ಕೆಪಿಐಟಿ ಜತೆ ಮೈಟ್ ಕಾಲೇಜ್ ಒಪ್ಪಂದ
Team Udayavani, Jul 12, 2018, 4:40 PM IST
ಮಂಗಳೂರು: ಸ್ವದೇಶೀ ಮೂಲದ ಅಟೋಮೋಟಿವ್ ಕ್ಷೇತ್ರದ ಬಹುರಾಷ್ಟ್ರೀಯ ದೈತ್ಯ ಕಂಪೆನಿ ಕೆಪಿಐಟಿಯೊಂದಿಗೆ ಪ್ರತಿಷ್ಠಿತ ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಎಂಜಿನಿಯರಿಂಗ್ (ಮೈಟ್) ಕಾಲೇಜು ಮಹತ್ವದ ಒಡಂಬಡಿಕೆ ಮಾಡಿಕೊಂಡಿದೆ.
ಕೆಪಿಐಟಿಯ ಬೆಂಗಳೂರು ಕಚೇರಿಯಲ್ಲಿ ಮೈಟ್ ಕಾಲೇಜಿನ ಸಂಸ್ಥಾಪಕ ಹಾಗೂ ಚೇರ್‌ಮನ್ ರಾಜೇಶ್ ಚೌಟ ಹಾಗೂ ಕೆಪಿಐಟಿಯ ಶಿಕ್ಷಣ ಮತ್ತು ಸ್ಪರ್ಧಾತ್ಮಕ ಅಭಿವೃದ್ಧಿ ವಿಭಾಗದ ಗ್ಲೋಬಲ್ ಹೆಡ್, ಟ್ಯಾಲೆಂಟ್ ಅಕ್ವಿಸಿ ಶನ್ ಗ್ರೂಪ್ ಉಪಾಧ್ಯಕ್ಷ ಕೆ.ಎನ್.ಎಸ್. ಆಚಾರ್ಯ ಅವರು ಇತ್ತೀಚೆಗೆ ಒಡಂ ಬಡಿಕೆಯ ಪತ್ರಕ್ಕೆ ಸಹಿ ಹಾಕಿದ್ದಾರೆ.
ಕೆಪಿಐಟಿ ಕ್ಯಾಂಪಸ್‌ನಲ್ಲಿ ಉಚಿತ ತರಬೇತಿ
ಎಂಜಿನಿಯರಿಂಗ್‌ವಿದ್ಯಾರ್ಥಿಗಳಿಗೆ ವೃತ್ತಿಪರ ಕಲಿಕಾ ಅನುಭವ ನೀಡುವ ಜತೆಗೆ ಉತ್ತಮ ಉದ್ಯೋಗಾವಕಾಶ ನೀಡುವ ನಿಟ್ಟಿನಲ್ಲಿ ಮೈಟ್ ಕಾಲೇಜು ಈಗಾಗಲೇ ಬಾಷ್, ಸೀಮೆನ್ಸ್, ಇನ್ಫೋಸಿಸ್, ಕಾರ್ಲ್ ಝೀಸ್ ಮುಂತಾದ ಪ್ರಸಿದ್ಧ ಕಂಪೆನಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಈಗ ಪ್ರತಿಷ್ಠಿತ ಕೆಪಿಐಟಿಯೊಂದಿಗೆ ಒಪ್ಪಂದ ಮಾಡಿಕೊಂಡಿರುವುದರಿಂದ ವಿದ್ಯಾರ್ಥಿ ಗಳ ಔದ್ಯೋಗಿಕ ಕಲಿಕೆಗೆ ಮತ್ತಷ್ಟು ಅವಕಾಶ ತೆರೆದುಕೊಂಡಂ ತಾಗಿದೆ. ಮೈಟ್- ಕೆಪಿಐಟಿ ಕಲಿಕಾ ಒಪ್ಪಂದದಂತೆ ಕಾಲೇಜಿನ ಎಲೆಕ್ಟ್ರಾನಿಕ್ಸ್ ಹಾಗೂ ಮೆಕ್ಯಾನಿಕಲ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ಅಂತಿಮ ಸೆಮಿಸ್ಟರ್‌ನ ಕೊನೆಯ ನಾಲ್ಕು ತಿಂಗಳು ಕೆಪಿಐಟಿ ಕ್ಯಾಂಪಸ್‌ನಲ್ಲಿ ಉಚಿತವಾಗಿ ಆಟೋಮೋಟಿವ್, ಎಲೆಕ್ಟ್ರಾನಿಕ್ಸ್ ಡಿಸೈನಿಂಗ್ ಹಾಗೂ ಉತ್ಪಾ ದನೆ ಬಗ್ಗೆ ಪ್ರಾಯೋಗಿಕ ತರ ಬೇತಿ ಪಡೆಯಲಿದ್ದಾರೆ. ಅಲ್ಲದೆ ಈ ಒಪ್ಪಂದ ದಡಿ ಮೈಟ್‌ನ ಬೋಧಕ ಸಿಬಂದಿಗೂ ಕೆಪಿಐಟಿ ಕಂಪೆನಿಯಲ್ಲಿ ನುರಿತ ಎಂಜಿ ನಿಯರಿಂಗ್ ಪರಿಣತರಿಂದ ಬೋಧನಾ ತರಬೇತಿ ನೀಡಲಾಗುತ್ತದೆ.
ಮೈಟ್ ಕಾಲೇಜು ಆಯ್ಕೆ
ಕೆಪಿಐಟಿ ಸಂಸ್ಥೆ ಪ್ರತೀ ವರ್ಷ “ಸ್ಪಾಕ್Éì’
ಎಂಬ ತಾಂತ್ರಿಕ ಸ್ಪರ್ಧೆಯನ್ನು ಆಯೋ
ಜಿಸು ತ್ತಿದ್ದು, ಈ ಸಂಸ್ಥೆ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ನೂತನ ಆವಿ ಷ್ಕಾರ ಗಳನ್ನೊಳಗೊಂಡ ಪ್ರಾಜೆಕ್ಟ್ ಗಳನ್ನು ತಯಾ ರಿಸಬೇಕು. ಪ್ರತೀ ವರ್ಷದ ಸ್ಪರ್ಧೆಯಲ್ಲಿ ಮೈಟ್ ಕಾಲೇಜಿನ ವಿದ್ಯಾರ್ಥಿಗಳು ರಚಿಸಿದ ಪ್ರಾಜೆಕ್ಟ್ ಗಳು ಪ್ರಶಸ್ತಿಯ ಅಂತಿಮ ಘಟ್ಟಕ್ಕೆ ಆಯ್ಕೆ ಯಾಗುತ್ತಿವೆ. 2017ರಲ್ಲಿ ಮೈಟ್ ಕಾಲೇಜು ಸಂಸ್ಥೆಯ ಪ್ಲಾಟಿನಂ ಪ್ರಶಸ್ತಿಗೆ ಆಯ್ಕೆ ಯಾಗಿದ್ದು, 10 ಲಕ್ಷ ರೂ. ಬಹುಮಾನ ಪಡೆದಿತ್ತು. ಇದನ್ನು ಪರಿಗಣಿಸಿ ಕೆಪಿಐಟಿಯು ಮೈಟ್‌ನ್ನು ಆಯ್ಕೆ ಮಾಡಿದೆ. ದೇಶ ದಲ್ಲಿ ಅತ್ಯುತ್ತಮವಾದ ಕೇವಲ 20 ಎಂಜಿನಿಯರಿಂಗ್ ಕಾಲೇಜು ಗಳೊಂದಿಗೆ ಈ ಒಡಂಬಡಿಕೆ ಮಾಡಿ ಕೊಳ್ಳ ಲಾಗಿದ್ದು, ಮೈಟ್ ಕೂಡ ಈ ಪ್ರತಿಷ್ಠಿತ ಪಟ್ಟಿಗೆ ಸೇರಿದೆ. ಮೈಟ್ ಕಾಲೇಜಿ ನಲ್ಲಿ ಸೀಮೆನ್ಸ್‌ನ ಉತ್ಕೃಷ್ಟ ಕೇಂದ್ರ ವಿದ್ದು, ಇದು ರಾಜ್ಯದಲ್ಲಿರುವ ಏಕೈಕ ಕೇಂದ್ರ. ಇದಕ್ಕೆ ಯುಎಸ್ 79 ದಶಲಕ್ಷ ಡಾಲರ್ ಆರ್ಥಿಕ ಸಂಪನ್ಮೂಲ ವನ್ನು ವಿನಿ ಯೋಗಿಸ ಲಾಗಿದೆ. ಇಲ್ಲಿ ಇನ್‌ಕುÂ ಬೇಷನ್ ಸೆಂಟರ್ ಸ್ಥಾಪಿಸ ಲಾಗಿದ್ದು, ಇದಕ್ಕೆ ರಾಜ್ಯ ಸರಕಾರ 1.20 ಕೋಟಿ ರೂ. ಹಾಗೂ ಕೇಂದ್ರ ಸರಕಾರದ ಎಂಎಸ್‌ಎಂಇ ಸಂಸ್ಥೆಯು 65 ಲಕ್ಷ ರೂ. ಅನುದಾನ ಒದಗಿಸಿದೆ.
ಆಟೋಮೋಟಿವ್, ಎಲೆಕ್ಟ್ರಾನಿಕ್ಸ್
ಪ್ರೋಗ್ರಾಮಿಂಗ್, ವಿಎಲ್‌ಎಸ್‌ಐ
ಹಾಗೂ ಪರ್ಫಾರ್ಮೆನ್ಸ್ ಕಂಪ್ಯೂಟಿಂಗ್, ಮ್ಯಾನುಫ್ಯಾಕ್ಚರಿಂಗ್, ಎನರ್ಜಿ, ಮಾಡೆಲ್ ಬೇಸ್ಡ್ ಡಿಸೈನ್‌ಗೆ ಜಾಗತಿಕವಾಗಿ ಹೆಸರುವಾಸಿಯಾಗಿರುವ ಕೆಪಿಐಟಿ ಸಂಸ್ಥೆಯು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಉಚಿತವಾಗಿ ಪ್ರಾಯೋಗಿಕ ತರಬೇತಿ ನೀಡಲು ಮೈಟ್ ಕಾಲೇಜನ್ನು ಆಯ್ಕೆ ಮಾಡಿರುವುದು ಸಂತಸ ತಂದಿದೆ. ಕೆಪಿಐಟಿ ಸಂಸ್ಥೆಯಲ್ಲಿ ಗುಣಮಟ್ಟದ ತರಬೇತಿಗೆ ಆಯ್ಕೆಯಾಗಲು ತಮ್ಮ ಕಾಲೇಜಿನ ವಿದ್ಯಾರ್ಥಿಗಳಲ್ಲಿರುವ ಕಲಿಕಾ ಸಾಮರ್ಥ್ಯ, ಎಲೆಕ್ಟ್ರಾನಿಕ್ಸ್ ಉಪಕರಣ ಡಿಸೈನಿಂಗ್ ಕುರಿತ ಆಸಕ್ತಿ, ಕ್ರಿಯಾಶೀಲತೆ ಕಾರಣವಾಗಿದೆ. ಭವಿಷ್ಯದಲ್ಲಿ ನಮ್ಮ ಬೋಧಕ ಸಿಬಂದಿಗೂ ಕೆಪಿಐಟಿಯಂತಹ ಕ್ಯಾಂಪಸ್‌ನಲ್ಲಿ ವೃತ್ತಿಪರ ತರಬೇತಿ ಅನುಭವ ಪಡೆಯುವುದಕ್ಕೂ ಅನುಕೂಲ ಕಲ್ಪಿಸಿದೆ.
