ಈ ಶಾಲೆಗೆ ಪಕ್ಕದ ಕೇರಳ ರಾಜ್ಯದಿಂದಲೂ ಬರುತ್ತಿದ್ದರು ವಿದ್ಯಾರ್ಥಿಗಳು

ನಿಸರ್ಗದ ಮಡಿಲಲ್ಲಿ ಅಕ್ಷರ ಜ್ಞಾನ ಪಸರಿಸಿದ 107 ವರ್ಷದ ಮಂಡೆಕೋಲು ಸ.ಉ.ಹಿ.ಪ್ರಾ. ಶಾಲೆ

Team Udayavani, Nov 12, 2019, 5:10 AM IST

JALSURSCHOOL01-4

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

ಮಂಡೆಕೋಲು: ಬ್ರಿಟಿಷರ ಆಡಳಿತ ಕಾಲದಲ್ಲಿ ಗ್ರಾಮಸ್ಥರಿಗೆ ಕಾನೂನಿನ ಅರಿವು ಮೂಡಿಸುವ ಉದ್ದೇಶದಿಂದ ಗ್ರಾಮದ ಹಿರಿಯ ರಾಮಣ್ಣ ಹೆಬ್ಟಾರ್‌ ಆರಂಭಿಸಿದ ಶಾಲೆ. ನಿಸರ್ಗ ಸಿರಿಯ ಮಧ್ಯೆ ತಲೆಯಿತ್ತಿ ನಿಂತಿರುವ ಮಂಡೆಕೋಲು ಸ.ಉ.ಹಿ.ಪ್ರಾ. ಶಾಲೆಗೆ ಈಗ 107ರ ಹರೆಯ.

ಕೇರಳ ಕರ್ನಾಟಕ ಗಡಿ ಗ್ರಾಮವಾದ್ದರಿಂದ ಕೇರಳದ ಅಡೂರು, ಪರಪ್ಪ ಭಾಗದಿಂದಲೂ ವಿದ್ಯಾರ್ಥಿಗಳು ಬರುತ್ತಿದ್ದರು. ಸುಳ್ಯ ತಾಲೂಕಿನ ಮಂಡೆಕೋಲು ಗ್ರಾ.ಪಂ. ಬಳಿ ಬಸ್‌ ನಿಲ್ದಾಣದ ಪಕ್ಕ ರಸ್ತೆಗೆ ಹೊಂದಿಕೊಂಡು ಇರುವ ಈ ಶಾಲೆ, ಗ್ರಾಮದ ಮೊದಲ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆ. ಶಾಲೆಗೆ ಸಂಬಂಧಿಸಿ ಒಟ್ಟು 3 ಕಟ್ಟಡಗಳಿವೆ. ಒಂದು ಬಯಲು ರಂಗಮಂದಿರ ಇದೆ. 1ರಿಂದ 8ನೇ ತರಗತಿಯ ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದಾರೆ.

ಸೋಗೆ ಮಾಡಿನ ಕಟ್ಟಡ
ಶಾಲೆಯು 1.97 ಎಕ್ರೆಯಷ್ಟು ಜಾಗ ಹೊಂದಿದೆ. ಆರಂಭವಾಗಿದ್ದು 1912ರಲ್ಲಿ. ಮೂಲಸೌಕರ್ಯಗಳಿಲ್ಲದೆ ಹೊರ ಜಗತ್ತಿಗೆ ಅಪರಿಚಿತವಾಗಿದ್ದ ಮಂಡೆಕೋಲು ಪರಿಸರದಲ್ಲಿ ಶಾಲೆ ಆರಂಭಿಸುವ ಕನಸು ಹೊತ್ತು ನಡೆದವರು ರಾಮಣ್ಣ ಹೆಬ್ಟಾರ್‌. ಆ ಕಾಲದಲ್ಲಿ ಸುಳ್ಯ ತಾಲೂಕಿನಲ್ಲಿ ಇದ್ದುದು ಬೆರಳಣಿಕೆಯ ಶಾಲೆಗಳು. ಮಂಡೆಕೋಲು ಗ್ರಾಮಸ್ಥರು ಅಕ್ಷರ ಕಲಿತು ಸಂಸ್ಕಾರವಂತರಾಗಲಿ ಎಂಬ ಉದ್ದೇಶದಿಂದ ಗ್ರಾಮದ ಕುಂಞ ರಾಮ ಮಾಸ್ತರ್‌ ಹಾಗೂ ಬೆಳ್ಳಿ ಮಾಸ್ತರ್‌ ಜತೆಗೂಡಿ ಊರಿನವರ ಸಹಕಾರದಿಂದ 1912 ಅ. 25ರಂದು ಶಾಲೆ ಆರಂಭಿಸಿದರು. ಮೊದಲಿಗೆ ಕುಂಞ ಕಾಮ ಮಾಸ್ಟರ್‌ ಅವರ ಮನೆಯಲ್ಲಿ, ಬಳಿಕ ಈಗಿನ ಅಂಚೆ ಕಚೇರಿ ಸಮೀಪದ ಸೋಗೆ ಮಾಡಿನ ಕಟ್ಟಡದಲ್ಲಿ ತರಗತಿಗಳನ್ನು ನಡೆಸಲಾಯಿತು. ಹಗಲು ವರ್ಷಗಳ ಬಳಿಕ ಮಂಡೆಕೋಲು ಪೇಟೆ ಮಧ್ಯದಲ್ಲಿದ್ದ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು.

