ಸರಕಾರಿ ಹಾಸ್ಟೆಲ್‌ಗಳ ನಿರ್ವಹಣೆ: ಸ್ಥಳೀಯ ಸಂಘಸಂಸ್ಥೆಗಳ ಭಾಗೀದಾರಿಕೆಗೆ ಖಾದರ್ ಸಲಹೆ
Team Udayavani, Jun 16, 2019, 11:03 AM IST
ಮಂಗಳೂರು: ಸರಕಾರಿ ಹಾಸ್ಟೆಲ್‌ಗಳ ಬಗ್ಗೆ ಆಯಾ ಊರಿನ ಲಯನ್ಸ್, ರೋಟರಿ, ಜೇಸಿಸ್, ಮಹಿಳಾ ಮಂಡಲ ಸಹಿತ ಪ್ರತಿಷ್ಠಿತ ಸರಕಾರೇತರ ಸಂಘ ಸಂಸ್ಥೆಗಳು ನಿಗಾ ವಹಿಸಿ ನಿರ್ವಹಣೆ ನಡೆಸುವ ಬಗ್ಗೆ ಚಿಂತನೆ ನಡೆಸಬೇಕು ಎಂದು ಸಚಿವ ಖಾದರ್ ಸಲಹೆ ಮಾಡಿದ್ದಾರೆ.
ಅವರು ಶನಿವಾರ ಸಮಾಜ ಕಲ್ಯಾಣ, ಹಿಂದುಳಿದ ವರ್ಗ, ಅಲ್ಪ ಸಂಖ್ಯಾಕ ಮತ್ತು ಐಟಿಡಿಪಿ ಇಲಾಖೆಯ ಹಾಸ್ಟೆಲ್ ಪ್ರಗತಿ ಪರಿಶೀಲನೆ ಮತ್ತು ಮಳೆ ಹಾನಿ ಸಭೆಯಲ್ಲಿ ಮಾತನಾಡಿದರು.
ಸರಕಾರಿ ಮಟ್ಟದಲ್ಲಿ ಹಾಸ್ಟೆಲ್ ನಿರ್ವಹಣೆ ಚೆನ್ನಾಗಿ ನಡೆಯುತ್ತಿದೆ. ಆದರೆ ಆಯಾ ಊರಿನ ಜನರಿಗೂ ಜವಾಬ್ದಾರಿ ನೀಡುವುದು ಉತ್ತಮ. ಆಗ ಹಾಸ್ಟೆಲ್‌ಗಳಲ್ಲಿ ಉತ್ತಮ ಕಾರ್ಯಕ್ರಮ, ವಿವಿಧ ಸೌಲಭ್ಯ ಕಲ್ಪಿಸಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಪ್ರಯತ್ನ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಹಾಸ್ಟೆಲ್‌ಗಳಲ್ಲಿ ಆಹಾರದ ಗುಣಮಟ್ಟಕ್ಕೆ ಆದ್ಯತೆ ಕೊಡಬೇಕು. ವಿದ್ಯಾರ್ಥಿ ಸ್ಕಾಲರ್‌ಶಿಪ್ ಸಕಾಲದಲ್ಲಿ ಸಿಗಬೇಕು. ಸಿಬಂದಿ ಕೊರತೆ ಇದ್ದರೆ ಹೊರ ಗುತ್ತಿಗೆ ನೇಮಕ ಮಾಡಿಕೊಳ್ಳಿ. ಪಿವಿಎಸ್ ಕುದು¾ಲ್ ರಂಗ ರಾವ್ ಹಾಸ್ಟೆಲ್ ಎದುರು ವಾಣಿಜ್ಯ ಸಂಕೀರ್ಣ ನಿರ್ಮಿಸಿದರೆ ಇಲಾಖೆಗೆ ಆದಾಯ ಬರಲಿದೆ ಎಂದು ಸಲಹೆ ನೀಡಿದರು.
ಜಿಲ್ಲಾ ಅಂಬೇಡ್ಕರ್ ಭವನಕ್ಕೆ ಹೆಚ್ಚುವರಿ 50 ಲಕ್ಷ ರೂ. ಬೇಕಾಗಿದೆ ಎಂದು ಕಾಮಗಾರಿ ನಿಲ್ಲಿಸಬೇಡಿ. ಗೃಹ ಮಂಡಳಿ ಮೂಲಕವೇ ವಿದ್ಯುದೀಕರಣ, ಧ್ವನಿವರ್ಧಕ ಕಾಮಗಾರಿ ಮುಗಿಸಿ, 3.5 ಕೋ.ರೂ. ಮೊತ್ತದ ಪ್ರಸ್ತಾವನೆಯನ್ನು ಕಳುಹಿಸಿ ಕೊಡಿ; ಬಿಡುಗಡೆ ಮಾಡಿಸುತ್ತೇನೆ ಎಂದ ಸಚಿವರು, ತಾಲೂಕು ಮಟ್ಟದ ಅಂಬೇಡ್ಕರ್ ಭವನ ಕಾಮಗಾರಿ ಶೀಘ್ರ ಮುಗಿಸಬೇಕೆಂದರು.
ಡಿಸಿ ಶಶಿಕಾಂತ ಸೆಂಥಿಲ್, ಎಡಿಸಿ ಆರ್. ವೆಂಕಟಾಚಲಪತಿ, ಎಸಿ ರವಿಚಂದ್ರ ನಾಯಕ್, ವಿವಿಧ ಇಲಾಖೆಯ ಅಧಿಕಾರಿಗಳಾದ ಡಾ| ಯೋಗೀಶ್, ಸಚಿನ್ ಕುಮಾರ್, ಹೇಮಲತಾ ಎಸ್., ಉಸ್ಮಾನ್ ಎ., ಗುರುಪ್ರಸಾದ್ ಉಪಸ್ಥಿತ ರಿದ್ದು, ಪೂರಕ ಮಾಹಿತಿ ನೀಡಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.