ಮಲೇರಿಯಾ- ಡೆಂಗ್ಯೂ ಮುನ್ನೆಚ್ಚರಿಕೆ ಅಗತ್ಯ
ಮಳೆಗಾಲ ಆರಂಭ; ಎಲ್ಲೆಡೆ ನೈರ್ಮಲ್ಯಕ್ಕೆ ಆದ್ಯತೆ ನೀಡಿ
Team Udayavani, Jun 16, 2019, 5:00 AM IST
ಮಂಗಳೂರು: ಮಳೆಗಾಲ ಆರಂಭಗೊಂಡಿದೆ. ಮಲೇರಿಯಾ, ಡೆಂಗ್ಯೂ ಹಾವಳಿಯೂ ಹೆಚ್ಚುತ್ತಿದೆ. ಈ ಹಿಂದಿನ ಅಂಕಿ-ಅಂಶಗಳನ್ನು ಪರಿಗಣಿಸಿದರೆ ಜೂನ್‌ನಿಂದ ನವೆಂಬರ್‌ವರೆಗೆ ಮಲೇರಿಯಾ, ಡೆಂಗ್ಯೂ ಅತಿಹೆಚ್ಚು ಬಾಧಿತವಾಗುವ ಸಮಯ. ಮಳೆಗಾಲದಲ್ಲಿ ಹೆಚ್ಚಾಗಿ ಹರಡುವ ಸಾಂಕ್ರಾಮಿಕ ಕಾಯಿಲೆಗಳ ಬಗ್ಗೆ ನಗರವಾಸಿಗಳು ಮುಚ್ಚರಿಕೆ ವಹಿಸುವುದು ಉತ್ತಮ.
ದ.ಕ. ಜಿಲ್ಲೆಯಲ್ಲಿ ಈ ವರ್ಷ ಜನವರಿಯಿಂದ ಮೇ ತಿಂಗಳವರೆಗೆ ಸುಮಾರು 80ಕ್ಕೂ ಅಧಿಕ ಮಂದಿಯನ್ನು ಡೆಂಗ್ಯೂ ಬಾಧಿಸಿದೆ. 668 ಮಂದಿ ಮಲೇರಿಯಾದಿಂದ ಬಾಧಿತರಾಗಿದ್ದಾರೆ. ಇದರಲ್ಲಿ 602 ಪ್ರಕರಣಗಳು ಪಾಲಿಕೆಯ ವ್ಯಾಪ್ತಿಯಲ್ಲಿ ಕಂಡು ಬಂದಿತ್ತು. 2018ರಲ್ಲಿ ಜನವರಿಯಿಂದ ಡಿಸೆಂಬರ್‌ವರೆಗೆ ಜಿಲ್ಲೆಯಲ್ಲಿ 3,871 ಮಂದಿ ಮಲೇರಿಯಾ ದಿಂದ ಬಾಧಿತರಾಗಿದ್ದರು. ಇದರಲ್ಲಿ 3,599 ಪ್ರಕ ರಣಗಳು ನಗರ ಪ್ರದೇಶದಲ್ಲಿ ಕಂಡುಬಂದಿದ್ದವು. 584 ಮಂದಿಗೆ ಡೆಂಗ್ಯೂ ಬಾಧಿಸಿತ್ತು. ಮೇ ತಿಂಗಳಿನಲ್ಲಿ 46 ಮಂದಿಗೆ ರೋಗ ತಗಲಿತ್ತು.
2018ರಲ್ಲಿ ಮೇನಲ್ಲಿ 231 ಮಲೇರಿಯಾ ಪ್ರಕರಣಗಳು ಕಂಡುಬಂದಿದ್ದರೆ ಜೂನ್‌ನಲ್ಲಿ 423ಕ್ಕೆ ಏರಿಕೆಯಾಗಿತ್ತು. ಜುಲೈನಲ್ಲಿ 634, ಆಗಸ್ಟ್‌ನಲ್ಲಿ 570, ಸೆಪ್ಟಂಬರ್‌ನಲ್ಲಿ 344 ಪ್ರಕರಣಗಳು ವರದಿಯಾಗಿತ್ತು. ಇದರಲ್ಲಿ ಶೇ.90ರಷ್ಟು ಪ್ರಕರಣಗಳು ಮಹಾನಗರ ಪಾಲಿಕೆಯ ವ್ಯಾಪ್ತಿಯದ್ದು.
