ನಿಯಂತ್ರಣದಲ್ಲಿರುವ ಮಲೇರಿಯಾ, ಡೆಂಗ್ಯೂ ಉಲ್ಬಣಿಸುವ ಭೀತಿ!
Team Udayavani, Jan 21, 2021, 7:30 AM IST
ಮಂಗಳೂರು/ ಉಡುಪಿ:ಈ ಬಾರಿ ಕರಾವಳಿ ಭಾಗದಲ್ಲಿ ಚಳಿ ಇರಬೇಕಾದ ಡಿಸೆಂಬರ್- ಜನವರಿಯಲ್ಲೂ ಹಲವು ದಿನಗಳ ಕಾಲ ಉತ್ತಮ ಮಳೆಯಾಗಿದೆ. ಇದು ಸಾಂಕ್ರಾಮಿಕ ರೋಗಗಳು, ಮಲೇರಿಯಾ, ಡೆಂಗ್ಯೂವಿನಂತಹ ರೋಗವಾಹಕ ಆಶ್ರಿತ ರೋಗಗಳು ಉಲ್ಬಣಗೊಳ್ಳಲು ಕಾರಣವಾದೀತೇ ಎಂಬುದು ಈಗಿರುವ ಕಳವಳ.
ದೇಶದಲ್ಲಿ ಸಾಮಾನ್ಯವಾಗಿ ಡಿಸೆಂಬರ್ ಮಧ್ಯಭಾಗದ ಹೊತ್ತಿಗೆ ಮುಂಗಾರು ಅಧಿಕೃತವಾಗಿ ಅಂತ್ಯವಾಗುತ್ತದೆ. ಕರಾವಳಿಯಲ್ಲಿ ನವೆಂಬರ್ ಬಳಿಕ ಮಳೆ ಅಪರೂಪ. ಆದರೆ ಈ ಬಾರಿ ಕೆಲವು ವಾರಗಳಿಂದ ಮೋಡ- ಬಿಸಿಲಿನ ವಾತಾವರಣದ ಜತೆಗೆ ಸಂಜೆ-ರಾತ್ರಿ ವೇಳೆ ವ್ಯಾಪಕವಾಗಿ ಮಳೆ ಸುರಿದಿದೆ.
ಈಗ ಬೆಳಗಿನ ವೇಳೆ ಮಂಜು, ಮಧ್ಯಾಹ್ನ ಉರಿಬಿಸಿಲು ಇರುತ್ತದೆ. ಸಂಜೆ ಅಥವಾ ರಾತ್ರಿ ವೇಳೆ ಸುರಿಯುವ ಮಳೆಯಿಂದ ನೀರು ಅಲ್ಲಲ್ಲಿ ಶೇಖರಣೆಯಾಗಿ ಸೊಳ್ಳೆ ಉತ್ಪತ್ತಿಗೆ ಪೂರಕವಾಗುವ ಸಾಧ್ಯತೆ ಇದೆ. ಇದು ಮಲೇರಿಯಾ, ಡೆಂಗ್ಯೂವಿನಂತಹ ಸೊಳ್ಳೆ ಆಶ್ರಿತ ರೋಗ ಉಲ್ಬಣಿಸುವುದಕ್ಕೆ ಕಾರಣವಾಗಬಹುದು.
ಮನೆ ಮನೆ ಸರ್ವೇ :
ಡೆಂಗ್ಯೂ, ಮಲೇರಿಯಾ ಮತ್ತಿತರ ರೋಗವಾಹಕ ಆಶ್ರಿತ ರೋಗಗಳ ತಡೆಯುವುದಕ್ಕಾಗಿ ಎರಡೂ ಜಿಲ್ಲೆಗಳ ಗ್ರಾಮೀಣ, ನಗರ ಪ್ರದೇಶಗಳಲ್ಲಿ ಲಾರ್ವಾ ಸಮೀಕ್ಷೆ ಜಾರಿಯಲ್ಲಿದೆ.
ದ.ಕ.: 6 ವರ್ಷಗಳಿಂದಮಲೇರಿಯಾ ಇಳಿಕೆ :
ದ.ಕ. ಜಿಲ್ಲೆಯಲ್ಲಿ 6 ವರ್ಷಗಳಿಂದ ಮಲೇರಿಯಾ ಪ್ರಕರಣ ಇಳಿಕೆ ಕಾಣುತ್ತಿದೆ. 2015ರಿಂದ 2010ರ ವರೆಗೆ ಮನಪಾ ವ್ಯಾಪ್ತಿಯಲ್ಲಿ 23,447 ಪ್ರಕರಣ, ಮಂಗಳೂರು ತಾಲೂಕು ವ್ಯಾಪ್ತಿಯಲ್ಲಿ 1,047, ಬಂಟ್ವಾಳ ತಾಲೂಕಿನಲ್ಲಿ 355, ಪುತ್ತೂರು ತಾಲೂಕಿನಲ್ಲಿ 306, ಬೆಳ್ತಂಗಡಿ ತಾಲೂಕಿನಲ್ಲಿ 144 ಮತ್ತು ಸುಳ್ಯ ತಾಲೂಕಿನಲ್ಲಿ 15 ಪ್ರಕರಣಗಳು ದಾಖಲಾಗಿವೆ.
