ಬೆಳ್ತಂಗಡಿಯ ಇಶಾ ಶರ್ಮಾಗೆ ಮೊದಲ ಐಎಂ ನಾರ್ಮ್ ಪ್ರಶಸ್ತಿ ಗರಿ
ಕರ್ನಾಟಕದಲ್ಲೇ ಮೊದಲ ಮಹಿಳಾ ಇಂಟರ್‌ನ್ಯಾಶನಲ್ ಮಾಸ್ಟರ್
Team Udayavani, Jul 23, 2022, 12:21 PM IST
ಬೆಳ್ತಂಗಡಿ: ಜು. 18 ರಂದು ಮುಕ್ತಾಯಗೊಂಡ ಸ್ಲೋವಾಕಿಯಾ ಓಪನ್ ಚೆಸ್ 2022ರ ಪಂದ್ಯಾವಳಿಯಲ್ಲಿ ಕರ್ನಾಟಕದ ಪ್ರತಿಭೆ ಇಶಾ ಶರ್ಮಾ ತನ್ನ ಚೊಚ್ಚಲ ಅಂತರರಾಷ್ಟ್ರೀಯ ಮಾಸ್ಟರ್ ಮತ್ತು ಒಮನ್ ಗ್ರ್ಯಾಂಡ್ ಮಾಸ್ಟರ್ ನಾರ್ಮ್ ಮುಡಿಗೇರಿಸಿದ್ದಾರೆ.
ಮೂರನೇ ಸುತ್ತಿನಲ್ಲಿ ಇಶಾ ಪೋಲಿಷ್ ದಂತಕಥೆ ಗ್ರ್ಯಾಂಡ್‌ಮಾಸ್ಟರ್ ಕ್ರಾಸೆಂಕೋವ್ ಮಿಚಾಲ್ (2569) ವಿರುದ್ಧ ಮಿಂಚಿನ ಗೆಲುವು ಸಾಧಿಸಿದರು. ಇದು ಅವರ ಈವರೆಗಿನ ಅತ್ಯುತ್ತಮ ಗೆಲುವಾಗಿದೆ. ಇಶಾ FIDE ತರಬೇತುದಾರ ಕೆ.ವಿಶ್ವೇಶ್ವರನ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.
ಇಶಾ ಧರ್ಮಸ್ಥಳ ಸಮೀಪದ ಉಜಿರೆಯ ಎಸ್‌ಡಿಎಂ ಕಾಲೇಜಿನ (ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆ) ನಲ್ಲಿ ಅಂತಿಮ ವರ್ಷದ ಅರ್ಥಶಾಸ್ತ್ರ ವ್ಯಾಸಂಗ ಮಾಡುತ್ತಿದ್ದಾರೆ. ಇವರು ಕರ್ನಾಟಕದ ಮೊದಲ ಮಹಿಳಾ ಇಂಟರ್‌ನ್ಯಾಶನಲ್ ಮಾಸ್ಟರ್ ಆಗಿದ್ದಾರೆ.
ಐ.ಎಂ. ನಾರ್ಮ್ ಗೆಲುವಿನ ಹಾದಿಯಲ್ಲಿ ಇಶಾ ಮೊದಲಿಗೆ ಅಧಿಕ ಶ್ರೇಯಾಂಕದ ಸ್ಲೋವಾಕಿಯಾದ ಐಎಂ ನ್ಯೂಗೆಬೌರ್ ಮಾರ್ಟಿನ್ (2528) ಅವರನ್ನು ಸೋಲಿಸಿದರು ಮತ್ತು ಐಸ್‌ಲ್ಯಾಂಡ್‌ನ ಐಎಂ ಸ್ಟೆಫಾನ್ಸನ್ ವಿಗ್ನಿರ್ ವಟ್ನಾರ್ ಅವರೊಂದಿಗೆ ಡ್ರಾ ಮಾಡಿಕೊಂಡರು.
ಇದನ್ನೂ ಓದಿ: ಬ್ಯಾಟಿಂಗ್ ನಲ್ಲಿ ಕೇವಲ 12 ರನ್ ಗಳಿಸಿದರೂ ಗೆಲುವಿನ ಹೀರೋ ಆದ ಸಂಜು ಸ್ಯಾಮ್ಸನ್
ಇಶಾ 2019 ರಲ್ಲಿ ಕರ್ನಾಟಕದ ಮೊದಲ ಮಹಿಳಾ ಇಂಟರ್ನ್ಯಾಷನಲ್ ಮಾಸ್ಟರ್ ತನ್ನ ಹೆಸರಿನಲ್ಲಿ ಬರೆದಿದ್ದರು. ಮಾತ್ರವಲ್ಲದೆ 2015 ರಲ್ಲಿ ಏಷ್ಯನ್ ಶಾಲೆಗಳ ಅಂಡರ್-15 ಕಂಚಿನ ಪದಕ ವಿಜೇತೆ ಮತ್ತು 2017 ರಲ್ಲಿ ಇರಾನ್‌ನಲ್ಲಿ ನಡೆದ ಏಷ್ಯನ್ ಜೂನಿಯರ್ ಬಾಲಕಿಯರ ಚಾಂಪಿಯನ್‌ಶಿಪ್ ನ್ನು ಗೆದ್ದಿದ್ದಾರೆ. ಪ್ರಸ್ತುತ ಹಂಗೇರಿಯ ಬುಡಾಪೆಸ್ಟ್‌ನಲ್ಲಿ ವೆಜೆರ್ಕೆಪ್ಜೊ ಕ್ಲೋಸ್ಡ್ ಜಿಎಂ ಪಂದ್ಯಾವಳಿಯನ್ನು ಆಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.