ಮಲೇರಿಯಾ, ಡೆಂಗ್ಯೂ ಸಹಿತ ಸಾಂಕ್ರಾಮಿಕ ರೋಗಗಳ ತಡೆಗೆ ಆರೋಗ್ಯ ಇಲಾಖೆ, ಮಹಾನಗರ ಪಾಲಿಕೆ ವತಿಯಿಂದ ಕ್ರಮಗಳು, ಅಭಿಯಾನಗಳು ಜಾರಿಯಲ್ಲಿವೆ. ಇವುಗಳ ಪರಿಣಾಮಕಾರಿ ಅನುಷ್ಠಾನ ಮತ್ತು ಯಶಸ್ವಿಯಾಗಬೇಕಾದರೆ ಸಾರ್ವಜನಿಕ ಜಾಗೃತಿ, ಸಹಭಾಗಿತ್ವ ಅತೀ ಅಗತ್ಯ.
ಪರಿಸರ ಸ್ವಚ್ಛವಾಗಿರಲಿ
ಮಲೇರಿಯಾ, ಡೆಂಗ್ಯೂ ಜ್ವರ ಸೊಳ್ಳೆಗಳಿಂದ ಹರಡುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಮನೆ, ಪರಿಸರದಲ್ಲಿ ಸೊಳ್ಳೆಗಳ ಉತ್ಪತಿಗೆ ಅವಕಾಶ ವಾಗದಂತೆ ಎಚ್ಚರ ವಹಿಸುವುದು ಅಗತ್ಯ. ಅದಕ್ಕಾಗಿ ಪರಿಸರ ಸ್ವಚ್ಛತೆ ಕಾಪಾಡುವುದು ಅತೀ ಮುಖ್ಯ. ಮುಚ್ಚಳವಿಲ್ಲದ ಓವರ್‌ಹೆಡ್ ಟ್ಯಾಂಕ್, ಸಿಮೆಂಟ್ ಟ್ಯಾಂಕ್‌ಗಳು, ತೆಂಗಿನ ಚಿಪ್ಪು, ಕುಡಿದು ಬಿಸಾಡಿದ ಎಳನೀರು ಚಿಪ್ಪು (ಬೊಂಡ), ಮನೆಯ ಸುತ್ತಮುತ್ತ ಎಸೆದ ಪ್ಲಾಸ್ಟಿಕ್, ಟಯರ್ ಸಹಿತ ನೀರು ನಿಲ್ಲುವ ಅವಕಾಶವಿರುವ ಎಲ್ಲ ಪರಿಕರಗಳು ಸೊಳ್ಳೆಗಳ ಉತ್ಪತ್ತಿ ತಾಣಗಳು.
ಅಂಗೈ ಅಗಲದ ಜಾಗದಲ್ಲಿ ಸ್ವಲ್ಪ ನೀರಿದ್ದರೂ ಸಾಕು ಅಲ್ಲಿ ಸೊಳ್ಳೆಗಳು ಉತ್ಪತಿಯಾಗುತ್ತವೆ. ಮನೆಯ ಆವರಣದಲ್ಲಿ ಗೇಟ್‌ಗೆ ಹಾಕಿರುವ ಬಿದಿರಿನ ತುಂಡು ಗಳಲ್ಲಿ, ಚಪ್ಪಲಿಗಳಲ್ಲಿ ನಿಂತ ನೀರಿನಲ್ಲಿ ಲಾರ್ವಾಗಳು ಪತ್ತೆಯಾಗಿರುವ ಪ್ರಕರಣಗಳು ಇವೆ. ಇವುಗಳನ್ನು ಮನೆಯವರಿಗೆ ತೋರಿಸಿದಾಗ ಅವರು ಆಶ್ಚರ್ಯ ಪಡುತ್ತಾರೆ. ಅಡಿಕೆ ತೋಟದಲ್ಲಿ ಬಿದ್ದಿರುವ ಹಾಳೆ ಗಳಲ್ಲಿ ನೀರು ಇದ್ದರೆ ಅವುಗಳು ಸೊಳ್ಳೆಗಳ ಉತ್ಪತಿ ತಾಣವಾಗುತ್ತವೆ ಎನ್ನುತ್ತಾರೆ ಮಲೇರಿಯಾ ನಿಯಂತ್ರಣಾಧಿಕಾರಿಯವರು.
