ವೆನ್ಲಾಕ್ ಒಪಿಡಿಗೆ ಮಾಹೆ ಹೊಸ ರೂಪ
ಶಿಥಿಲಾವಸ್ಥೆಯಲ್ಲಿದ್ದ ಹೊರ ರೋಗಿ ವಿಭಾಗ 50 ಲಕ್ಷ ರೂ. ವೆಚ್ಚದಲ್ಲಿ ನವೀಕರಣ
Team Udayavani, Jun 20, 2019, 5:21 AM IST
ಮಂಗಳೂರು: ಸಂಪೂರ್ಣ ಶಿಥಿಲವಾಗಿದ್ದ ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಯ ಹೊರ ರೋಗಿ ವಿಭಾಗ ಈಗ ಹೊಸರೂಪ ಪಡೆದುಕೊಂಡಿದೆ. ಮಾಹೆ ವಿಶ್ವವಿದ್ಯಾನಿಲಯದ ಸಾಮಾಜಿಕ ಬದ್ಧತಾ ಕಾರ್ಯಕ್ರಮದಡಿ 50 ವರ್ಷ ಹಳೆಯ ವಿಭಾಗವನ್ನು 50 ಲಕ್ಷ ರೂ. ವೆಚ್ಚದಲ್ಲಿ ನವೀಕರಿಸಲಾಗಿದೆ.
ಒಪಿಡಿ ಕಟ್ಟಡ ಹಳೆಯದಾಗಿ ಶಿಥಿಲಗೊಂಡಿರುವ ಬಗ್ಗೆ ಎರಡು ವರ್ಷಗಳ ಹಿಂದೆ ಆಸ್ಪತ್ರೆಯ ವೈದ್ಯ ಕೀಯ ಅಧೀಕ್ಷಕರು ಪ್ರಸ್ತಾವ ಕಳುಹಿಸಿದ್ದರು. ಮಾಹೆ ವಿ.ವಿ. ತನ್ನ ರಜತ ಮಹೋತ್ಸವ ಆಚರಣೆ ವೇಳೆ 2018ನೇ ಇಸವಿಯಲ್ಲಿ ಅದರ ನವೀಕರಣಕ್ಕೆ ಮುಂದಾಗಿತ್ತು. ಒಂದೂವರೆ ವರ್ಷಗಳ ಹಿಂದೆ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿತ್ತು.
ಈಗ ನವೀಕರಣ ಕೆಲಸವು ಮುಗಿದು ವಿಭಾಗವು ಸಂಪೂರ್ಣ ಹೊಸರೂಪ ಪಡೆದು ಕೊಂಡಿದೆ. ಇಡೀ ವಿಭಾಗವನ್ನು ನವೀ ಕರಿಸಲಾಗಿದ್ದು, ಒಪಿಡಿಯಲ್ಲಿ ಸಂಪೂರ್ಣವಾಗಿ ಪ್ಲಾಸ್ಟರಿಂಗ್ ಮಾಡಲಾಗಿದೆ. ರೂಫ್ಟಾಪ್ ಭದ್ರವಾಗಿದ್ದು, ಸೋರುವಿಕೆಯಿಂದ ಮುಕ್ತಿಸಿಕ್ಕಿದೆ. ಪೈಂಟಿಂಗ್ ಮೂಲಕ ಕಟ್ಟಡ ವನ್ನು ಆಕರ್ಷಕಗೊಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.