ಉಡುಪಿ: ಮಲೇರಿಯಾ, ಡೆಂಗ್ಯೂ ಇಳಿಕೆ :
ಉಡುಪಿ ಜಿಲ್ಲೆಯಲ್ಲಿ 2020ರ ಡಿ. 31ರ ವರೆಗೆ ಒಟ್ಟು 124 ಮಲೇರಿಯಾ, 139 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದವು. ಜಿಲ್ಲೆಯಲ್ಲಿ ಈ ರೋಗಗಳ ಪ್ರಮಾಣ ವರ್ಷದಿಂದ ವರ್ಷಕ್ಕೆ ಸುಮಾರು ಶೇ. 20ರಷ್ಟು ಕಡಿಮೆಯಾಗುತ್ತಿದೆ.
ಮುನ್ನೆಚ್ಚರಿಕೆ ವಹಿಸಿ :
ಹವಾಮಾನ ಬದಲಾವಣೆಯಿಂದ ಸೊಳ್ಳೆ ವೃದ್ಧಿಯಾಗಿ ಡೆಂಗ್ಯೂ, ಮಲೇರಿಯಾದಂತಹ ಸಾಂಕ್ರಾಮಿಕ ಕಾಯಿಲೆಗಳು ಮರಳಿ ಕಾಣಿಸಿಕೊಳ್ಳಬಹುದು. ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆಯ ಜತೆಗೆ ಜನರೂ ಮುನ್ನೆಚ್ಚರಿಕೆ ವಹಿಸಬೇಕು.
- ಮನೆಯ ಸುತ್ತ ನಿರುಪಯುಕ್ತ ವಸ್ತುಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ
- ಸೊಳ್ಳೆ ಪರದೆಯನ್ನು ವಾರಕ್ಕೊಮ್ಮೆಯಾದರೂ ಸ್ವತ್ಛಗೊಳಿಸಿ
- ದಿನಂಪ್ರತಿ ಸೋಂಕುನಿವಾರಕ ಬಳಸಿ ಮನೆಯ ನೆಲ ಒರಸಲು ಮರೆಯದಿರಿ
- ಸಾಮಾನ್ಯ ಜ್ವರವನ್ನೂ ನಿರ್ಲಕ್ಷಿಸದೆ ವೈದ್ಯರನ್ನು ಭೇಟಿಯಾಗಿ
ಮಲೇರಿಯಾ ಮತ್ತು ಡೆಂಗ್ಯೂ ಪ್ರಕರಣಗಳು ಪತ್ತೆಯಾಗಬಹುದಾದ ಪ್ರದೇಶಕ್ಕೆ ತೆರಳಿ ಕಟ್ಟಡ ಸ್ಥಳ, ಸೊಳ್ಳೆ ಉತ್ಪತ್ತಿ ತಾಣಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ. ಹೆಚ್ಚು ಪ್ರಕರಣ ಕಂಡು ಬರುವಲ್ಲಿ ಫಾಗಿಂಗ್ ಮಾಡಲಾಗುತ್ತದೆ. ನವೆಂಬರ್, ಡಿಸೆಂಬರ್‌ನಲ್ಲಿ ಡೆಂಗ್ಯೂ ಶೂನ್ಯ ಪ್ರಕರಣ ದಾಖಲಾಗಿದೆ. ಇದೇ ಸಮಯಕ್ಕೆ ಮಲೇರಿಯಾ ಸಂಬಂಧಿಸಿದಂತೆ 6 ಪ್ರಕರಣಗಳು ದಾಖಲಾಗಿವೆ. - ಡಾ| ಪ್ರಶಾಂತ್ ಭಟ್, ಮಲೇರಿಯಾಧಿಕಾರಿ, ಉಡುಪಿ ಜಿಲ್ಲೆ.
ದ.ಕ. ಜಿಲ್ಲೆಯಲ್ಲಿ ಮಲೇರಿಯಾ, ಡೆಂಗ್ಯೂ ಪ್ರಕರಣ ಕಡಿಮೆಯಾಗುತ್ತಿದೆ. ಸಾಂಕ್ರಾಮಿಕ ರೋಗ ಹರಡದಂತೆ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಮನೆ ಮನೆಗಳಲ್ಲಿ ಲಾರ್ವಾ ಸಮೀಕ್ಷೆ ನಡೆಸಲಾಗುತ್ತದೆ. ಕೊರೊನಾದಿಂದಾಗಿ ತುಸು ಹಿನ್ನಡೆಯಾಗಿದ್ದರೂ ಸದ್ಯ ಯಥಾಸ್ಥಿತಿಗೆ ಬಂದಿದೆ. ಯಾವುದೇ ಸಾಂಕ್ರಾಮಿಕ ರೋಗ ಬಂದರೂ ತತ್‌ಕ್ಷಣ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಾಹಿತಿ ನೀಡಿ. ಜಿಲ್ಲೆಯಲ್ಲಿ ಔಷಧ ದಾಸ್ತಾನು ಸಮರ್ಪಕವಾಗಿದ್ದು, ಬೆಡ್‌ಗಳ ಕೊರತೆ ಇಲ್ಲ – ಡಾ| ನವೀನ್ ಚಂದ್ರ ಕುಲಾಲ್ , ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ, ದ.ಕ. ಜಿಲ್ಲೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.