ರಕ್ತ ಪರೀಕ್ಷೆ
ಜ್ವರ ಯಾವುದೇ ಇರಲಿ. ರಕ್ಷ ಪರೀಕ್ಷೆ ಮಾಡಿಸಿ ಕೊಳ್ಳುವ ಮೂಲಕ ಖಾತ್ರಿ ಪಡಿಸಿಕೊಳ್ಳುವುದು ಒಳ್ಳೆಯದು. ಮಲೇರಿಯಾ/ ಡೆಂಗ್ಯೂ ಜ್ವರ ಕಂಡುಬಂದಲ್ಲಿ ವೈದ್ಯರಿಂದ ಸೂಕ್ತ ಚಿಕಿತ್ಸೆಯನ್ನು ಪರಿಣಾಮಕಾರಿಯಾಗಿ ಪಡೆದುಕೊಳ್ಳಬೇಕು. ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸರಕಾರಿ ಆಸ್ಪತ್ರೆಗಳು, ಮಹಾನಗರಪಾಲಿಕೆ ಮಲೇರಿಯಾ ಪರೀಕ್ಷೆ ಕೇಂದ್ರಗಳಲ್ಲಿ ರಕ್ತ ತಪಾಸಣೆಯನ್ನು ಉಚಿತವಾಗಿ ಮಾಡಿಕೊಳ್ಳಬಹುದು.
ಸೊಳ್ಳೆ ಉತ್ಪತ್ತಿ ನಿಯಂತ್ರಿಸಿ
ಓವರ್‌ಹೆಡ್ ಟ್ಯಾಂಕ್, ಸಿಮೆಂಟ್ ಟ್ಯಾಂಕ್‌ಗಳನ್ನು ಭದ್ರವಾಗಿ ಮುಚ್ಚಿಡಿ.
ಮನೆ ಸುತ್ತ ಎಸೆದ ಪ್ಲಾಸ್ಟಿಕ್, ಟಯರ್, ತೆಂಗಿನ ಚಿಪ್ಪು ಗಳನ್ನು ತತ್‌ಕ್ಷಣ ವಿಲೇವಾರಿ ಮಾಡಿ.
ಒಡೆದ ಪ್ಲಾಸ್ಟಿಕ್ ಬಕೆಟ್, ಪಾತ್ರೆಗಳನ್ನು ಕವುಚಿ ಹಾಕಬೇಕು.
ಮನೆ ಒಳಗೆ, ಹೊರಗೆ ಇರುವ ಹೂವಿನ ಕುಂಡ, ಮನಿಪ್ಲಾಂಟ್ ಚಟ್ಟಿಗಳು, ಏರ್‌ಕೂಲರ್‌ಗಳಲ್ಲೂ ಸೊಳ್ಳೆಗಳು ಉತ್ಪತಿಯಾಗುತ್ತವೆ. ಹೀಗಾ ಗಿ ಇವುಗಳ ನೀರನ್ನು ಪ್ರತಿ ವಾರ ಖಾಲಿ ಮಾಡಬೇಕು.
ಕಟ್ಟಡ ನಿರ್ಮಾಣ ತಾಣಗಳಲ್ಲಿ ನೀರು ನಿಲ್ಲಲು ಅವಕಾಶ ನೀಡಬಾರದು.
ಬಾವಿ/ಕೆರೆಗಳಲ್ಲಿ ಗಪ್ಪಿ ಮೀನು ಸಾಕಿ ಸೊಳ್ಳೆಗಳ ಉತ್ಪತಿಯನ್ನು ತಡೆಗಟ್ಟಬಹುದು.
