪ್ರಭುವೇ ನನಗೆ ಆಶೀರ್ವಾದ ಮಾಡು ಎಂದು ಬೇಡಿಕೊಳ್ಳುವುದಲ್ಲ, ಜೀವನದ ಪರಮ ಗುರಿ ಭಗವಂತನೊಂದಿಗೆ ಸೇರುವುದಲ್ಲ, ಸ್ವಯಂ ಭಗವಂತನೇ ಆಗುವ ಹಾದಿಯಲ್ಲಿ ನಾವು ಸಾಗಬೇಕು. ಜೈನ ಧರ್ಮದ ನೈಜ ಅನುಸರಣೆಯಿಂದ ಇದು ಸಾಧ್ಯ ಎಂದು ಚರ್ಯ ಶಿರೋಮಣಿ 108 ಆಚಾರ್ಯ ಶ್ರೀ ವಿಶುದ್ಧ ಸಾಗರ ಮುನಿ ಮಹಾರಾಜ್‌ ಅವರು ಹೇಳಿದರು.

ದ.ಕ. ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಂಗಳೂರು ಮತ್ತು ಭಾರತೀಯ ಜೈನ್‌ ಮಿಲನ್‌ ಇವುಗಳ ಸಂಯುಕ್ತ ಆಶ್ರಯದಲ್ಲಿ ಜೈನಕಾಶಿ ಮೂಡಬಿದಿರೆಯ ಶ್ರೀ ಮಹಾವೀರ ಭವನದಲ್ಲಿ ಭಗವಾನ್‌ ಶ್ರೀ ಮಹಾವೀರ ಸ್ವಾಮಿಯ 2617ನೇ ಜಯಂತ್ಯುತ್ಸವ ಮೂಡಬಿದಿರೆ ಶ್ರೀ ಜೈನ ಮಠಾಧೀಶ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಚರ್ಯಶಿರೋಮಣಿ 108 ಆಚಾರ್ಯ ಶ್ರೀ ವಿಶುದ್ಧ ಸಾಗರ ಮುನಿ ಮಹಾರಾಜ್‌ ಹಾಗೂ ಸಂಘಸ್ಥ ಸಾಧುಗಳ ಸಮಕ್ಷಮ ಗುರುವಾರ ಜರಗಿತು.

ಸತ್ಯ, ಅಹಿಂಸೆ ಶ್ರೇಷ್ಠ
35 ಮಂದಿ ಮುನಿ ಮಹಾರಾಜರ ಪರವಾಗಿ ಕರ್ಮವಿಜಯನಂದಿ ಮುನಿ ಮಹಾರಾಜ್‌ ಆಶೀರ್ವಚನ ನೀಡಿ, ಸತ್ಯ, ಅಹಿಂಸೆ ಶ್ರೇಷ್ಠವಾಗಿದ್ದು, ಜೈನದರ್ಶನದ ಪ್ರಮುಖ ಅಂಶಗಳಾಗಿವೆ. ಇಲ್ಲಿ ಕೆಟ್ಟದ್ದನ್ನು ಯೋಚಿಸಿದವರಿಗೆ ಕೆಡುಕಾಗುತ್ತದೆ ಎಂದು ಎಚ್ಚರಿಸಿದರು.

ಸಿದ್ಧಸೇನ ಮುನಿಮಹಾರಾಜರು ತಮ್ಮ ಆಶೀರ್ವಚನದಲ್ಲಿ ಯಾರು ಇನ್ನೊಬ್ಬರನ್ನು ಬದುಕಲು ಬಿಡುವುದಿಲ್ಲವೋ ಅವರು
ಸ್ವಯಂ ಬದುಕುವುದು ಅಸಾಧ್ಯ ಎಂದರು. ಚಂದ್ರಪ್ರಭಾ ಸಾಗರ ಮುನಿ ಮಹಾರಾಜ್‌, ಸಿದ್ಧಸೇನ ಮುನಿಮಹಾ ರಾಜರು, ವಿಬುದ್ಧಿ ಸಾಗರ ಮುನಿ ಮಹಾರಾಜರು, ಸ್ವಸ್ತಿ ಶ್ರೀ ಭಟ್ಟಾರಕ ಸ್ವಾಮೀಜಿಗಳು ಆಶೀರ್ವಚನ ನೀಡಿದರು.

ಶಾಸಕ ಕೆ. ಅಭಯಚಂದ್ರ ಜೈನ್‌ ಉಪಸ್ಥಿತರಿದ್ದರು. ವಲಯ ನಿರ್ದೇಶಕ ಜಯರಾಜ ಕಂಬ್ಳಿ ಸ್ವಾಗತಿಸಿದರು. ಮಿಲನ್‌ ಕಾರ್ಯದರ್ಶಿ ನಮಿರಾಜ ಜೈನ್‌ ಪ್ರಸ್ತಾವನೆಗೈದರು.

