ಅವಕಾಶ ಸದುಪಯೋಗಪಡಿಸಿಕೊಳ್ಳಿ: ಶಿವಧ್ವಜ ಶೆಟ್ಟಿ
Team Udayavani, Jul 14, 2017, 2:45 AM IST
ಸುಳ್ಯ : ಇಲ್ಲಿನ ರೋಟರಿ ಕ್ಲಬ್ ಪದಗ್ರಹಣ ಸಮಾರಂಭವು ರೋಟರಿ ಕಮ್ಯುನಿಟಿ ಹಾಲ್‌ನಲ್ಲಿ ನಡೆಯಿತು.ಪುತ್ತೂರು ರೋಟರಿ ಅಧ್ಯಕ್ಷ ಜಗ ಜೀವನದಾಸ್ ರೈ ಅವರು ಪದಗ್ರಹಣ ನೆರವೇರಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಚಿತ್ರ ನಟ ಶಿವಧ್ವಜ ಶೆಟ್ಟಿ ಮಾತನಾಡಿ, ಇಂದು ಅವಕಾಶಗಳು ಎಲ್ಲೆಲ್ಲೂ ಇವೆ. ಅದನ್ನು ನಾವು ಸರಿಯಾಗಿ ಬಳಸಿಕೊಳ್ಳ ಬೇಕು. ವ್ಯಾಸಂಗ ಸಮಯದಲ್ಲಿ ತಾನು ಸುಳ್ಯದಲ್ಲಿದ್ದು, ಅದರ ಸವಿನೆನಪನ್ನು ಎಂದೂ ಮರೆಯಲಾರೆ ಎಂದರು.
ರೋಟರಿ ಉಪ ಗವರ್ನರ್ ಕೆ. ವಿಶ್ವಾಸ್ ಶೆಣೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.ಸುಳ್ಯ ರೋಟರಿ ಕ್ಲಬ್‌ನ ನೂತನ ಅಧ್ಯಕ್ಷರಾಗಿ ಜಿತೇಂದ್ರ ಎನ್.ಎ., ಕಾರ್ಯ ದರ್ಶಿಯಾಗಿ ಡಾ| ಪುರುಷೋತ್ತಮ, ಖಜಾಂಚಿಯಾಗಿ ಆನಂದ ಖಂಡಿಗ, ಉಪಾಧ್ಯಕ್ಷರಾಗಿ ದಯಾನಂದ ಆಳ್ವ, ಜತೆ ಕಾರ್ಯದರ್ಶಿಯಾಗಿ ಡಾ| ಹರ್ಷವರ್ಧನ, ಸತೀಶ್ ಕೆ.ಜಿ., ಸಂಜೀವ ಕುದ್ಪಾಜೆ ಮತ್ತಿತರ ನಿರ್ದೇಶಕರು ಅಧಿಕಾರ ಸ್ವೀಕರಿಸಿದರು.
ನಿಕಟಪೂರ್ವ ಅಧ್ಯಕ್ಷ ಗಿರಿಜಾ ಶಂಕರ ತುದಿಯಡ್ಕ ಅವರು ಸಹಕಾರ ನೀಡಿದ ವರಿಗೆ ಕೃತಜ್ಞತೆ ಸಲ್ಲಿಸಿದರು. ನಿಕಟಪೂರ್ವ ಕಾರ್ಯದರ್ಶಿ ಡಾ| ಗುರುರಾಜ ವೈಲಾಯ ಅವರು ವರದಿ ವಾಚಿಸಿದರು.
ಸಮ್ಮಾನ
ಡಾ| ಬಿ.ಸಿ. ರಾಯ್ ಪ್ರಶಸ್ತಿ ಪುರಸ್ಕೃತ ಡಾ| ಕೆ.ವಿ. ಚಿದಾನಂದ , ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಸಂಪಾಜೆ ಗ್ರಾ.ಪಂ. ಅಧ್ಯಕ್ಷ ಬಾಲಚಂದ್ರ ಕಳಗಿ ಹಾಗೂ ಚಿತ್ರ ನಟ ಶಿವಧ್ವಜ ಅವರನ್ನು ಗೌರವಿಸಲಾಯಿತು.
ಪೂರ್ವಾಧ್ಯಕ್ಷ ಬೆಳ್ಯಪ್ಪ ಗೌಡ, ಜಯಶ್ರೀ ಗಿರಿಜಾಶಂಕರ್, ಶೈಮಾ ಜಿತೇಂದ್ರ ಹಾಗೂ ಮತ್ತಿತರ ನಿರ್ದೇಶಕರು ಈ ಸಂದರ್ಭ ಉಪಸ್ಥಿತರಿದ್ದರು.
ಎಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿ ಸಲಾಯಿತು. ವೀಲ್ ಚೇರ್ ಮತ್ತಿತರ ಕೊಡುಗೆಗಳನ್ನು ನೀಡಲಾಯಿತು.ದಳ ಸುಬ್ರಾಯ ಭಟ್, ಲತಾ ಮಧುಸೂದನ್, ಅಬ್ದುಲ್ ಕಲಾಂ ಮೊದಲಾದವರು ಸಹಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belthangady: ಈ ಪುಟ್ಟ ಪೋರನಿಗಿದೆ 300 ವಿದೇಶಿ ಹಣ್ಣಿನ ಗಿಡ ಪರಿಚಯ!
Dharmasthala: ಲಕ್ಷದೀಪಗಳ ಜಗಮಗ; ವಿದ್ಯುತ್ ದೀಪಗಳಿಂದ ಶೃಂಗಾರ
Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ
ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ
Sullia: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ
RBI ಗವರ್ನರ್ ಶಕ್ತಿಕಾಂತ್ ದಾಸ್ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್ ಚಾರ್ಜ್
Mundargi: ಲಾರಿ ಹರಿದು 12 ಕುರಿಗಳು ಸಾವು; 30 ಕುರಿಗಳು ಗಂಭೀರ ಗಾಯ
Belthangady: ಈ ಪುಟ್ಟ ಪೋರನಿಗಿದೆ 300 ವಿದೇಶಿ ಹಣ್ಣಿನ ಗಿಡ ಪರಿಚಯ!
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.