ಸೊಳ್ಳೆಗಳಿಂದ ರಕ್ಷಣೆಗೆ ಹೀಗೆ ಮಾಡಿ
ಡೆಂಗ್ಯೂ ಹರಡುವ ಇಡಿಸ್ ಸೊಳ್ಳೆ ಸಾಮಾನ್ಯವಾಗಿ ಹಗಲಿನಲ್ಲಿ ಕಚ್ಚುತ್ತವೆ. ಮಲೇರಿಯಾ ಹರಡುವ ಆನಾಫಿಲಿಸಿಸ್ ರಾತ್ರಿ ಸಮಯದಲ್ಲಿ ಕಚ್ಚುತ್ತವೆ. ಹೀಗಾಗಿ ಸೊಳ್ಳೆ ಗ ಳಿಂದ ರಕ್ಷ ಣೆಗೆ ಕೆಲವು ಕ್ರಮ ಪಾಲಿಸುವುದು ಅಗತ್ಯ.
ಔಷಧ ಲೇಪಿಸಿದ ಸೊಳ್ಳೆ ಪರದೆಗಳ ಬಳಕೆ, ಮಕ್ಕಳು/ ವೃದ್ಧರು ಹಗಲು ಮಲಗುವಾಗಲೂ ಸೊಳ್ಳೆ ಪರದೆ ಉಪಯೋಗಿಸುವುದು.
ಸೊಳ್ಳೆ ಪ್ರವೇಶಿಸದಂತೆ ಸಂಜೆ ಹೊತ್ತು ಕಿಟಕಿ ಬಾಗಿಲುಗಳನ್ನು ಭದ್ರವಾಗಿ ಮುಚ್ಚುವುದು ಅಥವಾ ಜಾಲರಿಗಳನ್ನು ಅಳವಡಿಸುವುದು ಮುಂತಾದ ಕ್ರಮಗಳನ್ನು ಅನುಸರಿಸುವ ಮೂಲಕ ಸೊಳ್ಳೆಗಳಿಂದ ರಕ್ಷಣ ಪಡೆಯಬಹುದು.
ಮನೆಯ ಸುತ್ತ ಫಾಗಿಂಗ್ ಮಾಡಿಸುವುದು.
ನಿಯಂತ್ರಣಕ್ಕೆ ಕ್ರಮ
ಡೆಂಗ್ಯೂ ಬಗ್ಗೆ ಜಾಗೃತಿ ಹಾಗೂ ನಿಯಂತ್ರಣಕ್ಕೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಮಲೇರಿಯಾ ನಿಯಂತ್ರಣ ಮಾಸಾಚರಣೆ ಜಾರಿಯಲ್ಲಿದೆ. ನಗರದಲ್ಲಿ 10 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, ಪ್ರತಿ ವಾರ್ಡ್ ನಲ್ಲಿ ಮಲೇರಿಯಾ ನಿಯಂತ್ರಣ ನಿಟ್ಟಿನಲ್ಲಿ ಕ್ರಮವಹಿಸಲಾಗುತ್ತಿದೆ. ಆರು ತಂಡಗಳು ಪ್ರತಿ ತಿಂಗಳು ಎರಡು ಬಾರಿ ಕಟ್ಟಡ ನಿರ್ಮಾಣ ಕಾಮಗಾರಿ ಹಾಗೂ ವಲಸೆ ಕಾರ್ಮಿಕರು ವಾಸಿ ಸುವ ಪ್ರದೇಶಗಳಿಗೆ ತೆರಳಿ ರಕ್ತ ಪರೀಕ್ಷೆ ಮಾಡುತ್ತಿದೆ. ಬಾವಿ, ಟ್ಯಾಂಕ್‌ಗಳಿಗೆ ಗಪ್ಪಿ ಮೀನು ಹಾಕುವ ಕಾರ್ಯ ನಡೆಯಲಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರ ಸಹಭಾಗಿತ್ವವೂ ಅವಶ್ಯ.
– ಡಾ| ಅರುಣ್ ಕುಮಾರ್,
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.