ಬಸದಿಗಳ ಮೊಕ್ತೇಸರರಾದ ಪಟ್ಣಶೆಟ್ಟಿ ಸುಧೇಶ್‌ ಕುಮಾರ್‌, ಆನಡ್ಕ ದಿನೇಶ್‌ ಕುಮಾರ್‌, ಸರ್ವಮಂಗಳಾ ಮಹಿಳಾ
ಸಂಘದ ಅಧ್ಯಕ್ಷೆ ಸುಧಾ ಪೃಥ್ವೀರಾಜ್‌, ಮಹಾವೀರ ಸಂಘದ ಅಧ್ಯಕ್ಷ ಪೃಥ್ವೀರಾಜ್‌ ತ್ರಿಭುವನ್‌, ಯೂತ್‌ ಅಸೋಸಿಯೇಶನ್‌
ಅಧ್ಯಕ್ಷ ಸಂಪತ್‌, ತ್ರಿಭುವನ್‌ ಯುವಜೈನ್‌ ಮಿಲನ್‌ ಅಧ್ಯಕ್ಷ ನಿತೇಶ್‌ ಬಲ್ಲಾಳ್‌, ಎಸ್‌.ಡಿ. ಸಂಪತ್‌ ಸಾಮ್ರಾಜ್ಯ, ಶೈಲೇಂದ್ರ
ಕುಮಾರ್‌ ಉಪಸ್ಥಿತರಿದ್ದರು. ಮಿಲನ್‌ ಅಧ್ಯಕ್ಷ ಎಚ್‌. ಧನಕೀರ್ತಿ ಬಲಿಪ ವಂದಿಸಿದರು. ಪ್ರಭಾತ್‌ ಬಲ್ಲಾಳ್‌ ಬಿ. ನಿರೂಪಿಸಿದರು. ರಾತ್ರಿ ಜೈನ ಪೇಟೆಯಿಂದ ಮೂಡಬಿದಿರೆಯ ಪ್ರಮುಖ ಹಾದಿಯಲ್ಲಿ ಮೆರವಣಿಗೆ ನಡೆಯಿತು. 

ಜಿನ ತತ್ತ್ವಗಳು ಲೋಕವ್ಯಾಪಿ
ಯಾರಿಗೂ ಪ್ರಭಾವ ಬೀರ ಬಾರದು. ಯಾರಿಂದಲೂ ಪ್ರಭಾವಿತರಾಗ ಲೂಬಾರದು. ಭಗವಾನ್‌ ಮಹಾವೀರರು ಜಿನ ಧರ್ಮ ಪ್ರಚಾರಕ್ಕಾಗಿ ವಿದೇಶಗಳಿಗೆ ಹೋಗಲಿಲ್ಲ. ಆದರೆ ಜಿನತತ್ತ್ವಗಳು ಇಂದು ಲೋಕವ್ಯಾಪಿಯಾಗಿ ಹರಡಿವೆ. ಯಾರೆಷ್ಟೇ ಹತ್ತಿಕ್ಕಲೆತ್ನಿಸಿದರೂ ಜೈನಧರ್ಮದ ಸುಗಂಧ ಲೋಕವ್ಯಾಪಿಯಾಗಿ ಹರಡಿದೆ.
– ಶ್ರೀ ವಿಶುದ್ಧ ಸಾಗರ ಮುನಿ ಮಹಾರಾಜ್‌ ,
ಚರ್ಯ ಶಿರೋಮಣಿ 108 ಆಚಾರ್ಯ

ಟಾಪ್ ನ್ಯೂಸ್

BJP-waqf-Protest

BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ

1-remo

Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ

ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್

IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್

IPL: Players from these countries are fully available for the next three seasons of IPL

IPL: ಇನ್ನು ಮೂರು ಸೀಸನ್‌ ಐಪಿಎಲ್‌ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ

1-a-raga-pg

Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್

Sagara: ತರಗತಿ ಕೊಠಡಿ ಅವ್ಯವಸ್ಥೆ; ಎಲ್‌ಬಿ ಕಾಲೇಜಿನ ವಿದ್ಯಾರ್ಥಿಗಳ ದಿಢೀರ್ ಪ್ರತಿಭಟನೆ

Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ

Talk war between Minister Sharanabasappa Darshanapura and MLA Sharanagouda Kandakur in KDP meeting

Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

BJP-waqf-Protest

BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ

1-remo

Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ

Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ

Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ

ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್

IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್

1-motte

School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.