ಸಂವಿಧಾನ, ಪ್ರಜಾತಂತ್ರ ಉಳಿವು ಅಗತ್ಯ: ಖರ್ಗೆ

Team Udayavani, Apr 26, 2023, 6:05 AM IST

ಸಂವಿಧಾನ, ಪ್ರಜಾತಂತ್ರ ಉಳಿವು ಅಗತ್ಯ: ಖರ್ಗೆ

ಮಂಗಳೂರು: ಡಬಲ್‌ ಎಂಜಿನ್‌ ಸರಕಾರದ ಸುಳ್ಳನ್ನು ಜನರಿಗೆ ತಿಳಿಸದೆ ಹೋದರೆ ಪ್ರಜಾಪ್ರಭುತ್ವ ವ್ಯವಸ್ಥೆ, ಸಂವಿಧಾನ ಉಳಿಯದು. ಪಕ್ಷ, ವ್ಯಕ್ತಿ ಪ್ರತಿಷ್ಠೆ, ಅಸಮಾಧಾನ ಎಲ್ಲ ಬಿಟ್ಟು ಜನವಿರೋಧಿ ಬಿಜೆಪಿಯನ್ನು ಬದಲಾಯಿಸಿ ಕಾಂಗ್ರೆಸ್‌ಗೆ ಮರಳಿ ಅವಕಾಶ ಕೊಡಿಸಲು ಶ್ರಮಿಸೋಣ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಟಿಎಂಎ ಪೈ ಕನ್ವೆನ್ಶನ್‌ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾದ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಕಾರ್ಯ ಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತ ನಾಡಿದರು. ದೇಶದಲ್ಲಿ ಎಲ್ಲರಿಗೂ ಒಂದು ಕಾನೂನಿದ್ದು, ಮೋದಿ ಸರಕಾರ ಮಾತ್ರ ಕಾರ್ಪೊರೆಟ್‌ ಕಂಪೆನಿ ಗಳಿಗೆ ವಿನಾಯಿತಿ ನೀಡಿ, ಮೃದು ಧೋರಣೆ ಅನುಸರಿಸುತ್ತಿದೆ. ವಿಮಾನ ನಿಲ್ದಾಣ, ಬಂದರನ್ನು ಸಾರ್ವಜನಿಕ ಸಂಸ್ಥೆಯಲ್ಲಿ ಅನುಭವವೇ ಇಲ್ಲದ ಸಂಸ್ಥೆಗಳಿಗೆ ಒಪ್ಪಂದ ಮೇಲೆ ನೀಡ ಲಾಗುತ್ತಿದೆ ಎಂದರು.

ದೇಶಕ್ಕೆ ಕಾಂಗ್ರೆಸ್‌ ಕೊಡುಗೆ ಏನು ಎಂದು ಬಿಜೆಪಿಯವರು ಕೇಳುತ್ತಾರೆ. ಆದರೆ ಸ್ವಾತಂತ್ರÂಕ್ಕಾಗಿ ಬಿಜೆಪಿ, ಆರ್‌ಎಸ್‌ಎಸ್‌ ಅಥವಾ ಹಿಂದಿನ ಜನ ಸಂಘದ ಎಷ್ಟು ಮಂದಿ ಜೈಲಿಗೆ ಹೋಗಿ ದ್ದರು ಎಂಬುದರ ಪಟ್ಟಿ ನೀಡಲಿ. ಇಲ್ಲಿ ಯವರೆಗೆ ಸಂವಿಧಾನ ಉಳಿಸಿದ್ದು, ಸಾರ್ವಜನಿಕ ಸಹಭಾಗಿತ್ವದ ಸಂಸ್ಥೆ ಉಳಿಸಿದ್ದು ಕಾಂಗ್ರೆಸ್‌ ಎಂದರು.

ಅದಾನಿಯವರ ಏಳಿಗೆಗಾಗಿ ಪೌಷ್ಟಿಕ ಆಹಾರವನ್ನು ಮೋದಿ ಸರಕಾರ ನೀಡು ತ್ತಿದೆ. ಎಲ್‌ಐಸಿ, ಬ್ಯಾಂಕ್‌ ಸಾಲ, ಪಿಎಫ್‌ ಹಣ ಸೇರಿ ದಂತೆ ಎಲ್ಲಾ ಮೂಲಗಳಿಂದ ನೆರವು ನೀಡಲಾಗುತ್ತಿದೆ. ಮೋದಿ ಅವರು ಹೊರದೇಶಕ್ಕೆ ಹೋಗುವಾಗ ಅದಾನಿಯವರೇ ಜತೆಯಾಗಿ ಹೋಗು ವುದು ಯಾಕೆ? ಎಷ್ಟು ಸಲ ಅವರನ್ನು ಕರೆದುಕೊಂಡು ಹೋಗಿದ್ದೀರಿ ಎಂಬುದನ್ನು ಮೋದಿಯವರೇ ಜನ ರಿಗೆ ತಿಳಿಸಬೇಕು. ಸಾರ್ವಜನಿಕ ಸಹ ಭಾಗಿತ್ವದ ಕಂಪೆನಿಗಳನ್ನು ಮುಚ್ಚಿ ಲಕ್ಷಾಂತರ ಮಂದಿಯ ಉದ್ಯೋಗ ನಷ್ಟ ಮಾಡಿದ್ದು ಬಿಜೆಪಿಯಾ ಸಾಧನೆಯಾ ಎಂದು ಅವರು ಪ್ರಶ್ನಿಸಿದರು.
ಉತ್ತರಾಖಂಡದ ಶಾಸಕ ಭುವನ್‌, ನಾಗಪುರ ಶಾಸಕ ಸುನೀಲ್‌ ಕೇದಾರ್‌, ಎಐಸಿಸಿ ಮಹಿಳಾ ಕಾಂಗ್ರೆಸ್‌ನ ಶಿಬಾ ರಾಮಚಂದ್ರನ್‌, ಮುಖಂಡರಾದ ಬಿ. ಇಬ್ರಾಹಿಂ, ಅಭಯಚಂದ್ರ, ಶಾಲೆಟ್‌ ಪಿಂಟೋ, ಶಾಹುಲ್‌ ಹಮೀದ್‌, ನವೀನ್‌ ಡಿ’ಸೋಜಾ, ಪದ್ಮರಾಜ್‌ ಆರ್‌., ಮಮತಾ ಗಟ್ಟಿ, ಸುರೇಶ್‌ ಬಲ್ಲಾಳ್‌ ಮತ್ತಿತರರು ಉಪಸ್ಥಿತರಿದ್ದರು.

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಹರೀಶ್‌ ಕುಮಾರ್‌ ಸ್ವಾಗತಿಸಿದರು. ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ ಪ್ರಸ್ತಾವಿಸಿದರು. ಮಾಜಿ ಸದಸ್ಯ ಐವನ್‌ ಡಿ’ಸೋಜಾ ವಂದಿಸಿದರು.

ಅದಾನಿ ಆಸ್ತಿ ಏರಿಕೆ ಯಾವ ಜಾದೂ?
2014ರಲ್ಲಿ 50 ಸಾವಿರ ಕೋಟಿ ರೂ. ಇದ್ದ ಅದಾನಿ ಸಂಪತ್ತು 2022ರಲ್ಲಿ 2 ಲಕ್ಷ ಕೋ.ಗೆ ಏರಿಕೆಯಾಗಿದೆ.
ಅನಂತರದ ಎರಡೂವರೆ ವಷಗಳ‌ಲ್ಲಿ ಅದು 12 ಲಕ್ಷ ಕೋ.ರೂ.ಗೆ ಏರಿದೆ. ಇದು ಯಾವ ಜಾದೂ ಎಂದು ಪ್ರಶ್ನಿಸಿದ ಖರ್ಗೆ, ಈ ರೀತಿ ಹಣ ಮಾಡುವ ವಿಧಾನವನ್ನು ಜನರಿಗೂ ತಿಳಿಸಿಕೊಟ್ಟರೆ ಉದ್ಧಾರವಾಗುತ್ತಾರೆ. ಉಚಿತ ಗ್ಯಾಸ್‌ ನೀಡುವ ಅಗತ್ಯವೇ ಇರದು ಎಂದು ಲೇವಡಿ ಮಾಡಿದರು.

ಟಾಪ್ ನ್ಯೂಸ್

Chhattisgarh: ಪತ್ರಕರ್ತ ಮುಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಹೈದರಾಬಾದ್‌ನಲ್ಲಿ ಬಂಧನ

Chhattisgarh: ಪತ್ರಕರ್ತ ಮುಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಹೈದರಾಬಾದ್‌ನಲ್ಲಿ ಬಂಧನ

Honnavara: ಲಾರಿ ಪಲ್ಟಿಯಾಗಿ ಇಬ್ಬರು ಸಾವು; ಮೂವರಿಗೆ ಗಾಯ

Honnavara: ಲಾರಿ ಪಲ್ಟಿಯಾಗಿ ಇಬ್ಬರು ಸಾವು; ಮೂವರಿಗೆ ಗಾಯ

ಅಪ್ಪನನ್ನೇ ಬದಲಿಸಿದ ಅತಿಶಿ: ಪ್ರಿಯಾಂಕಾ ಬೆನ್ನಲ್ಲೇ ವಿವಾದಾತ್ಮಕ ಹೇಳಿಕೆ ನೀಡಿದ ಬಿಧುರಿ

ಅಪ್ಪನನ್ನೇ ಬದಲಿಸಿದ ಅತಿಶಿ: ಪ್ರಿಯಾಂಕಾ ಬೆನ್ನಲ್ಲೇ ವಿವಾದಾತ್ಮಕ ಹೇಳಿಕೆ ನೀಡಿದ ಬಿಧುರಿ

India Cricket: The star all-rounder announced his retirement from limited over cricket

