ಮಂಗಳೂರು: ಇಂದಿನಿಂದ ತ್ರಿದಿನ ಹಕ್ಕಿ ಹಬ್ಬ
Team Udayavani, Feb 9, 2018, 11:47 AM IST
ಮಂಗಳೂರು : ಕರ್ನಾಟಕ ಅರಣ್ಯ ಇಲಾಖೆಯ ಮಂಗಳೂರು ವೃತ್ತ ಹಾಗೂ ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಸಹಯೋಗದಲ್ಲಿ “ಹಕ್ಕಿ ಹಬ್ಬ’ (ಬರ್ಡ್ ಫೆಸ್ಟಿವಲ್) ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಫೆ. 9ರಿಂದ 11ರ ವರೆಗೆ ಮಂಗಳೂರು ವ್ಯಾಪ್ತಿಯಲ್ಲಿ ಆಯೋಜಿಸಲಾಗಿದೆ.
ರಂಗನತಿಟ್ಟು, ದಾಂಡೇಲಿ ಹಾಗೂ ಬಳ್ಳಾರಿ ಯಲ್ಲಿ ಈಗಾಗಲೇ ಯಶಸ್ವಿಯಾಗಿ ಪೂರ್ಣ ಗೊಂಡಿರುವ “ಹಕ್ಕಿಹಬ್ಬ’ವನ್ನು ಮೊದಲ ಬಾರಿಗೆ ಕರಾವಳಿಯಲ್ಲಿ ಸಂಘಟಿಸಲಾಗಿದೆ. ಹಕ್ಕಿಗಳ ಕುರಿತ ಆಸಕ್ತರಿಗೆ ಹಾಗೂ ಪಕ್ಷಿ ಅಧ್ಯಯನಶೀಲರಿಗೆ ಉಪಯೋಗಿಯಾಗುವ ನೆಲೆಯಲ್ಲಿ ಮತ್ತು ಪರಿಸರ-ಹಕ್ಕಿಗಳ ಬಗ್ಗೆ ಜನರಲ್ಲಿ ಪ್ರೀತಿ ಮೂಡುವಂತಾಗಲಿ ಎಂಬ ನೆಲೆಯಿಂದ ಈ ಹಕ್ಕಿ ಹಬ್ಬವನ್ನು ಸಂಘಟಿಸಲಾಗಿದೆ. ದೇಶದ ಬೇರೆ ಬೇರೆ ರಾಜ್ಯಗಳ ಪಕ್ಷಿ ಪ್ರಿಯರು ಇದರಲ್ಲಿ ಭಾಗವಹಿಸಲಿದ್ದಾರೆ.
ಫೆ. 9ರಂದು ಬೆಳಗ್ಗೆ 11ಕ್ಕೆ ಮಂಗಳೂರು ಪುರಭವನದಲ್ಲಿ ಸಚಿವ ಬಿ. ರಮಾನಾಥ ರೈ ಅವರು ಹಕ್ಕಿ ಹಬ್ಬ ಉದ್ಘಾಟಿಸಲಿದ್ದಾರೆ. ಇದಕ್ಕೂ ಮುನ್ನ ಪಕ್ಷಿ ಜಾಗೃತಿ ಜಾಥಾ ನಡೆಯಲಿದೆ. ಫೆ. 10ರಂದು ಪಿಲಿಕುಳದ ವಿಜ್ಞಾನ ಭವನದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಹಕ್ಕಿಗಳ ಚಿತ್ರಕಲಾ ಕಾರ್ಯಾಗಾರ ಮತ್ತು ರಸಪ್ರಶ್ನೆ ಕಾರ್ಯಕ್ರಮಗಳು ನಡೆಯಲಿದ್ದು, ಫೆ. 11ರಂದು ಸಮುದ್ರದಲ್ಲಿ ಹಕ್ಕಿಗಳ ವೀಕ್ಷಣೆಯೂ ನಡೆಯಲಿದೆ ಎಂದು ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅವರ ಪ್ರಕಟನೆ ತಿಳಿಸಿದೆ
ಕಡಲಲ್ಲಿ ಸಂಚರಿಸುತ್ತ ಪಕ್ಷಿ ವೀಕ್ಷಣೆ! ಅರಬ್ಬಿ ಸಮುದ್ರದಲ್ಲಿ ಸರಿಸುಮಾರು 10-15 ಕಿ.ಮೀ.ನಷ್ಟು ದೂರದವರೆಗೆ ಪಕ್ಷಿಪ್ರಿಯರನ್ನು ದೋಣಿಯಲ್ಲಿ ಕರೆದೊಯ್ದು ಹಕ್ಕಿಗಳ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿರುವುದು ಈ ಬಾರಿಯ ವಿಶೇಷ. ಅಪರೂಪದ ಕಡಲ ಹಕ್ಕಿಗಳ ಕುರಿತು ಅಭ್ಯಸಿಸುವ ಹಾಗೂ ಛಾಯಾಚಿತ್ರ ತೆಗೆಯುವ ಅವಕಾಶ ಇದು. ಅಂಡಮಾನ್, ನಿಕೋಬಾರ್ ವ್ಯಾಪ್ತಿಯಲ್ಲಿ ಹಕ್ಕಿಗಳ ಬಗ್ಗೆ ಅಭ್ಯಸಿಸಿದ ತಜ್ಞರು ಕೂಡ ಈ ಸಂದರ್ಭದಲ್ಲಿ ಜತೆಗಿರಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Surathkal: ನೇಣು ಬಿಗಿದು ಯುವಕ ಆತ್ಮಹ*ತ್ಯೆ
Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ
Mangaluru: ಎಂಸಿಸಿ ಬ್ಯಾಂಕ್ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ
Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ
ಹೊಸ ವರ್ಷಾಚರಣೆಗೆ ಡ್ರಗ್ಸ್ ಪಾರ್ಟಿ: ಪೊಲೀಸ್ ನಿಗಾ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.