ಸ್ಥಾಪಕರ ಮಗ ಮೊದಲ ವಿದ್ಯಾರ್ಥಿ
ಆರಂಭದಲ್ಲಿ 1ನೇ ತರಗತಿಯಿಂದ ಶುರುವಾಗಿ 5ನೇ ತರಗತಿವರೆಗೆ ದಾಖಲಾತಿ ನಡೆದು ಜಿಲ್ಲಾ ಬೋರ್ಡ್‌ ಎಲಿಮೆಂಟರಿ ಶಾಲೆಯಾಗಿ ನಾಮಕರಣಗೊಂಡಿತು. ಶಾಲೆಯ ಸ್ಥಾಪಕ ರಾಮಣ್ಣ ಹೆಬ್ಟಾರ್‌ ಅವರ ಪುತ್ರ ಶೇಷಪ್ಪ ಹೆಬ್ಟಾರ್‌ ಶಾಲೆಗೆ ದಾಖಲಾತಿ ಪಡೆದ ಮೊದಲ ವಿದ್ಯಾರ್ಥಿ.

ಲೇಬರ್‌ ಸ್ಕೂಲ್‌ ಸ್ಥಾಪನೆ
ಮಂಡೆಕೋಲು ಗ್ರಾ.ಪಂ. ಕಟ್ಟಡದ ಸಮೀಪ ದಾಮೋದರ ಮಾಸ್ಟರ್‌ ಗೇಟಿನ ಬಳಿ ಕಟ್ಟಡದಲ್ಲಿ ಲೇಬರ್‌ ಸ್ಕೂಲ್‌ ಆರಂಭಿಸಲಾಯಿತು. ಇದೇ ಸಂದರ್ಭದಲ್ಲಿ ಶಾಲೆ ಮಂಡೆಕೋಲು ಒಡ್ಡಿಂಚಾಲು ಸೇತುವೆಯ ಇನ್ನೊಂದು ಬದಿಯಲ್ಲಿದ್ದ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿತ್ತು.