– ರಾಜೇಶ್ ಚೌಟ
ಅಧ್ಯಕ್ಷರು, ರಾಜಲಕ್ಷ್ಮೀ ಎಜುಕೇಶನ್ ಟ್ರಸ್ಟ್
ನಮ್ಮ ಕಂಪೆನಿಯ ಪ್ರೋಗ್ರಾಮ್ ಫಾರ್ ಅಕಾ ಡೆಮಿಕ್ ಕೊಲಾಬರೇಶನ್ ಮತ್ತು ಎಂಗೇಜ್‌ಮೆಂಟ್ (ಪೇಸ್) ಎಂಬ ಈ ಕಾರ್ಯಕ್ರಮವು ದೇಶದ ತಾಂತ್ರಿಕ
ವಿದ್ಯಾಸಂಸ್ಥೆ ಗಳು, ವಿ.ವಿ.ಗಳೊಂದಿಗಿನ ಈ ಸಹಯೋಗವು ವೃತ್ತಿಪರ ಶೈಕ್ಷಣಿಕ ಚಟುವಟಿಕೆಗಳಿಗೆ ಒತ್ತು ನೀಡುವಲ್ಲಿ ಮಹತ್ವದ ಕಾರ್ಯಕ್ರಮ ವಾಗಿದೆ. ಈ ಪೇಸ್ ಕಾರ್ಯಕ್ರಮದಡಿ ಈಗ ಮೈಟ್ ಸಂಸ್ಥೆ ಜತೆಗೆ ಒಪ್ಪಂದ ಮಾಡಿಕೊಂಡಿದ್ದು, ಅಲ್ಲಿನ ಎಂಜಿ ನಿಯರಿಂಗ್ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ಪಡೆಯುವುದಕ್ಕೆ ಕ್ಯಾಂಪಸ್‌ನಲ್ಲಿ ಅವಕಾಶ ನೀಡ ಲಾಗುತ್ತದೆ. ನಾವು ನಡೆಸುವ “ಸ್ಪಾಕ್Éì’ ಎಂಬ ಸ್ಪರ್ಧೆಯಲ್ಲಿ ಈ ಬಾರಿ ಮೈಟ್ ವಿದ್ಯಾರ್ಥಿಗಳು ಪ್ರದರ್ಶಿಸಿದ ಎಲೆಕ್ಟ್ರಾನಿಕ್ಸ್ ಮಾಡೆಲ್ ಮೊದಲ ಸ್ಥಾನ ಪಡೆಯಿತು. ಈ ಹಿನ್ನೆಲೆಯಲ್ಲಿ ಇಲ್ಲಿನ ವಿದ್ಯಾರ್ಥಿಗಳಲ್ಲಿರುವ ಕಲಿಕಾ ಸಾಮರ್ಥ್ಯ ಹಾಗೂ ಕ್ರಿಯಾಶೀಲತೆ ಆಧರಿಸಿ ಮೈಟ್ ಕಾಲೇಜನ್ನು ನಮ್ಮ “ಪೇಸ್’
ಕಾರ್ಯಕ್ರಮದ ತರಬೇತಿಗೆ ಆಯ್ಕೆ ಮಾಡಲಾಗಿದೆ. ಜತೆಗೆ, ಮೈಟ್ ಅಧ್ಯಕ್ಷ ರಾಜೇಶ್ ಚೌಟರ ಮಾರ್ಗದರ್ಶಿ ನಾಯ ಕತ್ವವು ಈ ಒಪ್ಪಂದ ಮಾಡಿಕೊಳ್ಳುವುದಕ್ಕೆ ಕಾರಣವಾಗಿದೆ.
-ಕೆ.ಎನ್.ಎಸ್. ಆಚಾರ್ಯ,
ಕೆಪಿಐಟಿ ಉಪಾಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.