India Cricket: ಸೀಮಿತ ಓವರ್‌ ಕ್ರಿಕೆಟ್‌ ಗೆ ನಿವೃತ್ತಿ ಘೋಷಿಸಿದ ಸ್ಟಾರ್‌ ಆಲ್‌ ರೌಂಡರ್

Trump-Maga

Make America Great Again: ಅಮೆರಿಕದಲ್ಲಿ ಸ್ವದೇಶಿ vs ವಲಸಿಗರು ಜಟಾಪಟಿ

Prashant Kishor

Prashant Kishor: ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪ್ರಶಾಂತ್‌ ಕಿಶೋರ್‌ ಬಂಧನ

Na-Dsoza-Family

ಸಾಹಿತ್ಯದಾಚೆಗೂ ಬೆಳೆದು ನಿಂತ ಸಾಗರದ ನಾ.ಡಿ’ಸೋಜಾ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

Bajpe: ಗುರುಪುರ ಪೇಟೆಯ ಹಲವೆಡೆ ಕಳವು

police crime

Crime-follow up;ಇ.ಡಿ. ಅಧಿಕಾರಿಗಳಂತೆ ನಟಿಸಿ 30 ಲ.ರೂ. ದರೋಡೆ: 4 ತಂಡಗಳಿಂದ ತನಿಖೆ

1-yash

Mangaluru: ದಿಢೀರ್‌ ಆಗಿ ಕಾಣಿಸಿಕೊಂಡ ನಟ ಯಶ್‌

1-aaaa

ಬಡ ದಂಪತಿಗೆ ಮಾಜಿ ಮೇಯರ್‌ ಸುಧೀರ್‌ ಶೆಟ್ಟಿ ನಿರ್ಮಿಸಿಕೊಟ್ಟ 12 ಲ.ರೂ. ಮನೆಯ ಗೃಹ ಪ್ರವೇಶ

arrested

Mangaluru; ನಕಲಿ ಆಧಾರ್, ದಾಖಲೆ ಸೃಷ್ಟಿಸಿಕೊಡುತ್ತಿದ್ದ ಆರೋಪಿ ಬಂಧನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Chhattisgarh: ಪತ್ರಕರ್ತ ಮುಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಹೈದರಾಬಾದ್‌ನಲ್ಲಿ ಬಂಧನ

Chhattisgarh: ಪತ್ರಕರ್ತ ಮುಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಹೈದರಾಬಾದ್‌ನಲ್ಲಿ ಬಂಧನ

Leopard spotted in Vijayapura city: CCTV footage captured

Leopard: ವಿಜಯಪುರ ನಗರದಲ್ಲಿ ಕಾಣಿಸಿಕೊಂಡ ಚಿರತೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

Honnavara: ಲಾರಿ ಪಲ್ಟಿಯಾಗಿ ಇಬ್ಬರು ಸಾವು; ಮೂವರಿಗೆ ಗಾಯ

Honnavara: ಲಾರಿ ಪಲ್ಟಿಯಾಗಿ ಇಬ್ಬರು ಸಾವು; ಮೂವರಿಗೆ ಗಾಯ

ಅಪ್ಪನನ್ನೇ ಬದಲಿಸಿದ ಅತಿಶಿ: ಪ್ರಿಯಾಂಕಾ ಬೆನ್ನಲ್ಲೇ ವಿವಾದಾತ್ಮಕ ಹೇಳಿಕೆ ನೀಡಿದ ಬಿಧುರಿ

ಅಪ್ಪನನ್ನೇ ಬದಲಿಸಿದ ಅತಿಶಿ: ಪ್ರಿಯಾಂಕಾ ಬೆನ್ನಲ್ಲೇ ವಿವಾದಾತ್ಮಕ ಹೇಳಿಕೆ ನೀಡಿದ ಬಿಧುರಿ

India Cricket: The star all-rounder announced his retirement from limited over cricket

India Cricket: ಸೀಮಿತ ಓವರ್‌ ಕ್ರಿಕೆಟ್‌ ಗೆ ನಿವೃತ್ತಿ ಘೋಷಿಸಿದ ಸ್ಟಾರ್‌ ಆಲ್‌ ರೌಂಡರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.