1963ರಲ್ಲಿ 6ನೇ ತರಗತಿ ಆರಂಭ
ಹಲವು ವರ್ಷಗಳ ಬಳಿಕ ಸರಕಾರಿ ಜಾಗವನ್ನು ಶಾಲೆಗೆ ವರ್ಗಾಯಿಸುವ ಚಿಂತನೆ ನಡೆಯಿತು. ಹೊಸ ಕಟ್ಟಡಕ್ಕೆ ಶಾಲೆಯನ್ನು ಸ್ಥಳಾಂತರವಾಯಿತು. ಮೊದಲಿಗೆ ಸಭಾಂಗಣ ಮಾದರಿಯ ಕಟ್ಟಡ ಮತ್ತು ಶಿಕ್ಷಕರ ಕೊಠಡಿ ಮಾತ್ರ ಇದ್ದವು. ಕಾಲ ಕ್ರಮೇಣ ಶಾಲೆಯ ಸೌಲಭ್ಯಗಳು ಹೆಚ್ಚಿದವು. ದೇಶಕ್ಕೆ ಸ್ವಾತಂತ್ರÂ ಲಭಿಸಿದ ಬಳಿಕ ಕಟ್ಟಡ ವಿಸ್ತರಣೆಗೊಂಡಿತು. ಮೇಲ್ಭಾಗದಲ್ಲಿ ಮೈದಾನಕ್ಕೆ ಹೊಂದಿಕೊಂಡು ಶಾಲಾ ಕಟ್ಟಡ ಹಾಗೂ ರಂಗಮಂದಿರ ನಿರ್ಮಿಸಲಾಯಿತು. 1963ರಲ್ಲಿ 6ನೇ ತರಗತಿ ಹಾಗೂ 1977ರಲ್ಲಿ ಸ.ಹಿ.ಪ್ರಾ. ಶಾಲೆ ಪ್ರಾರಂಭವಾದವು. 1979ರಲ್ಲಿ ಬಾಲವಾಡಿ ಮತ್ತು 2007ರಲ್ಲಿ 8ನೇ ತರಗತಿಗಳನ್ನು ಆರಂಭಿಸಲಾಯಿತು.

ಸುಂದರ ಕೈತೋಟ
ಶಾಲಾ ವಠಾರದಲ್ಲಿ ಸುಂದರ ಕೈತೋಟ ನಿರ್ಮಿಸಲಾಗಿದೆ. ಮಕ್ಕಳು ಮತ್ತು ಹೆತ್ತವರು ಬಾಳೆ, ಅಲಸಂಡೆ, ಗೆಣಸು, ತೊಂಡೆ ಬೆಳಸಿದ್ದಾರೆ. 10ರಿಂದ 15 ತೆಂಗಿನ ಮರಗಳಿವೆ. ಶಾಲೆಯಲ್ಲಿ 2012ರಲ್ಲಿ ಶತಮಾನೋತ್ಸವ ನಡೆಯಿತು. ಆ ವರ್ಷ 63 ಬಾಲಕಿಯರು, 64 ಬಾಲಕರು ಸೇರಿ 127 ಮಕ್ಕಳಿದ್ದರು.

ಮೂಲ ಸೌಕರ್ಯ
ಶಾಲೆಯಲ್ಲಿ ಉತ್ತಮ ಬಾಲವನವಿದೆ. ಮಕ್ಕಳಿಗೆ ಆಡಲು ಉಯ್ನಾಲೆ, ಜಾರುಬಂಡಿಯಂಥ ಸಲಕರಣಗಳಿವೆ. ದೊಡ್ಡದಾದ ಆಟದ ಮೈದಾನವಿದೆ. ಇಲ್ಲಿನ ಮಕ್ಕಳಿಗೆ ಕಂಪ್ಯೂಟರ್‌ ಶಿಕ್ಷಣ ಹಾಗೂ ಸ್ಮಾರ್ಟ್‌ ಕಾರ್ಡ್‌ ಕೊರತೆ ನೀಗಬೇಕಿದೆ. ಶಾಲಾ ಆವರಣ ಗೋಡೆ ಕೆಲಸ ಪ್ರಗತಿಯಲ್ಲಿದೆ. ಈ ಶಾಲೆಯ ಅಡುಗೆ ಕೋಣೆಯು ಚಿಕ್ಕದಾಗಿದ್ದು, ಸ್ಥಳದ ಕೊರತೆ ಇಲ್ಲಿದೆ. ಹೊಸ ಶೌಚಾಲಯದ ಬೇಡಿಕೆಯನ್ನೂ ಶಿಕ್ಷಕ ವೃಂದ ಮುಂದಿಟ್ಟಿದೆ. ಈ ಶಾಲೆಯ ಹಳೆ ವಿದ್ಯಾರ್ಥಿಯಾದ ಪಶ್ವಿ‌ಜಾ ಕೆ.ಎಸ್‌. 2017ರಲ್ಲಿ ಹೊಸದಿಲ್ಲಿಯಲ್ಲಿ ನಡೆದ ಗಣರಾಜ್ಯೋತ್ಸವದ ಪೆರೇಡ್‌ನ‌ಲ್ಲಿ ಭಾಗವಹಿಸಿದ್ದಾರೆ.

ಶಾಲೆಯಲ್ಲಿ ಕಲಿತ ಸಾಧಕರು
ಈ ಶಾಲೆಯಲ್ಲಿ ಕಲಿತ ಡಾಣ ಸುಂದರ್‌ ಕೇನಾಜೆ ಖ್ಯಾತ ಜನಪದ ಅಧ್ಯಯನಕಾರರು. ಪ್ರೊಣ ಬಾಲಚಂದ್ರ ಗೌಡ ಸುಳ್ಯ ಎನ್‌ಎಂಸಿ ಪ್ರಾಂಶುಪಾಲರು. ಪ್ರೊಣ ಎಂ. ರಾಮಚಂದ್ರ ಕಾರ್ಕಳ ಭುವನೇಂದ್ರ ಕಾಲೇಜಿಲ್ಲಿ ಕನ್ನಡ ಸಾಹಿತ್ಯ ಪರಿಚಾರಕರು. ಡಾಣ ಶ್ರೀನಿವಾಸ ಎಂ.ಬಿ. ಆಯುರ್ವೇದದಲ್ಲಿ ಎಂ.ಡಿ. ಪದವೀಧರರು. ಭವ್ಯಶ್ರೀ ಮಂಡೆಕೋಲು ಯಕ್ಷಗಾನ ಭಾಗವತೆಯಾಗಿದ್ದಾರೆ. ಮಂಡೆಕೋಲು ಗ್ರಾಮದಲ್ಲಿ ಈಗ 10 ಶಾಲೆಗಳಿವೆ. ಮಂಡೆಕೋಲು ಸ.ಉ.ಹಿ.ಪ್ರಾ. ಶಾಲೆಯಲ್ಲಿ ಪ್ರಸ್ತುತ 5 ದೀರ್ಘಾವಧಿ ಗುರುಗಳಿದ್ದಾರೆ. 98 ಮಕ್ಕಳಿದ್ದಾರೆ. ಪಿಯುಸಿಯವರೆಗೆ ವಿದ್ಯಾಭ್ಯಾಸ ಇಲ್ಲಿಯೇ ಸಿಗುವಂತಾದರೆ ಒಳ್ಳೆಯದು ಎಂದು ಡಾಣ ಸುಂದರ್‌ ಕೇನಾಜೆ ಅಭಿಪ್ರಾಯಪಟ್ಟಿದ್ದಾರೆ.

“ಉದಯವಾಣಿ’
ಪತ್ರಿಕೆಯಲ್ಲಿ ಉಲ್ಲೇಖ
1985ರಲ್ಲಿ “ಉದಯವಾಣಿ’ ಪತ್ರಿಕೆಯ ಅಭಿಯಾನದಲ್ಲಿ ಮಂಡೆಕೋಲು ಹಾಗೂ ಮರ್ಕಂಜ ಗ್ರಾಮಗಳನ್ನು ಮೂಲಸೌಕರ್ಯಗಳಿಲ್ಲದ ಕುಗ್ರಾಮಗಳೆಂದು ಗುರುತಿಸಲಾಗಿತ್ತು. ಇಲ್ಲಿದ್ದುದು ನೀರು, ಗಡಿ ಹಾಗೂ ಕಾಡುಗಳು ಮಾತ್ರ. ಇಂತಹ ಗ್ರಾಮದಲ್ಲಿ ಈ ಶಾಲೆ ಸ್ಥಾಪನೆಯಾಗಿದ್ದು ಜನರ ಪ್ರಾಥಮಿಕ ಅಕ್ಷರ ಜ್ಞಾನದ ಕೊರತೆಯನ್ನು ನೀಗಿಸಿತ್ತು. ಮಂಡೆಕೋಲು ಸರಕಾರಿ ಉ.ಹಿ. ಪ್ರಾಥಮಿಕ ಶಾಲೆ ಆರಂಭವಾದ ಕಾಲದಲ್ಲಿ ಆಸುಪಾಸಿನ ಊರುಗಳಿಗೆ ಈ ಶಾಲೆಯೇ ಆಧಾರವಾಗಿತ್ತು. ಅಕ್ಕಪ್ಪಾಡಿ, ಕನ್ಯಾನ, ಕಲ್ಲಡ್ಕ, ಪೆರಜ, ಪೇರಾಲು, ಮುಡೂರು, ಪಂಜಿಕಲ್ಲು, ಪುತ್ಯ, ಕೇನಾಜೆ, ಬೊಳುಗಲ್ಲು, ಚಾಕೋಟೆ ಮಾವಂಜಿ, ಮಂಡೆಕೋಲು ಬೈಲು, ಮೈತಡ್ಕ ಭಾಗಗಳಿಂದ ವಿದ್ಯಾರ್ಥಿಗಳು ಈ ಶಾಲೆಗೆ ಬರುತ್ತಿದ್ದರು.

2012ರಲ್ಲಿ ಶತಮಾನೋತ್ಸವ ಆಚರಿಸಿರುವ ಈ ಶಾಲೆಯಲ್ಲಿ 3 ವರ್ಷಗಳಿಂದ ಮುಖ್ಯ ಶಿಕ್ಷಕಿಯಾಗಿ ದುಡಿಯುತ್ತಿರುವುದು ನನ್ನ ಸುಯೋಗ. ಪ್ರಕೃತಿಯ ಮಡಿಲಲ್ಲಿ ಈ ಶಾಲೆಯಿದೆ. ಶಾಲೆಗೆ ಕಂಪ್ಯೂಟರ್‌ ಶಿಕ್ಷಣ, ವಿಸ್ತಾರವಾದ ಅಡುಗೆ ಕೋಣೆ ಹಾಗೂ ಸುಸಜ್ಜಿತ ಶೌಚಾಲಯದ ಆವಶ್ಯಕತೆಯಿದೆ.
-ವನಜಾಕ್ಷಿ ಎ., ಮುಖ್ಯ ಶಿಕ್ಷಕಿ

1912ರಲ್ಲಿ ಆರಂಭವಾಗಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿರುವುದು ಗ್ರಾಮೀಣ ಪ್ರದೇಶ ಶಾಲೆಯ ದೊಡ್ಡ ಸಾಧನೆ. ಇಲ್ಲಿ ಕಲಿತವರು ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅದುವೇ ಹೆಮ್ಮೆ.
-ಶ್ರೀಧರ್‌ ಕಣೆಮರಡ್ಕ
ಎಸ್‌ಡಿಎಂಸಿ ಅಧ್ಯಕ್ಷರು

 -ಶಿವಪ್ರಸಾದ್‌ ಮಣಿಯೂರು

ಟಾಪ್ ನ್ಯೂಸ್

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

1-asad

ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು;

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು

Delhi; Roads should be like Priyanka Gandhi’s cheeks: BJP leader’s statement criticized

Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ

4(1

Snuff: ನಶ್ಯ ತಂದಿಟ್ಟ ಸಮಸ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

NEW-SCHOOL

ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಜಿಲ್ಲೆಯ ಮೊದಲ ಕ್ರಿಶ್ಚಿಯನ್‌ ಪ್ರೌಢಶಾಲೆಗೆ 121ರ ಸಂಭ್ರಮ

430514561342IMG-20191203-WA0023

ಅನಂತೇಶ್ವರ ದೇಗುಲದ ಪೌಳಿಯಲ್ಲಿ ಪ್ರಾರಂಭವಾದ ಶಾಲೆಗೆ 128ರ ಸಂಭ್ರಮ

sx-22

ಸ್ವಾತಂತ್ರ್ಯಹೋರಾಟಗಾರರನ್ನು ನೀಡಿದ ಶಾಲೆಗೆ 111 ವರ್ಷಗಳ ಸಂಭ್ರಮ

ds-24

112 ವರ್ಷ ಕಂಡಿರುವ ಮೂಡುಬಿದಿರೆಯ ಡಿ.ಜೆ. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ

ds-35

ಮನೆಯ ಚಾವಡಿಯಲ್ಲಿ ಪ್ರಾರಂಭಗೊಂಡಿದ್ದ ಶಾಲೆಗೆ 105ರ ಸಂಭ್ರಮ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

1-asad

ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ

5

Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.